ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

Manada maathugalu

ನನ್ನ ಅಮ್ಮ

೦೪-ಜೂನ್-೨೦೦೮

ನೆನ್ನೆ ತಾನೆ ಅಪ್ಪನ ಮಾಸಿಕ ಇತ್ತು, ಅದಕ್ಕೆಂದು ಮೊನ್ನೆ ರಾತ್ರಿ ಬೆಂಗಳೂರಿನಿಂದ ಬಸ್ ನಲ್ಲಿ ಹೊರಟಿದ್ದ ನನ್ನ ಪಕ್ಕದಲ್ಲಿ ಸರಿ ಸುಮಾರು ೩೦ರಿಂದ ೪೦ರ ಒಳಗಿನ ಮಹಿಳೆ ಕುಳಿತಿದ್ದರು. ನೋಡಲಿಕ್ಕೆ ಅವಿದ್ಯಾವಂತೆಯಂತೆ ಕಾಣಿತ್ತಿದ್ದ ಆ ಮಹಿಳೆ ಬಸ್ಸನ್ನು ಹತ್ತಿದಾಗಿನಿಂದಾ ಏನಾದರೊಂದು ತಿಂಡಿಯನ್ನ ತಿನ್ನುತ್ತಲೇ ಇದ್ದರು.

ಹೆಮ್ಮೆಯಿ೦ದ ಹೇಳಿ "ನಾನು ಕನ್ನಡಿಗ"

ನಿನ್ನೆ ಆಫೀಸಿನಲ್ಲಿ ಸುಮ್ಮನೇ ಕೆಲಸ ಮಾಡುತ್ತ ಕುಳಿತವನಿಗೆ ಬ೦ದ ಒ೦ದು ಮಿ೦ಚ೦ಚೆ ಕಣ್ಸೆಳೆಯಿತು ’kannada is great 'ಎ೦ಬ ಹೆಸರಿನ ಈ ಮಿ೦ಚ೦ಚೆಯನ್ನು ಸ೦ಪದರಿಗಾಗಿ ಅನುವಾದಿಸುತ್ತಿದ್ದೇನೆ.ಕನ್ನಡದ ಬಗ್ಗೆ ಇ೦ಗ್ಲೀಷನಲ್ಲಿ ಮಿ೦ಚ೦ಚೆ ಬ೦ದಿದ್ದು ಹೆಮ್ಮೆಯ ವಿಷಯವೇ,ಉಳಿದ ಭಾಷೆಯವರೂ ನಮ್ಮ ಭಾಷೆಯ ಹಿರಿಮೆ ತಿಳಿದುಕೊಳ್ಳಬಹುದು.ಅದರಲ್ಲಿನ ಅ೦ಶಗಳು ಈ ರೀತಿ ಇವೆ.(ಕೆಳಗಿನವು ನನಗ

ರಾಹು ಕೇತು ಕಾಟ - ಭಾಗ ೧

ನಮ್ಮಲ್ಲಿ ಅನೇಕರಿಗೆ, ಈ ಗ್ರಹಣಗಳು ಬಂತು ಅಂದ್ರೆ, ಬಹಳ ಭಯ. ಗ್ರಹಣದ ಸಮಯದಲ್ಲಿ ಏನೂ ತಿನ್ನಬಾರದು ಅನ್ನೋವರು ಒಂದಷ್ಟಾದರೆ, ಮಾಡಿಟ್ಟ ಅಡಿಗೆನೆಲ್ಲ ಎಸೆಯೋರು ಒಂದಷ್ಟು. ಇನ್ನು, ಮನೆಯಲ್ಲಾರಾದರು ಬಸುರಿ ಹೆಂಗಸಿದ್ದರಂತೂ ಸರಿಯೇ ಸರಿ. ಕಿಟಕಿ ಬಾಗಿಲು ಎಲ್ಲ ಹಾಕಿ, ಒಂಚೂರೂ ಬೆಳಕು ಮನೇ ಒಳಗೇ ಬರದೇ ಇರೋ ಹಾಗೆ ಕೂತ್ಕೊಳೋ ಸ್ಥಿತಿ. ಈಗ್ಲೇನಾರೂ ಬದ್ಲಾಗಿದ್ರೆ ನಾಕಾಣೆ. ನನ್ನ ನೆನಪುಗಳೇ ಔಟ್ ಡೇಟೆಡ್ ಅಂದ್ಕೊಂಡು ಸುಮ್ನಾಗಬೇಕಷ್ಟೆ.ಅದನಾದ್ರೂ ಇರಲಿ, ಸುಮ್ನೆ ವಿಷಯಕ್ಕೆ ಬರೋದಕ್ಕೆ ಮೊದಲೆ ನೆನಪಾದದ್ದನ್ನ ಹೇಳಿದೆ ಅಷ್ಟೆ.

೧೯೮೦, ಫೆಬ್ರವರಿ ಹದಿನಾರನೇ ತಾರೀಖು ಒಂದು ಸೂರ್ಯಗ್ರಹಣ ಆಗಿತ್ತು. ಸೂರ್ಯ ಗ್ರಹಣ ಅನ್ನೋದೇನೂ ಅಂತಹ ಅಪರೂಪದ ವಿಷಯ ಅಲ್ಲ ಆ ಸಲ. ಆದ್ರೆ, ಆ ಗ್ರಹಣ ಕರ್ನಾಟಕಕ್ಕೆ ವಿಶೇಷವಾಗಿತ್ತು. ಅಂದ್ರೆ, ಅದೊಂದು ಪೂರ್ಣಗ್ರಹಣ - ಮತ್ತೆ ಪೂರ್ಣತೆಯ ಹಾದಿ ಕರ್ನಾಟಕದಲ್ಲಿ ಹಾದುಹೋಗಿತ್ತು. ಕಾರವಾರದಿಂದ ರಾಯಚೂರಿನವರೆಗೆ ಮಧ್ಯಾಹ್ನ ಮೂರು ಗಂಟೇ ಹೊತ್ಗೆ ಸೂರ್ಯ ಪೂರ್ತಿ ಕಾಣೆಯಾಗಿದ್ದ ಒಂದು ಎರಡುಮೂರು ನಿಮಿಷ. ನನ್ನ ದುರದೃಷ್ಟ ಅಂದ್ರೆ, ನಾನು ಈ ದಾರಿಲಿ ಬರೋ ಯಾವ ಊರಲ್ಲೂ ಇರಲಿಲ್ಲ. ಆದ್ರೆ ನಮ್ಮೂರಲ್ಲೂ ಸುಮಾರು ೯೩% ಗ್ರಹಣ ಆಗಿತ್ತು. ಅದಕ್ಕೇ ಸಂತೋಷ ಪಡ್ಬೇಕಾಯ್ತು ನಾನು. ಆದ್ರೆ, ಅಲ್ಲಿಂದ ಇಪ್ಪತ್ತೆಂಟು ವರ್ಷ ಆದ್ರೂ, ೯೩% ಆಗಿರೋ ಇನ್ನೊಂದು ಗ್ರಹಣ ನನಗೆ ಸಿಕ್ಕಿಲ್ಲ ಅಂದ್ರೆ, ನಿಮಗ್ಗೊತ್ತಾಗತ್ತೆ ಈ ಗ್ರಹಣಗಳನ್ನ ಅಷ್ಟು ನಿಸೂರಾಗಿ ನೋಡ್ದೇ ಬಿಟ್ಬಿಡಬಾರದು ಅಂತ.

ಕನ್ನಡ ನಾಡಿಗೆ ಪ್ರಾದೇಶಿಕ ಪಕ್ಷ ಬೇಕೆ?

ಭಾಜಪ ಇಲ್ಲಿ ಗದ್ದುಗೆ ಏರಾಗಿದೆ. ಮುಂಬರೋ ಲೋಕಸಭೆ ಚುನಾವಣೇಲಿ ಮತ್ತೆ ಕಾಂಗ್ರೆಸ್ಸೇ ಗೆದ್ದರೆ? ಮತ್ತೆ ನಮ್ಮ ನಾಡು ನುಡಿಯ ಕೆಲಸಗಳಿಗೆ ಕೇಂದ್ರದ ಒತ್ತಾಸೆ ಸಿಗಲಾರದು.ಮತ್ತೆ "ಮಲತಾಯಿ" ಆರೈಕೆ ಶುರುವಾಗತ್ತೆ ಅನ್ನೋ ಭಯ. ಇದು ಸುಮಾರು ೩೦ ವರ್ಷದಿಂದ ಇರೋ ತೊಂದರೆ.

ದ್ವಿಭಾಷಾ ಅಕ್ಷರರೂಪ? ಕನ್ನಡಿಗರು ಈಗ ಹತ್ತು ಹೆಜ್ಜೆ ಹಿಂದಕ್ಕೆ!

"ಇವತ್ತು ಸರಕಾರ ನೋಟಿಫಿಕೇಶನ್ ಹೊರಡಿಸಿದೇರಿ. ಬೈ-ಲಿಂಗ್ಯುಯಲ್ ಫಾಂಟ್ಸ್ ಅಂತೆ"
ಪತ್ರಕರ್ತ ಸ್ನೇಹಿತರೊಬ್ಬರು ಫೋನಿನಲ್ಲಿ ತಿಳಿಸಿದರು.

"ಹಾಂ?"
ನಿದ್ರೆಯಲ್ಲಿದ್ದೀನಾ ಅನ್ನಿಸಿತು.

ಒಂದೆರಡು ಕ್ಷಣಗಳ ನಂತರವೇ ಕ್ಲಿಯರ್ ಆಗಿದ್ದು: ಎಚ್ಚರವಾಗಿಯೇ ಇದ್ದೀನಿ, ಫೋನಿನಲ್ಲಿ ಆ ಕಡೆಯಿಂದ ಬಂದ ಮಾಹಿತಿಯೂ ನಿಜವೇ ಎಂಬುದು!

ನನಗೆ ತಲೆಯಲ್ಲಿ,
"ಏನಿದು? ಇದ್ಯಾಕೆ ಈಗ ಇಂತದ್ದನ್ನು ಹೊರತರುತ್ತಿದ್ದಾರೆ?

ಹೋಗಲಿ, ಇದೇನು ಬೈಲಿಂಗ್ಯುಯಲ್ ಫಾಂಟ್? ಈಗಾಗಲೇ ಪ್ರಪಂಚದಾದ್ಯಂತ ಎಲ್ಲರಿಂದಲೂ ಬಳಕೆಯರೋ, ವಿಶ್ವವಿಡೀ ಮಾನ್ಯತೆ ಪಡೆದಿರೋ ಯೂನಿಕೋಡ್ ಹಾಗೂ ಅದರಲ್ಲಿನ ಮಲ್ಟಿಲಿಂಗ್ಯುಯಲ್ ಫಾಂಟುಗಳೇ ಇರುವಾಗ!

ಅದೂ ಹಳೆಯ [:http://en.wikipedia.org/wiki/Character_encoding|ಎನ್ಕೋಡಿಂಗ್!] ಇದನ್ನು ಪ್ರಪಂಚದ ಇನ್ನೆಲ್ಲೂ ಸಪೋರ್ಟ್ ಮಾಡೋದಿಲ್ಲ, ಯಾವ ತಂತ್ರಾಂಶದಲ್ಲೂ ನೇಟಿವ್ ಆಗಿ ಸಪೋರ್ಟ್ ಮಾಡೋದಿಲ್ಲ. ಅತ್ತ ತಮಿಳು, ತೆಲುಗು, ಮಲಯಾಳ, ಹಿಂದಿ ಕಂಪ್ಯೂಟರಿನಲ್ಲಿ ವಿಜೃಂಭಿಸುತ್ತಿರುವಾಗ ಮೊದಲೇ ಹಿಂದಿರುವ ಕನ್ನಡ ಇನ್ನೂ ಹಿಂದುಳಿಯೋದಿಲ್ಲವೆ?"
ಎಂದೆಲ್ಲಾ ಆಲೋಚನೆಗಳು ಹರಿದಾಡಿದವು.

ಭಾವನೆಗಳಿಲ್ಲದವರಿಗೆ......

ಭಾವ ವೆಂಬುದು ಬದುಕು!
ಭಾವವೆಂಬುದು ಮನಸಿನ ಬೆಳುಕು!
ಭಾವವೆಂಬುದು ಬದುಕಿನ ಬವಣೆ!
ಭಾವವಿಲ್ಲದೆ ಬದುಕಿಲ್ಲ..
ಬರುಡು ಬದುಕು ಬಾಳುವುದರಲಿ ಅರ್ಥವಿಲ್ಲ..
ಭಾವನೆಗಳಿಲ್ಲದ್ದು..ಮನಸೇ ಅಲ್ಲ!
ಅದಕೆ,
ಆಹ್ಲಾದತೆಯ ಅರಿವಿಲ್ಲ..
ಆಲಾಪಗಳ ಪರಿಚಯವಿರುವುದಿಲ್ಲ..
ಸೂಕ್ಶ್ಮತೆಯ ಸ್ಪರ್ಶವಿರುವುದಿಲ್ಲ..

ಎಲ್ಲರೂ ಮುಂದೆ, ನಾನೊಬ್ಬ ಹಿಂದೆ

ಕರ್ನಾಟಕ ಸರಕಾರದ ನೀತಿಯೇನೆಂದರೆ ಜಗತ್ತೆಲ್ಲ ಮುಂದೆ ಮುಂದೆ ಸಾಗುತ್ತಿರಲಿ, ನಾನೊಬ್ಬ ಮಾತ್ರ ಹಿಂದೆ ಹಿಂದೆ
ಹೋಗುತ್ತೇನೆ ಎಂಬಂತಿದೆ. ಈ ಮಾತನ್ನು ಈಗ ಹೇಳಲು ಕಾರಣವಿದೆ. ನಿನ್ನೆಯ (ಜೂನ್ ೩, ೨೦೦೮) ಕನ್ನಡ ಪ್ರಭ
ಪತ್ರಿಕೆಯಲ್ಲಿ ಸರಕಾರದ ಒಂದು ಚಿಕ್ಕ ಪ್ರಕಟಣೆ ಇದೆ. ಅದರ ಪ್ರಕಾರ ಸರಕಾರವು ದ್ವಿಭಾಷಾ ಅಕ್ಷರಶೈಲಿಯನ್ನು (bi-

ಲೈನಿಕ್ಸ್ ಸಂಭ್ರಮ - ವಂದನೆಗಳು : ಓಂ ಶಿವಪ್ರಕಾಶ್

ನೆನ್ನೆಯ ನನ್ನ ಲೈನಿಕ್ ಬೇಕಿದೆ ಬ್ಲಾಗ್‌ನ ನಂತರ ಸಂಪದದ ಗೆಳೆತನ ನನಗೆ ನೆರವಾಯಿತು
ಬೇಕೆಂದ ಕೂಡಲೆ ಸಿ.ಡಿಸ್ ಕಳಿಸಿಕೊಟ್ಟ ಓಂ ಶಿವಪ್ರಕಾಶ್ ರವರಿಗೆ ಥ್ಯಾಂಕ್ಸ್ ಹೇಳಬೇಕಾ ಹೇಳಿದರೆ ಅದು ಕಡಿಮೆಯಾಗಬಹುದೆಂಬ ಸಂಕೋಚ.
ಅವರು ಸಿಡಿ ಕೊಟ್ಟದ್ದಕ್ಕಿಂತ ಕೇವಲ ಫೋನ್‌ನಲ್ಲಿ ವಿವರಿಸಿದ ರೀತಿ ಎಂಥವರಿಗೂ ಲೈನಿಕ್ಸ‌ನಲ್ಲಿ ಆಸಕ್ತಿ ಹುಟ್ಟಿಸುವಂತಿದೆ.