ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೋಳಿ ವ್ಯಾಪಾರ

ನಮ್ ಕಾಡ್ನಾಗೆ ಹಲವಾರು ಹಟ್ಟಿಗಳಿವೆ. ನಮ್ ಹಟ್ಟಿಗಿಂತ ದೋಡ್ದು ಮೂರ್ನಾಲ್ಕುಅವೆ. ನಮ್ ಜೀವ್ನ ತುಂಬಾ ಸರಳ. ನಾವೇನು ಭತ್ತ, ಕಬ್ಬು ಬೆಳೆಯಲ್ಲ. ಕೋಳಿ, ಹುಂಜ, ಆಡು ಸಾಕ್ಕೊತ್ತೀವಿ. ಕಾಡ್ನಲ್ಲಿ ಏನೇನ್ ಸಿಗುತ್ತೋ ಅದ್ರಲ್ಲೇ ಜೀವ್ನ ಸಾಗಿಸ್ತೀವಿ. ಬೇರೆ ಬೇರೆ ಹಟ್ಟಿಗ್ಳು ಅಷ್ಟೇ. ಅವ್ರ್ ಪಾಡಿಗೆ ಅವ್ರು, ನಮ್ ಪಾಡಿಗೆ ನಾವು.

ನಮ್ ಹಟ್ಟಿಲಿ ಹತ್ತಾರು ಗುಡುಸ್ಲುಗಳಿವೆ. ನಮ್ಮಲ್ಲಿ ಎಲ್ರೂ ಒಟ್ಗೆ ಸೇರಿ ಕೋಳಿ, ಆಡು ಸಾಕ್ತೀವಿ. ಗಂಡಸ್ರೆಲ್ಲಾರು ಹೊತ್ತಾರೆ ಹೋಗಿ ಕಾಡ್ನಾಗೆ ಬೇಟೆ ಆಡಿ, ಮರಗಳಲ್ಲಿ ಹಣ್ಣು ಹಂಪ್ಲು, ಕಡ್ಡಿ-ಕಟ್ಟಿಗೆ ಕಟ್ಕೊಂಡು ಬರ್ತೀವಿ. ಹೆಂಗುಸ್ರೆಲ್ಲಾ ಗುಡುಸ್ಲು ಕಡೆ ನಿಗಾ ಮಡಿಕ್ಕೊಂಡಿರ್ತಾರೆ. ಐಕ್ಳೆಲ್ಲಾ ಆಡ್ಕೊಂಡು ಹಾಡ್ಕೊಂಡು ಕಾಲ ಕಳೀತವೆ. ಇತ್ತಾಗೆ ನಮ್ ಕೋಳಿಗ್ಳು ಅದ್ರ ಪಾಡಿಗೆ ನೆಲದಲ್ಲಿ ಸಿಗೋ ಹುಳು ಹುಪ್ಟೆ ತಿನ್ಕೊಂಡ್ ಮೊಟ್ಟೆಗಿಟ್ಟೆ ಇಡತ್ವೆ. ಇರೋ ಹತ್ತಾರು ಕೋಳಿಗಳು ಎಲ್ಲಿ ಹೋದ್ವು ಏನ್ಮಾಡ್ತಿವೆ ಅಂತ ಯಾರು ತಲೆಕೆಡ್ಸ್ಕೊತಾ ಇರ್ಲಿಲ್ಲ.

ಆದ್ರೆ ಇತ್ತೀಚ್ಗೆ ಈ ಕೋಳಿಗಳೇ ನಮ್ಗೆ ದೋಡ್ ತಲೆನೋವಾಗಿದೆ. ನಾನ್ ಕಾಡ್ನಲ್ಲಿ ಬೇಟೆ ಆಡಕ್ಕೆ ಹೋದಾಗ ನಮ್ ಹತ್ರದ್ ಹಟ್ಟಿನವ ನನ್ಗೆಳೆಯ ನಾಟ ಸಿಕ್ಕ. ಅವ ಸಿಕ್ಕಿ ಈಗಾಗ್ಲೆ ಒಂದ್ ವರ್ಷ ಆಗಿರ್ಬೇಕು.

"ಯಾಕ್ಲಾ ನಾಟ ? ಲಗ್ನಗಿಗ್ನ ಆದ್ಯೋ ಎಂಗೆ ?' ಅಂದೆ. ಅವ ತಿರುಗ್ಸಿ, "ಇಲ್ಲಾ ಕಳ, ನಮ್ ಹಟ್ಟೀಲಿ ಈಗ ಕೋಳಿ ವ್ಯಾಪಾರ ಶುರು ಹಚ್ಕೊಂಡಿವಿ' ಅಂದ. "ಏನ್ಲಾ ಹಂಗಂದ್ರೆ' ಅಂತಂತಂದೆ.

Hen from Wikipedia
"ಪ್ರತಿ ವಾರ ಪಟ್ಣದಿಂದ ನಮ್ ಹಟ್ಟಿಗೆ ಇಬ್ರು ಬಂದು ನಾವು ಕೊಡೋ ಕೋಳಿಗಳ್ನ ಎತ್ಕೊಂಡ್ ಓಯ್ತಾರೆ' ಅಂದ. "ಹಂಗಾದ್ರೆ ನೀವು ಸಾರ್ ಮಾಡಕ್ ಏನ್ ಹಾಕ್ತೀರ್ಲ ?' ಅಂತ ಕೇಳ್ದೆ.

ಅವ "ಅಯ್ಯ, ನಾವು ಕಾಡ್ನಿಂದ ತರ್ತೀವಲ್ಲ ಸೊಪ್ಪು, ಹಣ್ಣು. ಅದ್ರಲ್ಲೇ ಮಾಡ್ತೀವಿ ಸಾರ್ನ. ಆಮ್ಯೇಕೆ ಆ ಪಟ್ಣದವ್ರು ಅಲ್ಲಿಂದ ಏನೆಲ್ಲಾ ತರ್ತಾರೆ ಗೊತ್ತೇನ್ಲಾ? ನಮ್ಗೆ ಅವ್ರು ಕೋಳಿ ಬದ್ಲಿಗೆ ಬಣ್ಣ್ ಬಣ್ಣದ್ ಬಟ್ಟೆ, ಐಕ್ಳಿಗೆ ಗೊಂಬೆಗ್ಳು, ತಿನ್ನಾಕ್ ಪೆಪ್ರಮಿಂಟು, ಬೇಯ್ಸಿದ್ ಹಿಟ್ಟು ಇನ್ನು ಏನೇನೋ ಎಲ್ಲಾ ಕೊಡ್ತಾರೆ'. "ನಾನು ನಿಮ್ ಹಟ್ಟಿ ಕಡೀಕ್ಕೆ ಹೊಂಟಿದ್ದೆ ಕಳ. ಈಗ ಎಂಗಾಗದೆ ಅಂದ್ರೆ ನಾವೆಲ್ಲ ಕೂತು ಕೋಳೀನ್ನೋಡ್ಕೊಂಡ್ರು ಅವ್ರಿಗೆ ಕೊಡೊ ಅಷ್ಟು ಕೋಳಿಗ್ಳು ಸಾಕಾಗ್ತಿಲ್ಲ ಕಳ. ಅದ್ಕೆ ನಾನು ಅವ್ರನ್ ಕೇಳ್ದೆ ನಮ್ ಪಕ್ಕದ್ ಹಟ್ಟಿಯಿಂದಾನು ಕೋಳಿಗಳ್ ತಂದ್ರೆ ಏಂಗೆ ಅಂತ. ಅದ್ಕೆ ಅವ್ರು ಹಂಗೆಲ್ಲಾ ಆಯ್ಕಿಲ್ಲ. ನಿಮ್ ಹಟ್ಟೀದೇ ಕೋಳಿಗ್ಳು ಬೇಕು ಅಂದ್ರು.'

ಮತ್ತೆ ಮತ್ತೆ ಕಾಡುವ ಶಂಕರ್‌‌ನಾಗ್ ನೆನಪು :ಪ್ರೀತಿಯಿಂದ ಪ್ರೀತಿಗಾಗಿ -ಜಿ.ವಿಜಯ್ ಹೆಮ್ಮರಗಾಲ.

ಇದ್ದಿದ್ದು ಕೆಲವೇ ವರ್ಷ. ಸಾಧಿಸಿದ್ದು ಅಪಾರ, ಗಳಿಸಿದ ಪ್ರೀತಿ ಅಪರಿಮಿತ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಬ್ಬ ಅಪರೂಪದ ವ್ಯಕ್ತಿ ಕಂಡು ಬರುತ್ತಾರೆ ಆ ವ್ಯಕ್ತಿ ಇಂದು ಇಲ್ಲವಾದರೂ, ಆ ವ್ಯಕ್ತಿಯ ಹೆಸರು ಕೇಳಿರದ ಕನ್ನಡಿಗ ಯಾರು ಇಲ್ಲಾ ಎಂದೇ ಹೇಳಬಹುದು. ಈತ ಕಿರುತೆರೆಯಲ್ಲಿ ಕನ್ನಡವನ್ನು ಸಾರಿ ವಿಶ್ವದಾದ್ಯಂತ ಮನೆಮಾತದ ವ್ಯಕ್ತಿ ಬೇರೆ ಯಾರು ಅಲ್ಲಾ.

"ಮಾಯಾ ಮೃಗ" ಮರಳಿ ಮೂಡಿದಾಗ....

ಎಲ್ಲಿಂದಲೋ ಹಾರಿ ಬಂತೊಂದು ಬಂಗಾರದ ಜಿಂಕೆ. ನೋಡು ನೋಡುತ್ತಲೇ ಹಾರಿ ಹೋಯಿತು. ಸೀತೆಯ ಮನಸ್ಸಿನಲ್ಲಿ ಆ ಜಿಂಕೆಯನ್ನು ಮುದ್ದಾಡುವ ಆಸೆ ಮೂಡಲು, ರಾಮನು ತನ್ನ ಸತಿಯ ಇಛ್ಛೆ ಪೂರೈಸಲು ಆ ಮಾಯಮೃಗದ ಬೆನ್ನಟ್ಟಿ ಓಡಿದನು....

ಕುರಿಗಳು ಸಾರ್...ನಾವು....

ಸದನದ ಕಲಾಪದಲ್ಲಿ ಶಿಸ್ತಿನಿಂದ ವರ್ತಿಸುವುದನ್ನು ಕಲಿತುಕೊಳ್ಳಿ,ಸದನದ ಗೌರವನ್ನು ಕಾಪಾಡಿ,ನಿಮ್ಮ ಹದ್ದು ಮೀರಿದ ವರ್ತನೆಯಿಂದಾಗಿ ಸದನದ ಮರ್ಯಾದೆ ಬೀದಿಗೆ ಬಂದಿದೆ.

VIRHAM

"ನಾನು ಸೆಕ್ಸಿನಾ ಅಂತ ಅವಳು ಕೇಳಿದಾಗ, ಹಾಗೆ ಒಂದು ಕಿಸ್ಸ್ ಕೊಟ್ಟು ಕಳ್ಸೋಣ ಅಂತ ಅನಿಸಿ ಬಿಟ್ಟಿತ್ತು. ಆದ್ರೆನ್ ಮಾಡ್ತಿಯ ಅದಾದ ಎರಡೇ ತಿಂಗ್ಳಿಗೆ ಅವಳ ಮದುವೆ ಆಗೋಯ್ತು.

"ಒಹ್.. ಅದಕ್ಯಾಕೆ ಅಸ್ಟು ಬೇಜಾರಾಗ್ತಿಯ ಬಿಡು. ಅವಳ ಮದುವೆ ಆದ್ರೇನಾಯ್ತು ನನ್ನ ಮದುವೆ ಇನ್ನೂ ಅಗಿಲ್ವಲ್ಲ?"