ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈ ಸಂಜೆ ಹಾಯಾಗಿದೆ

ನೀನಿಲ್ಲದೆ,
ಈ ಸಂಜೆ ಹಾಯಾಗಿದೆ
-----

ಈ ಮೌನ ಸಿಹಿಯಾಗಿದೆ ..ಹೋ.. ಈ ಮೌನ ಸಿಹಿಯಾಗಿದೆ.

ಮತ್ತೊಂದು ಪ್ಯಾರೋಡಿ ಅಂದ್ಕೋಬೇಡಿ. ಇದು, ನಾನು ಏಪ್ರಿಲ್ ೧ ಸಂಜೆ ಮನೆಗೆ ಬಂದಾಗ ನನ್ನ ಗಂಡ ಗುನುಗುತ್ತಿದ್ದ ಹಾಡು :-)

ಯಾಕೆ- usual ವಿರಸ
ಯಾರಿಂದ - ನನ್ನಿಂದ, ಆದರೆ ನಾನು ಸಂಪದ ಮತ್ತು hpn ಅವರನ್ನು ಹೆಚ್ಚಾಗಿ ಹೊಣೆಯಾಗಿಸುತ್ತಿದ್ದೇನೆ.

ಗ್ನೂ/ಲಿನಕ್ಸ್ ಹಬ್ಬ - ಟೆಕ್ನಿಕಲ್ volunteerಗಳ ಮುಖಾಮುಖಿ

ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ ಬಸವನಗುಡಿಯಲ್ಲಿ ಲಿನಕ್ಸ್ ಹಬ್ಬದ
technical volunteerಗಳ ಮುಖಾಮುಖಿ ಇದೆ. ಟೆಕ್ನಿಕಲ್
ವಿಷಯಗಳಲ್ಲಿ ಸಹಾಯ ಮಾಡಲು ಆಸಕ್ತಿ ಇದ್ದವರು ನಮ್ಮನ್ನಿಲ್ಲಿ ಬೇಟಿ ಮಾಡಬಹುದು. ಒಂದುಸಂದೇಶವನ್ನ ಈ-ಮೈಲ್ ಮೂಲಕ ಕಳಿಸಿದರೆ ಚೆಂದ.

ಜಾಗ : ಬಸವನಗುಡಿ ಬ್ಯೂಗಲ್ ರಾಕ್ ಉದ್ಯಾನ, ಡಿ.ವಿ.ಜಿ ಪ್ರತಿಮೆ ಬಳಿ
ಸಮಯ: ಮಧ್ಯಾಹ್ನ ೩ ಗಂಟೆ

"ಬೆಂಗಳೂರಿನ ಮಿಡ್-ಡೇ ಪತ್ರಿಕೇಲಿ ಗ್ನು/ಲಿನಕ್ಸ್ ಹಬ್ಬ ಕುರಿತು ಬ್ಲರ್ಬ್"

ಬೆಂಗಳೂರಿನ ಮಿಡ್-ಡೇ ಪತ್ರಿಕೆಯಲ್ಲಿ
ನಿನ್ನೆ ಗ್ನು ಲಿನಕ್ಸ್ ಹಬ್ಬದ ಕುರಿತು ಬರೆದಿದ್ದಾರೆ. 'ಟೆಕ್-ಅಡ್ಡಾ'  ಅನ್ನೋ ಕಾಲಂ
ನಲ್ಲಿ ಬಂದಿದೆ (ಪುಟ ೯, ಬಲಬದಿಯ ಕಾಲಂ)

ನೋಡಿ.
 

ದೇವರಿಂದ ಪಡೆಯುವುದೇಕೇ? ಹೇಗೆ...?

ಈ ಪ್ರಶ್ನೆಗೆ ತಟ್ಟನೆ ಉತ್ತರ ಹೇಳುವುದು ಕಷ್ಟ. ಆದರೂ ದೇವರಿಂದ ಪಡೆಯ ಬೇಕೆಂದೇ ಪೂಜೆ ಪುನಸ್ಕಾರಗಳನ್ನು ಮಾಡುವವರೂ ತತ್ ಕ್ಷಣ ಏನೊಂದನ್ನೂ ಸ್ಪಷ್ಟವಾಗಿ ಹೇಳಲಾರರು. ನಮ್ಮ ನಮ್ಮ ನಂಬಿಕೆ ಎಂದಾರಷ್ಟೇ.

ಗುಂಗು

ಗುಂಗು

ನಾ ನಿನ್ನನ್ನೇ
ಓಲೈಸುತ್ತೇನೆ ಸಖಿ
ನಿನ್ನೊಲವಿನ ಹಂಗಿನಿಂದಲ್ಲ
ನನ್ನಲ್ಲಿ ನೀ ಮೂಡಿಸಿದ
ಭಾವಗಳ ಗುಂಗಿನಿಂದ

ನನ್ನ ಐಟಿ ಸಹಬಾಂಧವರಿಗೊಂದು ಪತ್ರ...

ಸ್ನೇಹಿತರೆ,

ಕೆಲವು ನಿರ್ವಹಿಸಲೇಬೇಕಿದ್ದ ಕೌಟುಂಬಿಕ ಜವಾಬ್ದಾರಿ ಮತ್ತು ಅನಾರೋಗ್ಯಗಳಿಂದಾಗಿ ಮೂರು ವಾರದಿಂದ ಅಂಕಣ ಬರೆಯಲಿಲ್ಲ. ಆದರೆ ಇದೇ ಸಮಯದಲ್ಲಿ ಮನಸು ಮಾತ್ರ ತೀವ್ರವಾದ ಕ್ರಿಯಾಶೀಲತೆಗೆ ತುಡಿಯುತ್ತಿತ್ತು. ಹಿಂದೆಂದೂ ಕಾಣದ ರೀತಿಯಲ್ಲಿ ಭ್ರಷ್ಟ ಆಮಿಷಗಳನ್ನು ಒಡ್ಡಲಿರುವ ಬರಲಿರುವ ಕರ್ನಾಟಕದ ಚುನಾವಣೆ ಮತ್ತು ಈ ಬಾರಿ ಬಹುಸಂಖ್ಯೆಯಲ್ಲಿ ಆಯ್ಕೆಯಾಗಲಿರುವ ಜನಪ್ರತಿನಿಧಿಗಳ ಅರ್ಹತೆ ಮತ್ತು ಯೋಗ್ಯತೆಯ ಬಗ್ಗೆ ಆಲೋಚಿಸುತ್ತಿದ್ದೆ; ಚರ್ಚಿಸುತ್ತಿದ್ದೆ. ನಮ್ಮ ಕಾಲದ ಸವಾಲುಗಳ ಮತ್ತು ಸಮಸ್ಯೆಗಳ ಅರಿವೆಯೇ ಇಲ್ಲದ, ಸಾರ್ವಜನಿಕ ಜೀವನಕ್ಕೆ ಬೇಕಾದ ಕನಿಷ್ಠ ಅರ್ಹತೆಗಳೂ ಇಲ್ಲದ, ಕನಿಷ್ಠ ಶಿಕ್ಷಣವೂ ಇಲ್ಲದ, ಕೇವಲ ದುಡ್ಡು-ಜಾತಿ-ಮತವೆ ಗರಿಷ್ಠ ಯೋಗ್ಯತೆಯಾಗಿ ಹೊಂದಿರುವ ಜನರು ಈ ಬಾರಿ ಬಹುಸಂಖ್ಯೆಯಲ್ಲಿ ನಮ್ಮ ಪ್ರತಿನಿಧಿಗಳಾಗಲಿದ್ದಾರೆ. ಬೆಂಗಳೂರಿನಲ್ಲಂತೂ ಚುನಾವಣಾ ವೆಚ್ಚದ ಮಿತಿಯಾದ ಹದಿನೈದು ಲಕ್ಷದ ಮಿತಿಯ ನೂರಕ್ಕೂ ಹೆಚ್ಚಿನ ಪಟ್ಟು ಹಣವನ್ನು ಗಣಿಗಾರಿಕೆಯ ಮತ್ತು ರಿಯಲ್ ಎಸ್ಟೇಟಿನ ಕಪ್ಪುಹಣ ಹೊಂದಿರುವವರು ಹರಿಸಲಿದ್ದಾರೆ. ಇದು ಸೃಷ್ಟಿಸಲಿರುವ ಭವಿಷ್ಯ ಹೀನಾಯವಾದದ್ದಾಗಿರುತ್ತದೆ. ನ್ಯಾಯ-ನೀತಿ-ಮೌಲ್ಯ-ಅರ್ಹತೆಗಳ ಮೇಲೆ ನಡೆಯದ ಈ ಚುನಾವಣೆ ನಮಗೆ ಮಾತ್ರವಲ್ಲ ನಮ್ಮ ಮಕ್ಕಳಿಗೂ ನಿಕೃಷ್ಟರನ್ನು ನಾಯಕರನ್ನಾಗಿ ದಯಪಾಲಿಸಲಿದೆ.

ಇದಕ್ಕೆ ನಮ್ಮ ಉತ್ತರವೇನು?