ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

ಬರಹ

ನಾನು ರಾಮಾಯಣ ಮಹಾಭಾರತ ಎರಡೂ ಸರಿಯಾಗಿ ಓದಿಲ್ಲ. ಕೇವಲ ಶಾಲೆಯಲ್ಲಿ ಕೇಳಿದ ಕಥೆ, ಅಲ್ಲಿ ಇಲ್ಲಿ ಕೇಳಿದ ಹರಿಕಥೆ. ಸ್ವಲ್ಪ ಅಜ್ಜ ಹೇಳಿದ್ದು ಇಷ್ಟು ಮಾತ್ರ ನನಗೆ ತಿಳಿದಿರುವ ರಾಮಾಯಣ, ಮಹಾಭಾರತ. ನನಗೆ ಈಗ ಓದು ಬೇಕೆನ್ನುವ ಹಂಬಲ ತುಂಬಾ ಇದೆ. ಆದರೆ ಸಮಸ್ಯೆ ಏನಂದರೆ ರಾಮಾಯಣ ಮಹಾಭಾತಕ್ಕೆ ಸಂಬಂದಿಸಿದಂತೆ ನೂರಾರು ಹೊತ್ತಿಗೆ ಅಂಗಡಿಯಲ್ಲಿ ಸಿಗುತ್ತಿವೆ. ಯಾವುದನ್ನು ಕೊಳ್ಳುವುದು? ಇದು ನನ್ನ ಬುದ್ಧಿಗೆ ಸರಿಯಾಗಿ ಅರಿವಾಗುತ್ತಿಲ್ಲ. ನನಗೆ ತುಂಬಾ ಆಳವಾಗಿ ಅಧ್ಯಯನ ಮಾಡುವ ಮನಸ್ಸಿದೆ. ಸರಳವಾಗಿ, ಸಮಗ್ರವಾಗಿರುವ ಪುಸ್ತಕಗಳ ಬಗ್ಗೆ ನನಗೆ ಯಾರಾದರು ತಿಳಿಸುವಿರ? ಕನ್ನಡದಲ್ಲಿ ಬರೆದವರ ಹೆಸರು, ಪ್ರಕಾಶಕರು, ಸಿಗುವ ಸ್ಥಳ. ಇಷ್ಟೂ ಮಾಹಿತಿಗೆ ನಿಮ್ಮಲ್ಲಿ ಕೇಳಿಕೊಳ್ಳುತ್ತಿರುವೆನು. ನಿಮ್ಮ ಅಮೂಲ್ಯ ಸಲಹೆಯ ನಿರೀಕ್ಷೆಯಲ್ಲಿ.
ಮುಂಚಿತವಾಗಿ ನಿಮ್ಮೆಲ್ಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತ.

ಕುಮಾರಸ್ವಾಮಿ.ಕಡಾಕೊಳ್ಳ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet