ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾವಿನ ಹೂವೆ, ನೀನೂ ಸುಂದರವಾಗಿರುವೆ

ಮಾವಿನ ಮರವನ್ನು ನೋಡದವರಾರಿದ್ದಾರೆ? ಮಾವಿನ ಹಣ್ಣಿನ ಸವಿ ಅರಿಯದವರಾರಿದ್ದಾರೆ? ಮಾವಿಗೂ ಕೋಗಿಲೆಗೂ ಸಂಬಂಧವನ್ನು ಕಲ್ಪಿಸದ ಕವಿಗಳಾರಿದ್ದಾರೆ? ಆದರೆ, ಮಾವಿನ ಹೂವಿನ ಸೌಂದರ್ಯವನ್ನು ಕಂಡಿದ್ದೀರಾ?

ವೀರನಾರಾಯಣ ದೇವಸ್ಥಾನ, ಬೆಳವಾಡಿ

ಚಿಕ್ಕಮಗಳೂರು ತಾಲ್ಲೂಕು, ಲೇಕ್ಯಾ ಹೋಬಳಿಯಲ್ಲಿರುವ ಬೆಳವಾಡಿ ಗ್ರಾಮವು ಒಂದಾನೊಂದು ಕಾಲದಲ್ಲಿ ಏಕಚಕ್ರನಗರವೆಂಚು ಖ್ಯಾತಿಯನ್ನು ಹೊಂದಿದ್ದು, ೨ನೇ ವೀರಬಲ್ಲಾಳರಾಯನ (ವಿಷ್ಣುವರ್ಧನ)ನ ಕಾಲದಲ್ಲಿ ನಿರ್ಮಿತವಾದ, ಎಂದರೆ ಸುಮಾರು ೧೨ನೇ ಶತಮಾನದ ಸುಂದರ ದೇವಾಲಯಗಳಿಗೆ ಪ್ರಸಿದ್ದವಾಗಿದೆ.

ಶೀರ್ಷಿಕೆ: ನೀವೆ ನೀಡಿ

ಆಕಾಶ ಎದೆ ತುಂಬಾ ಕರ್ರಗಿನ ಕರಿ ಬಣ್ಣ
ಬಿಕ್ಕರಿಸಿತು ಕೋಗಿಲೆ ನವಿಲಾಡಿತು ಗುಣಗಾನ
ತನ್ನೊಳಗೆ ಮಾಗಿದ ಜೀವಕ್ಕೆ ಬಿಡುಗಡೆ
ಮನದೊಳಗಿನ ಬಾವಕ್ಕೆ ಬಾಷ್ಪವೆ ಸೇರೆಪಡೆ

26 ವರ್ಷಗಳಿಂದ ಪ್ರಕಟವಾಗುತ್ತಿರುವ "ವಿಜ್ಞಾನ ವಿಶೇಷ" ಮತ್ತು ನಾಗೇಶ್ ಹೆಗಡೆಯವರು...

ಪ್ರಜಾವಾಣಿಯಲ್ಲಿ ಪ್ರಕಟಗೊಳ್ಳುವ ನಾಗೇಶ್ ಹೆಗಡೆಯವರ "ವಿಜ್ಞಾನ ವಿಶೇಷ" ಅಂಕಣಕ್ಕೆ ಈಗ 26 ವರ್ಷ! ಬಹುಶಃ ಕನ್ನಡದ ಸುದೀರ್ಘ ಅಂಕಣ ಇದೆ ಇರಬೇಕು. (ಇಲ್ಲದಿದ್ದಲ್ಲಿ, ಖಂಡಿತವಾಗಲೂ ಅವುಗಳಲ್ಲಿ ಒಂದು.)

ಹಲವಾರು ವೇದಿಕೆಗಳಲ್ಲಿ ಚರ್ಚಿಸಲ್ಪಟ್ಟ, ಓದಲ್ಪಟ್ಟ ಕನ್ನಡದ ಕೆಲವೆ ಪತ್ರಕರ್ತರಲ್ಲಿ ನಾಗೇಶ್ ಹೆಗಡೆಯವರೂ ಒಬ್ಬರು. ಕರ್ನಾಟಕದ ಪರಿಸರ, ಜಲ, ನೆಲ, ಕೃಷಿ, ವಿಜ್ಞಾನ, ತಂತ್ರಜ್ಞಾನಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು. ಸುಮಾರು ಮೂರು ದಶಕಗಳ ಕಾಲ ಸುಧಾ-ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿ ದುಡಿದು, ಎರಡು ವರ್ಷದ ಹಿಂದೆ ನಿವೃತ್ತರಾಗಿದ್ದಾರೆ. ಕಳೆದ ತಿಂಗಳು ಸಂಪದ ತಂಡ ನಾಗೇಶ್ ಹೆಗಡೆಯವರ ಆಡಿಯೊ ಸಂದರ್ಶನ ಮಾಡಿ ಅದನ್ನು ಅಂತರ್ಜಾಲದಲ್ಲಿ ಪ್ರಕಟಿಸಿದ್ದರು. ಅದೇ ಸಂದರ್ಶನದ ಹಿನ್ನೆಲೆಯಲ್ಲಿ ನನ್ನ ಈ ವಾರದ ಅಂಕಣ ಲೇಖನ ಬರೆದಿದ್ದೇನೆ.

ಪೂರ್ಣ ಲೇಖನ ಇಲ್ಲಿದೆ:
http://amerikadimdaravi.blogspot.com/2008/03/blog-post_12.html

ಪ್ರೀತಿಯ ಅನುರಾಗದ ಅಲೆ:

ಓ...ಪ್ರೀತಿಯೇ....
ಅನುರಾಗದ ಅಲೆಗಳಂತೆ ಬಾಳಲ್ಲಿ ಬಂದು
ವೈವಿದ್ಯಮಯವಾದ ಪ್ರೀತಿ-ಪ್ರೇಮದ ಅಮಲೇರಿಸಿ
ಕ್ಷಣಕಾಲ ಮರೆಯಾದ ಓಲವಿನ ಗೆಳತಿಯೇ...
ಮನದ ಭಾವನೆಗಳಿಗೆಲ್ಲಾ ಮಾತುಕೊಟ್ಟು
ಶಬ್ದವಿರದ ಮೌನಗಳಿಗೆ ಸಂವೇದನೆಯ ಸಂಭಾವನೆಯಿಟ್ಟು ನೇವರಿಸಿ
ಕಣ್ಣಮುಂದೇಯೇ ಇದ್ದರೂ ಹೃದಯದ ಕದ ತಟ್ಟದ
ಬಂಧು-ಬಾಂದವರ ಬಂಧನಗಳೆಲ್ಲದರ ಮುಸುಕು ತೆಗೆದು

ನಯಸೇನನ ಸಲೀಸಾದ ಸಾಲುಗಳು - ಬಿಡಿ ೫- ನಾಣ್ಣುಡಿ

ನಾಣ್ಣುಡಿಗಳು ನಮ್ಮ ಹಿರಿಗನ್ನಡದ ಕಬ್ಬಗಳಲ್ಲಿ ಹಲವು ಕಡೆ  ಕಂಡುಬರುತ್ತವೆ. ನಯಸೇನನ ದರ್ಮಾಮ್ರುತಂ ಇದಕ್ಕೆ ಹೊರತಲ್ಲ.

ಬೇಡಂ ಮಾಣಿಕಮೊಂದಂ
ಕಾಡೊಳ್ ಕಂಡೊರ್ಮೆ ಮೆಲ್ದು ಪಗಿನಲ್ಲೆಂದೀ
ಡಾಡಿದನೆಂಬೀ ನಾಣ್ಣುಡಿ
ನಾಡೆಯುಮೆಸೆದಪುದು ದುರಿತವಶದಿಂದಿವನೊಳ್

ಬಿಡಿಸದರೆ,

ದಿನಕ್ಕೊಂದು ಪ್ರಶ್ನೆ (೪)

ಕರ್ನಾಟಕದಲ್ಲಿ ಅತಿ ಹೆಚ್ಚು ಶಾಸನಗಳನ್ನು ಓದಿ ಅರ್ಥೈಸಿ ಟೀಕಾರ್ಥಗಳೊಂದಿಗೆ ಪ್ರಕಟಿಸಿ ಕರ್ನಾಟಕ ಇತಿಹಾಸಕ್ಕೆ ಹೊಸ ಮಾರ್ಗ ತೋರಿದ,ಬೆಂಗಳೂರಿನಲ್ಲೇ ಹುಟ್ಟಿದ ವಿದೇಶೀ ವಿದ್ವಾಂಸ ಯಾರು?