ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜೀವನ

ಜೀವನ ಅನ್ನೋ ಜಾತ್ರೆನಲ್ಲಿ
ಬಾಳು ಅನ್ನೋ ಬಂಗಾರದ 'ತೇರು'ನ
ನಗು ಅನ್ನೋ ಗಾಲಿ ಕಟ್ಕೊಂಡು
ದೊರದಲ್ಲಿ ಕಾಣೋ ಆ ಪ್ರೀತಿ ಶಿಖರನ
ಮುಟ್ಟಬೇಕು ಅನ್ನೋದೇ
ನನ್ನ ಬಾಳಿನ ಒಂದು ಕನಸಿನ ಪುಟ್ಟ ಆಸೆ

ಆಸೆ

ಕಣ್ಣಿನ ಭಾಷೆ,ರೆಪ್ಪೆಯ ಮೂಲಕ
ಮನಸಿನ ಮಾತು,ಕವಿತೆಯ ಮೂಲಕ
ಹೃದಯ ಹೇಳಿತು ಅಂದು ನನ್ನ ಪ್ರೀತಿಯ
ಅದ್ರೆ ಮನಸು ಕೇಳಿತು ಯಾರೋ ನೀನು ದಾಸಯ್ಯ
ದೇಶ ಬಿಟ್ಟರು,ದೆಸೆ ಬಿಡಲಿಲ್ಲ
ಹುಡಿಗಿ ಬಿಟ್ರು,ಪ್ರೀತಿ ಬಿಡಲಿಲ್ಲ
ಆದ್ರು ಒಂದೇ ಒಂದು ಆಸೆ ,
ನಾ ನೋಡಬೇಕು ಅವಳ ಅಂದದ
ಮೊಗದಲ್ಲಿ ನಗುವೆಂಬ ಪರುಸೆ..............

ಕನ್ನಡ ರಸಪ್ರಶ್ನೆ:೪

ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಗಳಿಸಿದ ಗಿರೀಶ್ ಕಾಸರವಳ್ಳಿ ನಿರ್ದೇಶನದ ಯು ಆರ್ ಅನಂತಮೂರ್ತಿ ಕಥೆಯಾಧಾರಿತ ಕನ್ನಡ ಚಿತ್ರ ಯಾವುದು?

ಟೆಲಿವಿಷನ್ ರಿಲೇ ಮತ್ತು ಮದುವೆಮನೆ ಊಟದ ಎಲೆ

ನನ್ನ ಸ್ವಭಾವವೆಂದರೆ ಬೆಳಗಿನ ತಿಂಡಿ ತಿಂದನಂತರ ಹತ್ತು, ಹತ್ತೂವರೆಯ ಹೊತ್ತಿಗೆ ಒಂದು ರೌಂಡ್ ಟಿವಿ ನೋಡುವುದು. ನೌಕರಿಯಿಂದ ನಿವೃತ್ತಿಯಾಗಿದೆ, ಕಚೇರಿಗೆ ಹೋಗುವಂತಿಲ್ಲ, ಮನೇಲಿ ಯಾರಿಗೂ ಬೇಕಿಲ್ಲ. ಎಂದಮೇಲೆ ನನ್ನನ್ನು ಕೇಳುವವರಾದರೂ ಯಾರು? ನನ್ನ ಕಿರಿಕಿರಿ ನನ್ನಾಕೆಯೂ ಸೇರಿ ಮನೆಯಲ್ಲಿ ಎಲ್ಲರಿಗೂ ತ್ಯಾಜ್ಯ ವಸ್ತುವಾಗಿರುವುದರಿಂದ ಬೆಳಗಿನ ತಿಂಡಿ ಹಾಕಿ, ಕಾಫಿ ಕೊಟ್ಟು ಟಿವಿ ಮುಂದೆ ಕೂರಿಸಿಬಿಡುತ್ತಾರೆ. ನಂತರ ಊಟದವರೆಗೂ ಯಾರೂ ನನ್ನನ್ನು ’ಕ್ಯಾರೆ’ ಎನ್ನುವುದಿಲ್ಲ. ಹೋಗಲಿ ಬಿಡಿ, ನನಗೂ ಸಂಸಾರದ ಜಂಜಾಟ ತಪ್ಪಿದೆ. ಇರಲಿ, ಈಗ ವಿಷಯಕ್ಕೆ ಬರೋಣ.

ಸೊನ್ನೆಯಿಂದ ಪ್ರಾರಂಭಿಸಿ ನೂರಾರು ಚಾನೆಲ್ ಗಳನ್ನು ಹಿಂದೆ ಮುಂದೆ ಮಾಡುತ್ತಾ ಸ್ವಲ್ಪ ಕಾಲಕಳೆದಂತೆ ಮನಸ್ಸಿಗೆ ಹುಮ್ಮಸ್ಸು ಮೂಡುತ್ತದೆ. ಬೆಳ್ಳಂಬೆಳಗ್ಗೆ ಧಾರಾವಾಹಿಗಳನ್ನು ನೋಡಿದರೆ, ಈ ಮನುಷ್ಯನಿಗೆ ಇದೇನು ಗಾಸಿ ಎಂದುಕೊಳ್ಳುತ್ತಾರೆ ಎಂದುಕೊಂಡು, ಮೆತ್ತಗೆ ಸಿ ಎನ್ ಬಿ ಸಿ ಅಥವಾ ಪ್ರಾಫಿಟ್ ಇತ್ಯಾದಿ ಹಾಕುತ್ತೇನೆ. ಈಗ ನೋಡಿ ನಾನು ಹೇಳಿದ ಮದುವೆ ಮನೆ ಊಟದೆಲೆಯ ಕಥೆ ಕಣ್ಣಿಗೆ ರಾಚುತ್ತದೆ. ಇದೇನಪ್ಪಾ, ಪ್ರಾಫಿಟ್ಟಿಗೂ ಊಟದೆಲೆಗೂ ಏನು ಸಂಬಂಧ ಎಂದಿರಾ . . .ತಗೊಳ್ಳಿ ಹೇಳ್ತೀನಿ.

ಫರದೆಯ ಮೇಲಿನ ಎಡ ಮೂಲೆಯಲ್ಲಿ ನೋಡಿ, ಈಗ ಪ್ರಸಾರವಾಗುತ್ತಿರುವ ಸುದ್ದಿ ಯಾವ ಚಾನೆಲ್ಲಿನ ಕೃಪಾಕಟಾಕ್ಷ ಎಂದು ತಿಳಿಸುವ ಚಿತ್ರ ಕಾಣುತ್ತಿರುತ್ತದೆ. ಇದು ಉಪ್ಪು ಮತ್ತು ಉಪ್ಪಿನ ಕಾಯಿಯ ಜಾಗ. ಬಲ ತುದಿಯಲ್ಲಿ ವರದಿಗಾರನ ಚಿತ್ರ ಚೌಕಟ್ಟಿನಲ್ಲಿ ಕಣ್ಣು ಕಣ್ಣು ಬಿಡುತ್ತಾ ಇರುತ್ತದೆ. ಜೊತೆಗೆ ದಿನಾಂಕ ಮತ್ತು ಸಮಯ. ಇದು ಪಲ್ಯಗಳನ್ನು ಪೇರಿಸುವ ಜಾಗ. ಫರದೆಯ ಮಧ್ಯಕ್ಕೆ ಬನ್ನಿ, ಸ್ಟುಡಿಯೋದಲ್ಲಿ ಕೂತ ಗಂಡು ಅಥವಾ ಹೆಣ್ಣಿಯ ಚಿತ್ರ ಮತ್ತು ಬೇರಾವುದೋ ಸ್ಥಳದಲ್ಲಿ ಅವರ ವರದಿಗಾರ ತೋರಿಸುತ್ತಿರುವ ಇನ್ನೊಂದು ಚಿತ್ರ. ಎರಡನ್ನೂ ಜೊತೆ ಜೊತೆಯಾಗಿ ಎರಡು ಚೌಕಟ್ಟುಗಳಲ್ಲಿ ತೋರಿಸುತ್ತಿರುತ್ತಾರೆ. ಇದು ಅನ್ನ ಸಾರು/ಸಾಂಬಾರಿನ ಜಾಗ. ಇವನು ಹೇಳಿದ್ದಕ್ಕೆ ಅವನು ಹೂಂ ಅನ್ನಬೇಕು ಇಲ್ಲವೇ ಅವನು ಹೇಳಿದ್ದಕ್ಕೆ ಇವನು ಹೂಂ ಅನ್ನಬೇಕು. ಅನ್ನ ಸಾರಿನ ಹೊಂದಾಣಿಕೆಯಂತೆ. ಕೆಲವು ಸಾರಿ ಸ್ಟುಡಿಯೋದಿಂದ ಇವನೇನೋ ಪ್ರಶ್ನೆ ಕೇಳುತ್ತಾನೆ, ಅವನ ಕಿವಿಗೆ ಬೀಳುವುದಿಲ್ಲ, ಅವನು ಕಣ್ಣು ಕಣ್ಣು ಬಿಡುತ್ತಿರುತ್ತಾನೆ ಅಥವಾ ಉತ್ತರ ಗೊತ್ತಿಲ್ಲದಿದ್ದರೆ ಏನೋ ಒಂದು ವದರಿಬಿಡುತ್ತಾನೆ. ಊಟದಲ್ಲೂ ಅಷ್ಟೆ, ನಮಗೆ ಉಪ್ಪಿನ ಕಾಯಿ ಬೇಕಿರುತ್ತದೆ, ಕೇಳುತ್ತೇವೆ. ಆದರೆ ಬಡಿಸುವವನಿಗೆ ಅದನ್ನು ತಂದು ಬದಿಸುವ ಇಷ್ಟವಿರುವುದಿಲ್ಲ. ಸುಮ್ಮನೆ ನಮ್ಮನ್ನೆ ಎರಡು ಸೆಕೆಂಡ್ ಕಣ್ಣು ಬಿಟ್ಟು ನೋಡಿ "ಆಯ್ತು ಸಾರ್" ಅಂತಾನೋ ಅಥವಾ ನಿರ್ದಾಕ್ಷಿಣ್ಯವಾಗಿ "ಇಲ್ಲಾ" ಅಂತಾನೋ ಹೇಳಿ ಮುಂದಕ್ಕೆ ಹೋಗುತ್ತಾನೆ. ಕೆಲವು ಸಾರಿ ಇವು ವಾಣಿಜ್ಯ ವಿಷಯಗಳನ್ನು ಬಿಟ್ಟು ವಿಷಯಾಂತರವಾಗಿ ಶಿವಮೊಗ್ಗ ರಾಮನಗರ ಹೆದ್ದಾರಿಯಲ್ಲಿ ಒಂದು ಕತ್ತೆ ಮತ್ತು ಒಂದು ಕುದುರೆ ಒಂದಾಗಿ ಬಾಳುವ ಸ್ನೇಹ ತೋರಿಸಿ, ನಂತರ ಪರಸ್ಪರ ಅಕ್ಷರಶಃ ಒದ್ದಾಡಿ, ತತ್ಪರಿಣಾಮವಾಗಿ ಕತ್ತೆ ಕುದುರೆಯ ಒದೆತಕ್ಕೆ ಸಿಕ್ಕಿ ಮಾರುದ್ದ ಹೋಗಿ ಬಿದ್ದದ್ದು, ಕುದುರೆ ಕತ್ತೆಯ ಬಲವಾದ ಒದೆತಕ್ಕೆ ಸಿಕ್ಕಿ ಹಿಂದಿನ ಕಾಲುಗಳನ್ನೇ ಕುಂಟು ಮಾಡಿಕೊಂಡು, ಹೇಳಲಾರದೆ, ಬಿಡಲಾರದೆ ಸಂಯುಕ್ತ ಸರಕಾರದಲ್ಲಿನ ಕಲ್ಲು-ಕಡಲೆಗಳನ್ನು ನೆನಪಿಸುವುದನ್ನು ಮಹತ್ತರ ವಿಷಯವೆಂಬಂತೆ ತೋರಿಸಲಾಗುತ್ತದೆ.

ನನ್ನ ಹಂಬಲ

ಏನು ಚೆಂದ ನಿನ್ನ ನೋಟ
ಕನ್ನಡಕದ ಒಳಗಿನ ಕಣ್ಣ ಕುಡಿ ನೋಟ
ಸವಿ ಸವಿ ನೆನಪು ನಿನ್ನ ಮಾತು
ಅದಕ್ಕೆ ನಾನದೆ ಕೇರ್ ಆಫ್ ಫುಟ್ಪಾತ್
ಅದ್ರು ಚಿಂತೆ ಇಲ್ಲ,
ನೀನು ನಕ್ಕರೆ..ಸಾಕಲ್ಲ
ಇಂತಿ ನಿನ್ನ ತರಲೆ ನಲ್ಲ
ನಿನ್ನ ಮುಂಗುರುಳು ನಿನ್ನ ಕೆನ್ನೆಯ ಸೋಕಿ
ನನಗೆ ಬಂತು ನಿನ್ನ ನೋಡೋ ಶೋಕಿ
ಅದೆಲ್ಲ ಇರಲಿ,ಮಳೆ ಬೇಗ ಬರಲಿ
ಕಾಯುತಿದೆ ಇ ಜೀವ ನಿನ್ನ

ಮಸಾಲೆ ದೋಸೆ...

10 ವರ್ಷದ ಹಿಂದೆ, ಮಸಾಲೆ ದೊಸೆಯ ರುಚಿ ಈಗ ಸಿಗೋದೆ ಇಲ್ಲ. ರೆಸೆಂಟಾಗಿ ನಾನು ಕೋರಮಂಗಲದ ಒಂದು ಹೊಟೆಲ್ ನಲ್ಲಿ ಮಸಾಲೆ ದೋಸೆ ತಿಂದೆ, ಅದರಲ್ಲಿ ಆ ಹಳೆ ರುಚಿನೇ ಇರಲಿಲ್ಲ. ಬ ರೇ ದೋಸೆ ಮಾಡಿ ಅದರ ಒಳಗೆ ಆಲುಗಡೆ ಪಲ್ಯ ಇಟ್ಕೋಟಿದ್ರು. ಜಯನಗರದ ಗಣೇಶ್ ದರ್ಶನ್ ನಲ್ಲಿ ದೋಸೆ ಚೆನ್ನಾಗಿ ಇರುತೆ ಆದ್ರೆ ಸೈಸ್ ತುಂಬಾ ಚಿಕ್ಕದು.