ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜನಪದ ತೆರನಾದ ಹಾಡುಗಳು - ೧

ಹೆಗಲ ಮ್ಯಾಲೆ ನೇಗಿಲ ಹೊತ್ಕೊಂಡು
ಹೊಂಟ್ಯಾನ ಎನಗಂಡ ಹೊಲದೆಡೆಗೆ |
ಹೊತ್ತು ಮುಳುಗೋ ಮುಂದ ಬಾರಪ್ಪ ನೀ ಮನಿಯೊಳಗ     | ಹೆಂಡತಿ ಗಂಡನಿಗೆ|

ಹೊಲದಲ್ಲಿ ಸ್ಯಾನೆ ಗೇಮೆ ಅಯ್ತೆ ಕಣಮ್ಮಿ
ಆಳು ಕಾಳು ಕಡ್ಡಿಗಳನೆಲ್ಲ ಸಮಱಿಯಲು |
ಹೊತ್ತು ಮುಳುಗುವುದು ನಾ ಏನ ಮಾಡಲಿ ಎನ್ನೊಡತಿ  | ಗಂಡ ಹೆಂಡತಿಗೆ|

ಕನ್ನಡಕ್ಕೆ ಅನುವಾದ?!

We hear but we don’t listen.
We see but we don’t observe
We touch but we don’t feel
We talk but we don’t communicate

ಇವು ನಮ್ಮಲ್ಲಿ ಕಾಣುವ ಕೆಲವು ವಿಪರ್ಯಾಸಗಳು.
ಇವುಗಳನ್ನು ಹೇಗೆ ಕನ್ನಡ ಕ್ಕೆ ಅನುವಾದಿಸಬೇಕು? ... any try?!

ಎರೆಡು ಪತ್ರಗಳು

ಪತ್ರ ಒಂದು

ಪ್ರೀತಿಯ ಅಪ್ಪನಿಗೆ.

ನೆನ್ನೆ ನಿನ್ನ ಫೋನಿಂದ ಮನಸ್ಸು ಕದಡಿಹೋಗಿದೆ. ನೀವು ನೋಡಿದ ಹುಡುಗ ಅಲ್ಲ ಬೇರೆ ಯಾವ ಹುಡುಗನೊಡನೆಯೂ ಮದುವೆ ಎಂಬ ಬಂಧನಕ್ಕೆ ಬೀಳಲು ನಾನು ಸಿದ್ದ ಇಲ್ಲ.ದಯವಿಟ್ಟು ಕ್ಷಮಿಸು.

ಲಕ್ಕುಂಡಿಯ ದೇವಾಲಯಗಳು

ಗದಗ - ಕೊಪ್ಪಳ ದಾರಿಯಲ್ಲಿ ೧೨ ಕಿಮಿ ಕ್ರಮಿಸಿದರೆ ಸಿಗುವುದು ಲಕ್ಕುಂಡಿ ಎಂಬ ೧೧-೧೨ನೇ ಶತಮಾನದ ಶಿಲ್ಪಕಲೆಯನ್ನು ಸಾರುವ ಪುಟ್ಟ ಊರು. ೧೦೧ ದೇವಸ್ಥಾನಗಳು, ೧೦೧ ಬಾವಿಗಳು ಮತ್ತು ೧೦೧ ಲಿಂಗಗಳ ಊರು ಲಕ್ಕುಂಡಿ ಎಂದು ಪ್ರಸಿದ್ಧವಾದರೂ ಅವುಗಳಲ್ಲಿ ಬಹಳಷ್ಟು ಕಾಲನ ದಾಳಿಗೆ ನಶಿಸಿದ್ದರೆ ಇನ್ನೂ ಕೆಲವು ಒತ್ತುವರಿಗೆ ಬಲಿಯಾಗಿವೆ.

ಲಕ್ಕುಂಡಿ ಒಂದು ಕಾಲದಲ್ಲಿ ಪ್ರಸಿದ್ಧ ಶಿಕ್ಷಣ ಕೇಂದ್ರವಾಗಿತ್ತು. ೧೦ರಿಂದ ೧೨ನೇ ಶತಮಾನದವರೆಗೆ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಜೈನ, ವೈದಿಕ ಮತ್ತು ಶೈವ ಧರ್ಮಗಳಿಗೆ ಆಶ್ರಯ ನೀಡಿದ ಲಕ್ಕುಂಡಿ ಅತ್ತಿಮಬ್ಬೆಯ ಕರ್ಮಭೂಮಿಯೂ ಆಗಿರುವುದು. ಇಂದಿನ ಲಕ್ಕುಂಡಿ ಆ ಕಾಲದಲ್ಲಿ 'ಲೊಕ್ಕಿಗುಂಡಿ' ಎಂದು ಪ್ರಸಿದ್ಧವಾಗಿತ್ತು. ಬಂಗಾರದ ನಾಣ್ಯಗಳನ್ನು ತಯಾರಿಸುವ ಟಂಕಸಾಲೆ ಈ ಊರಿನಲ್ಲಿತ್ತು. ಈ ನಾಣ್ಯಗಳು ಆಗಿನ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಚಲಾವಣೆಯಲ್ಲಿದ್ದವು. ನೆರೆ ಬಂದಾಗ ಈಗಲೂ ಲಕ್ಕುಂಡಿಯ ಜನರು ಮೋರಿಗಳಲ್ಲಿ, ಬಾವಿಗಳಲ್ಲಿ ಆಗಿನ ಕಾಲದ ಚಿನ್ನದ ನಾಣ್ಯಗಳೇನಾದರೂ ಸಿಗಬಹುದೇ ಎಂದು ಹುಡುಕುತ್ತಾರೆ.

ಕಲ್ಯಾಣ ಚಾಲುಕ್ಯರು, ಸೇವುಣರು ಮತ್ತು ದೇವಗಿರಿ ಯಾದವರ ಕಾಲದಲ್ಲಿ ಲಕ್ಕುಂಡಿ ಬಹಳ ಪ್ರಾಮುಖ್ಯತೆಯನ್ನು ಪಡೆದಿತ್ತು. ಹೊಯ್ಸಳ ದೊರೆ ಇಮ್ಮಡಿ ಬಲ್ಲಾಳ ಲಕ್ಕುಂಡಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ಎಂಬ ದಾಖಲೆಗಳಿವೆ. ಲಕ್ಕುಂಡಿ ಗ್ರಾಮದೊಳಗೆ ತಿರುಗಾಡಿದರೆ ಹಿಂದಿನ ಭವ್ಯ ಇತಿಹಾಸದ ಕುರುಹುಗಳನ್ನು ಕಾಣಬಹುದು. ಇದೊಂದು ದೇವಾಲಯಗಳ ಮತ್ತು ಬಾವಿಗಳ ಊರಾಗಿತ್ತು. ಇಲ್ಲಿನ ಕೋಟೆ ೩ ಸುತ್ತಿನದಾಗಿತ್ತು. ಈಗ ಕೋಟೆಯ ೩ ಸುತ್ತುಗಳ ಗೋಡೆಯನ್ನೇ ಮನೆಗಳ ನೆಲಗಟ್ಟನ್ನಾಗಿ ಅಥವಾ ಗೋಡೆಗಳನ್ನಾಗಿ ಬಳಸಲಾಗಿದೆ. ಊರೊಳಗೆ ಸುತ್ತಾಡುವಾಗ ಆಚೀಚೆ ದೃಷ್ಟಿ ಹಾಯಿಸಿದರೆ ಕೋಟೆಯ ಗೋಡೆಗಳ ನೆಲಗಟ್ಟು ಸ್ಪಷ್ಟವಾಗಿ ಕಾಣಸಿಗುವುದು. ಕೋಟೆಯೊಳಗಿನ ಕಂದಕಗಳು ಈಗ ಮಳೆಗಾಲದ ನೀರನ್ನು ಹಾಯಿಸುವ ಮೋರಿಗಳಾಗಿವೆ. ಕಲ್ಯಾಣ ಚಾಳುಕ್ಯರು ಲಕ್ಕುಂಡಿಯ ಹೆಚ್ಚಿನ ದೇವಾಲಯಗಳನ್ನು ಕಟ್ಟಿಸಿದರು ಎನ್ನಲಾಗುತ್ತದೆ. ಈ ದೇವಾಲಯಗಳು ೧೦೮೭ರಲ್ಲಿ ಚೋಳರ ದಾಳಿಯಲ್ಲಿ ಹಾನಿಗೊಳಗಾದಾಗ, ಲಕ್ಕುಂಡಿಯನ್ನು ನಂತರ ಆಳಿದವರು ಹಾನಿಗೊಳಗಾದ ದೇವಾಲಯಗಳನ್ನು ಸರಿಪಡಿಸಿದರು.

ಸಂಪದ, ಈಗ ಮತ್ತಷ್ಟು ಹತ್ತಿರ


ಸಂಪದ ಹತ್ತಾರು ಬರಹಗಳನ್ನ, ಚರ್ಚೆಯ ವಿಷಯಗಳನ್ನ, ಬ್ಲಾಗ್ ಪೋಸ್ಟ್ ಗಳನ್ನ ತನ್ನತ್ತ ಪ್ರತಿದಿನ ಸೆಳೆಯುತ್ತಾ ಬರ್ತಿದೆ. ಪ್ರತಿದಿನ ಸಂಪದ ವೆಬ್ಸೈಟ್ ನೊಡ್ಲಿಕ್ಕೆ ಸಾಧ್ಯ ಆಗ್ತಿಲ್ಲಾ ಅಂತ ಬೇಜಾರಿದೆಯೆ? ನಿಮಗಿಲ್ಲಿದೆ ಒಂದು ಸಣ್ಣ ಕಿವಿಮಾತು.

ಸಂಪದ ವೆಬ್ಸೈಟ್ನಲ್ಲಿನ ನಿಮ್ಮ ಅಕೌಂಟನ ಪ್ರೊಫೈಲ್ ಸ್ವಲ್ಪ ಬದಲಾವಣೆ ಮಾಡಿದರೆ, ಸಂಪದದಲ್ಲಿ ಪ್ರತಿದಿನ ಹೊಸತಾಗಿ ಸೇರುವ ಬರಹಗಳು, ಚರ್ಚೆಗಳು ಮುಂತಾದವುಗಳ ಒಂದು ಸಣ್ಣ ಪತ್ರ ನಿಮ್ಮ ಇ-ಮೈಲ್ ನ ಇನ್ಬಾಕ್ಸ್ (inbox) ನಲ್ಲಿ ಪ್ರತಿದಿನ ರವಾನೆಯಾತ್ತದೆ. ಹೇಗೆ ಅಂತ ನೋಡೊಣ್ವಾ?

ಮೊದಲು ಸಂಪದಗೆ ಲಾಗಿನ್ ಆಗಿ, ಪ್ರೊಫೈಲ್ ಕೊಂಡಿಯನ್ನ ಕ್ಲಿಕ್ಕಿಸಿ (ಚಿತ್ರ - ೧). ನಂತರ "Mail notification settings" (ಚಿತ್ರ - ೨)ಪುಟಕ್ಕೆ ಜಾರಿ.

ಮುಂಗಾರುಮಳೆ ಹೇಳಿದ್ದೇನು? - ಮುಂಗಾರುಮಳೆಯ ಕೊನೆಯದೊಂದು ವಿಮರ್ಶೆ (ಲೇಖಕರು: ಶೇಖರ್‌ಪೂರ್ಣ).

snEhitare,
ಸುಮಾರು ಒಂದು ವರ್ಷದ ಹಿಂದೆಯೇ ಬರೆದ ಈ ವಿಮರ್ಶೆ ಕಾರಣಾಂತರಗಳಿಂದ ಪ್ರಕಟವಾಗಿರಲಿಲ್ಲ.
ಮುಂಗಾರು ಮಳೆಯ ಅಗಾಧ ಯಶಸ್ಸನ್ನೂ ಮನಸ್ಸಲ್ಲಿಟ್ಟುಕೊಂಡು ಈ ವಿಮರ್ಶೆ ಮೂಡಿಬಂದಿರುವುದಾದರೂ ಚಿತ್ರ
ಪ್ರತಿಪಾದಿಸುತ್ತಿರುವ ಮುಕ್ತ-ಸಮಾಜ ಕಲ್ಪನೆಯೆಡೆಗೆ ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ವಿಮರ್ಶೆ

ಕಿರಿಕಿರಿ

ತಾರೆಗಳಿಗೇಕಿಂತ ನಾಚಿಕೆ..
ಮುಖ ಮುಚ್ಚಿ, ಬೆರಳ
ಸಂದುಗಳಲ್ಲಿ ನೋಡಿ..
ನಗುತ್ತಿರುವುದಾದರೂ..
ಏತಕೆ ??

ಮುದಿ ಚಂದಿರನಿಗೇಕೋ,
ಏನೋ ಹುಸಿನಗು..
ಅಣಕಿಸಿ ಅಂದಂತೆ..ಇದೆಲ್ಲಾ
ನಾ ವಯಸ್ಸಲ್ಲಿ ಮಾಡಿ..
ಬಿಟ್ಟಿದ್ದಲ್ಲವೇ.. ಮಗು..

ಅವಳ ಬೆಚ್ಚಗಿನ
ಸಾನಿಧ್ಯವ ಸವಿಯಲು ಬಿಡದೆ..
ತರಿಸುವುದು ಚಳಿ..
ಸುಳಿಸುಳಿದು ಸುಮ್ಮನೆ ಮೂಗು
ತೂರಿಸುವ ಅಧಿಕಪ್ರಸಂಗಿ
ತಂಗಾಳಿ..