ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು

ಪಂಪನ ’ವಿಕ್ರಮಾರ್ಜುನ ವಿಜಯ’ದಲ್ಲಿ ಮತ್ತು ಆಂಡಯ್ಯನ 'ಕಬ್ಬಿಗರ ಕಾವ'ದಲ್ಲಿ ಕಂಡುಬರುವ ಕನ್ನಡನಾಡಿನ ಚೆಲುವು
ಜಲಜಲನೊ[ೞ್ಕು]ತಿರ್ಪ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೆಯ್ದಿಲ
ಪೊಸವೂ ಪೊದಳ್ದ ಪೊಸನೆಯ್ದಿಲ ಕಂಪನೆ ಬೀಱಿ ಕಾಯ್ತ ಕೆಂ
ಗೊಲೆಯೊಳೆ ಜೋಲ್ವ ಶಾಳಿ [ನವ]ಶಾಳಿಗೆ ಪಾಯ್ವ ಶುಕಾಳಿ ತೋಱೆ ಕ
ಯ್ವೊಲಗಳಿನೊಪ್ಪಿ ತೋಱೆ ಸಿರಿ ನೋಡುಗುಮಾ ವಿಷಯಾಂತರದೊಳ್

ಘೃತಮುಮಂ ತೈಲಮುಮಂ

ಸಕ್ಕದಮಂ ಪೇಱ್ವೊಡೆ ನೆೞೆ
ಸಕ್ಕದಮಂ ಪೇಱ್ಗೆ ಸುದ್ದಗನ್ನಡದೊಳ್ತಂ
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ
...............ನಯಸೇನ "ಧರ್ಮಾಮೃತ"

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ

ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....

ಮೊನ್ನೆಯಿನ್ನೂ ಮೊಝಿಲ್ಲಾ ಫೈರ್ ಫಾಕ್ಸ್ 3 ಬೀಟಾ 5 ಅಳವಡಿಸಿಕೊಂಡೆ. ಯಾಕೋ ಅದಕ್ಕೆ ಪ್ರಜಾವಾಣಿ ಈ ಪೇಪರ್ನ ಕಂಡ್ರೆ ಆಗಲ್ಲ ಅಂತ ಕಾಣತ್ತೆ. ಈ ಪೇಪರ್ ನಲ್ಲಿ ಮೊದಲ ಕಾಲಂ ಕಾಣ್ಸೋದೇ ಇಲ್ಲ. ಬಲ ಮೂಲೆಯಲ್ಲಿರುವ ಹೆಡ್ ಲೈನ್ ಮತ್ತು ಆರ್ ಎಸ್ಎಸ್ ಫೀಡ್ ಮೊದಲ ಕಾಲಂನ ಮೇಲೆ ಬಂದು ಕೂತು ಬಿಡುತ್ತೆ. ಹೇಗೆ ತೆಗೆಯೋದು ದಯವಿಟ್ಟು ತಿಳಿಸಿ ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ.

ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !

ಇದು ಕನ್ನಡಿಗರಿಗೆಲ್ಲಾ ಬೇಳೆ ಹೋಳಿಗೆ, ಪಾಯಸ ತಿಂದಷ್ಟು ಸಂತಸದ ಸುದ್ದಿಯಲ್ಲವೇ ? ಸುನಿಲ್ ಮಲ್ಲೇನ ಹಳ್ಳಿಯವರ ದನಿಗೆ ಜೊತೆಗೂಡಿಸೋಣ ! ಅಂದಿನಿಂದ ಮೊದಲಿನಂತೆ ವಿಮಾನಗಳೆಲ್ಲಾ ಮುಂಬೈನಗರಕ್ಕೆ ಬಂದು ಅಲ್ಲಿಂದ ಮತ್ತೆ ಡೊಮೆಸ್ಟಿಕ್ ವಿಮಾನಯಾನವನ್ನು ಮುಂದುವರೆಸದೆ, ನೇರವಾಗಿ ಬೆಂಗಳೂರಿನಲ್ಲಿ ಬಂದಿಳಿಯುವ ಸನ್ನಿವೇಷವನ್ನು ಊಹಿಸಲೂ ಅಸಾಧ್ಯ !

ಒಂದು affair

ನೀನೊಬ್ಬ ಅಹಂಕಾರಿ .. ನೀ ನಿನ್ನ ಆಫೀಸ್ collegue ಮುಂಡೆ ಮಾಯನ ಜೊತೆನೆ ಸಂಸಾರ ಮಾಡು..ನನ್ನಂಥ ಹಳ್ಳಿ ಗುಗ್ಗು ಯಾಕೆ ಬೇಕು? ಹೆಂಡತಿ,ಮಕ್ಕಳೂ ಯಾರೂ ಬೇಡ ನಿಮಗೆ ಅಂತ ಮೂರು ವರ್ಷದ ಮಗಳೊಂದಿಗೆ ಮನೆ ಬಿಟ್ಟು ಹೋಗೇ ಬಿತ್ಳಲ್ಲ.. ಸರೀ ಅವಳು ಆ ರೀತಿ ಹೋಗ್ತಾ ಇದ್ದರೆ ತದೀಬೇಕೂಂತ ಒಂಚುರೂ ಮನಸ್ಸು ಕರಗಲಿಲ್ಲ.. ಅಷ್ಟರ ಮಟ್ಟಿಗೆ ನಾನು ಮಾಯ ಜಾಲದಲ್ಲಿ ಸಿಕ್ಕಿಕೊಂಡಿದೆನ್ನ?

ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.

ಒಂದು ಕನ್ನಡ ಸಂಸ್ಥೆಗೆ ವೆಬ್ ಸೈಟ್ ಮಾಡಬೇಕಾಗಿದೆ. ಈ ವಿಷಯದಲ್ಲಿ ನನಗೆ ಕೆಳಕಂಡ ಸಹಾಯ / ಮಾಹಿತಿ ಬೇಕಾಗಿದೆ.

೧. ಸ್ಪೆಸಿಫಿಕೇಷನ್ ಮಾಡುವುದು ಹೇಗೆ?
೨. ಖರ್ಚು ಅಂದಾಜು ಎಷ್ಟು ಬರಬಹುದು?

ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಬಹಳ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ

ವಿಶ್ವದೆಲ್ಲೆಡೆ ಸಂಭವಿಸುತ್ತಿರುವ ಆಹಾರದ ಬೆಲೆ ಏರಿಕೆಯಿಂದ ಭಾರತದಲ್ಲಿರುವ ೧.೫ ಮಿಲಿಯನ್ ಗಿಂತಲೂ ಹೆಚ್ಚು ಮಕ್ಕಳಿಗೆ ಬಹಳ ತೊಂದರೆಯಾಗಲಿದೆ ಎಂದು ಯೂನಿಸೆಫ್ ಎಚ್ಚರ ನೀಡಿರುವ ಬಗ್ಗೆ [:http://news.bbc.co.uk/2/hi/south_asia/7398750.stm|ಬಿಬಿಸಿ ವರದಿ ಮಾಡಿದೆ].

ಸಿಟಿಗಳಲ್ಲಿರುವವರಿಗೆ ಬಹುಶಃ ಬೆಲೆ ಏರಿಕೆಯ ಹಬೆ ಇನ್ನೂ ಅಷ್ಟಾಗಿ ತಟ್ಟುತ್ತಿರುವಂತೆ ಕಾಣುತ್ತಿಲ್ಲ. ದಿನಗೂಲಿ ಅಥವ ಕಡಿಮೆ ಸಂಬಳದ ನೌಕರಿಗಳಲ್ಲಿರುವ ಸಂಸಾರಗಳಿಗೆ ಬಹುಶಃ ವ್ಯತ್ಯಾಸ ಹೆಚ್ಚು ಗೊತ್ತಾಗಬಹುದು.

ಬಿಬಿಸಿ ವರದಿಯಲ್ಲಿ ಪಟ್ಟಿ ಮಾಡಿರುವ ಕೆಲವು ಅಂಶಗಳು:
• ಇಡಿಯ ವಿಶ್ವದಲ್ಲಿ ಆಗಲೇ ಸರಿಯಾಗಿ ಆಹಾರ ಲಭ್ಯವಾಗದ ಮಕ್ಕಳ ಸಂಖ್ಯೆ ಭಾರತದಲ್ಲಿಯೇ ಹೆಚ್ಚು.
• ಈಗಿನ ತೊಂದರೆಗಿಂತ ಮುಂಚೆಯೇ ಅರ್ಧಕ್ಕರ್ಧ ಭಾರತದ ಮಕ್ಕಳಲ್ಲಿ ಕುಂಟಿತ ಬೆಳವಣಿಗೆ ಕಂಡುಬಂದಿದೆ.
• ಬಡತನದಲ್ಲಿರುವ ಮಂದಿ ಎಂದಿನಂತೆ ಹೆಚ್ಚು. ಬೆಲೆ ಮಾತ್ರ ಇಮ್ಮಡಿಯಾಗಿದೆ.
• ಐದು ವರ್ಷಕ್ಕಿಂತ ಕೆಳಗಿನವರಲ್ಲಿ ೪೮% ಮಕ್ಕಳಿಗೆ ಸರಿಯಾದ ಆಹಾರ ಲಭ್ಯವಾಗುತ್ತಿಲ್ಲ. (ಪಾಕಿಸ್ತಾನದಲ್ಲಿ ಇದು ೩೭%, ಬಾಂಗ್ಲಾದೇಶದಲ್ಲಿ ೪೩% - ಎರಡೂ ಭಾರತಕ್ಕಿಂತ ಕಡಿಮೆ!)
• ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಬೇಕಿದೆ. (ಕೇವಲ ರಾಷ್ಟ್ರದ ಬಜೆಟ್ಟಿನ ೨.೨% ಅಂಶ ಮಾತ್ರ ಕೃಷಿಗೆ ಹೋಗುತ್ತಿದೆ)
• ಬಡತನದಿಂದ ಮಾತ್ರವಲ್ಲ ಸರಿಯಾದ ಕ್ವಾಲಿಟಿ ಆಹಾರ ಸಿಗದೆ ಕೂಡ ತೊಂದರೆ.

ಸವಾಲೊಂದು ನಿನ್ನ ಮ್ಯಾಲ...

ಯೂ ಟ್ಯೂಬಿನಲ್ಲಿ ಯಾವುದೋ ವೀಡಿಯೋ ಹುಡುಕುತ್ತಿರುವಾಗ ಇದು ಸಿಕ್ಕಿತು. ಶಿಶುನಾಳ ಶರೀಫರ ಚಿತ್ರಕ್ಕೆ ತಯಾರು ಮಾಡಿದ್ದ ಸುಮಾರು ಎಲ್ಲ ಹಾಡುಗಳನ್ನೂ ಕ್ಯಾಸೆಟ್ಟಿನಲ್ಲಿ ಕೇಳುತ್ತ ಬಂದಿದ್ದೆ. ಇತ್ತೀಚೆಗೆ ಸಿಡಿ ಸಿಕ್ಕಿದ್ದು. ಆದರೆ ವೀಡಿಯೋ ಸುಲಭದಲ್ಲಿ ಸಿಗಲಿಲ್ಲ, ಸಿಕ್ಕರೂ ಒಳ್ಳೆಯ ಕ್ವಾಲಿಟಿಯದ್ದಾಗಿರಲಿಲ್ಲ, ಕೆಳಗಿನ ವೀಡಿಯೋ ಅಂತಹದ್ದೇ ಸಿಡಿಯಿಂದ ಬಹುಶಃ ತೆಗೆದುಹಾಕಿದಂತಿದೆ. ವೆಬ್ ನಲ್ಲಿ ನೋಡೋಕೆ ಓಕೆ.

ಕಲಿತರೆ ಹೀಗೆ...

ಈ ಹುಡುಗನ ಕೆಲಸ ನವಿಲುಗರಿಯ ಬೀಸಣಿಕೆ ಮಾರುವುದು. ಆದರೆ ಉದರನಿಮಿತ್ತ ಬೀಸಣಿಕೆ ಮಾರಲು ಬೇಕಾದಷ್ಟನ್ನು ಹಲವಾರು ಭಾಷೆಗಳಲ್ಲಿ (ಸ್ವಲ್ಪ ಹೆಚ್ಚು ಕಡಿಮೆಯಿದ್ದರೂ) ಚೆನ್ನಾಗಿಯೇ ರೂಢಿಸಿಕೊಂಡಿದ್ದಾನೆ! ನೋಡಿ:

ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು

ಇತ್ತೀಚೆಗೆ ಹೆಚ್ಚು ಹೆಚ್ಚು ಮಂದಿ ನಿತ್ಯ ಬ್ಲಾಗ್ ಮಾಡುವವರ ಪಟ್ಟಿಗೆ ಸೇರುತ್ತಿದ್ದಾರೆ, ಈ ಪಟ್ಟಿಗೆ ಸಿನಿಮಾ ತಾರೆಗಳೂ, ದಿಗ್ಗಜರೂ ಸೇರುತ್ತಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.

ಈಗೀಗ ಬ್ಲಾಗ್ ಮಂಡಲಕ್ಕೆ ಪಾದಾರ್ಪಣೆ ಮಾಡಿರುವ ಕೆಲವು ಸಿನಿಮಾ ದಿಗ್ಗಜರು:

ಅಮಿತಾಭ್ ಬಚ್ಚನ್:
http://blogs.bigadda.com/ab/

ಆಮೀರ್ ಖಾನ್:
http://www.aamirkhan.com/blog.htm