ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಾಗೆ ಸುಮ್ಮನೆ

ನಾನು ಸ್ಕೂಲಿನಲ್ಲಿ ಹಾಗು ಕಾಲೇಜಿನಲ್ಲಿದ್ದಾಗ ಕವಿತೆ /ಕತೆ ಅಥವ ಅಂಥದ್ದೇನೊ ಬರೆಯುತ್ತಿದ್ದೆ. ಅದನ್ನು ಸ್ನೇಹಿತರಿಗೆ ತೋರಿಸಿ ಹೆಮ್ಮೆ ಪಟ್ಟುಕೊಳ್ಳುತಿದ್ದೆ.

ಮಹಾಭಾರತದ ಕತೆ

ರಾಮಾಯಣ ಮಹಾಭಾರತದ ಕತೆ ನಮಗೆಲ್ಲ ಗೊತ್ತಿದ್ದದ್ದೇ - ಅಂತ ತಿಳುಕೊಂಡಿರ್ತೀವಿ . ಆದ್ರೆ ಅಲ್ಲಿನ ಘಟನೆಗಳ ಸೀಕ್ವೆನ್ಸು - ಅನುಕ್ರಮ - ಯಾವ್ದಾದ ಮೇಲೆ ಯಾವ್ದು - ( ಇಂಗ್ಲೀಷು , ಸಂಸ್ಕ್ರುತ - ಕನ್ನಡ ಎಲ್ಲದಕ್ಕೂ ನ್ಯಾಯ ಒದಗಿಸಿದ ಹಾಗಾಯ್ತು :) ) ನಮಗೆ ನೆನಪಿರೋದಿಲ್ಲ . ಇನ್ನೊಮ್ಮೆ ಓದಲುಕೂತಾಗಲೇ ಗೊತ್ತಾಗೋದು .

ಹರಟೆಯೆಂಬ ಪಾಠಶಾಲೆ

ಮೊನ್ನೆ ನಾವು ಕೆಲವರು ಹರಟೆ ಹೊಡೆದದ್ದರ ಬಗ್ಗೆ ಹೇಳ್ತಾ ಇದ್ದೀನಿ.

ಗುಂಪಾಗಿ ಕೂತಿದ್ದ ನಮ್ಮ ನಡುವೆ ಒಬ್ಬರು ಹಿರಿಯರು ಇದ್ದರು. ತುಂಬಾ ಗತ್ತಿನಿಂದ ತಮ್ಮ ಹಳ್ಳಿಯಲ್ಲಿ ಚಿಕ್ಕವರಿದ್ದಾಗ ಕೇಳಿದ ಒಂದು ಕತೆಯನ್ನು ಹೇಳಿದರು. ಆ ಕತೆ ಕೇಳಿದಾಗಿನಿಂದ ತಾವು ಪವಾಡಗಳನ್ನು ಬಲವಾಗಿ ನಂಬುತ್ತೇನೆ ಎಂದು ವಿವರಿಸಿದರು. ಆಗ ಹಿರಿಯರ ಮೇಲೆ ಅಪಾರ ಗೌರವವಿದ್ದ ಇನ್ನೊಬ್ಬರು ಶುರು ಹಚ್ಚಿಕೊಂಡರು.

ಮನಸ್ಸಮಾಧಾನ

ಗೀಚುವ ಗೀಳು ಅವಿರತ
ಸುಖಾನುಭಾವ ನೀಡುತ
ವಕ್ರ ವ್ಯಾಕರಣಗಳ ತಿದ್ದಿ
ಮಾಡಿ ಭಾವಗಳ ಶುದ್ಧಿ

ಪುಸ್ತಕ ಪ್ರೇಮ ಬೆಳೆಸುತಾ
ಸಾಧಕರ ಸಾಂಗತ್ಯ ಹರಸಿ
ಸಾಹಿತ್ಯದ ಹೂರಣ ಉಣಿಸಿದ
ಗೆಳೆಯರೆಲ್ಲರನು ಸ್ಮರಿಸುತಾ

ವ್ಯಕ್ತಿ, ವ್ಯಕ್ತಿತ್ವಗಳ ಸೃಷ್ಟಿ
ಅನುಭವಗಳ ಅಭಿವ್ಯಕ್ತಿ
ನವನವೀನ ಅನುದಿನ
ಪ್ರತಿಕ್ಷಣ ಮನಸ್ಸಮಾಧಾನ

ಪಾಕ-ಫಜೀತಿ

ಮಯ್ಯ ಸರ್ ನ "ನಳಪಾಕ" ಪುಸ್ತಕ ಕೈಗೆ ಬಂದದ್ದೇ ತಡ, ತುದಿಯಿಂದ ಕಡೆಯ ವರೆಗೆ ಓದಿ ಮುಗಿಸಿದೆ. ಮಾತ್ರವಲ್ಲ, ಕ್ರಿಸ್ಮಸ್ ರಜೆಗೆ ಮನೆ ಸೇರಿದ ಕೂಡಲೇ ಒಂದೊಂದಾಗಿ ಎಲ್ಲಾ ಅಡುಗೆ ಮಾಡಿ ಎಲ್ಲರಿಗೂ ತಿನ್ನಿಸಿ 'ಭೇಷ್' ಎನಿಸಿಕೊಳ್ಳಬೇಕೆಂದು ಲೆಕ್ಕ ಹಾಕಿದೆ.
ಅಂತೂ ರಜೆ ಬಂದಾಗ ಮನೆಯಲ್ಲಿ ವಿಧ ವಿಧ ರುಚಿಗಳು ತಯಾರಾಗಲು ಶುರುವಾಗುವುದರ ಜೊತೆಗೆ ಕಾಂಪ್ಲಿಮೆಂಟ್ಸೂ ಬರತೊಡಗಿತು(ನನಗಲ್ಲ, ಮಯ್ಯಸರ್ ಗೆ! ನನ್ನ ಅಡುಗೆಗಳೂ ರುಚಿ ಪಡೆದುಕೊಳ್ಳಲು ಕಾರಣರಾದುದಕ್ಕೆ!) "ನಿನ್ನ ವಯಸ್ಸಿಗೆ ಎಲ್ಲಾ ಅಡುಗೆ ಕಲಿತಿದ್ದೆ" ಎಂದು ಆಗಾಗ ಬೆನ್ನು ತಟ್ಟಿಕೊಳ್ಳುತ್ತಿದ್ದ ಅಮ್ಮನೆದುರು ಮೆರೆದದ್ದೇ ಮೆರೆದದ್ದು! ಸಣ್ಣ ಪುಟ್ಟ ಅಡುಗೆಗಳು ನನಗೆ ಸಂಪೂರ್ಣವಾಗಿ ಕರಗತವಾಗಿದೆ, ಹಾಗಾಗಿ ಇನ್ನು ದೊಡ್ಡ ಅಡುಗೆಗಳಿಗೆ ಕೈ ಹಾಕೋಣವೆಂದು ಯೋಚಿಸಿದೆ. ಸಾರು, ಪಲ್ಯಗಳು ಬಹು ಸುಲಭ. ನನಗೆ ಸವಾಲಾಗಲಾರವು, ಇನ್ನು.... ಎಣ್ಣೆ ತಿಂಡಿಗಳು... ಅಕಾಸ್ಮಾತ್ ಮಾಡಿದ ಹಿಟ್ಟು ಎಡವಟ್ಟಾಗಿ ಎಣ್ಣೆಯೆಲ್ಲಾ ಸುರ್ರ್...ನೆ ಹೀರಿ, ತೆಂಗಿನ ಗಾತ್ರ ಪಡೆದರೆ ತಿನ್ನುವವರಾರು? ಪುಟ ತಿರುವಿದಾಗ "ಕಡ್ಲೆ ಬೇಳೆ ಹೋಳಿಗೆ" ಕಣ್ಣಿಗೆ ಬಿತ್ತು. 'ಗಟ್ಟಿಗಳೆನಿಸಿದರೆ ಇದರಲ್ಲಿ ಎನಿಸಬೇಕು' ಎಂದುಕೊಂಡಾಗ, ಅಮ್ಮ "ಸದ್ಯಕ್ಕೆ ನಿತ್ಯದಡುಗೆಗಳನ್ನು ಕಲಿ" ಎಂದಳು. 'ಮುಖಭಂಗ'ವಾಯಿತು. ಅಮ್ಮನಿಗೇನು ಗೊತ್ತು ನನ್ನ ಪಾಕ ಪ್ರಾವೀಣ್ಯ? ಇರಲಿ, ತೊರಿಸುತ್ತೇನೆಂದು ಪಾಕಶಾಲೆ ಸೇರಿದೆ.

|| ವಂದೆ ಮಾತರಂ || - ಭಾಗ ೧

ಅಂದು ಸ್ವಾತಂತ್ಯ್ರದ ಮಂತ್ರಘೋಶ ಮಾಡಿ ಬ್ರಿಟೀಷ ಶಾಸನವನ್ನು ರೊಚ್ಚಿಗೆಬ್ಬಿಸಿದ ರಣ ಮಂತ್ರ ವಂದೆ ಮಾತರಂ. ಅದೊಂದು ದಿವ್ಯ ಆವಿಶ್ಕಾರ ಭಾರತದ ಅಂತ:ಕರಣವನ್ನು ಸ್ಪಂದನಗೊಳಿಸುತ್ತಿದ್ದ ತರಂಗ ರಂಗ ಅದು.ಹತಾಶ ಹೃದಯದಿಂದ ನೆಲಕಚ್ಚಿ ಮಲಗಿದ್ದ ದೇಶವನ್ನು ಮತ್ತೊಮ್ಮೆ ಸ್ವಾಭಿಮಾನದಿಂದ ಸಿಂಹಗರ್ಜನೆ ಮಾಡುತ್ತಾ ಮೆಲೆದ್ದು ನಿಲ್ಲುವಂತೆ ಮಾಡಿದ ರಣಮಂತ್ರ ಅದು.ಸಾಮಾಜಿಕ,ಆರ್ಥಿಕ,ರಾಜಕೀಯ ರಂಗದಲ್ಲಿ ಪ್ರಚಂಡ ಪರಿವರರ್ತನೆ ಪ್ರಚೋದಿಸಿ ಅದು ಭಾರತವನ್ನು ಪುನ: ಆತ್ಮಪ್ರಕಟನೆಗೆ ಸಿದ್ದಪಡಿಸಿತ್ತು.ನೂರಾರು ಆವೇಶ ಪೂರ್ಣ ದೇಶ ಭಕ್ತಿಯ ಪ್ರವಚನಗಳಿಗಿಂತಲು ಹೆಚ್ಚಾಗಿ ಮಾತ್ರುಭೂಮಿಯ ಭಕ್ತಿ ಭಾವವನ್ನು ಹೃದಯಗಳಲ್ಲಿ ನೆಲೆಗೊಳಿಸುವ ಕಾರ್ಯ್ಯವನ್ನು ಈ ಒಂದು ಗೀತೆ ಮಾಡಿತು.

" ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,

ಕನ್ನಡ ಪುಸ್ತಕಪ್ರಾಧಿಕಾರದವರು ತಮ್ಮ ಮಳಿಗೆಯೊಂದನ್ನು 'ಮುಂಬೈ ನ ಮೈಸೂರ್ ಅಸೋಸಿಯೇಷನ್', ನ ಪ್ರವೇಶದ್ವಾರದ ಬಳಿಯಲ್ಲಿಯೇ ಸ್ಥಾಪಿಸಿದ್ದಾರೆ. ಇಲ್ಲಿ ಉಸ್ತಕ ಪ್ರಾಧಿಕಾರದ ಪುಸ್ತಕಗಳಲ್ಲಾ ಉಪಲಭ್ದವಿದೆ. ಆದರೆ, ಕಲಾಂ ಮೇಷ್ಟ್ರು ಪುಸ್ತಕದ ಬೆಲೆಯನ್ನು ಅತಿ ಕಡಿಮೆ ( ಕೇವಲ ೬೦. ರೂಪಾಯಿ) ಇಟ್ಟಿದ್ದರಿಂದ ಪ್ರಕಟವಾದ ೧,೦೦೦ ಪ್ರತಿಗಳೆಲ್ಲ ಬಿಸಿರೊಟ್ಟಿಯಂತೆ ಖರ್ಚಾಗಿಹೋಗಿವೆ. ಬಹುಶಃ ಎರಡನೆಯ ಆವೃತ್ತಿಯಲ್ಲಿ ದೊರೆಯಬಹುದು. ಪ್ರಯತ್ನಿಸಿ. " ಮನಸ್ಸುಗಳ ಏಕತೆ " ಕಲಾಂ ಮೇಷ್ಟ್ರು-ಲೇಖಕರು :ಪ್ರೊ. ಎಚ್. ಆರ್. ರಾಮಕೃಷ್ಣರಾವ್, ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು-೫೬೦ ೦೦೨. ಪ್ರಥಮ ಮುದ್ರಣ : ೨೦೦೬. ಪುಟ-೧೨೯. ಯೋಚಿಸುವ, ಚಿಂತಿಸುವ, ಕನಸು ಬಿತ್ತುವ ರಾಷ್ಟ್ರಪತಿ ಸಿಕ್ಕಿದ್ದು ಈ ನಾಡಿನ ಭಾಗ್ಯ...

ಕ್ಯಾಬ್ರಾಮಟದ ಹಣ್ಣಿನಂಗಡಿ

ಈ ಹಣ್ಣು/ತರಕಾರಿ ಅಂಗಡಿ ಇರುವುದು ಸಿಡ್ನಿಯ ಕ್ಯಾಬ್ರಾಮಟ ಎಂಬಲ್ಲಿ.

ಅಂಗಡಿಯ ಒಳಗಿನ ಬಾಳೆಹಣ್ಣು ಅಲಂಕಾರ ಕಣ್ಸೆಳೆದರೆ
ಅಂಗಡಿಯ ಹೊರಗೆ ಮೇಲಿಂದ ಹೇಗೆ ಕಂಡೀತೆಂದು ಕುತೂಹಲವಾಯಿತು...