ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಾವಾಭಿಷೇಕ

ಭಾವಾಭಿಷೇಕ

ಬಂದುಬಿಡು ನಲ್ಲೆ
ನೀನೊಮ್ಮೆ ಕನಸಿನಲಿ ನನ್ನ
ಆ ಸೂರ್ಯರಶ್ಮಿಗಳು ಸೋಕಿ
ನಾ ಎಚ್ಚರಾಗುವ ಮುನ್ನ
ಹೇಗೆ ನಾ ಅರಿಯಲಿ
ನೀ ಅಡಗಿರುವ ಮೂಲೆ
ಹೀಗೆ ನೀ ಕಾಡದಿರು
ಆಡುತ ಕಣ್ಣಾಮುಚ್ಚಾಲೆ

ಬರುವೆಯೊ, ಬಾರೆಯೊ
ನೀ ನನ್ನ ಕನಸಿನಲಿ
ನನ್ನ ಏಕಾಂತದೊಡತಿಯ
ನೆನಪುಗಳ ನಾ ಹೇಗೆ ಮರೆಯಲಿ?
ಬಂದುಬಿಡು ಓ ನಲ್ಲೆ
ನೀನೊಮ್ಮೆ ನನ್ನೆದೆಗೆ
ನಿನಗಾಗಿ ನಡೆದಿಹ

ಮಾ

ಇಲ್ಲಿ ಅಮೇರಿಕದಲ್ಲಿ ಮೇ ೧೧ ಅಮ್ಮನ ದಿನವೆಂದು ಆಚರಿಸಲಾಗುತ್ತೆ. ನನಗಂತೂ ಇದು ನನ್ನ ತಾಯ್ತನವನ್ನು ಸಂಭ್ರಮಿಸುವ ದಿನವೆಂದು ಬಹಳ ಇಷ್ಟ. ಮಕ್ಕಳಿಗೆ ಅಪ್ಪುಗೆ, ಮುತ್ತುಗಳನ್ನು ಒಂದಷ್ಟು ಹೆಚ್ಚಾಗಿ ಈ ದಿನ ಕೊಡುತ್ತೇನೆ, ಜೊತೆಗೆ ಬಯ್ಯದೆ, ಹೊಡೆಯದೆ ಹುಶಾರಾಗಿ ದಿನವನ್ನು ಕಳೆಯುತ್ತೇನೆ :-) ಮನೆಯಲ್ಲಿನ ಅಪ್ಪ ಇಂದು ನನ್ನನ್ನು ಆಚೆ ಊಟಕ್ಕೆ ಕೊಂಡೊಯ್ಯಲೇ ಬೇಕು.

ಅಡುಗೆಯ ಸಂಭ್ರಮ

ಅಮ್ಮ ಅಪ್ಪ ತಿಂಗಳುಗಟ್ಟಲೆ ಟ್ರಿಪ್ ಎಂದುಕೊಂಡು ಹೋದರೆ ನಮಗೆಲ್ಲ ಊಟ ತಿಂಡಿ ಕಥೆ ಮುಗಿಯಿತು. ಹೊರಗೆ ತಿನ್ನುವಂತಿಲ್ಲ, ಮನೇಲಿ ಮಾಡಿಕೊಳ್ಳಲಾಗುವುದಿಲ್ಲ ಎಂಬ ಪರಿಸ್ಥಿತಿ. ಹೊರಗೆ ತಿಂದರೆ ಜ್ವರ ಗ್ಯಾರಂಟಿ, ಮನೇಲಿ ಅಡುಗೆ ಮಾಡುವಷ್ಟು ಸಮಯ ಇಲ್ಲ, ಜೊತೆಗೆ ಸೋಮಾರಿತನ ಎಂದೆಲ್ಲ (ಎಲ್ಲದಕ್ಕಿಂತ ಮಿಗಿಲಾಗಿ ಸರಿಯಾಗಿ ಅಡುಗೆ ಮಾಡೋಕೆ ಬರಲ್ಲ ಅನ್ನೋದು). ಆದರೆ ಈ ಬಾರಿ ಧೈರ್ಯ ಮಾಡಿ ಒಂದು ಗ್ಯಾಸ್ ಸ್ಟೌ ತಂದೇ ಬಿಟ್ಟೆ. ಅಣ್ಣನ ಮನೆಗೆ ಹೋಗಬೇಕಿಲ್ಲದೆ ನಾನೇ ಅಡುಗೆ ಮಾಡಿಕೊಳ್ಳಬಹುದೆಂದು ಸಂತಸದಿಂದ ಬೀಗಿದೆ. ಆದರೆ ಆ ಸ್ಟೌನಲ್ಲಿ ಮೊದಲ ಬಾರಿ ಅಡುಗೆ ಮಾಡಿ ಅದು ಏನೇನೋ ಆದಾಗ ಸಂಭ್ರಮ ಎಲ್ಲ ಕರಗಿ ಹೋಯ್ತು.

ಒಂದೆರಡು ದಿನಗಳಲ್ಲಿ ಮುಂಚಿನಂತೆ at least ತಿನ್ನಲು ಯೋಗ್ಯವಾದ ಅಡುಗೆ ಮಾಡುವಷ್ಟು progress ಸಾಧಿಸಿದೆ. ಕೆಲಸಗಳ ಬ್ಯಾಕ್ ಲಾಗ್ ಉಳಿದವು. ನಿತ್ಯ ಸುಮಾರು ಹೊತ್ತು ಅಡುಗೆ ಮಾಡೋಕೆ ಕಳೆಯೋ ಹಾಗಾಯ್ತು. ಸ್ವಲ್ಪ ದಿನಗಳಲ್ಲಿ ಅಡುಗೆ ಮಾಡುವ ಸ್ಪೀಡು ಉತ್ತಮವಾಯ್ತು. ಹಾಗೆಯೇ ತಿಂಡಿ ಅಮ್ಮ ಮಾಡುವಂತೆಯೇ ಮಾಡಲು ಪ್ರಯತ್ನಿಸಿದೆ. ಸಿಕ್ಕಾಪಟ್ಟೆ ಬೋರು ಹೊಡೆಸಿತು ಸರಿಯಾಗಿ ಬರದೆ. ಒಂದೊಂದು ಸಾರಿ ಮಾಡಿದ ಅಡುಗೆ ತಿನ್ನಲೂ ಬಾರದಂತಾಗಿ ಹೋಟೆಲಿಗೇ ಹೋಗಬೇಕಾಯ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅಮ್ಮ ಮಾಡುವಂತೆಯೇ ಶಾವಿಗೆ ಉಪ್ಪಿಟು ಸುಮಾರು ೮ನೇ ಸಲ ಪ್ರಯತ್ನಿಸಿದೆ. ಜ್ಯಾಕ್ ಪಾಟ್! ಅಮ್ಮ ಮಾಡುವ ಹಾಗೆಯೇ ಬಂದಿತ್ತು! ಸಂಭ್ರಮ ಹೇಳತೀರದು!

ಇಷ್ಟು ದಿನ ಬರದದ್ದು ಈಗೇನು ಅಮ್ಮ ಮಾಡುವಂತೆಯೇ ರುಚಿಯಾಗಿ ಆದದ್ದು? ಕೆಳಗೆ ಅಣ್ಣನ ಮನೆಯಲ್ಲಿ ಅಮ್ಮ ಉಪ್ಪಿಟ್ಟಿಗೆಂದು ರೆಡಿ ಮಾಡಿ ಬಾಟಲಿಯಲ್ಲಿ ತುಂಬಿಟ್ಟಿದ್ದ ಪುಡಿಯೊಂದನ್ನು ತಂದು ಚಿಟುಕಿಸಿದ್ದು, ಅಷ್ಟೇ!

ಪ್ರತ್ಯಕ್ಷ ನೋಡಿದರೂ...

... ಪ್ರಮಾಣಿಸಿ ನೋಡು" - ಈ ಗಾದೆಯ ಪರಿಚಯ ನಮ್ಮೆಲ್ಲರಿಗೂ ಇದ್ದೇ ಇರತ್ತೆ. ಮಗುವನ್ನು ಹಾವಿನಿಂದ ಉಳಿಸಿದ್ದಲ್ಲದೇ ಮನೆಯೊಡತಿಯ ಅಚಾತುರ್ಯದ ಪೆಟ್ಟನ್ನೂ ತಾನೇ ತಿಂದು ಸಾಯುವ ಮುಂಗಸಿ ಕಥೆ ಶಾಲೆಯಲ್ಲಿದ್ದಾಗ ಹಲವರು ಓದಿರಬಹುದು. ಅದಿಲ್ಲದಿದ್ದರೆ "ನೋಡಿದ್ದೂ ಸುಳ್ಳಾಗಬಹುದು, ಕೇಳಿದ್ದೂ ಸುಳ್ಳಾಗಬಹುದು" ಹಾಡಂತೂ ಕೇಳಿಯೇ ಇರುತ್ತೇವೆ.

ಕೇಳಿದ್ದೇವೆ, ಸರಿ. ಆದರೆ ಇದೆಲ್ಲಾ ಯಾಕಿವತ್ತು?

ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ

ಇದೇ 'ತರಂಗ'ಕನ್ನಡ ವಾರದೋಲೆಯ ಏಪ್ರಿಲ್ ೧೭, ೨೦೦೮ ಪುಟ ೫೪, ೫೫ (ಜಾಗೃತಿ ಅಂಕಣ) ಇದರಲ್ಲಿ ಕೊಂಡಗೂಳಿ ಕೇಶಿರಾಜನ ಬಗ್ಗೆ ಬರಹದಲ್ಲಿ ಕೆಲ ತಪ್ಪುಗಳು ನುಸುಳಿವೆ. ಸಂಪದದಲ್ಲಿರುವ ತರಂಗ ಓದುಗರ ಗಮನಕ್ಕೆ. ತಡವಾಗಿ ಇಲ್ಲೆ ಹಾಕುತ್ತಿದ್ದೇನೆ,ಮನ್ನಿಸಿ.
 
ವೀರಶಯ್ವ ಕೊಂಡಗೂಳಿ ಕೇಶಿರಾಜನೇ ಬೇರೆ. ಇವನು ಶಬ್ದಮಣಿದರ್ಪಣವನ್ನು ಬರೆದಿಲ್ಲ.

ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್

ಲಿನಕ್ಸ್ ನಲ್ಲಿ ಹೊಸ ತಂತ್ರಾಂಶಗಳನ್ನ ಇನ್ಸ್ಟಾಲ್ ಹ್ಯಾಗೆ ಮಾಡಿಕೊಳ್ಳೋದು ಅಂತ ಯೋಚಿಸ್ತಿದೀರಾ? ಇಲ್ಲಿ ಒಂದು ಸುಲಭ ವಿಧಾನವಿದೆ ನೋಡಿ.

Application ಮೆನುವಿನಲ್ಲಿ Add/Remove ಆಫ್ಶನ್ ಕ್ಲಿಕ್ಕಿಸಿ ಕೆಳಗಿನ ಚಿತ್ರ ದಲ್ಲಿ ಕಂಡಂತೆ ನಿಮಗೊಂದು ವಿಂಡೋ ನಿಮ್ಮ ಪರದೆಯ ಮೇಲೆ ಕಾಣಿಸ್ತದೆ.

ನಶಿಸುತ್ತಿರುವ ಶಬ್ದ ಬಳಕೆ

ನಮ್ಮ ಪೀಳಿಗೆಯಲ್ಲಿ ಯತೆಚ್ಚವಾಗಿ ಬಳಕೆಯಲ್ಲಿದ್ದ ಎಷ್ಟೊ ಶಬ್ದಗಳು ಇಂದು ತುಂಬಾ ವಿರಳವಾಗಿ ಬಳಕೆಯಲ್ಲಿವೆ ಅಥವಾ ಗ್ರಾಂಥಿಕ ರೂಪ ಪಡೆದಿವೆ, ಹಳ್ಳಿಯ ಜನಪದರೂ ಕೂಡ ದೂರದರ್ಶನದ ಪ್ರಭಾವದಿಂದ ಈ ಶಬ್ದಗಳನ್ನು ಗ್ರಾಂಥಿಕ ರೂಪದಲ್ಲಿ ಬಳಸುತ್ತಿದ್ದಾರೆ. ಮುಂದಿನ ಪೀಳಿಗೆ ಈ ಶಬ್ದ ಸಂಪತ್ತಿನಿಂದ ವಂಚಿತವಾಗುತ್ತೆನೊ ಎಂಬ ಆತಂಕ.

ನನ್ನ ನೆನಪಿನಿಂದ ಹೊರಬಿದ್ದ ಕೆಲ ಶಬ್ದಗಳನ್ನು ಪಟ್ಟಿ ಮಾಡಿದ್ದೇನೆ.
೧. ಚಕ್ಕಡಿ
೨. ಹಗೆ (ಧಾನ್ಯ ತುಂಬುವದು)
೩. ಅಗಸಿ ಬಾಗಲಾ
೪. ಬಂಕ/ಚಾವಡಿ
೫. ತತ್ರಾಣಿ
೬. ಹರನಾಳಗಿ
೭. ಜೂಲಾ (ಎತ್ತಿಗೆ ತೊಡಿಸೊ ಕಸೂತಿಮಾಡಿದ ಬಟ್ಟೆ)
೮. ಬೊಲ ಬಗರಿ
೯. ಶ್ಯಾವಗಿ ಮಣಿ

’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ

ನನ್ನ ಹಿಂದಿನ ಬರೆಹವೊಂದಱಲ್ಲಿ ತಿಳಿಸಿದಂತೆ ದ್ರಾವಿಡ ಶಬ್ದ ತಮಿೞ್‍ಗೆ ಮಾತ್ರ ಅನ್ವಯಿಸುವುದಱಿಂದ ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎಂಬ ಶಬ್ದ ಬೞಸುವ ಬಗ್ಗೆ ತಮ್ಮ ಅಭಿಪ್ರಾಯ ಸಂಗ್ರಹಿಸಲು ಬಯಸುತ್ತೇನೆ. ತೆನ್‍ ಎಂದರೆ ತೆಂಕಣ (ಗಮನಿಸಿ ತೆಂಗಾಳಿ=ತೆಂಕಣ ಗಾಳಿ ಹಾಗೆಯೆ ತಂಗಾಳಿ ಶಬ್ದ ಕೂಡ ಇದೆ. ಅದಱರ್ಥ ತಣ್+ಗಾಳಿ=ತಂಗಾಳಿ ಅಂದರೆ ತಣ್ಣನೆಯ ಗಾಳಿ).