ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸೃಷ್ಟಿ(ಒಂದು)-ಮುಂಜಾವು

ಎಲೆ ಎಲೆಯಲ್ಲೂ ಹೂವಿನ ಪಕಳೆಗಳಲ್ಲೂ
ಮೂಡಿದೆ ಪ್ರೀತಿಯ ಇಬ್ಬನಿಯು
ಸವಿಯುತ ದಿನವೂ ಮೇಲೇರಿ ಬರುವ
ಸೂರ್ಯ ನಮ್ಮನ್ನೆಬ್ಬಿಸಲು
ಪ್ರಕೃತಿ ಸೊಬಗನು ಹೊಸ ಮುಂಜಾವನ್ನು
ಬಿಡದೆ ಸವಿಯೊ ಪ್ರತಿ ದಿನವೂ
ಬದುಕಿದು ಕೇವಲ ನಾಲ್ಕು ದಿನಗಳದು
ಮುಗಿದ ಮೇಲೇನಿದೆ ಬಲ್ಲವರಾರು?

ಕಟಪಯಾದಿ ಸೂತ್ರ

ಕೆಲವು ದಿನಗಳ ಹಿಂದೆ ರಮೇಶಬಳಗಂಚಿಯವರು ಒಂದು ಸಬ್ಸ್ಟಿಟ್ಯೂಷನ್ ಸೈಫರ್ ಅಮ್ಮಜಿಖಷೆಸ್ಸ ಖನಮ ಒಜಿ ಎಂಬ ಬರಹವನ್ನು ಬರೆದಿದ್ದರು. ಆಗ, ಕಟಪಯಾದಿ ಸೂತ್ರದ ಬಗ್ಗೆ ಬರೆಯಬಹುದಲ್ಲ ಅನ್ನೋ ಯೋಚನೆ ಬಂತು.

ಮಧ್ಯ ರಾತ್ರಿಯಲ್ಲಿ ರಸ್ತೆಯ ಮೌನ ಮಾತಾದಾಗ..

ಉಪ್ ..... ಸಾಕಾಗಿಹೋಯಿತು ಈಗ ಎಷ್ಟು ಹಾಯಾಗಿ ಇದೆ. ಬೆಳಗಿನಿಂದ ಇಲ್ಲಿಯತನಕ ಒಂದೇ ಸಮನೆ ಕೆಲಸ ಮಾಡಿ ಈಗ ರೆಸ್ಟು ತೆಗೆದುಕೊಳ್ತಾ ಇದೀನಿ. ಈ ಜನರಿಗೆ ಬೆಳೆಗ್ಗೆ ಕಾಪಿ ಇಲ್ದೆ ಇದ್ರು ನಡೆಯುತ್ತೆ, ತಿಂಡಿ ತಿನ್ನದೆ ಹೋದ್ರು ನಡೆಯುತ್ತೆ. ಆದ್ರೆ ದಿನಕ್ಕೆ ಒಂದು ಸಲ ಆದ್ರೂ ನನ್ ಮೆಲೆ ಹಾದು ಹೋಗ್ದೆ ಇದ್ರೆ ಇವ್ರಿಗೆ ನಿದ್ದೆನೆ ಬರಲ್ಲ.

ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ

ನನಗೆ ಬಿಡುವಿಲ್ಲದಿರುವುದರಿಂದ ನನಗೆ ಬಿಡಿಸಲಾಗುತ್ತಿಲ್ಲ. ದಯವಿಟ್ಟು ಮನ್ನಿಸಿ

ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

ನನಗೆ ಈ ಅಚ್ಚ ಕನ್ನಡ , ಸಂಸ್ಕೃತ ಕನ್ನಡ ಮುಂತಾದವುಗಳ ಬಗ್ಗೆ ಸಂಪದದಲ್ಲಿ ಓದಿಯಾದ ಮೇಲೆ ತಿಳಿದಿದ್ದು . ಅಲ್ಲಿಯವರೆಗೆ ನಾವಡುವ ನುಡಿಯೆ ಶುದ್ದ ಕನ್ನಡ ನುಡಿ ಅಂತ ತಿಳಿದ್ದಿದೆ

ಆಗ ನನಗೆ ಮೂಡಿದ ಪ್ರಶ್ನೆ ಏನೆಂದರೆ ಬರೀ ಅಂತರ್ಜಾಲದಲ್ಲಿ ಜಾಲಿಸುವವರಿಗೆ ಮಾತ್ರವೆ ಇವುಗಳು?

ಕೆಂಪು, ಕಣ್ಣು ಏನು ಪರಿಹಾರ..???

ಟ್ರ್ಯಾಫಿಕ್ ಅಲ್ಲಿ, ಬೈಕೆ, ಒದ್ಸಿದ್ರೆ, ಎಲ್ಲರ ಕಣ್ಣು, ರೆಡ್ ಆಗಿ ಬಿಡುತ್ತೆ, ಅದೇನು ಹೊಸದಲ್ಲ, ಆದ್ರೆ ಅದ್ಕೆ ಪರಿಹಾರ ಏನು ??
ಪರಿಹಾರ, ದಲ್ಲಿ ಬೈಕೆ ಬಿಟ್ಟು ಹೋಗೋದು ಇದ್ರೆ, ದಯಮಾಡಿ ಬೇಡ.

ನೀವೆನ೦ತೀರಿ

ರಾಜ್ಯದಲ್ಲಿ ಪ್ರಥಮ ಹ೦ತದ ಚುನಾವಣೆಯ ನ೦ತರದ ಮತದಾನದ ಶೇಕಡ ನೋಡಿ ಬೇಸರವಾಗುತ್ತದೆ.ಒಟ್ಟು ಸುಮಾರು ೬೦%ರಷ್ಟು ಮತದಾನ ನಡೆದರೆ,ಕೆಲವೆಡೆ ೫೫% ಇನ್ನೂ ಕೆಲವೆಡೆ ೪೦% ಮತದಾನ ಕೂಡಾ ನಡೆಯಿತು.ಹಾಸನದಲ್ಲಿ ೭೫% ರಷ್ಟು ಮತದಾನ ನಡೆದದ್ದು ಬಿಟ್ಟರೇ,ಇನ್ನೇಲ್ಲಿಯೂ ಸಮಾಧಾನಕರವಾದ ಮತದಾನ ನಡೆಯಲೇ ಇಲ್ಲ.ಇನ್ನು ದ್ವಿತಿಯ ಮತ್ತು ತೃತಿಯ ಹ೦ತದ ಮತದಾನಗಳ ಗತಿ ಹೇಗೋ?

ಅಮ್ಮಜಿಖಷೆಸ್ಸ ಖನಮ ಒಜಿ

ಅಕ್ಕರೆಯ ಸ್ನೇಹಿತರೆ,
ಸುಮಾರು ದಿನಗಳ ಹಿಂದೆಯೇ ನಾನು ಮಿತಾಕ್ಷರದ ಗುಟ್ಟು ಬಯಲು ಮಾಡುತ್ತೇನೆಂದಿದ್ದೆ. ಆದರೆ ವ್ಯಕ್ತಿಗತ ಮತ್ತು ವೃತ್ತಿಪರ ಕಾರಣಗಳಿಂದ ಬರೆಯುವುದು ತಡವಾಯ್ತು. ಕಾದು ಬೇಸತ್ತ ಎಲ್ಲರ ಕ್ಷಮೆ ಕೋರಿ.........

ದೊಡ್ಡದಾದ ಮಂಚ ???

ಇಂದು ಬೆಳಿಗ್ಗೆ (ಮೇ ೧೨, ಸೋಮವಾರ) ವಿಜಯ ಕರ್ನಾಟಕ ನೋಡಿದಾಗ ಅಚ್ಚರಿ ಆಯ್ತು. ಇದೇನಿದು, ಮಂಚಕ್ಕು ಜಾಹಿರಾತ ಅಂತ. ಆಮೇಲೆ ಗೊತ್ತಾಯ್ತ ಇದು ಮೈಕ್ರೋಸಾಫ್ಟ್ ಅವರ ಆಡ್ ಅಂತ. ಸಾಫ್ಟ್ ವೇರ್ ಗು ಮಂಚಕ್ಕು ಏನು ಸಂಬಂಧ ತಿಳೀಲಿಲ್ಲ. ಸ್ಟೇಜ್ ಗೆ   ಮಂಚ ಅನ್ನೋ ಬಳಕೆ ಕನ್ನಡದಲ್ಲಿ ಇದೆಯ?

http://sampada.net/image/8756