ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡಕಂದರ್ ತಪಂಗೆಯ್ದರ್

ಕನ್ನಡದೇವಿಯ ದಯಮೇ-
ಮಿನ್ನುಂ ತಮಗೆ ದೊರೆಯದೆನುತುಂ ತೆಂಕಣದಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್‍ ತಪಗೆಯ್ದರ್||

ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ"

ಸ್ನೇಹಿತರೆ,

ಅವಿರತ ಟ್ರಸ್ಟ್ ನಿಂದ ಇದೇ ಭಾನುವಾರ ಬೆಳಿಗ್ಗೆ ೧೧.೦೦ ಘಂಟೆಗೆ ರಂಗಶಂಕರದಲ್ಲಿ ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ" ಹಮ್ಮಿಕೊಂಡಿದ್ದಾರೆ.
ಟಿಕೆಟ್ ಬೇಕಾದವರು ಮೊಬೈಲ್ ನಂ. 9880086300 ಗೆ ಎಸ್.ಎಮ್.ಎಸ್ ಮಾಡಿ ಅಥವಾ kts_gowda@yahoo.com ಗೆ ಈ-ಮೈಲ್ ಮಾಡಿ.

ಸಮಯ - ಸ್ಫೂರ್ತಿ ಸೆಲೆ ೭

ಸಮಯದ ಮಹತ್ವ ಎಲ್ಲರಿಗೂ ಮುಪ್ಪಿನಲ್ಲಿ ಅರ್ಥವಾಗುತ್ತದೆ.
ಆದರೆ ಆಗ ನಾವು ಏನೂ ಮಾಡುವ ಸ್ಥಿತಿಯಲ್ಲಿರುವುದಿಲ್ಲ.
ಪ್ರತಿ ಕ್ಷಣವನ್ನು ಆನಂದದಿಂದ, ಸಾರ್ಥಕವಾಗಿ ಕಳೆಯಲು ಪ್ರಯತ್ನಿಸಬೇಕು.

ವಿಷ...

ಹಾವಿನ ಹಲ್ಲಿನಲ್ಲಿ,
ನೊಣದ ತಲೆಯಲ್ಲಿ,
ಚೇಳಿನ ಬಾಲದಲ್ಲಿ ವಿಷವಿರುತ್ತದೆ.
ಆದರೆ ದುರ್ಜನರ ಅಂಗಾಂಗಗಳಲ್ಲೂ ವಿಷವಿರುತ್ತದೆ.

ಮರುಪೂರಣ - ಹೀಗೊಂದು Case Study

ಮರುಪೂರಣದಿಂದ ಹತ್ತಡಿ ಏರಿದ ನೀರು (ಚಿತ್ರ: ನಾ. ಕಾರಂತ ಪೆರಾಜೆ)

ಕೃಷಿಯಲ್ಲಿ ತೊಡಗಿಸಿಕೊಂಡವರಿಗೆ ತಿಳಿದಷ್ಟು ನೀರಿನ ಬೆಲೆ ಬಹುಶಃ ಬೇರೆ ಯಾರಿಗೂ ತಿಳಿದಿರಲಿಕ್ಕಿಲ್ಲ. ಮಳೆಯಾಗಿ ಬಿದ್ದ ನೀರನ್ನು ಹರೆದು ಪೋಲಾಗಲು ಬಿಡದೆ ಅದನ್ನು ಬಳಸಿಕೊಂಡು ನೀರಿನ ಸದುಪಯೋಗಪಡೆಯುವುದು ಕಜೆಯವರು ನೆನಪಿಸುವಂತೆ "ನೀರ ನಿಶ್ಚಿಂತೆ". ಅಡಿಕೆ ಪತ್ರಿಕೆಯಲ್ಲಿ ಸಹಾಯ ಸಂಪಾದಕರಾಗಿ ಕೆಲಸ ಮಾಡುತ್ತಿರುವ ನಾ. ಕಾರಂತರು ಪುತ್ತೂರಿನ ಬಳಿ ಬಾವಿಗೆ ಮರುಪೂರಣ ಮಾಡಿದ್ದರ ದೃಷ್ಟಾಂತವೊಂದನ್ನು ನಮ್ಮೊಂದಿಗೆ ವಾಟರ್ ಪೋರ್ಟಲ್ಲಿನಲ್ಲಿ ಹಂಚಿಕೊಂಡಿದ್ದಾರೆ. ಓದಿ:

ಡು ಬೇಸಿಗೆ. ಸುತ್ತೆಲ್ಲಾ ಭಣಭಣ. ನಲ್ಲಿಯಲ್ಲಿ ಅರ್ಧ ಗಂಟೆ ನೀರು ಬಂದರೆ ಹೆಚ್ಚು. ಇಂತಹ ಪರಿಸ್ಥಿತಿಯಲ್ಲೂ ಪುತ್ತೂರಿನ ಆದರ್ಶ ಆಸ್ಪತ್ರೆ ಬಳಿಯ ರಾಜರತ್ನಂ ಅವರ ಬಾವಿಯಲ್ಲಿ ಹತ್ತಡಿ ನೀರಿಗೆ ತೊಂದರೆಯಿಲ್ಲ. ಚಾವಣಿ ನೀರನ್ನು ಬಾವಿಗೆ ಮರುಪೂರಣ ಮಾಡಿದ್ದರ ಫಲ.

ಇವರದು ಹಳೆ ಬಾವಿ. ಮೃದು ಮಣ್ಣು. ಒರತೆ ಕಡಿಮೆ. ಕೆಲವೊದು ಸಲ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಮಳೆ ಬಂದಾಗ ಮೇ ಕೊನೆ ವರೆಗೂ ಕುಡಿಯುವ ನೀರಿಗೆ ತೊಂದರೆಯಾಗುತ್ತಿರಲಿಲ್ಲ. ಸುಮಾರು ಎಂಭತ್ತರ ಹೊತ್ತಿಗೆ ಬಾವಿ ಒಮ್ಮೆ ಬತ್ತಿತ್ತು. ಆಗ ದೂರದಿಂದ ನೀರನ್ನು ತಂದ ಸಾಹಸ ರಾಜರತ್ನಂ ಅವರಿಗೆ ನೆನಪಿದೆ. ಆಮೇಲಿನ ದಿವಸಗಳಲ್ಲಿ ಮನೆಬಳಕೆಗೆ ಬಳಸಲು ತೊಂದರೆಯಾಗುತ್ತಿರಲಿಲ್ಲ.

ನಾಟಕ : ಅಗ್ನಿ ಮತ್ತು ಮಳೆ.

ಮುಂಬೈ ಕನ್ನಡಿಗರಿಗೊಂದು ಒಳ್ಳೆಯ ನಾಟಕ ನೋಡುವ ಸದಾವಕಾಶ. ವರ್ಲಿಯ ’ನೆಹರು ಸೆಂಟರ್’ನ ರಾಷ್ಟ್ರೀಯ ನಾಟಕೋತ್ಸವದಲ್ಲಿ ಕನ್ನಡದ "ಅಗ್ನಿ ಮತ್ತು ಮಳೆ" ನಾಟಕ ಪ್ರದರ್ಶಿತಗೊಳ್ಳುತ್ತಿದೆ. ’ಜನ ಸಂಸೃತಿ’ ತಂಡ (ಬೆಂಗಳೂರು) ಪ್ರಯೋಗಿಸುತ್ತಿರುವ ಈ ನಾಟಕದ ರಚನೆ :ಗಿರೀಶ್ ಕಾರ್ನಾಡ್. ನಿರ್ದೇಶನ : ಖ್ಯಾತ ನಿರ್ದೇಶಕೆ ಸಿ.ಬಸವಲಿಂಗಯ್ಯ(ಬಸು).

ಮುಂಬಯಿ ಮುಖಗಳು ಭಾಗ ೧.....

ಸದಾ ತಡವಾಗಿ ಓಡುವ ಲೋಕಲ್ ಟ್ರೇನುಗಳ ರಭಸ, ಸತ್ತ ಮೀನುಗಳೇ ತುಂಬಿರುವ ಬುಟ್ಟಿಗಳ ನಾರು ವಾಸನೆ, ರೈಲು ಹಳಿಯುದ್ದಕ್ಕೂ ಮೈ-ಮರೆತು ಪ್ಲಾಸ್ಟಿಕ್ ತಂಬಿಗೆ ಹಿಡಿದು ಕೂತಿರುವ ಭಯ್ಯಾಗಳ ಕೄತಘ್ನತೆ, ಯಾವ ಬಾಂಬು ಎಲ್ಲಿ ಸಿಡಿಯುವುದೋ ಎಂಬ ಕರಿ ಭಯದ ನೆರಳಲ್ಲೇ ಎದ್ದು ಮೈ ಮುರಿಯುತ್ತದೆ ಮುಂಬಯಿ. ದೂರದ ಬ್ಯಾಂಡ್ ಸ್ಟಾಂಡ್ ನಲ್ಲಿ ಚರಸ್ ಸೇವಿಸಿ, ಹೈರಾಣಾಗಿ, ಗೆಳೆಯನ ಅಪ್ಪನ ಕ್ವಾಲಿಸ್ ಗಾಡಿಯಲ್ಲಿ ಕುಳಿತು ಮನೆಗಡೆ ಹಿಂದಿರುಗುವ ಯೋಚನೆಯಲ್ಲಿ ಕಾಲ್ ಸೆಂಟರ್ ನ ಹೈ-ಟೆಕ್ ಹೈಕಳು ಚರ್ಚಿಸುತ್ತಿದ್ದರೆ, ಈಚೆ ಗಡದ್ದಾಗಿ ಹೊದ್ದು ಮಲಗಿದ ಲಕ್ಷ್ಮಣ ಭಾವೂ ಸುರ್ವೆ ಚಾಳಿನ ಹದಿನೇಳನೇ ನಂಬರ್ ಮನೆಯಲ್ಲಿ ದೀಪ ಝಗ್ಗನೇ ಬೆಳಗುತ್ತದೆ. ವಸಂತರಾವ್ ವಿಠೋಬಾ ಪಾರಂಗೆಯ ಅರೆ-ತೆರೆದ ಕಣ್ಣುಗಳು, ಆತನಿಗೆ ಎಂದೂ ಮೋಸ ಮಾಡಿಲ್ಲ. ಅಡ್ಡಾದಿಡ್ಡಿ ಮಲಗಿದ ಮಕ್ಕಳಿಗೆ ಕಾಲು ತಾಕದಂತೆ ಎಚ್ಚರವಹಿಸಿ, ಚೊಂಬು ಹಿಡಿದು ಆತ ಮೆಲ್ಲನೆ ಹೊರಬರುತ್ತಾನೆ. ಹದಿನಾರು ವರ್ಷಗಳೇ ಕಳೆದು ಹೋಗಿವೆ ನೋಡಿ, ಆತ ಚಾಳಿನ ಪಾಯಖಾನೆಯ ಬಳಕೆಗಾಗಿ ಲೈನಿನಲ್ಲಿ ನಿಂತಿರುವವರ ಜೊತೆ ಜಗಳವಾಡಿ. ಜಗಳಾಡಲು, ಮೂರೂ ಮುಕ್ಕಾಲರ ’ಮಟಮಟ’ ಮುಂಜಾನೆ ಅಲ್ಲಿ ಯಾರಿರುತ್ತಾರೆ? ಪಾಯಖಾನೆಯ ಬಳಿ ಮಲಗಿರುತ್ತಿದ್ದ ಮೋತಿ ಕೂಡ ಹೋದ ಸಾಯಿಬಾಬಾ ದಿಂಡಿಯ ದಿನ ಸತ್ತು ಹೋಯ್ತು. ಆವತ್ತಿನಿಂದ ಪಾರಂಗೆ ಕಾಕಾನ, ಮುಂಜಾವಿನ ಗುಣು ಗುಣು ಭಜನೆಯನ್ನು ಕೇಳುವವರೆ ಇಲ್ಲ. ಪಾರಂಗೆ ಕಾಕಾನ ಬಳಿ ಮರಾಠಿ ಭಜನೆಗಳ ಭಾಂಡಾರವೇ ಇದೆ. "ಆಜ ಆನಂದೀ ಆನಂದ ಝಾಲಾ..", "ವಿಠೂ ಮಾವುಲೀ ತೂ ಮಾವುಲೀ ಜಗಾಚೀ..", " ಬಾಬಾಂಚಾ ಝಾಲಾ ಪ್ರಸಾದ...", ಹೀಗೆ ಒಂದೇ, ಎರಡೇ?. ಪಾರಂಗೆ ಕಾಕಾ ಹಾಡಲು ಕುಳಿತರೆಂದರೆ, ಚಾಲಿಗೆ ಚಾಳೇ ಕಿವಿಯಾಗುತ್ತದೆ. ನಿನ್ನೆ ಸಂಜೆ ತಂದ ಕ್ಯಾಸೆಟ್ ನ ಹೊಸ ಹಾಡೊಂದನ್ನು ಗುಣಗುಣಿಸುತ್ತ, ಕಾಕಾ ಪಾಯಖಾನೆಯ ಬಳಿ ಹೆಜ್ಜೆ ಹಾಕುತ್ತಿದ್ದರೆ, ಅದಕ್ಕೆ ತಾಳ ಹಾಕುವಂತೆ, ಫನ್ಸೆಕರ್ ಮಾವಶಿಯ ಭಯಾನಕ ಕೆಮ್ಮು. "ಈ ಮುದುಕಿ ರಾತ್ರಿ ಇಡೀ ಕೆಮ್ಮುತ್ತೆ. ಹ್ಯಾಗಾದ್ರೂ ಸಹಿಸ್ತಾರೊ ಆ ಜನ? ರಾತ್ರಿ ಅವಕ್ಕೆ ನಿದ್ದೆಯಾದ್ರೂ ಬರುತ್ತೋ? ಒಂದೇ ಒಂದ್ಸಲ ಸತ್ತಾದ್ರೂ ಹೋಗ್ಬಾರದೆ ಈ ಗೊಡ್ಡು" ಎಂದು ಒಂದು ಕ್ಷಣ ಅಂದುಕೊಳ್ಳುತ್ತಾರೆ ಪಾರಂಗೆ ಕಾಕಾ. ಆದರೆ ವಿನಾಯಕನಿಗೆ ಆಕ್ಸಿಡೆಂಟ್ ಆದಾಗ, ದಿನ ರಾತ್ರಿ ಅನ್ನದೇ ಅವನನ್ನು ನೋಡಿಕೊಂಡದ್ದು ಅದೇ ಮುದುಕಿಯಲ್ಲವೇ ಎಂಬುದು ನೆನಪಾಗಿ ತಮ್ಮ ಯೋಚನೆಗೆ ತಾವೇ ಪಶ್ಚಾತ್ತಾಪ ಪಡುತ್ತ, ತಮ್ಮ ಭಜನೆಯನ್ನು ಮುಂದುವರಿಸುತ್ತ, ನಿರ್ಭೀತರಾಗಿ ಪಾಯಖಾನೆಯೊಳಗೆ ನುಗ್ಗುತ್ತಾರೆ.

ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ"...

ಸ್ನೇಹಿತರೆ,

ಅವಿರತ ಟ್ರಸ್ಟ್ ನಿಂದ ರಂಗಶಂಕರದಲ್ಲಿ ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ" ಹಮ್ಮಿಕೊಂಡಿದ್ದಾರೆ.
ಟಿಕೆಟ್ ಬೇಕಾದವರು ಮೊಬೈಲ್ ನಂ. 9880086300 ಗೆ ಎಸ್.ಎಮ್.ಎಸ್ ಮಾಡಿ ಅಥವಾ kts_gowda@yahoo.com ಗೆ ಈ-ಮೈಲ್ ಮಾಡಿ.

ಒಂದೇ ದಿನದಲ್ಲಿ ದಾಖಲೆ ೧೦೦ ಟಿಕೆಟ್ ಗಳ ಮಾರಾಟ ಆಗಿವೆ... ನಿಮಗು ಆಸಕ್ತಿ ಇದ್ದರೆ ತಕ್ಷಣ ಟಿಕೆಟ್ ಗಾಗಿ ಸಂಪರ್ಕಿಸಿ.

ಗುಟ್ಟು - ಸ್ಫೂರ್ತಿ ಸೆಲೆ ೬

ಗುಟ್ಟುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ.
ನಿಮಗೇ ಅದನ್ನು ಕಾಪಾಡಲು ಆಗುವುದಿಲ್ಲ ಎಂದ ಮೇಲೆ
ಅವರು ಹೇಗೆ ಕಾಪಾಡುತ್ತಾರೆ?