ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜೀವಾಳ

ಸೊಲ್ಲೆತ್ತದೆ ಸರಿಪಡಿಸಿ
ಬದಿಗಿಟ್ಟು ಬಲಪಡಿಸಿ
ಬರಲಿ ನೂರೈವತ್ತು
ವಿರಸಗಳ ಕುತ್ತು

ವಿಘ್ನಗಳ ಛೇಡಿಸುವೆ
ಭಘ್ನಗಳ ಭೇದಿಸುವೆ
ಜನರ ಬಾಯಿಗೆ ಬೀಗ
ಜಡಿದು ಬರುವೆನು ಬೇಗ

ಒಲವೇ ಬಂಡವಾಳ
ನೀ ಅದರ ಜೀವಾಳ
ಬಾ ಬಳಿಗೆ ತಡವೇಕೆ
ಕೂಡಿ ಬಾಳುವುದಕೆ

ದೊರೆತ ದಾರಿ

ಒಂದು ಹಾದಿಯ ಬಯಸಿ
ದೊರೆತ ದಾರಿಯ ಪ್ರೀತಿಸಿ
ನೋವು ನಲಿವುಗಳನುಂಡು
ಹತ್ತು ಮೊಗಗಳ ಕಂಡು

ಸನ್ಮಾರ್ಗದಲಿ ವಿಶ್ವಾಸವಿರಿಸಿ
ಇರಲು ಸಹನೆ, ಸಂಯಮ
ರೋಷ, ದ್ವೇಷ, ಲೋಭ ತ್ಯಜಿಸಿ
ನೀನಿಟ್ಟು ದಿಟ್ಟ ಪರಿಶ್ರಮ

ಸರಳ ಜೀವನ ಮಂತ್ರ ಜಪಿಸಿ
ಗತ ಕಾಲವನೊಮ್ಮೆ ಸ್ಮರಿಸಿ
ಹಿರಿಯರ ಹಿತ ನುಡಿಗಳನು
ಕೇಳುವ ಮನವಿರಿಸಿ ನೀನು

ಇರಲು ನಿತ್ಯ ಹರುಷವು
ಕ್ಷಣವೇ ಒಂದು ವರುಷವು

" ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದ ! ಅಲ್ವ್ರಾ ?

ಸದ್ಯಕ್ಕೆ ಯೋಚಿಸಿದರೆ, ರಾಜ್ಯದ ರಾಜಕೀಯದಲ್ಲಿ ಮಿರುಗುವ, ಹಾಗೂ ತಮ್ಮದೇ ಆದ ಛಾಪನ್ನು ಮೂಡಿಸಬಲ್ಲ ಕೆಲವೇ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಮುಂಬೈ ಕನ್ನಡಿಗರು ಹೆಸರಿಸಬಹುದಾದವರೆಂದರೆ, ನಮ್ಮ ಪ್ರೀತಿಯ ಗವರ್ನರ್ ಶ್ರೀ. ಎಸ್. ಎಮ್. ಕೃಷ್ಣರವರು. ನಯ, ವಿನಯ ಹಾಗೂ ತಮ್ಮ ಆಚಾರ ವಿಚಾರಗಳಿಂದ ನಮ್ಮೆಲ್ಲರಮೇಲೆ ಪ್ರಭಾವಬೀರಿರುವ ಅವರು, ಕೇಂದ್ರಕ್ಕೆ ಹೋಗಿ ಒಬ್ಬ ಮಂತ್ರಿಯಾಗಬಹುದು. ಇಲ್ಲವೇ ಒಬ್ಬ ಗವರ್ನರ್ ಆಗುವುದು ಖಂಡಿತ. ಅವರ ಮುಖ್ಯಮಂತ್ರಿ ಪದವಿಯ ಕಾಲದಲ್ಲಿ, ಅನೇಕ ಜನಹಿತ ಕಾರ್ಯಕ್ರಮಗಳನ್ನು ತಂದು ಕರ್ನಾಟಕವನ್ನು ಒಂದು ತಂತ್ರಜ್ಞಾನದ ತಾಣವನಾಗಿಮಾಡಿದ ಶ್ರೇಯಸ್ಸು ಅವರದು. ಬೇರೆಯವರೆಲ್ಲಾ ಏನಾದರೊಂದು ವಿವಾದದಲ್ಲಿ ಮುಳುಗಿದ್ದಾರೆ. ಓಟುಗಳಿಸಿ ತಮ್ಮ ಮಕ್ಕಳು ತಮ್ಮ ಜನರನ್ನು ಮುಂದೆತರುವ ಕಾರ್ಯದಲ್ಲಿ ನಿಸ್ಸೀಮರು.

ತಪ್ಪು-ಒಪ್ಪು

ಹಳೆಗನ್ನಡ

ತಪ್ಪುಮಿದಂ ಒಪ್ಪುಮಿದಂ
ಎಂತಿನಿತು ಪೇೞ್ವರ್ ಬಲ್ಲಿದರ್
ತಪ್ಪಿನೊಳೊಪ್ಪೊಪ್ಪಿನೊಳ್ ತಪ್ಪು ತೊಡರ್ಚು
ತಪ್ಪೊಪ್ಪುಗಳುಂ ಬೇರೆ ಮಾೞ್ಪುದು ಸಯ್ತೇ

**********
ಹೊಸಗನ್ನಡ

ಆತ್ಮ ಸಂತುಷ್ಟಿ

ಹಿಂದೆ ನೋಡದೆ ಎಂದೂ
ಸಾಗಿ ಮುಂದೆ ಮುಂದೆ
ಬೇಕಾದ್ದು ಬರಲಿ ಮತ್ತಷ್ಟು
ಬೇಡದ್ದು ಇರಲಿ ಮಗದಷ್ಟು

ಮುಟ್ಟಿದ್ದೆಲ್ಲ ಚಿನ್ನ
ತೊಟ್ಟದ್ದೆಲ್ಲ ರನ್ನ
ಸಕಲ ಸವಲತ್ತು
ಸಾಕಷ್ಟು ದೌಲತ್ತು

ಪಡೆದಾಗ ತೃಪ್ತಿ
ಇರದಾಗ ಅತೃಪ್ತಿ
ಎಲ್ಲಾ ಬಿಟ್ಟು ಕೊಟ್ಟಾಗ
ಆತ್ಮ ಸಂತುಷ್ಟಿ

"ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು"

"ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು"

"ಕ್ರಿಸ್‍ಮಸ್ ಎಂದರೆ...
...ಜೀಸಸ್......ಯೇಸು"

ಅಂದರೆ "ಬೆಳಕು...
.....ಬೆಳಕಾಗಿಸುವ ದಿವ್ಯತ್ಮ! ದೇವರು ಬೇರೆಯಲ್ಲ ,ಬೆಳಕು ಬೇರೆಯಲ್ಲ. ಅದಕ್ಕೆ ದೇವರಿಗೆ ದೀಪವೆಂದರೆ ಇಷ್ಟ, ಬೆಳಕೆಂದರೆ ಇಷ್ಟ!

ಕನ್ನಡಿಗರಿಗೆ ಒಂದು ಸವಾಲು - ಸಿರಿಭೂವಲಯವನ್ನು ಬಿಡಿಸ ಬನ್ನಿ!

  • ಸಿರಿಭೂವಲಯವು ಕನ್ನಡ ಸಾಹಿತ್ಯದ ಒಂದು ಅಪೂರ್ವ ಗ್ರಂಥ.
  • ಇದನ್ನು ಕುಮುದೇಂದು ಕವಿಯು ಕ್ರಿ.ಶ.೮೧೬ರಲ್ಲಿ ರಚಿಸಿದನು.
  • ಕಾವ್ಯ ರಚನೆಯನ್ನು ನಾವು ಅಕ್ಷರಗಳಿಂದ ಮಾಡುತ್ತೇವೆ. ಕುಮುದೇಂದುವು ಅಕ್ಷರಗಳ ಬದಲು ಕನ್ನಡ ಅಂಕಿಗಳನ್ನು (೧-೯) ಬಳಸಿದ್ದಾನೆ.
  • ಇದು ಅಂಕಾಕ್ಷರ ಕಾವ್ಯ. ಕನ್ನಡದ ೯ ಅಂಕಿಗಳನ್ನು ೬೪ ವಿಧದಲ್ಲಿ ಕ್ರಮಜೋಡಿಸಿ ಕಾವ್ಯವನ್ನು ರಚಿಸಿದ್ದಾನೆ.
  • ೬೪ ಅಂಕಗಳನ್ನು ಚಕ್ರಗಳೆಂಬ ಚೌಕಗಳಲ್ಲಿ (೨೭*೨೭=೭೨೯ ಮನೆಗಳು) ತುಂಬಿದ್ದಾನೆ. ನಮಗೆ ಇದುವರೆಗೂ ೧೨೭೦ ಚಕ್ರಗಳು ಲಭಿಸಿವೆ.
  • ಒಂದೊಂದು ಅಂಕಿಯ ಸ್ತಾನದಲ್ಲಿ ಒಂದೊಂದು ಕನ್ನಡ ಅಕ್ಷರವನ್ನು ತುಂಬಿದರೆ ಕಾವ್ಯ ಸಿಧ್ಢವಾಗುತ್ತದೆ.
  • ನಡುಗನ್ನಡ ಭಾಷೆಯ ಸಾಂಗತ್ಯ ಛಂದಸ್ಸಿನ ಪದ್ಯಗಳು ದೊರೆಯುತ್ತವೆ. ಇತರ ಛಂದಸ್ಸಿನ ಪದ್ಯಗಳೂ ಇವೆ.
  • ಕವಿಯು ಕನ್ನಡವನ್ನು `ಸರ್ವಭಾಷಾಮಯೀ ಕನ್ನಡ` ಎಂದು ಕರೆಯುತ್ತಾನೆ. ಏಕೆಂದರೆ ಕನ್ನಡ ಭಾಷೆಯ ಈ ಕಾವ್ಯದಲ್ಲಿ ೧೮ ಮಹಾಭಾಷೆಗಳು ಹಾಗೂ ೭೦೦ ಸಾಮಾನ್ಯ ಭಾಷೆಗಳು (೭೧೮) ಅಡಗಿವೆ.
  • ಈ ಚೌಕದ ಒಂದೊಂದು ಮನೆಯ ಅಕ್ಷರಗಳನ್ನು ಓದುತ್ತಾ ಹೋದರೆ, ಒಂದೊಂದು ಭಾಷೆಯಲ್ಲಿ ಕಾವ್ಯವನ್ನು ಓದಬಹುದು. ಉದಾ: ಚೌಕಗಳ ಮೊದಲ ಮನೆಯ ಅಕ್ಷರಗಳನ್ನು ಓದುತ್ತಾ ಹೋದರೆ ಪ್ರಾಕೃತ ಭಾಷೆಯ ಕಾವ್ಯ ಕಂಡು ಬರುತ್ತದೆ.
  • ಕನ್ನಡದ ಜೊತೆಗೆ ಸಂಸ್ಕೃತ, ಪ್ರಾಕೃತ, ದ್ರಾವಿಡ, ಆಂದ್ರ, ಮಹಾರಾಷ್ತ್ರ, ಮಲಯಾಳ, ಗುರ್ಜರ, ಅಂಗ, ಕಳೀಂಗ, ಕಾಶ್ಮೀರ, ಕಾಂಭೋಜ, ಹಮ್ಮೀರ, ಶೌರಸೇನಿ, ವಾಲಿ, ತೇಬತಿ, ವೆಂಗಿ, ವಂಗ, ಬ್ರಾಹ್ಮಿ, ವಿಜಾಯಾರ್ಧ, ಪದ್ಮ, ವೈಧರ್ಭ, ವೈಶಾಲಿ, ಸೌರಾಷ್ಟ್ರ, ಖರೋಷ್ಟಿ, ನಿರೋಷ್ಟ, ಅಪಭ್ರಂಶಿಕ, ಪೈಶಾಚ, ರಕ್ಥಾಕ್ಷರ, ಅರಿಷ್ಟ ಹೀಗೆ ಒಟ್ಟು ೭೧೮ ಭಾಷೆಗಳ ಕಾವ್ಯ ಇಲ್ಲಿದೆ. ಹಾಗಾಗಿ ಕನ್ನಡವನ್ನು `ಸರ್ವಭಾಷಾಮಯೀ ಕನ್ನಡ` ಎಂದು ಕವಿಯು ಹೇಳಿದ್ದಾನೆ.
  • ಇದರಲ್ಲಿ ಒಟ್ಟು ೫೬ ಅಧ್ಯಾಯಗಳಿವೆ. ಆರ್ಷೇಯ ಸಾಹಿತ್ಯದೊಡನೆ, ಭೌತರಸಾಯನಾದಿ ವಿಜ್ಞಾನಗಳು, ರಸವಾದ, ಜ್ಯೋತಿಷ, ಇತಿಹಾಸ, ಸಂಸ್ಕೃತಿ, ಧರ್ಮ, ದರ್ಶನ, ಲೋಹ, ಖಗೋಳ, ವೈದ್ಯ, ಗಣಿತ, ಅಣು-ಪರಮಾಣು, ಲಿಪಿ-ಭಾಷೆ ಇತ್ಯಾದಿ ವಿಷಯಗಳು ಅಡಕವಾಗಿವೆ.
  • ಶ್ರೀಯುತರಾದ ಎಲ್ಲಪ್ಪಶಾಸ್ತ್ರಿ, ಕರ್ಲಮಂಗಲಂ ಶ್ರೀಕಂಠಯ್ಯ, ಕೆ.ಅನಂತಸುಬ್ಬರಾಯರು ಅಂಕೆಗಳಿಗೆ ಸೂಕ್ತವಾದ ಅಕ್ಷರಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಈ ಕೆಲಸ ಪೂರ್ಣವಾಗಿಲ್ಲ.
  • ನಮ್ಮ ಕನ್ನಡಿಗರು ಇಂದು ಕಂಪ್ಯೂಟರ್ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡಿದ್ದಾರೆ. ಕನ್ನಡ ಭಾಷೆಯ ಮೇಲೆ ಅಭಿಮಾನವನ್ನು ಹೊಂದಿದ್ದಾರೆ. ತಮ್ಮ ಕಂಪ್ಯೂಟರ್ ಸಾಮರ್ಥ್ಯವನ್ನು ಬಳಸಿಕೊಂಡು ಈ ಎಲ್ಲ ಚಕ್ರಗಳನ್ನು ಬಿಡಿಸುವ ಪ್ರಯತ್ನ ಮಾಡಬೇಕಾಗಿದೆ.
  • ಈಗ ಸಿರಿಭೂವಲಯದ ಭಾಗ-೧ ಮಾರಾಟಕ್ಕಿದೆ. ಆಸಕ್ತರು ಪುಸ್ತಕಶಕ್ತಿ, ನಮ್ ೧೦೩, ೩ ನೆಯ ಮುಖ್ಯರಸ್ತೆ, ತಾತಾ ಸಿಲ್ಕ್ ಫಾರಂ, ಬಸವನಗುಡಿ, ಬೆಂಗಳೂರು-೫೬೦ ೦೦೪: ಧೂರವಾಣಿ: ೨೬೯೧೫೯೧೭ ಸಂಪರ್ಕಿಸಬಹುದು.
  • ಕನ್ನಡಿಗರು ಈ ಎಲ್ಲ ಚಕ್ರಗಳನ್ನು ಬಿಡಿಸಲು ಸಾಧ್ಯವಾಗುವುದಾದರೆ, ಜಗತ್ತಿನ ೧೦ ನೆಯ ಅದ್ಭುತವನ್ನು ಜಗತ್ತಿಗೆ ಕೊಟ್ಟ ಕೀರ್ತಿಗೆ ಪಾತ್ರರಾಗುತ್ತಾರೆ.
  • ಕನ್ನಡಿಗರೆ! ಈ ಸವಾಲನ್ನು ಸ್ವೀಕರಿಸಿ!!

ಗಾಳಿ ಮಾತು

ಗಾಳಿ ಮಾತು
ಕಿವಿಗೆ ಬಿದ್ದು
ಎಬ್ಬಿಸಿದೆ ಬಿರುಗಾಳಿ
ಬೀಸಿ ಬೆಂಕಿಯ ಬಲೆ

ಚಿತ್ತವ ಹೂತು
ಕ್ರೋಧವ ಹೊತ್ತು
ಮತಿಗೆಟ್ಟ ಗೂಳಿ
ಸುತ್ತುವ ಸುಂಟರಗಾಳಿ

ಎಲ್ಲೆಡೆ ಕಗ್ಗತ್ತಲು ಕವಿದು
ಕಳೆದು ಹೋಗುವ ಮುನ್ನ
ಕಣ್ತೆರೆದು ಒಂದು ಕ್ಷಣ
ಕಾಣೋ ಕನ್ನಡಿ ಜಾಣ