ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
ತಮಾಷೆ ಕೇಳಿ. ನೀವು ನಿಮ್ಮ ಕಂಪ್ಯೂಟರಿನಲ್ಲಿ ಆಗಲೇ ವಿಂಡೋಸ್ ಹಾಕಿಕೊಂಡು ಬಳಸುತ್ತಿದ್ದು ಲಿನಕ್ಸ್ ಹಾಕಿಕೊಳ್ಳೋದಕ್ಕೆ ಹೊರಟಾಗ ಅಂಜಿಕೆಯೋ, ಹಿಂಜರಿಕೆಯೋ ಆದರೆ ನೇರ ವಿಂಡೋಸ್ ಒಳಗೇ ಇದನ್ನು ಹಾಕಿಕೊಂಡುಬಿಡಬಹುದು (ಇದಕ್ಕೆ ಮತ್ತೆ ಸ್ವಲ್ಪ ಜಾಗ ಖಾಲಿ ಮಾಡಿಕೊಂಡು ಒಂದು ಪಾರ್ಟಿಶನ್ ಹಾಕಿಕೊಳ್ಳೋದು, ಫಾರ್ಮ್ಯಾಟ್ ಮಾಡೋದು ಇವೆಲ್ಲ ಬೇಕೇ ಆಗಿಲ್ಲ).
ಹೇಗೆ ಕೆಲಸ ಮಾಡುತ್ತೆ ಇದು? ವಿಂಡೋಸ್ ನಲ್ಲಿ "Add/Remove Programs" ಅಡಿ ಇದರ ಒಂದು entry ಸೇರಿಕೊಳ್ಳುತ್ತದೆ. ನಿಮಗೆ ಲಿನಕ್ಸ್ ಬೇಡ ಎನಿಸಿದಾಗ ಅಲ್ಲಿ ಹೋಗಿ ಪ್ರೋಗ್ರಾಮ್ ತೆಗೆದುಹಾಕಿದರಾಯಿತು! ಸುಲಭ ಅಲ್ವ? ಗ್ನು/ಲಿನಕ್ಸ್ ಬಳಸುವುದನ್ನು ಹೊಸತಾಗಿ ಪ್ರಾರಂಭಿಸಿದವರಿಗೆ ಇದು ಬಹಳ ಉಪಯುಕ್ತವಾಗಬಹುದು.
- Read more about ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
- 9 comments
- Log in or register to post comments