ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಮಸ್ಕಾರ

ನಾನು ಸೌಮ್ಯ..ಸೀದಾ ಸಾದ ಹುಡುಗಿ..ಕನ್ನಡ ನನ್ಗೆ ತುಂಬ ಇಷ್ಟ..ಕನ್ನಡ ಪುಸ್ತಕಗಳನ್ನ ಓದ್ತೀನಿ...ನನ್ನ ಸಹೋದ್ಯೋಗಿಗಳಿಗೆ ಕನ್ನಡ ಕಲಿಸ್ತೀನಿ..

ಕೊಡುವ ಕಾಣಿಕೆ

ರವಿಯ ಕಿರಣ ಸೋಲುತಿದೆ
ಪೂರ್ಣ ಚಂದ್ರ ಕರಗುತಿದೆ
ಸ್ಥಬ್ಧ ನಿತ್ಯ ಹಸಿರು ವನ
ಸುಪ್ತ ಸೋನೆ ಮಳೆಯ ಜನನ

ಹರಿಯುವ ನದಿ ಮಾಯವಾಗಿ
ಬೀಸುವ ತಂಗಾಳಿ ಬಿಸಿಯಾಗಿ
ಕಲ್ಲಾಗಿ ಕೊರೆವ ಕುಡಿವ ಜಲ
ದಿಗ್ಗನೆ ಬಾಯ್ತೆರೆದು ಕುಸಿದ ನೆಲ

ಆದಿ ಅಂತ್ಯ ಯಾವುದಿಲ್ಲಿ
ಸಕಲ ಶೂನ್ಯವೆಲ್ಲ ಇಲ್ಲಿ
ನಶ್ವರವಾಗುತಿರಲು ಬದುಕು
ಬೆಳಗಳಿದೆಯೇ ಬಾಳ ಬೆಳಕು

ಹೊಸ ಅರಿವು

ದಿನಕೆ ನೂರು ನರರ ಮರಣ
ಕ್ಷಣಕೆ ನೂರು ಕುಡಿಯ ಜನನ
ಜನನ ಮರಣ ನಿತ್ಯದೂರಣ
ಬೇಕೆ ಇದಕೆ ಕಾಲಹರಣ

ಯಾರ ಚಿಂತೆ ಯಾವ ಕಂತೆ
ಚಿಂತೆ ಕಂತೆ ದಿನದ ಸಂತೆ
ದೂಡು ದೂರ ಪರರ ತರವ
ಸರಸವಾಡು ಸರಿಗಮಪದವ

ಇಹದ ಪರಿವು ಇರದು ಆಗ
ಹೊರ ಜಗವು ಕಾಣದು ಆಗ
ಕಾವ್ಯವನ್ನು ಸವಿಯುವಾಗ
ಹೊಸ ಅರಿವು ಮೊಡುವುದಾಗ

( ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ. )

ಬೆಂಗಳೂರಿನ ಕನ್ನಡಿಗರಿಗಾಗಿ- ರಘೋತ್ತಮ್ ಕೊಪ್ಪರ

ಬೆಂಗಳೂರಿನ ಕನ್ನಡಿಗರಿಗಾಗಿ- ರಘೋತ್ತಮ್ ಕೊಪ್ಪರ
ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ. ಇದರ ಬಗ್ಗೆ ಪತ್ರಿಕೆಯಲ್ಲಿ ಸುದ್ದಿಗಳು ಬರುತ್ತಲೇ ಇವೆ. ಅದಿರಲಿ ಇದೇ ವಿಷಯ ಬೆಂಗಳೂರಿನಲ್ಲಿ ಅತಿರೇಕವಾಗಿ ಬೆಳೆದಿದೆ. ಇದರ ಬಗ್ಗೆ ನನ್ನ ಸ್ನೇಹಿತನೊಬ್ಬ ಮೇಲ್ ಕಳಿಸಿದ, ಅದನ್ನು ಹಾಗೆ ಕನ್ನಡೀಕರಿಸಿದ್ದೇನೆ. ಸ್ವಲ್ಪ ಓದಿ.......

ಪದದ ಮೂಲ

ಇತ್ತೀಚೆಗೆ ಟಿ.ಪಿ.ಕೈಲಾಸಮ್ ನಾಟಕದ ಕರಪತ್ರ ಓದಿದೆ.ಅದರಲ್ಲಿ,'ಹೋಶಿಯಾರ್' ಪದವನ್ನು, ನಾವು ಸಾಮಾನ್ಯವಾಗಿ 'ಹುಶಾರ್' ಶಬ್ದ ಬಳಸುವ ಜಾಗದಲ್ಲಿ ನೋಡಿದೆ.ಹುಶಾರ್ ಪದ ಹೋಶಿಯಾರ್ ಪದದಿಂದ ಬಂದಿದೆಯೆ..ಆ ಪದದ ಮಾರ್ಪ
ಟ್ಟ ರೂಪವೆ?

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಎಂಟನೆಯ ಕಂತು

ಆಗಾಗ್ಗೆ ತತ್ತ್ವಾನ್ವೇಷಣೆಗಾಗಿ ಭಾರತಕ್ಕೆ ಹೋಗಿಬಂದ ಜನಗಳ ಭೇಟಿಯಾಗಿತ್ತು. ಆದರೆ ನಾನು ನನಗಾಗಿ ಬೇಡಿದ್ದು ಅದನ್ನಲ್ಲ. ನನಗೆ ಬೇಕಾದ ಏನನ್ನ್ನಾದರೂ ನಾನೇ ಸುತ್ತಾಟ ಮಾಡಿ ಪಡೆಯಬಹುದೆಂದು ಭಾವಿಸಿದ್ದೆ. ಈಗ ಅದರಲ್ಲಿ ಸೋತಿದ್ದರಿಂದ ಇನ್ನೊಂದರಲ್ಲಿ ನನಗೆ ಆಸಕ್ತಿ ಮೂಡಿತು. ಕೆಲವು ಪ್ರಾರ್ಥನಾ ಸಭೆಗಳಿಗೆ ಹೋಗತೊಡಗಿದೆ. ಅಲ್ಲಿಯ ಪರಿಸರ ನನಗೆ ತುಂಬಾ ಹಿಡಿಸಿತು.

ಅತ್ತೆ-ಸೊಸೆ

ಅತ್ತೆ : (ಮೊಮ್ಮಗುವನ್ನು ಎತ್ತಿ ಮುದ್ದಿಸಿ) ಮುದ್ದು ಮುದ್ದಾಗಿದೆ,ನನ್ನ ಕಂದ.ನಿನ್ನ ತಾತನ ಹಾಗೆ ಇದೆ.ತಾತನ ಹೆಸ್ರಿಗೆ ರಾಜ್ ಸೇರಿಸಿ ಬಸವರಾಜ್ ಎಂದು ಹೆಸರಿಡೋಣ.ಹೇಗೆ?


ಮಗ : ಆಯ್ತಮ್ಮ.ನಿನ್ನಿಷ್ಟ.


ಸೊಸೆ :ಅದೇನ್ರೀ ಹೆಸರು. ಹಟ್ಟೀಲಿರುವದಕ್ಕೆ ಇಡುವುದಾ,ನಮ್ಮಗೂಗಾ? ರಾಹುಲ್ ಎಂದಿಡುವ ಅಂದಿಲ್ವಾ ನಾನು?


ಅತ್ತೆ :ಸಂತೋಷಮ್ಮ,ನೀನಿಟ್ಟ ಹೆಸರೇ ಇರಲಿ.ಆದರೆ ರಾ(raw) ಅಂದರೆ ಹಸಿ,ರಾಹುಲ್ ಅಂದರೆ ಹಸಿಹುಲ್ಲು,ಹಟ್ಟೀಲಿರುವುದಕ್ಕೆ ತಿನ್ನಲು ಇಡುವುದಲ್ವೇನಮ್ಮ?