ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು

First Year - Excuse Me
Second Year -ನನ್ನ ಪ್ರೀತಿಯ ಹುಡುಗಿ
Third Year -ಜೊತೆ ಜೊತೆಯಲಿ
Exam ನಲ್ಲಿ - ಶರಪಂಜರ
Question Paper - ಅಪರಿಚಿತ
ಕಾಪಿ ಚೀಟಿ - ಆಪ್ತಮಿತ್ರ
ಡಿಬಾರ್ - ಆಕಸ್ಮಿಕ
ಫಲಿತಾಂಶ - ಶ್..
ಪಾಸ್ - ಖುಶಿ
ಫೇಲ್ - ಹುಚ್ಹ
Supplementary - ನಾ ನಿನ್ನ ಬಿಡಲಾರೆ

ರಾಜ ಮುದ್ದು ರಾಜ

ನನ್ನ ಬಹುದಿನದ ಕನಸು ಇಂದು ನನಸಾಗುವುದರಲ್ಲಿತ್ತು.

ಎಷ್ಟೊ ದಿನದಿಂದ ರಾಜನ ಬಗ್ಗೆ ಕನಸು ಕಂಡಿದ್ದೆ. ಅವನ ಉದ್ದಾದ ಕೂದಲು ಅವನ ಕಣ್ಣು , ಎಲ್ಲಾ ನನ್ನ ಸೆಳೆದಿತ್ತು.

ಅವನ ಮನೆಗೆ ನಾನು ಹೋದಂತೆ , ಅವನನ್ನು ಮುದ್ದಾಡಿದಂತೆ, ನನ್ನ ಮಡಿಲಲಿ ಅವನು ಮಗುವಾದಂತೆ.

ಚುನಾವಣೆ - ಗುರುತಿನ ಚೀಟಿ - ಪಾಸ್-ಪೋರ್ಟ್

ಗುಂಡ ಆ ಕ್ಯೂನಲ್ಲಿ ನಿಂತು ಆಗ್ಲೇ ಮೂರು ತಾಸು ಆಗಿತ್ತು. ಬಿಸಿಲ ಧಗೆಗೆ ಅವ್ನ ಗಂಟ್ಲು ಒಣಗಿತ್ತು. ಅವ್ನ ಮುಂದೆ ನಿಂತ ಮೂರು ಹೆಣ್ಮಕ್ಳು, "ಟೇಮೆಷ್ಟಣ್ಣಾ..?", ಅಂತ ಮುವ್ವತ್ತು ಸಲ ಕೇಳಿದ್ದರು. ಹೋದ-ವಾರನೇ ತಗೊಂಡಿದ್ದ "fastrack" ವಾಚ್ ಕಡೆ ಸ್ಟೈಲಿಂದ ನೋಡಿ, ಒಂಚೂರು ಬೇಜಾರಿಲ್ದೆ, ಗುಂಡ ಅವ್ರಿಗೆ ಟೇಮೆಳಿದ್ದ.

ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!

ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!

ಗಿರೀಶ್ ಕಾರ್ನಾಡರು ತಮ್ಮ `ತಲೆದಂಡ' ನಾಟಕದ ಮುನ್ನುಡಿಯಲ್ಲಿ ನೋಯುವ ಹಲ್ಲಿನ ಕಡೆ ನಾಲಗೆ ಪದೇ ಪದೇ ಹೊರಳುವಂತೆ ಕನ್ನಡ ಪ್ರಜ್ಞೆ ಪದೇ ಪದೇ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಕಡೆ ಹೊರಳುವ ಕಡೆಗೆ ನಮ್ಮ ಗಮನ ಸೆಳೆದಿದ್ದಾರೆ. ಈ ಮಾತನ್ನು ಆನಂತರ ನಮ್ಮ ಅನೇಕ ಸಂಸ್ಕೃತಿ ಚಿಂತಕರು ಮತ್ತು ಲೇಖಕರು ತಮ್ಮ ಸಾಹಿತ್ಯ - ಸಂಸ್ಕೃತಿ ಚಿಂತನೆಗಳ ಮಧ್ಯೆ ಪ್ರಸ್ತಾಪಿಸಿದ್ದಾರೆ. ಆದರೆ ಇವರೆಲ್ಲ ಕಾರ್ನಾಡರ ಈ ಮಾತನ್ನು ಕನ್ನಡ ಸಂಸ್ಕೃತಿಯಲ್ಲಿ ಕಲ್ಯಾಣ ಕ್ರಾಂತಿಯ ಮಹತ್ವವನ್ನು ಸೂಚಿಸಲಷ್ಟೇ ಬಳಸಿರುವಂತೆ ತೋರುತ್ತದೆಯೇ ಹೊರತು, ಆ ಮಾತಿನಲ್ಲಿರುವ `ನೋಯುವ ಹಲ್ಲು' ಎಂಬ ಪದಪುಂಜದ ಕಡೆ ಗಮನ ಕೊಟ್ಟಂತೆ ತೋರುವುದಿಲ್ಲ. ಅವರು ಹಾಗೆ ಗಮನ ಕೊಟ್ಟಿದ್ದರೆ `ತಲೆದಂಡ' ನಾಟಕವೂ ಸೇರಿದಂತೆ ಕಲ್ಯಾಣ ಕ್ರಾಂತಿ ಕುರಿತು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೂಡಿರುವ ಸೃಜನ ಮತ್ತು ಸೃಜನೇತರ ಕೃತಿಗಳ ಬಗ್ಗೆ ಈಗ ಬಂದಿರುವ ಕೇವಲ `ಚಿಂತನಶೀಲ' ಬರಹಗಳ ಜೊತೆ ಜೊತೆಗೇ `ಕ್ರಿಯಾಶೀಲ' ಬರವಣಿಗೆಯೂ ಹೊಮ್ಮಿರುತ್ತಿತ್ತೇನೋ! ಅಂದರೆ ಕನ್ನಡ ಸಮಾಜದಲ್ಲಿ ಒಂದು ನಿರ್ಣಾಯಕ ಸಾಮಾಜಿಕ ಬದಲಾವಣೆಗೆ - ತಮಿಳ್ನಾಡಿನಲ್ಲಿ ಆದಂತೆ - ಇಂಬುಕೊಡುವ ಒಂದು ಪ್ರಬುದ್ಧ ಸಾಹಿತ್ಯಕ, ಸಾಂಸ್ಕೃತಿಕ ಸಂವಾದ ಕನ್ನಡ ಸಾಹಿತ್ಯದ ಚೈತನ್ಯದ ಶಕ್ತಿಯಾಗಿರುತ್ತಿತ್ತೇನೋ...

ಇಂತಹ ಸಂವಾದ ಕನ್ನಡ ಸಾಹಿತ್ಯದಲ್ಲಿ ನಡೆದಿಲ್ಲ ಎಂದಲ್ಲ. ಆದರೆ ಅದು ಕನ್ನಡ ಸಾಹಿತ್ಯದ ಚೈತನ್ಯಶಕ್ತಿ (driving force) ಆಗಿಲ್ಲ. ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು'ವನ್ನೂ, ಭೈರಪ್ಪನವರ `ಆವರಣ'ವನ್ನೂ ಒಟ್ಟಿಗೇ ಶ್ರೇಷ್ಠ ಕೃತಿಗಳು ಎಂದು `ಪ್ರಾಮಾಣಿಕ'ವಾಗಿ ಗುರುತಿಸುವ, ಚರ್ಚಿಸುವ, ಸಮರ್ಥಿಸುವ ಒಂದು ದೊಡ್ಡ ಸಾಂಸ್ಕೃತಿಕ ಧಾರೆಯೇ ಇಂದು ಕನ್ನಡ ಸಾಹಿತ್ಯ ಸಂಕಥನದ ಮಧ್ಯೆ ಜೀವಂತವಿದೆ! ನಾನು ಹೇಳುತ್ತಿರುವುದು ಈ ಅಸಾಂಗತ್ಯದ ಬಗ್ಗೆ; ಇದು ಸೂಚಿಸುವ ಸಾಹಿತ್ಯದ ಲೋಕಾಭಿರಾಮೀಕರಣದ ಹಿಂದಿರುವ ಸಾಂಸ್ಕೃತಿಕ ದೃಷ್ಟಿ ಕೇಂದ್ರದ ಪ್ರಕ್ಷೇಪದ ಬಗ್ಗೆ - ಕನ್ನಡ ಸಾಹಿತ್ಯ ಕಲ್ಯಾಣ ಕ್ರಾಂತಿಯಿಂದ ಸ್ಫೂರ್ತಿ ಪಡೆದು, ಒಂದು ದೊಡ್ಡ ಸಾಮಾಜಿಕ ಕ್ರಾಂತಿಗೆ ಕಾರಣವಾಗಿರಬೇಕಿತ್ತು ಎಂದಲ್ಲ. ನಿಜ, ಕಲ್ಯಾಣ ಕ್ರಾಂತಿ ಈಗಲೂ ಕನ್ನಡ ಸಂವೇದನೆಯ ಹೃದಯ ಸ್ಥಾನದಲ್ಲಿದೆ. ಆದರೆ ಒಂದು ಒಣ ಹೆಮ್ಮೆಯ ವಿಷಯವಾಗಿ. ಕನ್ನಡ ಸಮಾಜ - ಅದರ ರಾಜಕಾರಣ, ಭಾಷೆ, ಸಂವೇದನೆ ಎಲ್ಲವೂ ಒಟ್ಟಿಗೆ ಏರಿದ್ದ ಹೊಸ ಎತ್ತರಗಳ ದ್ಯೋತಕವಾಗಿ ಅದನ್ನು ನೋಡುತ್ತೇವೆ. ಆದರೆ ಅದು ಕಾರ್ನಾಡರು ಹೇಳುವ ಹಾಗೆ `ನೋಯುವ ಹಲ್ಲು' ಕೂಡಾ ಆಗಿದೆಯಲ್ಲವೇ? ಅಂದರೆ ಕಲ್ಯಾಣ ಕ್ರಾಂತಿಯ ನೆನಪು ಆ ಹೊಸ ಎತ್ತರಗಳನ್ನು ಕನ್ನಡ ಸಮಾಜ, ರಾಜಕಾರಣ, ಸಂವೇದನೆ ಮತ್ತು ಭಾಷೆಗಳು ಬೀಜರೂಪಿಯಾಗಿ ಉಳಿಸಿಕೊಳ್ಳಲಾಗದೇ ಹೋದ ವೇದನೆಯಾಗಿ ನಮ್ಮನ್ನು ಕಾಡಬೇಕಲ್ಲವೆ? ಆದರೆ ಇಂದು ಹಾಗೆ ಅದು ನಮ್ಮನ್ನು ಕಾಡುತ್ತಿದೆಯೇ!

ತೆರೆದ ಕಣ್ಣು

ತೆರೆದ ಕಣ್ಣುಗಳ ಎಳೆರವಿ ಕಿರಣಗಳಿಗೆ
ಅರಳಿದೆ ಮುಗ್ಧತೆಯ ಚೈತನ್ಯದ ಇನ್ನೊಂದು ಪದವಾಗಿ
ನಕ್ಕೆ ನಾ ವಸುಂಧರೆಯ ತೆಕ್ಕೆಯಲಿ
ಕಂಡೆನಾ ಜಗವ ಆ ಹಸಿರಿನ ಸೆರಗಲಿ
ಕಲೆತೆ ಅದೆಷ್ಟು ಪಾಠಗಳ ಆ ಪಕ್ಶಿಗಳ ಕಂಠದಲಿ

ಪಯಣ ಸಾಗಿತ್ತು ಎಷ್ಟೋ ಕನಸುಗಳ ಹೊತ್ತು
ಹೊಸ ಅನುಭವಗಳ ನಡುವೆ ಇತ್ತು ಚಿಂತೆಗಳ ಕಂತೆ
ನೆತ್ತಿಯ ಮೇಲಿನ ಮಾರ್ತಂಡ
ಮೇಲೆ ಸಂಭಂಧಗಳ ಸರಪಳಿಗಳು ಭವದ ಬಂಧನಕೆ

ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

ಸಿನೆಮಾ ನಟನಟಿಯರು ಏನೇ ಪ್ರಚಾರ ಮಾಡಲಿ, ಪೆಪ್ಸಿ, ಕೊಕಾಕೋಲ, ಗೊರಟಿಲ್ಲದ ಮಾವಿನ ಜ್ಯೂಸ್ ಎಲ್ಲಾ ಪುನರ್ಪುಳಿ (ಕೋಕಂ) ಜ್ಯೂಸ್‌ನ ಎದುರಿಗೆ ಬಚ್ಚಾಗಳು.

ಎಂಥಾ ಕಲರ್-ಕೆಂಪು ಕೆಂಪು.. ನ್ಯಾಚುರಲ್ ಬಣ್ಣ. ಹುಳಿ-ಸಿಹಿ ರುಚಿ, ಹೊಟ್ಟೆ,ತಲೆ,ಮೈಗೆ ತಂಪು ತಂಪು. ಇದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ.

೨೦ ರಿಂದ ೩೦ ಅಡಿ ಎತ್ತರ ಬೆಳೆಯುವ ಕೋಕಂ ಮರ ದ.ಭಾರತದ ಕೊಂಕಣ,ಗೋವಾ ಭಾಗದಲ್ಲಿ ಹೆಚ್ಚಾಗಿ ಕಂಡುಬರುವುದು. ಸಿಪ್ಪೆ ಕೆಂಪು ಬಣ್ಣದಿದ್ದು ಒಳಗಿನ ಹಣ್ಣು ಸಿಹಿ-ಹುಳಿ ರುಚಿ. ಬೀಜ ೫-೭ ಇರುವುದು. ಬೆಳೆದ ಹಣ್ಣುಗಳನ್ನು ಹಿಚುಕಿ, ಬೀಜ ತೆಗೆದು,ಸಿಪ್ಪೆ ಜತೆಯಲ್ಲಿ ಬೇಯ್ಸಿ, ಸೋಸಿ, ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಬೆರೆಸಿ, ಪಾಕ ಮಾಡಿ ಬಾಟಲಲ್ಲಿ ತುಂಬಿಸಿ ಇಟ್ಟುಕೊಂಡರಾಯಿತು.-ಪುನರ್ಪುಳಿ ಜ್ಯೂಸ್.