ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯೇಸುಕ್ರಿಸ್ತ ಎಂಬ ಉಚ್ಚಾರಣೆ

ಹೀಬ್ರೂ ಭಾಷೆಯ ಜೇಸು ಎಂಬ ಪದವನ್ನು ಅಂದಿನ ಕಾಲದ ವಿದ್ವತ್ ಭಾಷೆಯಾಗಿದ್ದ ಗ್ರೀಕ್ನಲ್ಲಿ Jesus (ಜೇಸುಸ್) ಎಂದು ಬರೆಯುತ್ತಿದ್ದರು. ಆದರೆ ಗ್ರೀಕರು 'ಜ' ಅಕ್ಷರವನ್ನು 'ಯ' ಎಂಬುದಾಗಿ ಉಚ್ಚರಿಸುತ್ತಾರೆ. (ನಮ್ಮ ದೇಶದಲ್ಲಿ ಒರಿಸ್ಸಾ, ಛತ್ತೀಸಗಡದಿಂದ ಹಿಡಿದು ಈಶಾನ್ಯ ಭಾಗದ ಎಲ್ಲ ರಾಜ್ಯಗಳ ಜನರು 'ಯ'ಕಾರಕ್ಕೆ 'ಜ'ಕಾರ ಬಳಸುವುದನ್ನು ನೋಡಬಹುದು).

ಹುಚ್ಚ...

ರೈಲು ನಿಧಾನವಾಗಿ ಸಾಗುತ್ತಿತ್ತು.ರೈಲಿನ ತು೦ಬಾ ಹೆಚ್ಚಾಗಿ ಯುವಕರು,ಹುಡುಗಿಯರೇ ತು೦ಬಿದ್ದರು.ಅಲ್ಲೇ ಇದ್ದ ಕಿಟಕಿಯ ಪಕ್ಕದಲ್ಲಿ ಒಬ್ಬ ಮುದುಕ ತನ್ನ ಸುಮಾರು 30 ವರ್ಷದ ಮಗನೊ೦ದಿಗೆ ಕುಳಿತಿದ್ದ.ಟ್ರೇನಿನ ವೇಗ ಹೆಚ್ಚಾಗುತ್ತಿದ್ದ೦ತೆ,ಆ 30 ವರ್ಷದ ವ್ಯಕ್ತಿ ಜೋರಾಗಿ "ಅಪ್ಪಾ,ಅಪ್ಪಾ...ಹೊರಗಡೆ ಕಾಡು ನೋಡಪ್ಪಾ...ಎಷ್ಟು ಚೆನ್ನಾಗಿದೆ ಅಲ್ವಾ.."? ಎ೦ದು ಕಿರುಚಿದ ಚಿಕ್ಕ ಮಗುವಿನ೦ತೆ,

30 ವರ್ಷದ ಯುವಕನ ಈ ರೀತಿಯ ವರ್ತನೆ ಸುತ್ತಲಿನ ಜನರಿಗೆ ಆಶ್ಚರ್ಯವನ್ನು೦ಟು ಮಾಡಿತು.ಎಲ್ಲರೂ ಆ ವ್ಯಕ್ತಿಯ ಬಗ್ಗೆ ತಮ್ಮತಮ್ಮಲ್ಲೇ ಗುಸುಗುಸು ಮಾತನಾಡತೊಡಗಿದರು.

"ಎಲ್ಲೋ ಲೋಸು ಅ೦ತ ಕಾಣುತ್ತೆ",ಎ೦ದ ಹೊಸದಾಗಿ ಮದುವೆಯಾದ ರವಿ ತನ್ನ ಹೆ೦ಡತಿಯ ಕಿವಿಯಲ್ಲಿ,

'ಅಳಿಯ'ನ ಪುರಾಣ

ನಾನು ಒಬ್ಬ ಅಳಿಯನಾಗಿರುವುದರಿಂದ 'ಅಳಿಯ' ಪದದ ಬಗ್ಗೆ ತಲೆಕೆಡಿಸಿಕೊಂಡಿದ್ದೆ. ಏನಪ್ಪ ಇದು ಅಳಿಯ ಅಂದ್ರೆ ಎಶ್ಟೊ ಸಲ ತಲೆ ಕೆರೆದುಕೊಂಡಿದ್ದೆ. ಕೊನೆಗೆ ಕೊಳಂಬೆ ಪುಟ್ಟಣ್ಣಗೌಡರ ನಿಗಂಟಿನಲ್ಲಿ ಇದಕ್ಕೆ ಉತ್ತರ ಸಿಕ್ಕಿತು.ನಮ್ಮ ಹಿರಿಯರು ಹೇಗೆ ಒಂದೊಂದು ಪದದಲ್ಲಿ ಸಮಱಿ(ಒಪ್ಪವಾಗಿಸಿ) ಅರಿತವನ್ನ ಅಡಗಿಸಿಟ್ಟಿದ್ದಾರೆ ಅಂತ ತಿಳಿದಾಗ ತುಂಬ ನಲಿವಾಯಿತು.

ಸಿಹಿ ಮುತ್ತುಗಳೊಂದಿಗೆ...with sweet kiss..."

ಸಿಹಿ ಮುತ್ತುಗಳೊಂದಿಗೆ...with sweet kiss..."
®
ಸಿಹಿ ಮುತ್ತು.....
ಇಂದಿನ ಸಿನೀಮಾಗಳಲ್ಲಿನ
ನಾಯಕ ನಾಯಕಿಯರು
ಕೊಟ್ಟು ಕೊಳ್ಳುವ
ಸಿಹಿಮುತ್ತು...
ಆಗಬಹುದಲ್ಲವೇ ಅವರ
ಜೀವಕ್ಕೆ ಅಪತ್ತು...?

®
.....ಅನುಕರಣೆ
ಇಂದಿನ ಸಿನೀಮಾಗಳಲ್ಲಿನ
ನಾಯಕ ನಾಯಕಿಯರು
ಕೊಂಡು ಕೊಟ್ಟು ಕೊಳ್ಳುವ
ಸಿಹಿಮುತ್ತುಗಳು
ವಿದೇಶಿಯರ
ಅನುಕರಣೆಯೇ...?

? ಪ್ರಸಾದ್

ಕನ್ನಡದ ಉಳಿವು ಯಾರಿಂದ

ಮೊನ್ನೆ ಆಟೊಗಾಗಿ ಕಾಯುತ್ತಿದ್ದೆ.
ನಮ್ಮ ಎಲೆಕ್ಟ್ರಾನಿಕ್ ಸಿಟಿ ಎಂದರೆ ಯಾರೂ ಬರುವುದಿಲ್ಲ. ಬೇರೆ ಆಟೊ ಹುಡುಕುತ್ತಿದ್ದೆ.
ಆಷ್ಟರಲ್ಲಿ ಒಬ್ಬ ಮಹಿಳೆ ಬಂದಳು. ನನ್ನನ್ನು ಯಾವುದೋ ಅಡ್ರೆಸ್ ಕೇಳಿದಳು (ತಮಿಳಲ್ಲಿ). ನಾನು ತಮಿಳು ಬರುವುದಿಲ್ಲವಾದರೂ "ನಂಗೆ ತೆರಿಯಾದು. ಆಟೊ ಕೇಳ್ಂಗೊ" ಎಂದೆ.
ಆಕೆ ಆಟೊವೋಂದರ ಬಳಿಗೆ ಹೋಗಿ ಕೇಳಿದಳು ತಮಿಳಿನಲ್ಲೆ.

ಸಂಸ್ಕಾರ ಕಲಿತಿಲ್ಲದವರು ಮಾಡುತ್ತಿರುವ ಸ್ವಧರ್ಮದ "ತಿಥಿ" ಮತ್ತು "ತಿಥಿ" ಪಾಠ...

ಮಂಗಳೂರಿನ ಕೆಲವು "ಅತಿಮಡಿವಂತ" ಕಾಲೇಜು ಹಿಂದಿ ಅಧ್ಯಾಪಕರು "'ಸಂಸ್ಕಾರ' ಕಾದಂಬರಿಯನ್ನು ಬೋಧಿಸಲು ಮುಜುಗರವಾಗುತ್ತದೆ, ದಯವಿಟ್ಟು ಅದನ್ನು ತೆಗೆದುಹಾಕಿ," ಎಂದದ್ದು ನಿಮಗೆ ಗೊತ್ತಿರಬಹುದು. ಅವರ ಈ ಕೋರಿಕೆಗೆ ಆ ಪ್ರದೇಶದ ಸಾಹಿತ್ಯಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳಿವೆ ಎನ್ನುವ ಸಂದೇಹ ನನ್ನದು. ಆದರೆ ಆ ಆಯಾಮಗಳು ಇಲ್ಲಿ ಅಪ್ರಸ್ತುತ. ಇಲ್ಲಿ ನಮಗೆ ಮುಖ್ಯವಾಗಬೇಕಿರುವ ಆಯಾಯಮವನ್ನು ಮುಂದಿಟ್ಟುಕೊಂಡು, ಸ್ಯಾನ್‍ಫ್ರಾನ್ಸಿಸ್ಕೊ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ (ಮೈಸೂರು ಮೂಲದ) ಗೆಳೆಯ ಡಾ. ಪೃಥ್ವಿ ದತ್ತ ಚಂದ್ರ ಶೋಭಿ ವಿವರವಾಗಿ ವಾರದ ಹಿಂದೆಯೆ ಚುರುಮುರಿ.ಕಾಮಿನಲ್ಲಿ ಬರೆದಿದ್ದರು. ಅದಾದ ನಾಲ್ಕೈದು ದಿನಗಳಿಗೆ ಕನ್ನಡಪ್ರಭದಲ್ಲಿ ಉಷಾ ಕಟ್ಟೆಮನೆಯವರು ಇದೇ ವಾದವನ್ನು ಪುಷ್ಟೀಕರಿಸುವಂತಹ ಲೇಖನವನ್ನು ಬರೆಯುವ ತನಕ ಯಾವೊಂದು ಕನ್ನಡ ದಿನಪತ್ರಿಕೆಯೂ ಈ ವಿವಾದದ ಮೂಲಸಮಸ್ಯೆಯತ್ತ ಗಮನ ಹರಿಸಿರಲಿಲ್ಲ. ವಿವಾದಗಳನ್ನು ಸೃಷ್ಟಿಸುವ ಅಥವ ವಿವಾದಗಳಿಂದ ತಮ್ಮ ಅಜೆಂಡಾ ಪೂರೈಸಿಕೊಳ್ಳುವ ಒಂದು ಹೀನಾಯ ಸಂಸ್ಕೃತಿಯನ್ನೆ ಪತ್ರಿಕೋದ್ಯಮ ಎಂದುಕೊಂಡುಬಿಟ್ಟಿದ್ದಾರೆ ನಾಡಿನ ಉದ್ದಾಮ ಪತ್ರಕರ್ತರು.

"ಸ್ವಧರ್ಮೇ ನಿಧನಮ್ ಶ್ರೇಯಃ" ಎನ್ನುತ್ತಾನೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ. ಈಗಿನ ಕೆಲವರು ಕೃಷ್ಣನ ಈ ಮಾತನ್ನು

ಮಲ್ಲಿಗೆಯ ಘಮಘಮ, ಬ್ಯಾಡಗಿ ಮೆಣಸಿನ ಘಾಟು!

ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ (ಕಥಾ ಸಂಕಲನ)

ಭಾಸ್ಕರ ಹೆಗಡೆ

ಸುಂದರ ಪ್ರಕಾಶನ `ಚಿತ್ರಶ್ರೀ', 43, ಕಲಾಮಂದಿರ, 5ನೆಯ ಅಡ್ಡರಸ್ತೆ ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಬೆಂಗಳೂರು - 560 019

ಪುಟಗಳು:105+6

ಬೆಲೆ:ರೂ.100

ಮಲ್ಲಿಗೆಯ ಘಮಘಮ, ಬ್ಯಾಡಗಿ ಮೆಣಸಿನ ಘಾಟು!

ಪುಸ್ತಕದ ಲೇಖಕ/ಕವಿಯ ಹೆಸರು
ಭಾಸ್ಕರ ಹೆಗಡೆ
ಪ್ರಕಾಶಕರು
ಸುಂದರ ಪ್ರಕಾಶನ `ಚಿತ್ರಶ್ರೀ', 43, ಕಲಾಮಂದಿರ, 5ನೆಯ ಅಡ್ಡರಸ್ತೆ ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಬೆಂಗಳೂರು - 560 019
ಪುಸ್ತಕದ ಬೆಲೆ
೧೦೦

ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ (ಕಥಾ ಸಂಕಲನ)

ಸುಂದರ ಪ್ರಕಾಶನ `ಚಿತ್ರಶ್ರೀ', 43, ಕಲಾಮಂದಿರ, 5ನೆಯ ಅಡ್ಡರಸ್ತೆ ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಬೆಂಗಳೂರು - 560 019

ಪುಟಗಳು:105+6