ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರಕೃತಿ

ನೀ ಸೂರ್ಯ-ನಿನ್ನ ಆಗಮನ,

ಜೀವಜಂತು-ಲೊಕವೆಲ್ಲಾ ಪ್ರಕಾಶಮಾನ|

ನೀ ಗಾಳಿ-ನಿನ್ನ ಚಲನೆ,

ಇಳೆಯ ತುಂಬಾ ತಂಪು ಸಿಂಚನೆ|

ನೀ ನದಿಸಾಗರ-ನಿನ್ನ ಓಡುವಿಕೆ,

ಸಕಲ ಜೀವರಾಶಿಗಳ ಉದ್ದಾರಕೆ|

ನೀ ಗಿಡಮರ-ನಿನ್ನ ದ್ಯೇಯ,

ಭೂಮಿ ಇರಲಿ ಸದಾ ಹಸಿರುಮಯ|

ನೀ ಚಂದ್ರ- ನಿನ್ನ ನೆರಳು,

ಭುವಿಗೆಲ್ಲಾ ಬೆಳದಿಂಗಳು|

ನಾ ಮನುಜ-ನಿಮ್ಮೆಲ್ಲರ ಅಂಶ,

ರವಿ-ಕವಿ

ರವಿ ಹಾರುತ ಹಾರುತ ಮೇಲಕೆ,

ಭಾನ ಬೆಳಕು ಪೃಥ್ವಿಗೆ|

ಕವಿ ಹಾಡುತ-ಹಾಡುತ ತನ್ನ ಕವಿತೆಗೆ,

ಪ್ರೀತಿ-ಪ್ರೆಮ ಎಲ್ಲರ ಬಾಳಿಗೆ|

ರವಿಯೇ ಕವಿಯಾಗಿ,

ಸ್ನೇಹದ ಸುಧೆಯಾಗಿ

ಬರೆದ ಈ ಓಲೆಯ ನಿಮಗಾಗಿ!!

ರಾಜಕೀಯ

ನಾ ಕಂಡೆ ಒಂದು ರಾಜಕೀಯದ ಕನಸು

ನನಗಾಗಿತ್ತು ಆಗ ಎಂಬತ್ತರಾ ವಯಸ್ಸು,


ಕಾಣಲು ಇಂಥಹ ಕನಸು,ಮರೆತನು ಮುದಿವಯಸು|


ಮುಂದುವರಿಯಿತು ನನ್ನ ಕನಸು--


ನಾನಾದೆ ಮುಖ್ಯಮಂತ್ರಿ-ಸಿಕ್ಕಿತು ಪದವಿ,


’ನೀವೇ ರಾಜ್ಯವನ್ನಾಳಿ,ನೀವೇ


ರಾಜ್ಯವನ್ನಾಳಿ’ಎಂದು ಎಲ್ಲರ ಮನವಿ|

ಈ ಬ್ಲಾಗಿಗಿನ್ನು ಸಮ್ಮರ್ ಹಾಲಿಡೇ!

ಸ್ನೇಹಿತರೆ ನನ್ನ ಹೊಸ ಆಫೀಸ್‌ನಲ್ಲಿ ಏನು ಮಾಡಿದರೂ ಸಂಪದ ಓಪನ್‌ ಆಗ್ತಾ ಇಲ್ಲ. ಹೊರಗಡೆ ಬಂದು ಬರೆಯಲು ನನಗೆ ಪುರುಸೊತ್ತು ಇಲ್ಲ. ಹಾಗೇನೆ ಎಲ್ಲರಿಗೂ ಬೇಸಿಗೆ ರಜೆ ಇದೆ ನಂಗೆ ಇಲ್ವಾ ಅಂತಾ ಬ್ಲಾಗ್ ಕೂಡಾ ರಗಳೆ ಮಾಡುತಿತ್ತು. ಇವೆಲ್ಲದರ ಪರಿಣಾಮವಾಗಿ ನಾನು ಈ ಬ್ಲಾಗಿಗೆ ಒಂದಿಷ್ಟು ದಿನ ರಜೆ ಘೋಷಿಸಿದ್ದೇನೆ. ಇಷ್ಟು ದಿನದ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಕನ್ನಡದಲ್ಲಿ ಹೆಸರು ಬರೆಯೋದು ಹ್ಯಾಂಗ್ರೀ????

ರೀ..ಐಟಿ ಪಂಡಿತರುಗಳೇ.....ದಯವಿಟ್ಟು ನಮ್ಮ ಹೆಸರನ್ನು ಕನ್ನಡದಲ್ಲಿ ಬರೋಹಾಗೆ ಹ್ಯಾಗ್ ಮಾಡೊದ್.. ಸ್ವಲ್ಪ ಹೇಳಿಕೊಡ್ರಲಾ...i mean log in name.. ಧನ್ಯವಾದಗಳು...

ಗ್ನು/ಲಿನಕ್ಸ್ ಹಬ್ಬಕ್ಕೊಂದು ತನ್ನದೇ ವೆಬ್ಸೈಟ್

ಗ್ನು/ಲಿನಕ್ಸ್ ಹಬ್ಬಕ್ಕೆ ಇಗ ತನ್ನದೇ ಆದ ಒಂದು ವೆಬ್ಸೈಟ್. ಭೇಟಿ ಕೊಡಿ:

http://habba.in

ಹೊಸ ವೆಬ್ಸೈಟು ಈ ರೀತಿಯ ಇನ್ನೂ ಹಲವು ಕಾರ್ಯಕ್ರಮಗಳಿಗೆ ನಾಂದಿ ಹಾಡಲಿ ಎಂಬ ಕನಸು ಹೊತ್ತು, ಈ ರೀತಿಯ ಕಾರ್ಯಕ್ರಮಗಳು ಕರ್ನಾಟಕದಲ್ಲಿ ಎಲ್ಲಿ ನಡೆದರೂ ಈ ವೆಬ್ಸೈಟಿನಲ್ಲಿ ಆ ಕಾರ್ಯಕ್ರಮಕ್ಕೆ ಅಂತರ್ಜಾಲದಲ್ಲಿ ಬೇಕಾಗುವ ಜಾಗವನ್ನೂ, ಚಟುವಟಿಕೆಗೆ ಬೇಕಾದ ಸರಕನ್ನೂ ಒದಗಿಸುತ್ತ ಹೋಗುವ ಉದ್ದೇಶದಿಂದ ಈ ಹೊಸ ತಾಣ ಪ್ರಾರಂಭಿಸಿದ್ದೇವೆ. ಸದುಪಯೋಗವಾಗಬಹುದೆಂಬ ಆಶೆ ನಮ್ಮದು.

ಇಲ್ಲಿಯವರೆಗೂ ವಾಲಂಟೀರ್ಸ್ ಸಂಖ್ಯೆ ಸುಮಾರು ೧೫, ಕಾರ್ಯಕ್ರಮಕ್ಕೆ ನೋಂದಾಯಿಸಿದವರ ಸಂಖ್ಯೆ ಸುಮಾರು ೧೧೦ಕ್ಕೂ ಹೆಚ್ಚು!

ಡಾಕ್ಯುಮೆಂಟ್ ಸ್ವಾತಂತ್ರ್ಯಕ್ಕಾಗಿ ಒಂದು ಸಾಂಕೇತಿಕ ಪ್ರತಿಭಟನೆ

Protest for Document Freedom
Photo: Kushal Das

"ಬಹಳ ಸೈಲೆಂಟ್ ಪ್ರೊಟೆಸ್ಟ್ ಕಣೋ. ತುಂಬಾ ಡಿಫರೆಂಟ್" - ಸ್ನೇಹಿತನೊಬ್ಬ ಫೋನಿನಲ್ಲಿ ತಿಳಿಸಿದ. ಪ್ರತಿಭಟನೆ ಎಂದರೆ ಧಿಕ್ಕಾರ ಕೂಗೋದು ಎಂದು ನೋಡುತ್ತ ಬೆಳೆದ ನಮಗೆ ಇದು ಆಚ್ಚರಿ ಹುಟ್ಟಿಸುವ ಹೊಸ ರೀತಿಯ ಪ್ರತಿಭಟನೆಯೇ ಸರಿ. ಬೆಂಗಳೂರಿನ ಇಂಜಿನೀಯರಿಂಗ್ ವಿದ್ಯಾರ್ಥಿಗಳು, ಸಾಫ್ಟ್ವೇರ್ ಇಂಜಿನೀಯರುಗಳು ಹಲವರು FSUG ಹಾಗೂ FCI ಬ್ಯಾನರ್ ಅಡಿ ಹಮ್ಮಿಕೊಂಡಿದ್ದ ಪ್ರತಿಭಟನೆ ಇದು.

ಹಲವು ದೋಷಗಳಿದ್ದೂ ಮೈಕ್ರೊಸಾಫ್ಟಿನ OOXML ನಿರ್ದಿಷ್ಟಮಾನವನ್ನು ಒಪ್ಪಿಕೊಂಡ ISO ಸಂಸ್ಥೆಯ ನಿರ್ಧಾರವನ್ನು ವಿರೋಧಿಸುವುದು, ನಮ್ಮ ದೇಶದಲ್ಲೊಂದು ಈ ಕುರಿತ ಪಾಲಿಸಿ ಹೊರತರಬೇಕು ಎಂದು ಗಮನ ಸೆಳೆಯುವುದು - ಈ ಪ್ರತಿಭಟನೆಯ ಉದ್ದೇಶವಾಗಿತ್ತು.

ದಿ ಹಿಂದೂ ಪತ್ರಿಕೆಯಲ್ಲಿ ಈ ಕಾರ್ಯಕ್ರಮದ ಕುರಿತು ಹೀಗೆ ವರದಿಯಾಗಿದೆ:

Holding placards which demand Document Freedom and ask for a national policy on this issue, the protesters label the recent document standard called OOXML — which was adopted by the International Standardisation Organisation on April 2 — a “banana standard.”

(ಪೂರ್ಣ ಲೇಖನ ಇಲ್ಲಿದೆ.)

ಈ ಕಾರ್ಯಕ್ರಮ ಆಯೋಜಿಸಿದ ತಂಡಕ್ಕೆ ಅಭಿನಂದನೆಗಳು.

ಕನ್ನಡಪ್ರಭ ಬದಲಾಗಿದೆ, ನೋಡಿದಿರಾ?

ಒಂದಷ್ಟು ವರುಷ ಗೂಗಲ್ ನಲ್ಲಿ "Kannada" ಎಂದು ಹುಡುಕಿದವರಿಗೆ ಮೊದಲು ಸಿಗುತ್ತಿದ್ದದ್ದು ಕನ್ನಡ ಪ್ರಭ. ಒಂದು ಕಾಲದಲ್ಲಿ ಕನ್ನಡ ಸುದ್ದಿಗೆ ಮೊದಲು ಓದುಗರು ನುಗ್ಗುತ್ತಿದ್ದುದು ಅಂತರ್ಜಾಲದಲ್ಲಿ ಇಲ್ಲಿಗೇ. ಈಗೀಗ ಇ-ಪೇಪರ್ ಗಳು ಬಂದು, ಇತರ ವೆಬ್ಸೈಟುಗಳೂ ಸುದ್ದಿ ಹಾಕಲು ಪ್ರಾರಂಭಿಸಿದ ಮೇಲೆ ಗಮನ ಬೇರೆಡೆಯೂ ಹರಿದಿದೆ.

ವಿಜಯ ಕರ್ನಾಟಕ ತನ್ನ ಇ-ಪೇಪರ್ ಗೆ direct access ಕೊಟ್ಟು ಓದುಗರನ್ನು ಹಿಡಿದಿಟ್ಟುಕೊಂಡಂತಿದೆ. ಪ್ರಜಾವಾಣಿಯವರು ಇ-ಪೇಪರ್ ಕೊಟ್ಟದ್ದೇನೋ ನಿಜ, ಆದರದನ್ನು ಓದುವುದಕ್ಕೆ ತೊಡಕು, ತೊಂದರೆಯಾಗುವಂತೆ ಮಾಡಿಟ್ಟು ಓದುಗರನ್ನು ಕಳಕೊಂಡಿರುವಂತಿದೆ (ತಮಾಷೆಯೆಂದರೆ ವಿ.ಕ ಮತ್ತು ಪ್ರಜಾವಾಣಿ - ಇವೆರಡರ ಇ-ಪೇಪರ್ ಸವಲತ್ತನ್ನು ಒಂದೇ ಕಂಪೆನಿ ರೆಡಿ ಮಾಡಿರುವುದು. ಬಳಸಲಾಗುತ್ತಿರುವ ತಂತ್ರಾಂಶದ ಆವೃತ್ತಿ ಮಾತ್ರ ಬೇರೆ ಇರುವಂತಿದೆ. ಇತ್ತೀಚೆಗೆ ವಿ.ಕ ಇ-ಪೇಪರ್ ಸುಮಾರು ಹೊತ್ತು ಡೌನ್ ಆಗಿರೋದುಂಟು ಕೂಡ.)
ಕನ್ನಡ ಪ್ರಭದ ಇ-ಪೇಪರ್ manual uploadಉ. ವಿ.ಕ ಅಥವ ಪ್ರಜಾವಾಣಿಯ ಇ-ಪೇಪರ್ ಆವೃತ್ತಿಗಳಲ್ಲಿ ಸಿಗುವ ಸವಲತ್ತುಗಳು (features) ಇದರಲ್ಲಿಲ್ಲ.

ಇತ್ತೀಚೆಗಷ್ಟೆ ಕನ್ನಡಪ್ರಭದ look and feel ಬದಲಾದಂತಿದೆ. ಹೊಸ ಲುಕ್ ಹೊರನೋಟಕ್ಕೆ ಬಹಳ ಚೆನ್ನಾಗಿದೆ. ಹಿಂದಿನದ್ದಕ್ಕಿಂತ ಹೆಚ್ಚು usable ಆಗಿದೆ.
ಆದರೆ ಹಿಂದಿನಂತೆ ಯೂನಿಕೋಡ್ ಅಲ್ಲದ ಫಾಂಟುಗಳೇ ಉಳಿದು ಹೊಸ ಮೆರುಗು ಕ್ಷೀಣವಾದಂತಿದೆ.

ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

ನಮ್ಮದೊಂದು ಪುಟ್ಟ ಗ್ರಂಥಾಲಯ. ಕನ್ನಡ ಲೈಬ್ರರಿ ಎಂಬುದೇ ಅದರ ಅಗ್ಗಳಿಕೆ. ಇಡೀ ಎಚ್ಎಎಲ್ ಕಾರ್ಖಾನೆಯಲ್ಲಿ ಮನೆಮಾತಾಗಿರುವ ಈ ಕನ್ನಡ ಗ್ರಂಥಾಲಯ ಇರುವುದು ಇಂಜಿನ್ ವಿಭಾಗದ ಒಳಾವರಣದಲ್ಲಿ. ಕಾರ್ಖಾನೆಯ ಯಾಂತ್ರಿಕದ ಜೀವನದ ಜೊತೆಗೇ ಮನರಂಜನೆ ಮತ್ತು ಆತ್ಮವಿಕಾಸಕ್ಕೆ ಇಂಬಾಗುವ ಪ್ರಕ್ರಿಯೆಯಲ್ಲಿ ತೊಡಗಿರುವ ಈ ಗ್ರಂಥಾಲಯಕ್ಕೆ ಈಗ ಇಪ್ಪತ್ತೈದು ವರ್ಷ ವಯಸ್ಸು. ಇಪ್ಪತ್ತೈದು ವರ್ಷಗಳ ಹಿಂದೆ ಪುಟ್ಟದಾಗಿ ಪ್ರಾರಂಭವಾದ ಈ ಪ್ರಯತ್ನದಲ್ಲಿ ಅದು ಅಂದು ಒಂದು ಟ್ರಂಕಿನಲ್ಲಿಟ್ಟ ಕೆಲವೇ ಪುಸ್ತಕಗಳ ಸಂಗ್ರಹವಾಗಿತ್ತು. ಇಂದು ಅದು ಬೆಳೆದು ಹದಿನೈದು ಕಪಾಟುಗಳಲ್ಲಿ ತುಂಬಿರುವ ಮೌಲಿಕ ಪುಸ್ತಕಗಳ ಸಂಗ್ರಹವಾಗಿದೆ. ಅಂದು ಮುಚ್ಚುಮರೆಯಲ್ಲಿ ನಡೆಯುತ್ತಿದ್ದ ಪುಸ್ತಕದೆರವಲು ಇಂದು ಅಧಿಕೃತ ಮಾನ್ಯತೆ ಗಳಿಸಿದೆ. ಮೊದಲು ಪುಸ್ತಕಗಳೆಂದರೆ ಪತ್ತೇದಾರಿ ಮತ್ತು ಸ್ತ್ರೀಸಾಹಿತ್ಯವಷ್ಟೇ ಎನಿಸಿದ್ದ ಭಾವನೆ ಹೋಗಿ ಇಂದು ಅಧ್ಯಾತ್ಮ, ಮಕ್ಕಳಸಾಹಿತ್ಯ, ವಿಜ್ಞಾನ, ಹಾಸ್ಯ, ಕವನ, ಕತೆ, ಕಾದಂಬರಿ, ಮನೋವಿಕಾಸ, ಆರೋಗ್ಯ, ವ್ಯಕ್ತಿಚಿತ್ರ, ಸಾಹಿತ್ಯಚಿಂತನೆ, ಇತಿಹಾಸ, ನಾಟಕ ಮುಂತಾದ ಎಲ್ಲ ಪ್ರಕಾರಗಳ ಸಂಗ್ರಹ ಇಲ್ಲಿದೆ. ಕೊಡುಗೆಯಾಗಿ ನೀಡಿದ ಪುಸ್ತಕಗಳು, ಚಂದಾ ಹಣದಿಂದ ಖರೀದಿಸಿದ ಪುಸ್ತಕಗಳ ಜೊತೆಗೆ ಕಾರ್ಖಾನೆಯ ಆಡಳಿತವರ್ಗವು ಪ್ರತಿವರ್ಷವೂ ತಾನೇ ಕೊಟೇಷನ್ ಕರೆದು ಐದುಸಾವಿರ ರೂಪಾಯಿಗಳ ಮೌಲ್ಯದ ಕನ್ನಡ ಪುಸ್ತಕ ಖರೀದಿಸಿಕೊಡುವುದರಿಂದ ಇಂದು ಈ ಪುಸ್ತಕಭಂಡಾರದಲ್ಲಿರುವ ಪುಸ್ತಕಗಳ ಸಂಖ್ಯೆ ೩೫೦೦ ಮುಟ್ಟಿದೆ. ಈ ವರ್ಷ ಕನ್ನಡ ಪುಸ್ತಕ ಪ್ರಾಧಿಕಾರವು ಸುಮಾರು ೨೫೦೦೦ ರೂಪಾಯಿಗಳ ಮೌಲ್ಯದ ೧೮೦ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ. ಕೆಲಸದಿಂದ ನಿವೃತ್ತಿ ಹೊಂದುವ ಸದಸ್ಯರಿಗೆ ಪುಸ್ತಕದ ಉಡುಗೊರೆ ನೀಡಲಾಗುತ್ತದೆ. ಅಂತೆಯೇ ಆ ನಿವೃತ್ತ ಸದಸ್ಯರೂ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡುವುದುಂಟು. ಈ ಸಾರಿಯ ಯುಗಾದಿಗೆ ಎಲ್ಲ ಸದಸ್ಯರಿಗೂ ಬೇವುಬೆಲ್ಲದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ’ರತ್ನಕೋಶ’ವನ್ನು ಹಂಚಿದೆವು. ಈ ಕಾರ್ಯವನ್ನು ವೀಕ್ಷಿಸಲು ಬಂದಿದ್ದ ಕಸಾಪ ಕಾರ್ಯದರ್ಶಿ ಜರಗನಹಳ್ಳಿ ಶಿವಶಂಕರ ಅವರಂತೂ ತುಂಬಾ ಆನಂದಿಸಿದರು.