ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪುಣ್ಯಕೋಟಿ ದುಷ್ಟ ಆಕಳೇ ? ಹುಲಿಯು ಪಾಪದ ಪ್ರಾಣಿಯೇ ? ಮತ್ತೆ ನಾವೂ, ನೀವೂ ?

ನಮ್ಮ ನಿಮ್ಮೆಲ್ಲರ ಗೋವಿನ ಹಾಡಿನ ಪಠ್ಯ ಇಲ್ಲಿದೆ . http://sampada.net/article/1553
’ಗೋವಿನ ಹಾಡು-ಕನ್ನಡತನವನ್ನು ಎರಕ ಹೊಯ್ದ ಪ್ರತಿಮೆ’ ಎಂಬ ಶ್ರೀ ಕೆ.ವಿ.ಸುಬ್ಬಣ್ಣ ಅವರ ವಿಚಾರವನ್ನು ಇಲ್ಲಿ ಓದಬಹುದು. ( http://sampada.net/article/1552 )

ಶುಭಾಶಯಗಳು

ಎಲ್ಲರಿಗೂ ಮಕರ ಸಂಕ್ರಾತಿಯ ಶುಭಾಶಯಗಳು. ನನ್ನದು ಇದೇ ಮೊದಲ ಬರಹ. ಹಾಗಾಗಿ ಏನು ಬರೆಯಬೇಕಂತ ತಿಳಿಯದೆ ಕೇವಲ ಶುಭಾಶಯಗಳು ತಿಳಿಸುವ ಮೂಲಕ ಇದನ್ನು ಮುಗಿಸುತ್ತಿದ್ದೇನೆ. ಇನ್ನು ಮುಂದೆ ಕೆಲವು ಅಥವಾ ಹಲವು ದ್ಯನಂದಿನ ವಿಷಯಗಳನ್ನು ನಿಮ್ಮ ಮುಂದಿಡುತ್ತೇನೆ.

ಒಂದು ಕಹಿ ಅನುಭವ

ನಿನ್ನೆ ಒಂದು ಸೂಪರ್ ಮಾರ್ಕೆಟ್ ಗೆ ಹೋಗಿದ್ದೆ. ಹೆಸರು "ಹೋಮ್ ನೀಡ್ಸ್" ಅಂತ.
ನನ್ನ ಮನೆ ಅಲ್ಲೆ ಹತ್ತಿರ ಇರೋದ್ರಿಂದ, ವಾರಕ್ಕೆ ೨-೩ ಸಲ ಸಾಮಾನು ತರಲು ಹೋಗುತ್ತೇನೆ ಅಲ್ಲಿಗೆ. ಅಲ್ಲಿ ಇರೋ ಕೆಲಸದವರು ಪರ್ವಾಗಿಲ್ಲ ಅನ್ನೋ ಹಾಗೆ ಕನ್ನಡ ಮಾತಾಡ್ಥಾ ಇದ್ರು. ನಾನು ಹೆಚ್ಚು ಪ್ರಶ್ನೆ ಕೇಳ್ತಾ ಇರಲಿಲ್ಲ ಅವರಿಗೆ, ಏನು ಬೇಕೋ ಅದನ್ನು ತಗೊಂಡು ಬರ್ತಾ ಇದ್ದೆ.

MPEG 4 ಫಾರ್ಮ್ಯಾಟ್‌ನಲ್ಲಿ ಏನೇ ಆಗಲಿ, ಒಳ್ಳೆಯದನ್ನೆ ಮಾಡಿ - ಕೇಳು-ಪುಸ್ತಕ

ಗೆಳೆಯ ಪ್ರದೀಪ್ ಸಿಂಹ (www.humanglory.org), - "ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ - ಒಂದು ಕೇಳು-ಪುಸ್ತಕ" ವನ್ನು MPEG 4 ಫಾರ್ಮ್ಯಾಟ್‌‍ಗೆ ಕನ್ವರ್ಟ್ ಮಾಡಿದ್ದಾರೆ. ಇದನ್ನು Apple ಕ್ವಿಕ್‌‌ಟೈಮ್‌ನಲ್ಲಿ ಪ್ಲೆ ಮಾಡಬಹುದು. ಈ ಫಾರ್ಮ್ಯಾಟ್‌ನ ಮುಖ್ಯ ಅನುಕೂಲವೆಂದರೆ ಬೇಕಾದ ಅಧ್ಯಾಯಕ್ಕೆ ಮುಂದೆ-ಹಿಂದೆ ಜಂಪ್ ಮಾಡಬಹುದು.

ಶುಭಾಶಯ...

ಮುಳುಗುವ ಸೂರ್ಯನ ನೋಡು ಹೇಗೆ ನಾಚಿ ಕೆ೦ಪಾದ...

ನಿನ್ನ ನೆನಪದು ಅವನನ್ನು ಕೂಡ ಕಾಡಿದೆ...

ಅಮಾವಾಸ್ಯೆ ದಿನದಿ ಇನ್ನು ಆಗಸ ವಿರಹದಿ ಬೇಯುವುದಿಲ್ಲ...

ನಿನ್ನಯ ಮೊಗವ ನೊಡಲು ಪ್ರತಿ ದಿನ ಹುಣ್ಣಿಮೆ...

ಒಬ್ಬಳೆ ಯಾವುದೋ ಹಾಡ ಗುನುಗಲು ನೀನಾದೆ ಕಿನ್ನರಿ...

ಚೆಲುವೆ ನೀನು ಸಿ೦ಗರಿಸಿಕೊಳ್ಳಲು ನೀನಾದೆ ಸಿ೦ಗಾರಿ...

ನಿನಗೆ ಗೊತ್ಟಿಲ್ಲ ಚೆಲುವೆ ನಿನ್ನ ನೆನಪೇ ಮಧುರ...

ಮೂರೇ ಸಾಲಿನ ಕತೆ

ಕಾರಿನಲ್ಲಿ ಪೆಟ್ರೋಲ್ ಇದೆಯೋ ಇಲ್ವೋ ಅಂತ ನೋಡಲಿಕ್ಕೆ ಟ್ಯಾಂಕಿನ ಮುಚ್ಚಳ ತೆರೆದು ಕಡ್ಡಿ ಗೀರಿ ನೋಡಿದ .
ಪೆಟ್ರೋಲು ಇತ್ತು .
ವಯಸ್ಸು ನಲವತ್ತು .

(ಎಲ್ಲೋ ಓದಿದ್ದು)

ನೀವೇನಂತೀರಿ ?????

ಒಂದು ಕಾಲ ಇತ್ತು.....ಹೆಣ್ಣು ಹೆತ್ತವರ ಪರಿಸ್ಥಿತಿ ಆ ದೇವರಿಗೂ ಬೇಡ ಅನ್ನುವಂತೆ.....ಆದ್ರೆ "ಅತ್ತೆಗೊಂದು ಕಾಲ ಸೊಸೆಗೊಂದು ಕಾಲ" ಅನ್ನೊ ಹಾಗೆ ಇವತ್ತು...ಗಂಡು ಹೆತ್ತವರು ತಮ್ಮ ಮಕ್ಕಳ ಮದುವೆಮಾಡಲಿಕ್ಕೆ ಪರಿತಪಿಸುತ್ತಿದ್ದಾರೆ.

ಸ್ಟೈನ್ಬೆಕ್ಕನ 'ದಿ ಪರ್ಲ್'; ಒಂದು ಮುತ್ತಿನ ಕಥೆ

ಹೋದವಾರ ಜಾನ್ ಸ್ಟೈನ್ಬೆಕ್ ಬರೆದ ’ದಿ ಪರ್ಲ’ ಓದಿದೆ. ಸುಮಾರು ೧೧೦ ಪುಟಗಳ ಚಿಕ್ಕ ಪುಸ್ತಕ. ೧೯೪೫ರಲ್ಲಿ ಬರೆದದ್ದು. ಲೈಬ್ರರಿಯ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರಾಟದಲ್ಲಿ ೨೫ ಸೆಂಟಿಗೆ ಕೊಂಡ ಪುಸ್ತಕ. ಸರಳ ಕಥೆ, ಅದ್ಭುತ ಎನಿಸುವಂತಹ ನಿರೂಪಣೆ.

ದಿನನಿತ್ಯ ತನ್ನ ಸೊಂಟಕ್ಕೊಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ಸಮುದ್ರದ ತಳಕ್ಕೆ ಇಳಿದು ಅಲ್ಲಿನ ಚಿಪ್ಪುಗಳಲ್ಲಿ ಮುತ್ತು ಹುಡುಕುವ ಕಾಯಕದ ಕೀನೊ ಕಥಾನಾಯಕ. ಯುವಾನ ಅವನ ಹೆಂಡತಿ ಹಾಗೂ ಅವರಿಗೊಬ್ಬ ಮಗ ಕೊಯೊಟಿಟೊ. ಒಂದಾನೊಂದು ದಿನ ಕೊಯೊಟಿಟೊನಿಗೆ ಚೇಳು ಕುಟುಕುತ್ತದೆ. ಕುಟುಕಿದ ಕ್ಷಣವೇ ಯುವಾನ ಚೇಳು ಕುಟುಕಿದ ಸ್ಥಳದಿಂದ ವಿಷವನ್ನು ಹೀರಿ ತೆಗೆಯುವ ಪ್ರಯತ್ನ ಮಾಡುತ್ತಾಳೆ. ಕೊನೆಗೆ ವೈದ್ಯನ ಹತ್ತಿರ ಹೋಗುವದೇ ಒಳ್ಳೆಯದು ಎಂದುಕೊಂಡು ಆ ಊರ ವೈದ್ಯನ ಮನೆಗೆ ಹೋಗುತ್ತಾರೆ. ಇವರ ಹತ್ತಿರ ಕೊಡಲು ಏನೂ ದುಡ್ಡಿಲ್ಲ ಎಂದು ತಿಳಿದುಕೊಂಡ ವೈದ್ಯ ಮನೆಯೊಳಗೇ ಕುಳಿತುಕೊಂಡು ತಾನು ಮನೆಯಲ್ಲಿಲ್ಲ ಎಂದು ಹೇಳಿಸುತ್ತಾನೆ.

ಇಂಥ ಪರಿಸ್ಥಿತಿಯಲ್ಲಿ ಹೇಗಾದರೂ ವೈದ್ಯ ತಮ್ಮ ಮಗನನ್ನು ನೋಡುವಂತಾಗಲಿ, ಆ ವೈದ್ಯನಿಗೆ ಕೊಡಲು ಒಂದು ಮುತ್ತಾದರೂ ಸಿಗಬಹುದೇನೋ ಎಂದುಕೊಂಡು ಅವತ್ತು ಮತ್ತೆ ಸಮುದ್ರಕ್ಕಿಳಿಯುತ್ತಾನೆ. ಅವನ ಅದೃಷ್ಟ, ಎಂದೂ ಕಂಡಿರದಂತಹ ಮುತ್ತೇ ಸಿಗುತ್ತದೆ ಅವತ್ತು. ಕೋಳಿ ಮೊಟ್ಟೆ ಗಾತ್ರದ ಮುತ್ತನ್ನು ನೋಡಿ ಕೀನೊ ಮತ್ತು ಯುವಾನಾಗೆ ಸ್ವರ್ಗವೇ ಸಿಕ್ಕಷ್ಟು ಖುಷಿ. ಈ ದೊಡ್ಡ ಮುತ್ತು ಸಿಕ್ಕ ಕಥೆ ಕ್ಷಣದಲ್ಲಿ ಊರ ತುಂಬೆಲ್ಲ ಹರಡಿ ಆ ಕ್ಷಣದಲ್ಲೆ ಕೀನೋಗೆ ಎಲ್ಲರಿಗೂ ಬೇಕಾದವನಾಗಿಬಿಡುತ್ತಾನೆ. ಹಿತಶತ್ರುಗಳೂ ಹುಟ್ಟಿಕೊಳ್ಳುತ್ತಾರೆ. ಚಿಕ್ಕ ಊರಿನಲ್ಲಿ ಇಂತಹ ವಿಷಯಗಳು ಹೇಗೆ ಹಲವರ ಮನಸ್ಸಿನಲ್ಲಿ ತಮ್ಮ ಸ್ವಾರ್ಥದ ವಿಚಾರಗಳನ್ನು ಪ್ರೇರಿಸುತ್ತವೆ ಎನ್ನುವದು ಬಹಳ ಸಮರ್ಥವಾಗಿ ಚಿತ್ರಿತವಾಗಿದೆ. ಆ ಊರ ಚರ್ಚಿನ ಪಾದ್ರಿಗೆ ಆಗಬೇಕಾದ ಚರ್ಚಿನ ರಿಪೇರಿಗಳ ನೆನಪಾಗುತ್ತದೆ. ಮನೆಯಲ್ಲಿದ್ದೂ ಹೊರಹೋಗಿದ್ದೇನೆ ಎಂದು ಹೇಳಿಸಿದ್ದ ವೈದ್ಯ ಇನ್ನೊಬ್ಬರ ಮುಂದೆ ಕೀನೋನ ಮಗನಿಗೆ ಕುಟುಕಿದ ಚೇಳಿನ ವಿಷಕ್ಕೆ ತಾನು ಮದ್ದು ಮಾಡುತ್ತಿರುವದಾಗಿ ಕೊಚ್ಚಿಕೊಳ್ಳುತ್ತಾನೆ. ಊರ ಬಟ್ಟೆ ಅಂಗಡಿ ಮಾಲೀಕರಿಗೆ ಕೀನೊ ಬಟ್ಟೆ ಕೊಳ್ಳುತ್ತಾನೆ ಎನ್ನುವ ಖುಷಿ. ಚರ್ಚಿನ ಬಾಗಿಲ ಬಳಿ ಕೂಡುವ ಭಿಕ್ಷುಕರಿಗಂತೂ ಒಮ್ಮಿಂದೊಮ್ಮೆಲೆ ಸಾಹುಕಾರನಾದ ಕೀನೊ ಒಳ್ಳೆ ಭಿಕ್ಷೆ ಹಾಕುತ್ತಾನೆ ಎನ್ನುವ ಭಾವನೆಯೇ ಖುಷಿಕೊಡುತ್ತದೆ. ಒಟ್ಟಿನಲ್ಲಿ ಕೀನೊ ಮತ್ತು ಅವನ ಮುತ್ತು ಆ ಮಲಗಿದಂತಹ ಊರಿನಲ್ಲಿ ಒಂದು ಸಂಚಲನವನ್ನೇ ಮಾಡುತ್ತದೆ.

" ಸಂಕ್ರಾಂತಿ " ಶುಭಾಶಯಗಳು ; " ಹ್ಯಾಪಿ ಪೊಂಗಲ್ ", " ತಿಲ್ ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ." !

" ಸಂಕ್ರಾಂತಿ " ಶುಭಾಶಯಗಳು ; " ಹ್ಯಾಪಿ ಪೊಂಗಲ್ ", " ತಿಲ್ ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ." !

ಸರ್ವಜಿತ್ ಸಂವತ್ಸರದ, ಪೌಷಮಾಸ, (ಜನವರಿ) ೧೫, ೨೦೦೮ ರಂದು.

೧೪, ರಂದು, ಭೋಗಿ ಹಬ್ಬ :

೧೪ ನೆಯ ತಾರೀಖು, ಭೋಗಿ ಹಬ್ಬ. ಆದಿನ, ಕೆಂಪು-ಕುಂಬಳಕಾಯಿ, ಹತ್ತಿ, ಸಜ್ಜೆ ಧಾನ್ಯವನ್ನು ಪುರೋಹಿತರಿಗೆ ಕೊಟ್ಟು ನಮಸ್ಕಾರಮಾಡಿ, ಅವರ ಆಶೀರ್ವಾದವನ್ನು ಪಡೆಯತಕ್ಕದ್ದು.