ಬಂಗಾರದ ಅರಮನೆ.
ಒಳಗೆ ಪ್ರವೇಶಿಸಲು ಅವರಿಗೆ ಹಣಕೊಟ್ಟು ಗಡಿ ಪ್ರವೇಶಿಸುವ ರಶೀದಿಯನ್ನು ಪಡೆಯಬೇಕು. ರಶೀದಿಯನ್ನು ಪಡೆಯದೆ ಪ್ರವೇಶಿದಲ್ಲಿ ,ಯಮಪಾಶಕ್ಕೆ ನಮ್ಮ ಕುತ್ತಿಗೆ ಕೊಟ್ಟಂತೆ.ಅದರ ಅನುಭವ ನಮಗೆ ಅಲ್ಲಿ ಪ್ರವೇಶಿಸಿದಾಗಲೇ ಆಯಿತು. ಸುಮಾರು ಹತ್ತು ಗಂಟೆಗೆ ನಾನು ಪಾಂಡಿಚೇರಿಗೆ ತಲುಪಿದೆವು.ನಂತರ ಅಲ್ಲಿಯ ಅತಿಥಿ ಗ್ರಹದಲ್ಲಿ ಪ್ರವೇಶಿಸಿ ನಮ್ಮ ಸಾಮಾನ್ನು ಅಲ್ಲಟ್ಟು ಊಟಕ್ಕೆ ಹೋಟೆಲಿಗೆ ಹೊದೆವು .ಹೋಟೆಲಿನ ಮೇಲ್ಚಾವಣಿಯನ್ನು ತೆಂಗಿನ ಗರಿಗಳಿಂದ ನೈದು ಮಾಡಿದ್ದರು ಅದು ನೋಡಲು ಅತ್ಯಂತ ಸುಂದರವಾಗಿ ಕಾಣಿಸುತ್ತಿತ್ತು. ಆದರೆ ಹಳ್ಳಿಗಳಲ್ಲಿ ಅದನ್ನು ಕಚ್ಚಾವಸ್ತು ಎನ್ನುವಹಾಗೆ ಎಸೆಯುತ್ತಾರೆ. ಅಲ್ಲೇ ನಮ್ಮ ಪಕ್ಕದಲ್ಲಿ 5,6,ರು ಬಿಳಿ ಚರ್ಮದ ಮಹಿಳೆಯರು ತಮ್ಮ ಕೈಯಗಳ ಬೆರಳಲ್ಲಿ ಸಿಗರೆಟನ್ನು ಹಿಡಿದು ಹೆಬ್ಬಾವುಗಳು 'ಊಸ್ ' ಎಂದು ಉಸಿರು ಬಿಡುವ ಹಾಗೇ ಸಿಗರೇಟಿನ ಹೊಗೆಯನ್ನು ಬಿಡುತ್ತಾ,ಅರೆ ಬರೆಯಾದ ಬಟ್ಟೆಯನ್ನು ಧರಿಸಿ ಸುಗಂಧಿತವನ್ನು ಸಿಂಪಡಿಸಿಕೊಳ್ಳುತ್ತಿದ್ದರು. ನಾನು ಅವರನ್ನೇ ದ್ರಷ್ಟಿ ಅಲಗಾಡಿಸದೇ ನೋಡುತ್ತಿದ್ದೆ. ಅಷ್ಟರಲ್ಲಿ ನಮ್ಮ ಊಟ ಬಂಧಿತು. ಊಟಮಾಡಿ ಅತಿಥಿಗ್ರಹಕ್ಕೆ ಬಂದು ಮಲಗಿದೆವು.ಮುಂಜಾನೆ ಎದ್ದೊಡನೆ ಸಮುದ್ರದ ದರ್ಶನ. ಅದನ್ನು ನೋಡುತ್ತಿರುವಂತೆ ಯಾವ ಕ್ಷಣದಲ್ಲಿ ಸುನಾಮಿ ಬರುತ್ತದೊ ಎಂದು ಕಾದು ನೋಡುವಂತೆ ಸಮುದ್ರದೆಡೆ ನನ್ನ ನೋಟ ಸ್ವಲ್ಪ ಹೊತ್ತು ಸಮುದ್ರ ದರ್ಶನಮಾಡಿ, ಬೆಳಗಿನ ತಿಂಡಿಯನ್ನು ತಿನ್ನಲು ಆಶ್ರಮಕ್ಕೆ ಹೋದೆವು. ವಿಶೇಷ ಉಪಹಾರವಾದ ಬಾಳೆಹಣ್ಣು, ಬ್ರೆಡ್ ಹಾಲು ,ಸಕ್ಕರೆ ,ಮತ್ತು ಮೊಸರನ್ನು ಕೊಟ್ಟರು, ಆ ಬ್ರೆಡ್ ಮತ್ತು ಮೊಸರು ತುಂಬಾ ರುಚಿಯಾಗಿರುತ್ತದೆ.ಉಪಹಾರವನ್ನು ಮುಗಿಸಿ ಪ್ರೇಕ್ಷಣಿಯ ಸ್ಥಳಕ್ಕೆ ಹೊರೆಟೆವು,ಅದ್ಬುತವಾದ ಆಶ್ರಮದ ಕಟ್ಟಡ, ಅದನ್ನು ನಿರ್ಮಿಸಿದ ಆ ವ್ಯಕ್ತಿ ಕಟ್ಟಡ ನಿರ್ಮಾಣದಲ್ಲಿ ಎಷ್ಟು ನಿಪುಣನಾಗಿರಬಹುದೆಂಬುದು,ಆ ಕಟ್ಟಡ ಪ್ರತ್ಯಕ್ಷವಾಗಿ ನೋಡಿದಾಗಲೇ ತಿಳಿಯುತ್ತದೆ.ಕಟ್ಟಡದಲ್ಲಿರುವ ಕೋಣೆಗಳ ವಿನ್ಯಾಸ ಬಾಗಿಲು ಕಿಟ್ಕಿಗಳು ಮತ್ತು ಛತ್ರಿಯನ್ನು ಇಡಲು ಮಾಡಿರುವ ಸ್ಟೇಂಡು. ಕಿಟಕಿಗಳನ್ನು ಮುಚ್ಚುವ ತೆರೆಯುವ ವಿಧಾನ ಕುಳಿತುಕೊಳ್ಳಲು ಮಾಡಿರುವ ಆಸನಗಳು. ಆ ಕಟ್ಟಡದ ಕಿಟಕಿಗಳು ಮುಚ್ಚಿದರೆ ಗೋಡೆ ತೆರೆದರೆ ಕಿಟಕಿ ಎಲ್ಲವು ಅದ್ಬುತ್. ಈ ಕಟ್ಟಡ ನಿರ್ಮಾಣಮಾಡುವಾಗ ಗ್ರಹವಿನ್ಯಾಸಗಾರ ಎಷ್ಟು ವಿಚಾರಿಸಿ ಅದನ್ನು ನಿರ್ಮಾಣ ಮಾಡಿರಬೇಕೆಂಬುದು ಅದನ್ನು ನೋಡಿದಾಗಲೇ ತಿಳಿಯುತ್ತದೆ. ಯಾವುದೆ ವ್ಯಕ್ತಿ ಸೈಕಲ್ ಹೊಡೆಯಲು ಕಲಿಯುವದು ಪ್ರಥಮವಾಗಿ ನಂತರ ಸ್ಕೂಟರ್ ಹೊಡೆಯುತ್ತನೆ. ಪುನಃಹ ಸೈಕಲ್ ಹೊಡೆಯಲು ಹೋಗುವದಿಲ್ಲ ಅದನ್ನು ಮತ್ತೆ ಹೊಡೆಯಲು ಹೋಗುವದಿಲ್ಲ. ಆದರೆ
ಪಾಂಡಿಚೇರಿಯ ಪ್ರತಿಯೊಬ್ಬ ವ್ಯಕ್ತಿ ಸೈಕಲ್ ಪ್ರೇಮಿ. ಏಕೆಂದರೆ ಅಲ್ಲಿಯ ಪ್ರತಿಯೂಬ್ಬ ವ್ಯಕ್ತಿ ಪರಿಸರ್
ಪ್ರೇಮಿ.ವಾಯುಮಾಲಿನ್ಯ ಆಗುವದೆಂಬ ಕಾರಣದಿಂದ ತಮ್ಮ ಅಸೆಯನ್ನೇ ಬಲಿ ಕೊಟ್ಟಿದ್ದಾರೆ.. ತದನಂತರ ನಮ್ಮ ಪ್ರಯಾಣ ಅರವಿಂದರ ಆಶ್ರಮದ ಕಡೆಗೆ ಹೊಯಿತು. ಅರವಿಂದರ ಸಮಾಧಿಯ ಹತ್ತಿರ ಕುಳಿತು ಧ್ಯಾನ ಮಾಡಿದೆವು. ಸಮಾಧಿ ಹತ್ತಿರ ತಲೆ ಇಟ್ಟು ಕುಳಿತು ಕೊಂಡರೆ ಏನೋ ಸ್ಪರ್ಶವಾದ ಅನುಭವ.ಧ್ಯಾನಕ್ಕೆ ಕುಳಿತು ಕೊಂಡರೆ ಬರುವ ಮನಸ್ಸೇ ಬರುವದಿಲ್ಲ.
ಹೊಸವರ್ಷದ ಆಚರಣೆ ---- ಅಲ್ಲಿಯ ಹೊಸವರ್ಷದ ಆಚರಣೆ ವಿಶೇಷತೆಯನ್ನು ಹೊಂದಿದೆ ಅಂದರೆ ಇಲ್ಲಿ ಕುಣಿಯುವದಾಗಲಿ ಮದ್ಯಸೇವಿಸುವದಾಗಲಿ ಇಲ್ಲ.ಅತ್ಯಂತ ಶಾಂತಿಯುತವಾಗಿ ಆಚರಿಸಿದರು. ಒಂದು ಧ್ಯಾನ ಗ್ರಹ ಬೆಳಗಿರುವ ಲಕ್ಷಾಂತರ ದೀಪಗಗಳು ದ್ಪೀಪದ ಮುಂದೆ ಧ್ಯಾನಕ್ಕೆ ಕುಳಿತ ಲಕ್ಷಾಂತರ ಧ್ಯಾನಿಗಳು.ಹೀಗೆ ತಮ್ಮ ಹೂಸವರ್ಷದ ಆಚರಣೆ ಮಾಡಿದರು. ದೀಪ ಬೆಳಗಿಸಿತೆನ್ನ ಜಗವ ಬೆಳಗಲು
ಧ್ಯಾನದಲ್ಲಿ ಕುಳಿತಿರಲು ಜಗದ ಪ್ರೇಮಿಗಳು
ಹತ್ತು, ಹರೆಯದವರ ಹೊತ್ತು ಕಳೆಯಿತು ಧ್ಯಾನದಲ್ಲಿ.
ತದನಂತರ ಅಲ್ಲಿಂದ ನಾವು ಅಲ್ಲಿಂದ ನವು ಮಾತ್ರಮಂದಿರಕ್ಕೆ ಹೊದೆವು. ಮಾತ್ರಮಂದಿರದ ಹೊರವಲಯವನ್ನು. ಬಂಗಾರದ ಪ್ಲೇಟುಗಳಿಂದ ಮಾಡಿರುವರು ಆ ಮಾತ್ರಮಂದಿರ ಕಮಲದ ಹೂವಿನ ಮೇಲೆ ನಿಂತಿದೆ. ಭೂಮ್ಯಾಕಾರದ ಮಾತ್ರಮಂದಿರ ಸುತ್ತಲು ಕಮಲದ ಎಲೆಗಳು, ಎಲೆಗಳನ್ನು ಆವರಿಸಿದ ನೀರು. 'ಸೂರ್ಯನ ಕಿರಣ ಬಿದ್ದೊಡನೆ ನೀರು ಸ್ವರ್ಣ ರಂಜಿತವಾಗುತ್ತದೆ. ಪ್ರಶಾಂತವಾದ ವಾತಾವರಣ ಬ್ರಹದಾಕಾರದ ಆಲದ ಮರ. ಸ್ವರ್ಣಮಯವಾದ ಕಿರಣಗಳಿಂದ ಸುತ್ತಲಿನ ಎಲ್ಲವು ಸ್ವರ್ಣಮಯ. ಸ್ವರ್ಗವನ್ನು ಪ್ರವೇಶಿಸಲು, "ಸಪ್ತಸ್ವರ್ಣಮಯ ಬಾಗಿಲು ದಾಟಿ ಹೋಗುವಹಾಗೆ?"ಈ ಸ್ವರ್ಣಮಯ ಬಾಗಿಲು ದಾಟಿ ಹೋಗಲು ಸ್ವರ್ಣಮಯ ಸಾಗರದಾಟಿ ಹೋಗಬೇಕು.ಅಂತು ನಾವು ಮಾತ್ರಮಂದಿರಕ್ಕೆ ಪ್ರವೇಸಿದೆವು.ಅಲ್ಲಿ ನಮಗೆಲ್ಲಾ ಒಂದು ಆಶ್ಚರ್ಯ ಕಾದಿತ್ತು. ಮಾತ್ರಮಂದಿರದಲ್ಲಿ ದೇವರಿರಲ್ಲಿಲ್ಲ. ಅದರ ಬದಲಿಗೆ ದೊಡ್ಡಸ್ಫಟಿಕ ಆಸ್ಫಟಿಕದ ಮೇಲೆ ಬಿಳುತ್ತಿರುವ ಸೂರ್ಯನ ಕಿರಣ ಅಲ್ಲಿ ಎಲ್ಲವು ಸ್ವರ್ಣಮಯ.ನಿಶ್ಯಬ್ದಮಯ ವಾತಾವರಣ, ಧ್ಯಾನಕ್ಕೆ ಕುಳಿತರೆ ಧ್ಯಾನಿಗಳಾಗಿ ಬಿಡುತ್ತಾರೆ ನಡೆಗರು ಶಬ್ದ .ಕುಳಿತರು ಶಬ್ದ ಉಸಿರಾಡಿದರು ಶಬ್ದ ಅಷ್ಟು ನಿಶಬ್ದ ಸ್ಥಳ. ಸೂರ್ಯನು ನೆತ್ತಿಯ ಮೇಲೆ ಬಂದೊಡನೆ ಸೂರ್ಯನ ಕಿರಣಗಳು ಆ ಸ್ಫಟಿಕದ ಮೇಲೆ ಬಿದ್ದೊಡನೆ ಸೂರ್ಯನ ಕಿರಣಗಳು ಪ್ರತಿಫಲಿಸಿ ಬಂಗಾರದ ಪ್ಲೇಟುಗಳ ಮೇಲೆ ಬೀಳುತ್ತದೆ. ಆ ಕಿರಣಗಳು ಮಾತ್ರಮಂದಿರದ ಸುತ್ತಲು ಇರುವ ನೀರಿನ ಮೇಲೆ ಬಿದ್ದಾಗ ನೀರು ಬಂಗಾರದ ಹೊಳಪನ್ನು ಪಡೆಯುತ್ತದೆ. ಸುತ್ತಲಿನ ಎಲ್ಲಪ್ರದೇಶವು ಸ್ವರ್ಣರಂಜಿತವಾಗುತ್ತದೆ ಇದೊಂದು ಬಂಗಾರದ ಅರಮನೆ ಎನ್ನಬಹುದು.