ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓದಿದ್ದು

ಯಾವಾಗಲೋ ಓದಿದ್ದು... ಇನ್ನೂ ತಲೆಯಲ್ಲಿದೆ.

"ಹತ್ತಿರವಿದ್ದೂ ದೂರನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ!!

ಹೊಂದಿಕೆಯೆಂಬುದು ಎಷ್ಟು ಕಷ್ಟವೊ
ನಾಲ್ಕು ದಿನದ ಈ ಬದುಕಿನಲಿ"

ನಿಮಗೇನನ್ನಿಸಿತು ಬರಿಯಿರಿ.

ನಿಮ್ಮಲ್ಲಿಯೊಬ್ಬ.

ಜುಂಪಾ ಲಾಹಿರಿಯವರ ಹೊಸ ಪುಸ್ತಕ

Unaccustomed Earth ಹೆಸರಿನ ನೀಳ್ಗಥೆಗಳ ಸಂಕಲನ ಹೊರಬಿದ್ದಿದೆ. ಮನುಷ್ಯ ಸಂಬಂಧಗಳು, ಅವನ ಭಾವನೆಗಳು ಕ್ರಮೇಣ ಅರ್ಥಕಳೆದುಕೊಳ್ಳುವುದನ್ನು, ಸಡಿಲಗೊಳ್ಳುವುದನ್ನು ಮೌನವಾದ ತಲ್ಲಣಗಳಲ್ಲಿ ಗುರುತಿಸುತ್ತಲೇ ಅವುಗಳಿಂದ ಆತ ಬಿಡುಗಡೆ ಪಡೆಯುವ ಹಂತದಲ್ಲಿ ಅಥವಾ ಬಿಡುಗಡೆ ಪಡೆದ ನಂತರ ಉಳಿಯುವ ಶಿಲ್ಕು ಏನಿದೆ ಅದರಲ್ಲಿ ಆ ಸಂಬಂಧಗಳ, ಭಾವನೆಗಳ ಪ್ರಾಮಾಣಿಕತೆಯನ್ನು ಅರಸುವ ಕತೆಗಳು, ಬೇರೆ ಹೊಸ ಸಂಬಂಧದ ಹುರುಪಿನ ಆಳದಲ್ಲಿ ಹಳೆಯ ಸಂಬಂಧದ ನೆರಳುಗಳನ್ನು ಕಾಣುವ ಕಥೆಗಳು, ನಡುವಯಸ್ಸಿನಲ್ಲಿ ಸಂಬಂಧಗಳು ಪಡೆದುಕೊಂಡ ಅನಿವಾರ್ಯ ಆಕಾರ ವಿಕಾರಗಳನ್ನು ಮೌನವಾಗಿ ಚಿತ್ರಿಸುತ್ತ ಅವರ ಅಥವಾ ಎಳೆಯರ ಹೊಸ ಸಂಬಂಧಗಳನ್ನು ನಿರೂಪಿಸುವ ಕಥೆಗಳು ಇಲ್ಲಿವೆ. ಹೆಚ್ಚಾಗಿ ಇಲ್ಲಿ ಗಂಡು ಹೆಣ್ಣು ಸಂಬಂಧಗಳೇ ಪ್ರಾಮುಖ್ಯ ಪಡೆದಂತಿದೆಯಾದರೂ ತಂದೆ ಮಗಳು, ತಾಯಿ ಮಗ, ಅಕ್ಕ ತಮ್ಮ, ಕೇವಲ ಇಬ್ಬರು ಬಾಡಿಗೆದಾರರ ನಡುವಿನ ಸಂಬಂಧದ ಎಳೆಗಳು ಕೂಡ ಸಮಾನಾಂತರ ಗತಿಯಲ್ಲಿ ಕತೆಯ ಇನ್ನೊಂದು ಪಾತಳಿಯಲ್ಲಿ ತನ್ನ ಹುಟ್ಟು, ಬೆಳವಣಿಗೆ, ಕುಸಿತ ಅಥವಾ ಮಿಡಿತ ದಾಖಲಿಸುತ್ತ ಹೋಗುತ್ತವೆ ಎಂಬುದನ್ನು ಗಮನಿಸಬಹುದು. ಈ ಎಲ್ಲ ಕತೆಗಳು ಅಮೆರಿಕೆಯಲ್ಲಿ ಅಥವಾ ವಿದೇಶದಲ್ಲಿ ನಡೆಯುತ್ತವೆ, ಭಾರತದ ಬಂಗಾಳಿ ನೆರಳು ಎಷ್ಟೇ ಗಾಢವಾಗಿ ಹರಡಿದ್ದರು ಕತೆಯ ನಡೆ ಭಾರತದ ನೆಲದಲ್ಲಿಲ್ಲ.

ಜುಂಪಾ ಲಾಹಿರಿಯವರ ಹೊಸ ಪುಸ್ತಕ

ಪುಸ್ತಕದ ಲೇಖಕ/ಕವಿಯ ಹೆಸರು
ಜುಂಪಾ ಲಾಹಿರಿ
ಪ್ರಕಾಶಕರು
ರಾಂಡಮ್ ಹೌಸ್
ಪುಸ್ತಕದ ಬೆಲೆ
೪೫೦ ರೂ.

Unaccustomed Earth ಹೆಸರಿನ ನೀಳ್ಗಥೆಗಳ ಸಂಕಲನ ಹೊರಬಿದ್ದಿದೆ. ಮನುಷ್ಯ ಸಂಬಂಧಗಳು, ಅವನ ಭಾವನೆಗಳು ಕ್ರಮೇಣ ಅರ್ಥಕಳೆದುಕೊಳ್ಳುವುದನ್ನು, ಸಡಿಲಗೊಳ್ಳುವುದನ್ನು ಮೌನವಾದ ತಲ್ಲಣಗಳಲ್ಲಿ ಗುರುತಿಸುತ್ತಲೇ ಅವುಗಳಿಂದ ಆತ ಬಿಡುಗಡೆ ಪಡೆಯುವ ಹಂತದಲ್ಲಿ ಅಥವಾ ಬಿಡುಗಡೆ ಪಡೆದ ನಂತರ ಉಳಿಯುವ ಶಿಲ್ಕು ಏನಿದೆ ಅದರಲ್ಲಿ ಆ ಸಂಬಂಧಗಳ, ಭಾವನೆಗಳ ಪ್ರಾಮಾಣಿಕತೆಯನ್ನು ಅರಸುವ ಕತೆಗಳು, ಬೇರೆ ಹೊಸ ಸಂಬಂಧದ ಹುರುಪಿನ ಆಳದಲ್ಲಿ ಹಳೆಯ ಸಂಬಂಧದ ನೆರಳುಗಳನ್ನು ಕಾಣುವ ಕಥೆಗಳು, ನಡುವಯಸ್ಸಿನಲ್ಲಿ ಸಂಬಂಧಗಳು ಪಡೆದುಕೊಂಡ ಅನಿವಾರ್ಯ ಆಕಾರ ವಿಕಾರಗಳನ್ನು ಮೌನವಾಗಿ ಚಿತ್ರಿಸುತ್ತ ಅವರ ಅಥವಾ ಎಳೆಯರ ಹೊಸ ಸಂಬಂಧಗಳನ್ನು ನಿರೂಪಿಸುವ ಕಥೆಗಳು ಇಲ್ಲಿವೆ. ಹೆಚ್ಚಾಗಿ ಇಲ್ಲಿ ಗಂಡು ಹೆಣ್ಣು ಸಂಬಂಧಗಳೇ ಪ್ರಾಮುಖ್ಯ ಪಡೆದಂತಿದೆಯಾದರೂ ತಂದೆ ಮಗಳು, ತಾಯಿ ಮಗ, ಅಕ್ಕ ತಮ್ಮ, ಕೇವಲ ಇಬ್ಬರು ಬಾಡಿಗೆದಾರರ ನಡುವಿನ ಸಂಬಂಧದ ಎಳೆಗಳು ಕೂಡ ಸಮಾನಾಂತರ ಗತಿಯಲ್ಲಿ ಕತೆಯ ಇನ್ನೊಂದು ಪಾತಳಿಯಲ್ಲಿ ತನ್ನ ಹುಟ್ಟು, ಬೆಳವಣಿಗೆ, ಕುಸಿತ ಅಥವಾ ಮಿಡಿತ ದಾಖಲಿಸುತ್ತ ಹೋಗುತ್ತವೆ ಎಂಬುದನ್ನು ಗಮನಿಸಬಹುದು. ಈ ಎಲ್ಲ ಕತೆಗಳು ಅಮೆರಿಕೆಯಲ್ಲಿ ಅಥವಾ ವಿದೇಶದಲ್ಲಿ ನಡೆಯುತ್ತವೆ, ಭಾರತದ ಬಂಗಾಳಿ ನೆರಳು ಎಷ್ಟೇ ಗಾಢವಾಗಿ ಹರಡಿದ್ದರು ಕತೆಯ ನಡೆ ಭಾರತದ ನೆಲದಲ್ಲಿಲ್ಲ.

semi-conductor = ?

"semi-conductor" ಪದಕ್ಕೆ ಪ್ರೊ. ಜಿ. ವೆಂಕಟಸುಬ್ಬಯ್ಯ ಪ್ರಿಸಂ ಕನ್ನಡ, ಇಂಗ್ಲಿಷ್ ನಿಘಂಟುಗಳು .
ನೋಡಿದಾಗ "ಅರೆ ವಾಹಕ " ಅನ್ನೋ ಅರ್ಥ ಸಿಕ್ತು.

ಇದಕ್ಕಿಂತ ಒಳ್ಳೆಯ ಪದವನ್ನು ಯಾರದ್ರೂ ಸೂಚಿಸಲು ಆಗುತ್ತಾ?

ಹಾಗೆಯೇ..
ಕೆಳಗಿನ ಪದಗಳಿಗೆ ಅಚ್ಚಗನ್ನಡದ ಪದಗಳನ್ನು ತಿಳಿಸಲು / ಹುಟ್ಟುಹಾಕಲು ಯಾರದ್ರೂ ಪ್ರಯತ್ನಿಸುತ್ತೀರಾ?
electronics,transistor,electron,hole.......

ಪತ್ರಕರ್ತ

ಈ ಬಗ್ಗೆ ಸ೦ಪದದಲ್ಲಿ ಮೊದಲೇ ಒ೦ದು ಲೇಖನ ಪ್ರಕಟವಾಗಿತ್ತು.’ವಿ.ಕ. ಮತ್ತು ಪ್ರತಾಪಸಿ೦ಹ ’ ಎ೦ಬ ಹೆಸರನಡಿಯಲ್ಲಿ ಲೇಖನವೊ೦ದು ಪತ್ರಕರ್ತರೊಬ್ಬರ ಬಗ್ಗೆ ಬರೆದಿದ್ದರು.ನಾನು ಪುನ: ಅದೇ ಪ್ರತಾಪ ಬಗ್ಗೆ ಬರೆಯಬಯಸುತ್ತೇನೆ.

ಕುಪ್ಪಿ ಮಾತ್ರೆ,...

ರಾಜನಾಳರ ಎರಡು ಪ್ರತಿಕ್ರಿಯೆಗಳಲ್ಲಿ "ನನ್ನ ಬಳಿ ರಾಜೀವ್ ದಿಕ್ಶಿತರ ಡಿವಿಡಿ ಇದೆ ಬೇಕಾದರೆ ಫೊನ್ ಮಾಡಿ.........."ಎಂಬುದನ್ನು ಓದಿದ ಮೇಲೆ, ಭೈರಪ್ಪನವರ ಒಂದು ಕಾದಂಬರಿಯಲ್ಲಿ ಬರುವ ಕುಪ್ಪೆ ಮಾತ್ರೆಯ ನೆನಪಾತು. ಆ ಡಿವಿಡಿ ಎನು ಕುಪ್ಪೆ ಮಾತ್ರೆನಾ ? ಎಲ್ಲದಕ್ಕೂ ಪರಿಹಾರವಾಗಿ ?

ನನ್ನೊಳಗೆ ನನ್ನೊಳಗೆ

ನನ್ನೊಳಗೆ ನನ್ನೊಳಗೆ
ಇಂದೆನೋ ಅಗೋಗಿದೆ
ಎದೆಯ ಬಾಚದ ಕವಿತೆಯೊಂದು
ನೂರು ಪದಗಳ ಬಿಡಿಸಿತಂದು
ನನ್ನನು ಕೋಳ್ಳುತ್ತಿದೆ
ಪ್ರೀತಿಯ ಹೆಳಲು ನಾಚುತಿದೆ

ಹೆಳದೆ ಕೆಳದೆ, ಅಂದು ನಾ ಮತಾಡಿದೆ
ಮುಂದೆನು ನೊಡದೆ, ನಿನ್ನ ಮೇಲೆ ಮನಸಾಗಿದೆ

ನಿನಗೇನೆ ಇಂದಾಗಲಿ, ನನ್ನೇದೆಯ ನೀ ಸಿರಿಕೊ
ಎಲ್ಲಿಯು ಹೊಗದೆ, ನನ್ನಲ್ಲಿಯೆ ಅಂಟಿಕೊ

ನನ್ನೊಳಗೆ ನನ್ನೊಳಗೆ
ಇಂದೆನೋ ಅಗೋಗಿದೆ