ಶಾಪಿಂಗ್ ಮಾಲ್ ಜಾಹೀರಾತು ಮತ್ತು ಕನ್ನಡ

ಶಾಪಿಂಗ್ ಮಾಲ್ ಜಾಹೀರಾತು ಮತ್ತು ಕನ್ನಡ

ಬರಹ

ಉಸಿರುಗಟ್ಟಿಸುವಂತೆ ಯುವ ಪೀಳಿಗೆಯ ದಂಡನ್ನೇ ತನ್ನೆಡೆಗೆ ಸೆಳೆಯುತ್ತಿರುವ "ಶಾಪಿಂಗ್ ಮಾಲ್"ಗಳಲ್ಲಿ ಕನ್ನಡ ಜಾಹೀರಾತು ನೋಡೋದು ಅಂದ್ರೆ ಕನಸೇ ಅಲ್ವಾ? ಎಷ್ಟೋ ಸಂಘಟನೆಗಳು ಕನ್ನಡವನ್ನ ಮಾಲ್ಗಳಲ್ಲಿರುವ ಅಂಗಡಿಯ ಮಾಲೀಕರು ಕಡ್ಡಾಯವಾಗಿ ಬಳಸಬೇಕೆಂದು ಒತ್ತಾಯಿಸಿದ್ದೂ ಆಯಿತು. ಇತ್ತೀಚೆಗೆ ಶಾಫಿಂಗ್ ಮಾಲ್ಗಳಲ್ಲಿ ಕನ್ನಡ ಹಾಡುಗಳು ಕೇಳಿಬರುತ್ತಿರೋದನ್ನ ಸುನೀಲ ಬರೆದಿದ್ದ. ನನಗೂ ಅದರ ಅನುಭವ ಆಗಿದೆ. ಅದೇ ರೀತಿ ಕೆಲ ತಿಂಗಳುಗಳ ಹಿಂದೆ ಸಿನಿಮಾಕ್ಕೆ ಹೋಗಿದ್ದಾಗ ಕನ್ನಿಂಗ್ ಹ್ಯಾಮ್ ರೋಡ್ ನಲ್ಲಿನ ಸಿಗ್ಮಾ ಮಾಲ್ ನಲ್ಲಿರೋ ಮಲ್ಟಿಪ್ಲೆಕ್ಸ್ "ಫನ್ ಸಿನೇಮಾ" ದ ಒಂದು ಜಾಹೀರಾತ ಫಲಕ ಕನ್ನಡದ ಜನಪ್ರಿಯ ದಿನಪತ್ರಿಕೆ ಪ್ರಜಾವಾಣಿಯ ಪ್ರಚಾರ ಮಾಡ್ತಿತ್ತು. ನನ್ನ ಮೊಬೈಲ್ ನಲ್ಲಿ ಅಡಗಿದ್ದ ಈ ಚಿತ್ರಕ್ಕೆ ಇಂದು ಬಿಡುಗಡೆ ಸಿಕ್ಕಿದೆ.

 

 

 ಬೇರೆಯವರನ್ನ ಒತ್ತಾಯಿಸಿ, ಕನ್ನಡವನ್ನ ಪರದೆಯ ಮುಂದೆ ತರುವುದರ ಬದಲು, ಕನ್ನಡವನ್ನ ನಾವೇ ಎಲ್ಲರ ಮುಂದಿಡಬೇಕು. ನಾವೂ ಜಗತ್ತಿನ ಎಲ್ಲರಂತೆ ಹೊಸ ಆವಿಷ್ಕಾರಗಳನ್ನ, ಟೆಕ್ನಾಲಜಿಯನ್ನ ಬಳಸೋದನ್ನ ಕಲೀಬೇಕು. ಇದರ ಬಗ್ಗೆ ದಿನಗಟ್ಟಲೇ ಮಾತಾಡಬಹುದು. ಆದರೆ ಮಾಡ್ಬೇಕಾದ ಕೆಲಸ ಬೇಕಾದಷ್ಟಿದೆ ಅದನ್ನ ಮೊದಲು ಮಾಡುವ. ಪ್ರಜಾವಾಣಿಯಂತೆ ಇತರರೂ ಪಾಶ್ಚ್ಯಾತ್ಯ ಸಂಸ್ಕೃತಿಗೆ ಒತ್ತು ಕೊಡುತ್ತಿರುವ ಇಂತಹ ಸ್ಥಳಗಳಲ್ಲಿ ಕನ್ನಡ ಜಾಹಿರಾತುಗಳನ್ನ, ಸೇವೆಗಳನ್ನ ಜನರ ಮುಂದಿಡಲು ಹಿಂಜರಿಯದಿರಲಿ.