ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚೀನಾದ ಜನಸಾಮಾನ್ಯರು

ನಮ್ಮ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರೆಂದು ಈಗಾಗಲೇ ಗುರುತಿಸಿಕೊಂಡಿರುವ ಗೋಪಾಲಕೃಷ್ಣ ಪೈಯವರು ನಿಜಕ್ಕೂ ಕೆಲವು ಒಳ್ಳೊಳ್ಳೆಯ ಚೀನೀ ಕಥೆಗಳನ್ನು ಆಯ್ದು ಅನುವಾದಿಸಿಕೊಟ್ಟಿದ್ದಾರೆ. ಈ ಸಂಕಲನದಲ್ಲಿರುವ ಒಟ್ಟು ಹದಿನಾರು ಕಥೆಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದ ಎಲ್ಲಾ ಕಥೆಗಳೂ ತಮ್ಮದೇ ಆದ ಒಂದು ಗುಂಗು ಆವರಿಸುವಂತೆ ಮಾಡುವಲ್ಲಿ, ನಮ್ಮ ಒಳಗನ್ನು ತಟ್ಟುವಲ್ಲಿ, ಮತ್ತೆ ನೆನೆದಾಗ ವಾಹ್ ಅನಿಸುವಂತೆ ಮಾಡುವಲ್ಲಿ ಸಫಲವಾಗಿವೆ. ಈ ಎಲ್ಲ ಅಂಶಗಳಿಗಾಗಿ ನಾವು ಮೊದಲು ಅಭಿನಂದಿಸಬೇಕಾದ್ದು ಪೈಯವರನ್ನೆ. ಅವರ ಅನುವಾದ ಅಷ್ಟು ಸೊಗಸಾಗಿದೆ. ಅನುವಾದ ಅನಿಸದ ಹಾಗಿದೆ. ಈ ಸಂಕಲನದ ಪಾತ್ರಗಳು ಬಹುಕಾಲ ಮನಸ್ಸಿನಲ್ಲಿ ಉಳಿದು ನಮ್ಮ ನಿಮ್ಮ ನಡುವಿನ ವ್ಯಕ್ತಿಗಳಾಗಿ ಬಿಡುವುದು ಈ ಸಂಕಲನದ ಬಹುಮುಖ್ಯ ಸಾಧನೆ.

 

ಚೀನಾದ ಜನಸಾಮಾನ್ಯರು

ಪುಸ್ತಕದ ಲೇಖಕ/ಕವಿಯ ಹೆಸರು
ಗೋಪಾಲಕೃಷ್ಣ ಪೈ
ಪ್ರಕಾಶಕರು
ಭಾಗ್ಯಲಕ್ಷ್ಮೀ ಪ್ರಕಾಶನ, 87, 3ನೇ ಕ್ರಾಸ್, 4ನೇ ಬ್ಲಾಕ್, ಬನಶಂಕರಿ 3ನೇ ಸ್ಟೇಜ್, 3ನೇ ಫೇಸ್, ಬೆಂಗಳೂರು-560 085. ಮೊಬೈಲ್ : 94480 47735
ಪುಸ್ತಕದ ಬೆಲೆ
೧೨೦ ರೂ.

ನಮ್ಮ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರೆಂದು ಈಗಾಗಲೇ ಗುರುತಿಸಿಕೊಂಡಿರುವ ಗೋಪಾಲಕೃಷ್ಣ ಪೈಯವರು ನಿಜಕ್ಕೂ ಕೆಲವು ಒಳ್ಳೊಳ್ಳೆಯ ಚೀನೀ ಕಥೆಗಳನ್ನು ಆಯ್ದು ಅನುವಾದಿಸಿಕೊಟ್ಟಿದ್ದಾರೆ. ಈ ಸಂಕಲನದಲ್ಲಿರುವ ಒಟ್ಟು ಹದಿನಾರು ಕಥೆಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದ ಎಲ್ಲಾ ಕಥೆಗಳೂ ತಮ್ಮದೇ ಆದ ಒಂದು ಗುಂಗು ಆವರಿಸುವಂತೆ ಮಾಡುವಲ್ಲಿ, ನಮ್ಮ ಒಳಗನ್ನು ತಟ್ಟುವಲ್ಲಿ, ಮತ್ತೆ ನೆನೆದಾಗ ವಾಹ್ ಅನಿಸುವಂತೆ ಮಾಡುವಲ್ಲಿ ಸಫಲವಾಗಿವೆ. ಈ ಎಲ್ಲ ಅಂಶಗಳಿಗಾಗಿ ನಾವು ಮೊದಲು ಅಭಿನಂದಿಸಬೇಕಾದ್ದು ಪೈಯವರನ್ನೆ. ಅವರ ಅನುವಾದ ಅಷ್ಟು ಸೊಗಸಾಗಿದೆ. ಅನುವಾದ ಅನಿಸದ ಹಾಗಿದೆ. ಈ ಸಂಕಲನದ ಪಾತ್ರಗಳು ಬಹುಕಾಲ ಮನಸ್ಸಿನಲ್ಲಿ ಉಳಿದು ನಮ್ಮ ನಿಮ್ಮ ನಡುವಿನ ವ್ಯಕ್ತಿಗಳಾಗಿ ಬಿಡುವುದು ಈ ಸಂಕಲನದ ಬಹುಮುಖ್ಯ ಸಾಧನೆ.

ಪುಟಗಳು 248+xiv

ಭಾನುವಾರದ ಬೆಳಗಿನ ಮೌನ

ಭಾನುವಾರದ ಬೆಳಗಿನ ಮೌನ ನನಗೆ ಇಷ್ಟ. ನನಗಂತೂ ಭಾನುವಾರ ಎಲ್ಲ ಜಗ್ಗಾಟದ ದಿನಗಳ ನಡುವೆ ತಣ್ಣಗೆ ತೇಲುವ ನಡುಗಡ್ಡೆ.

ಶನಿವಾರದ ವೀಕೆಂಡ್ ಅಬ್ಬರಗಳು ಮುಗಿದಿದೆ. ಶುಕ್ರವಾರದ - ಕೆಲಸದ ಕಡೆಯ ದಿನದ - ಸಂತೋಷ ಕರಗಿದೆ. ಗುರುವಾರದ - ವೀಕೆಂಡ್ ಬಂತೆ - ಎಂಬ ಪ್ರಶ್ನೆ ಆಗಲೆ ಉತ್ತರವಾಗದೆ. ಬುಧವಾರದ ವೀಕೆಂಡ್ ಯಾವಗಪ್ಪ - ಹಿಂದಕ್ಕಾಗಿದೆ. ಮಂಗಳವಾರದ - ವೀಕೆಂಡಿನ ಕನಸು ನಿಜವಾ - ಎಂಬ ಅನುಮಾನ ನಿಜವಾಗಿದೆ. ಸೋಮವಾರದ - ಮತ್ತೆ ಶುರುವಾಯಿತಲ್ಲ-ದ ಬೇಸರ ಹೋದ ಶತಮಾನದ್ದು ಅನಿಸುತ್ತಿದೆ.

ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?

ಇದೊಂದು ವಿಷಯ ನನಗೇ ಚಿಕ್ಕಂದಿಂದ ತಲೇಲಿ ಕೊರೀತಾ ಇದೆ. ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ? ಸ್ಕೂಲಲ್ಲಿ ನಮ್ಮ ನಾಗರಾಜ ಮೇಷ್ಟ್ರು, ವಿದ್ಯಾವಂತರೇಲ್ಲಾ ದೇಶ ಬಿಟ್ಟು ಹೋಗ್ತಾ ಇದ್ದಾರೆ, ಇದರಿಂದ ನಮ್ಮ ದೇಶಕ್ಕೆ ತುಂಬಲಾರದ ನಷ್ಟ ಅಂತ ಹೇಳ್ತಾ ಇದ್ದದ್ದು ಇಂದಿಗೂ ನನ್ನ ತಲೇಲಿ ಆಗಾಗ ಬಂದು ಹೋಗ್ತಿರತ್ತೆ. ದೇಶ ಬಿಟ್ಟು ಬಂದಮೇಲೂ!!!

ಹೀಗೊಂದು ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ

ವಿವಾಹ ಮಹೋತ್ಸವ ಆಹ್ವಾನ ಪತ್ರಿಕಾ

ಕೊತ್ತೊಂಬರಿ ತಾಲ್ಲೂಕು ಹುಣಸೇಕಾಯಿ ಹೋಬಳಿ ಹೀರೇಕಾಯಿ ಗ್ರಾಮದ ಶ್ರೀಮತಿ ಮತ್ತು ಶ್ರೀ ಪಡವಲಕಾಯಿ ಮತ್ತು ಮೆಣಸಿನಕಾಯಿ ತಾಲ್ಲೂಕು ಸೌತೇಕಾಯಿ ಹೋಬಳಿ
ಸೋರೇಕಾಯಿ ಗ್ರಾಮದ ಶ್ರೀಮತಿ ಮತ್ತು ಶ್ರೀ ಬೇವಿನಕಾಯಿ ಸಹ ಮಾಡುವ ವಿಜ್ನಾಪನೆಗಳು

ಗಾಯ

ಹೂವಿಗಾಗಿ ಕೈ ಮಾಡಿದೆ

ಸಿಕ್ಕಿದ್ದು ಬರೀ ಮುಳ್ಳಿನ ಗೀರು ಗಾಯ

 

ಹಣ್ಣಿಗಾಗಿ ಮರವೇರ ಹೋದೆ

ಸಿಕ್ಕಿದ್ದು ಬರೀ ಮೈತುಂಬ ಪರಚು ಗಾಯ

 

ಹಾಲು ಕೊಡೆಂದು ಹಸುವ ಕೇಳಿದೆ

ಸಿಕ್ಕಿದ್ದು ಬರೀ ಅದರ ಒದೆತದ ಗಾಯ

 

ನಲಿವಿನ ಹೊತ್ತು ನೀಡಲು ನೆನಪನು ಕೇಳಿದರೂ

ಸಿಕ್ಕಿದ್ದು ಬರೀ ಮನನೊಂದ ಹಸಿ ಗಾಯ

ಡಾ.ರಾಜ್‌ರಿಲ್ಲದೇ........... ಎರೆಡು ವರ್ಷ : ಒಂದು ನೆನಪು

ಮೊನ್ನೆ ಮಡಿಕೇರಿಯಲ್ಲಿ ನಡೆದ ಹೊಗೇನಕಲ್ ಧರಣಿಯ ಬಗ್ಗೆ ಬರೆಯುತ್ತ ವಿಜಯ ಕರ್ನಾಟಕದಲ್ಲಿ ಒಂದು ವಾಕ್ಯ
"ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಹೋರಾಟದಲ್ಲಿ ಒಂದು ನಾಯಕರಿಲ್ಲದ ಅನಾಥ ಪ್ರಜ್ನೆ ಕಾಡಿತು."

ಐಟಿ ಜನರು ಸ್ವಾರ್ಥಿಗಳು ಮತ್ತು ಸ್ವಂತದ್ದನ್ನು ಮಾತ್ರವೆ ಯೋಚಿಸುವವರು

[ಹಿಂದಿನ ಬ್ಲಾಗ್ ಲೇಖನ "ನನ್ನ ಐಟಿ ಸಹಬಾಂಧವರಿಗೊಂದು ಪತ್ರ..." ದಲ್ಲಿ ಉಲ್ಲೇಖಿಸಿರುವ ಲೇಖನದ ಕನ್ನಡ ರೂಪ.]

ಬೆಂಗಳೂರಿನ ಐಟಿ ಕ್ಷೇತ್ರದ ಸೋದರ ಸೋದರಿಯರೆ,

ನಿಮ್ಮಂತೆಯೆ ನಾನೂ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್. ನಾನು ನಿಮ್ಮ ಬೆಂಬಲವನ್ನು ಕೋರುತ್ತಿದ್ದೇನೆ.

ಬೆಂಬಲ? ಯಾಕೆ?

"ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯಗಳಿಗಾಗಿ..."

ಇತ್ತೀಚಿನ ದಿನಗಳಲ್ಲಿನ ಕರ್ನಾಟಕದಲ್ಲಿನ ರಾಜಕಾರಣದ ಕೀಳುಮನರಂಜನೆಯ ನಾಟಕವನ್ನು ಮತ್ತು ಸಂಪೂರ್ಣವಾಗಿ ಇಲ್ಲವಾಗಿಬಿಟ್ಟಿರುವ ರಾಜಕೀಯ ಮೌಲ್ಯಗಳನ್ನು ನೀವೆಲ್ಲ ನೋಡಿಯೇ ಇರುತ್ತೀರ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಅಧಿಕಾರಲಾಲಸೆ, ಹಣ, ಜಾತಿ, ಮತ್ತು ಕೋಮು ಉನ್ಮಾದಗಳು ಚುನಾವಣಾ ರಾಜಕಾರಣದ ಮುಖ್ಯ ಭಾಗಗಳಾಗಿ ಹೋಗಿವೆ. ಬೆಂಗಳೂರು ನಗರವಂತೂ ರಿಯಲ್ ಎಸ್ಟೇಟ್ ಮತ್ತು ಗಣಿ ದೊರೆಗಳ ಒಡ್ಡೋಲಗವಾಗಿ ಹೋಗಿದೆ.

ಇಂತಹ ಪರಿಸ್ಥಿತಿಯಲ್ಲಿ, ಬರಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ, ಯಾವ ಅಭ್ಯರ್ಥಿ ಹತ್ತಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿರುವನೊ ಅವನು ಮಾತ್ರ ಗೆಲ್ಲಲಿದ್ದಾನೆ. ಮತದಾರರಿಗೆ ಉಡುಗೊರೆಗಳನ್ನು ಕೊಟ್ಟರೆ ಮಾತ್ರ, ಕೀಳು ಮಟ್ಟದ ಜಾತಿ ಮತ್ತು ಕೋಮು ಭಾವನೆಗಳನ್ನು ಉದ್ಧೀಪಿಸಿದರೆ ಮಾತ್ರ, ಅಂತಿಮವಾಗಿ ನಮ್ಮನ್ನೆಲ್ಲ ಒಡೆದರೆ ಮಾತ್ರ ಅವನು ಗೆಲ್ಲಲಿದ್ದಾನೆ. ಅವನು ಚುನಾಯಿತನಾಗಲು ಇನ್ಯಾವುದೆ ಒಳ್ಳೆಯ ಸಕಾರಣಗಳು ಪರಿಗಣಿತವಾಗುವುದಿಲ್ಲ. ನಮ್ಮ ಜನರೇಷನ್ನಿನ ಮತ್ತು ನಮ್ಮ ಈ ಸಮಕಾಲೀನ ಸಂದರ್ಭದ ಸವಾಲುಗಳನ್ನು ಅರಿಯದ ಜನರೆ ಹೀಗೆ ಚುನಾಯಿತರಾಗಲಿದ್ದಾರೆ.

ಇವರು ಖರ್ಚು ಮಾಡಲಿರುವ ಪ್ರತಿಯೊಂದು ರೂಪಾಯಿಯೂ ಅನೈತಿಕವಾಗಿ ಸಂಪಾದಿಸಿದ, ಕಳ್ಳಮಾರ್ಗಗಳಿಂದ ಮಾಡಿದ, ಯಾವುದೆ ಲೆಕ್ಕಪತ್ರಗಳಿಲ್ಲದ, ಕಪ್ಪುಹಣ. ದುಡ್ಡಿರುವ ಜನ ಈ ಚುನಾವಣೆಯನ್ನು ಕೊಳ್ಳಲಿದ್ದಾರೆ. ಪ್ರತಿಯೊಂದು ರಾಜಕೀಯ ಪಕ್ಷವೂ ನೆಲದ ಕಾನೂನನ್ನು ಮತ್ತು ಜನಮತವನ್ನು ಉಲ್ಲಂಘಿಸಲಿವೆ ಮತ್ತು ಲೇವಡಿ ಮಾಡಲಿದೆ.

ಭಾರತ ದೇಶದ ಚುನಾವಣಾ ಆಯೋಗವು ವಿಧಾನಸಭೆಯ ಚುನಾವಣೆಗೆ ಒಬ್ಬ ಅಭ್ಯರ್ಥಿ ೧೫ ಲಕ್ಷ ರೂಪಾಯಿಗಳಗಿಂತ ಹೆಚ್ಚಿಗೆ ಖರ್ಚು ಮಾಡಬಾರದೆಂಬ ಕಾನೂನಿನ ಮಿತಿಯನ್ನು ವಿಧಿಸಿದೆ. ಅದರೆ, ಬಹುಪಾಲು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅದರ ಹತ್ತರಷ್ಟನ್ನು ಖರ್ಚು ಮಾಡಲಿದ್ದಾರೆ. ಮತ್ತು ಬೆಂಗಳೂರಿನಲ್ಲಂತೂ ಕೆಲವು ಅಭ್ಯರ್ಥಿಗಳು ಆ ಕಾನೂನು ಮಿತಿಯ ನೂರು ಪಟ್ಟಿಗಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದಾರೆ. ಅನೈತಿಕವಾಗಿ ಮಾಡಿದ, ಲೆಕ್ಕಾಜಮಾ ಇಲ್ಲದ, ಕಪ್ಪುಹಣವನ್ನೆ

ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?

"ಹಾರ್ಡ್ ಡಿಸ್ಕ್ ವಿಭಜನೆ ಮತ್ತು ಬೂಟ್ ಲೋಡರ್ ಬಗೆಗಿನ ಲೇಖನ " ಇದನ್ನೊಮ್ಮೆ ಓದಿ. 

ವಿಂಡೋಸ್ ಇನ್ಸ್ಟಾಲ್ ಮಾಡಿದ್ರಿಂದನೋ ಅಥವಾ ಇನ್ಯಾವ್ದಾದ್ರು ಕಾರಣದಿಂದ ಲಿನಕ್ಸ್ ಗೆ  ಬೂಟ್ ಆಗಲು ತೊಂದರೆ ಇದ್ರೆ GRUB ನ recover ಮಾಡ್ಬೇಕು. ಇದನ್ನು ತುಂಬಾ ತರಹದಲ್ಲಿ ಸರಿ ಮಾಡಬಹುದು, ನನಗೆ ಗೊತ್ತಿರೋ ಎರಡು ವಿಧಾನದಲ್ಲಿ ವಿವರಿಸುವ  ಪ್ರಯತ್ನ ಮಾಡಿದ್ದೇನೆ.