ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಾವ ಲಹರಿ...

ಓ... ನಿರ್ಮಲ ಭಾವವೇ, ನೀನೆಷ್ಟು ಕೋಮಲಾ.
ನಿನ್ನ ಮುಟ್ಟಲಿಚ್ಚಿಸಿದರೆ, ಮುದುಡುತ್ತಿರುವೆ.
ಓ... ನಿರ್ಮಲ ಭಾವವೇ ನೀನೆಷ್ಟು.....

ನೆನೆದಾಗ ಬರದಿರುವೇ, ನೆನೆಯದಿದ್ದಾಗ
ತಲೆ ಏರುವೆ.

ಓ... ನಿರ್ಮಲ ಭಾವವೇ, ನಿನೆಷ್ಟು ಚೆಂಚಲ.

- ರೇವನ್...

ಹುಡುಗಿ...

ಹುಡುಗಿ ನೀ ನನ್ನೇಕೆ ಕಾಡಿದೆ.
ಎಂದು ನಿನ್ನ ರಾಗ್ ಮಾಡಲಿಲ್ಲ.
ಜೋಡಿ ಹಕ್ಕಿಯಂತೆ ಹಾರಬೇಕೆಂದು
ಕನಸು ಕಾಣಲಿಲ್ಲ.

ಆದ್ರೆ, ನೀನೇಕೆ ನನ್ನ ಪ್ರೀತಿಸಿ ಹೋದೆ....
- ರೇವನ್...

ಕವಿತೆ...

ಭಾವನೆಗಳು ಕವಿತೆಯಾಗಲು ಪ್ರಯತ್ನಿಸಿದವು.
ಆದ್ರೆ, ಸಾಲುಗಳು ಶಾಯರಿಯಾದವು

ಒಲವು ಚಲುವಾಗಲು ಯತ್ನಿಸಿದವು.
ಆದ್ರೆ, ಭಗ್ನವಾದವು.

ಕಣ್ಣು ಕಂಬನಿಯಾದವು.
ಆದ್ರೆ, ಹನಿಗಳು ಕವಿತೆಯಾದವು.

- ರೇವನ್...

ಒಲಿದ ಕವನ...

ಹಸಿರ ಉಸಿರ ಮಧ್ಯ ಪ್ರೀತಿಯ ಕವನ.
ತಂಗಾಳಿಯ ಒಲವಿಗೆ ಸ್ಪೂರ್ತಿಯ ಸಿಂಚನ.

ನಲಿವ ಜೋಡಿಗೆ ವಿರಹದ ಅಂತರ.
ನಿನ್ನ ನೆನಪಿಗೆ ಮೋಹದ ಲೇಪನ.

ಆದ್ರೆ, ಒಲಿದ ಕವನಕ್ಕೆ...

-ರೇವಣ್...

ನಿನ್ನ ಸಾಲು...

ನಿನ್ನ ಪ್ರತಿ ಮಾತಿನಲ್ಲೂ ಮುಗ್ಧತೆಯ ಸಿಂಚನ.
ಮನದ ಆಸೆಗೆ ಕಲ್ಪನೆ ನಿಲುಕಿದರೂ ಈಗಲೂ ನಾಚಿಕೆಯ ಲೇಪನ.
ಹೃದಯದಲ್ಲಿ ನನ್ನ ಬಿಂಬವಿದ್ದರೂ ಪ್ರತ್ಯಕ್ಷ ಕಾಣಬೇಕೆಂಬುದು ನಿನ್ನ ಹಂಬಲ.

ನಲಿದು, ಒಲಿದು...ನಿನ್ನಡೆಗೆ ಬಂದರೂ ನಿನ್ನ ಹೃದಯ ಇನ್ನೂ ಬೇಕು
ಅನ್ನುತ್ತಿದೆ ಪ್ರೀತಿಯನ್ನ. ಉಸಿರು ಬಿಗಿಹಿಡಿದು ಎಲ್ಲ ಪ್ರೀತಿಯನ್ನ ನಿನಗೆ

ಮಳೆ

ಗವ್ವ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಜಿರ್..ಜಿರ್.. ಎನ್ನುವ ಹುಳಗಳ ಸದ್ದು.ಕಾಡುಗಳ ಮಧ್ಯೆ ಅಲ್ಲಲ್ಲಿ ಕಾಣುವ ಹೊಲಗದ್ದೆಗಳು.

ನನ್ನ ತಲೆಮಾರಿನ ತಲ್ಲಣಗಳು ಮತ್ತು ರಿವಾಲ್ವರ್‌ನಲ್ಲಿಯ ಬುಲೆಟ್

ನಾನು ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದ ನಂತರ ಬಂದ ಬಹುಪಾಲು ಅಭಿಪ್ರಾಯಗಳನ್ನು ಇತ್ತೀಚೆಗೆ ತಾನೆ ವೆಬ್‍ಸೈಟಿನಲ್ಲಿ ಹಾಕಿದ್ದೇನೆ. ಭಾರತದ ನನ್ನ ತಲೆಮಾರಿನ ತಲ್ಲಣ, ಆಶಾವಾದ, ಕನಸುಗಳು, ಆದರ್ಶಗಳು, ಸಿನಿಕತೆ, ಎಲ್ಲವೂ ಇಲ್ಲಿವೆ.
http://www.ravikrishnareddy.com/feedback.html

ಇದು ಪಯಣದ ಆರಂಭ. ಜೀವನ ಸಾರ್ಥಕ್ಯದ ಕ್ಷಣಗಳು ಈಗ ಆರಂಭವಾಗಿದೆ. ಒಂದಿಡೀ ತಿಂಗಳು ಮನಸ್ಸು ಎಲ್ಲಾ ತರಹದ ಗೊಂದಲ, ಗೊಜಲು, ಆಮಿಷ, ಒತ್ತಡ, ಮಮಕಾರ, ಆಸೆ, ಆಕಾಂಕ್ಷೆ, ಭಯಗಳಿಂದ ಮುಕ್ತವಾಗಿತ್ತು. ಬಹುಶಃ ಮೊದಲ ಬಾರಿಗೆ ಅನುಭವಿಸಿದ ಆತ್ಮತೃಪ್ತಿಯ ದಿನಗಳು ಅವು. ಸಂಪೂರ್ಣ ಆದರ್ಶದಲ್ಲಿ ನಡೆದುಕೊಂಡ ಕಾಲ. ಎಲ್ಲಿಯೂ ರಾಜಿಯಾಗಲಿಲ್ಲ. ಆತ್ಮಸಾಕ್ಷಿಗೊಪ್ಪದ್ದನ್ನು ಹೇಳಲಿಲ್ಲ, ಮಾಡಲಿಲ್ಲ.