ಸಿ.ಡಿ.ಎಸ್. ವತಿಯಿಂದ ‘ಮಾಹಿತಿ ಹಕ್ಕು ಅಧಿನಿಯಮ- ೨೦೦೫’ ವಿಶೇಷ ಉಪನ್ಯಾಸ.

ಸಿ.ಡಿ.ಎಸ್. ವತಿಯಿಂದ ‘ಮಾಹಿತಿ ಹಕ್ಕು ಅಧಿನಿಯಮ- ೨೦೦೫’ ವಿಶೇಷ ಉಪನ್ಯಾಸ.

ಧಾರವಾಡದ ಸೆಂಟರ್ ಫಾರ್ ಡೆವೆಲಪಮೆಂಟಲ್ ಸ್ಟಡೀಸ್, ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ್ ಸಭಾಂಗಣದಲ್ಲಿ ಬರುವ ಆಗಸ್ಟ್ ೨೭, ೨೦೦೮ ರಂದು ಬುಧವಾರ ಸಂಜೆ ೬.೧೫ಕ್ಕೆ ‘ಮಾಹಿತಿ ಹಕ್ಕು ಅಧಿನಿಯಮ-೨೦೦೫’ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ. ಡಾ.ಆರ್.ಬಾಲಸುಬ್ರಮಣ್ಯಂ ಅಂದಿನ ಕಾರ್ಯಕ್ರಮದ ವಿಶೇಷ ಅತಿಥಿ.

ಡಾ.ಆರ್.ಬಾಲಸುಬ್ರಮಣ್ಯಂ ಅವರು ಸ್ವಾಮಿ ವಿವೇಕಾನಂದ ಯುಥ್ ಮೂವಮೆಂಟ್, ಮೈಸೂರು ಸಂಸ್ಥೆಯ ಅಧ್ಯಕ್ಷರು. ಶ್ರೀಯುತರು ಹೆಗ್ಗಡದೇವನ ಕೋಟೆಯ ಬುಡಕಟ್ಟು ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ ಕಳೆದ ೨೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಂವಾದ ಗೋಷ್ಠಿಯ ಅಧ್ಯಕ್ಷತೆಯನ್ನು ಢಾರವಾಡ ಉತ್ತರ ಲೋಕಸಭಾ ಸಂಸದ ಶ್ರೀ ಪ್ರಹ್ಲಾದ ಜೋಶಿ ವಹಿಸಲಿದ್ದಾರೆ.

ಭಾರತದ ಸಂಸತ್ತು ಮಾಹಿತಿ ಹಕ್ಕು ಕಾಯ್ದೆ ಜಾರಿ ಗೊಳಿಸುವ ಮೂಲಕ ಸರಕಾರಗಳನ್ನು ಪ್ರಶ್ನಿಸುವ, ಕಡತಗಳನ್ನು ಪರಿಶೀಲಿಸುವ, ಸರಕಾರಿ ಕಡತಗಳ ಪ್ರತಿಗಳನ್ನು ಪಡೆದುಕೊಳ್ಳುವ ಹಾಗು ಸರಕಾರಿ ಕಾಮಗಾರಿಗಳನ್ನು ಪರಿಶೀಲಿಸುವ ಅಧಿಕಾರವನ್ನು ದೇಶದ ಸಮಸ್ತ ನಾಗರೀಕರಿಗೆ ನೀಡಿದೆ.

ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಿಸಿದ, ಮಾನವ ಅಭ್ಯುದಯದ ಕಳಕಳಿ ಹೊತ್ತ ಸಂಸ್ಥೆ ಸಿ.ಡಿ.ಎಸ್. ಸಮಾನ ಮನಸ್ಕರು ಸೇರಿ ಬದಲಾವಣೆ ತರಲು ಹೊರಟ ಪಡೆ ಇದು. ಸದ್ಯ ಧಾರವಾಡ ನೆಲೆ. ಕಾರ್ಯಕ್ರಮಕ್ಕೆ ನೀವು ಬನ್ನಿ. ಗೆಳೆಯರನ್ನು ಕರೆತನ್ನಿ.