ಆಕ್ರೋಶ

ಆಕ್ರೋಶ

ಬರಹ

ವಿಷಾದದ ರಾಗದೊಳಗಿಂದ
ನಿಶಿದ್ಧ ತಂತಿಯೊಂದು ಮಿಡಿಯುತ್ತಿದೆ.
ರಾಗದನಿಯಾಗಲು ಹವಣಿಸುತ್ತಿದೆ.
ತಂತಿ, ಮೀಟುವ ಬೆರಳಿಗೆ ಎಟಕುವುದಿಲ್ಲ.
ವಾದಕನ ಭಾವಕ್ಕೂ ನಿಲುಕುವುದಿಲ್ಲ.
ಆದರೂ.........
ಅದಕ್ಕೆ ದನಿಯಿದೆ.
ಶಬ್ಧವಾಗುವ ಬಯಕೆಯಿದೆ.

ಸುಪ್ತದೊಳಗಿನ ಬೂದಿ ಮುಚ್ಚಿದೆ
ಅಂದುಕೊಂಡಷ್ಟು ದಗೆ ಹೆಚ್ಚು.
ಗಮಿಸುತ್ತಿದೆ. ಯಾವಾಗ ಸಿಡಿಯುವುದೋ
ಕಾನನವ ಸುಡುವುದೋ
ಎಚ್ಚರದಲ್ಲಿರು!
ಪಾರ್ಥ ಹೊತ್ತಿಸಿದ ಕಿಡಿ
ಅದು ನಿಲ್ಲುವುದಿಲ್ಲ
ಖಾಂಡವ ವನವನ್ನೆಲ್ಲಾ ಸುಡದೇ....

ಸೋತೆ ಅಂದುಕೊಂಡು ನೆಮ್ಮದಿಯಾಗಿರು.!
ಸೋಲನ್ನೆಲ್ಲಾ ಗೆಲುವಿನ ಮೆಟ್ಟಿಲಾಗಿಸುವ
ಪರಿಗೆ ಮತ್ತೆ ಹೆಜ್ಜೆ ಎತ್ತಿಟ್ಟಿದ್ದೇನೆ
ಶಸ್ತೃರಹಿತಳಾಗಿ
ಸಿದ್ಧನಾಗಿರು ಸೋಲಿಗೆ ಒಡೆಯನಾಗಲು.!

ಪ್ರೀತಿಯೆಂಬ ದೊಡ್ಡ ಪದದಡಿಯಲ್ಲಿ
ಕಾಯ್ದಿದ್ದ ಭಾವಗಳನ್ನೆಲ್ಲ ಸುಟ್ಟುಬಿಟ್ಟು
ಬದುಕೆಂಬ ರಣರಂಗಕ್ಕೆ ಮತ್ತೊಮ್ಮೆ ಎದೆಗೊಟ್ಟು
ಅದು ಅನಿವಾರ್ಯವಾ? ಅವಶ್ಯಕತೆಯಾ?
ಖಂಡಿತ ಗೊತ್ತಿಲ್ಲ.
ಆದರೆ ದಾರಿ ಮಾತ್ರ ನನ್ನದೇ.........ನನ್ನದೇ.