ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...

ನೀನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು,
ಮಾಗೀಲ್ ಉಲ್ ಮೇಲ್ ಮಲಗಿದ್ದಂಗೆ ಮಂಜು,
ಮಾಗಿ ಮುಗ್ತು, ಬೇಸ್ಗೆ ನುಗ್ತು,
ಇದ್ಕಿದ್ದಂಗೆ ಮಾಯ್‌ವಾಗೋಯ್ತು ಮಂಜೂ....
ನಂಗು-ನಿಂಗು ಎಂಗಾಗೋಯ್ತು ನಂಜು...

ಮಳೆಯ ನಂತರ ಮೂಡಬಿದ್ರಿಯ ಸಾವಿರ ಕಂಬದ ಬಸದಿಯ ಸುತ್ತಮುತ್ತ

ಅಕ್ಟೋಬರ್‌ನಲ್ಲಿ ಮೂಡಬಿದ್ರಿಯ ಸಾವಿರ ಕಂಬದ ಬಸದಿಯ ಹೊರಗೆ ಅಡ್ಡಾಡುತ್ತಾ ತೆಗೆದ ಚಿತ್ರಗಳಲ್ಲಿ ಒಂದೆರಡು ಇವು -

ಬಸದಿಯ ಪಕ್ಕದ ಬಾವಿಗೆ ಇಣುಕಿದಾಗ:

ಇಂಟರ್ನೆಟ್ ಗಾಗಿ ಏನೆಲ್ಲ (೨)

 

ಇಂಟರ್ನೆಟ್ ಗಾಗಿ ಏನು ಮಾಡೋದು?

 

([:http://sampada.net/blog/hpn/07/12/2007/6573|ಮೊದಲ ಕಂತು ಇಲ್ಲಿ ಬರೆದಿದ್ದೆ].)

ಬಹಳ ಕಡಿಮೆ ಖರ್ಚಿಗೆ ಸಿಕ್ಕ ಈ ರಿಲಯನ್ಸ್ ಇಂಟರ್ನೆಟ್ ಕನೆಕ್ಷನ್ ಬಹಳ ವೇಗದ್ದೆಂಬುದು ಖುಷಿ ಕೊಟ್ಟಿತ್ತು. ವೇಗದ್ದಾದರೂ ಇದು ಆಗಾಗ ಕೆಲಸ ಮಾಡದೇ ಇರುವುದು, ಕನೆಕ್ಟ್ ಆಗದೇ ಇರುವುದು ಅಥವ ತಂತಾನೆ session close ಮಾಡಿ ಬಳಸುವವರನ್ನು ಒದ್ದು ಹೊರಗೋಡಿಸುವುದು - ಇವೆಲ್ಲ ತೊಂದರೆಗಳನ್ನು ಹೊತ್ತುಕೊಂಡೇ ಬಂದದ್ದು. ತೆಗೆದುಕೊಂಡು ಸುಮಾರು ಒಂದು ವಾರ ಕಳೆದ ನಂತರ ಸಂಪೂರ್ಣವಾಗಿ ಕೈಕೊಟ್ಟಿತ್ತು! ಈ ಸಮಯ ಅದು ಎಲ್ಲೆಡೆ ಹೋಗಿತ್ತಂತೆ.
ರಿಲಯನ್ಸ್ ಕಸ್ಟಮರ್ ಕೇರ್ ನಂಬರುಗಳು ಯಾವ ನೆಟ್ವರ್ಕಿನಿಂದಲೂ ಸಿಗದಂತಾಗಿಬಿಟ್ಟಿದ್ದವು. ಬೈಸಿಕೊಳ್ಳಬೇಕಾಗುವುದು ಎಂದು ನಂಬರುಗಳನ್ನೇ "ಟೆಂಪರರಿಲಿ ಔಟ್ ಆಫ್ ಸರ್ವೀಸ್" ಮಾಡಿಕೊಂಡುಬಿಟ್ಟಿದ್ದರು ರಿಲಯನ್ಸಿನವರು! ಹಲವು ದಿನಗಳ ನಂತರ ಅದು ಹೇಗೋ ತಂತಾನೆ ಸರಿಹೋಗಿತ್ತು - ಸದ್ದಿಲ್ಲದೆ. ರಿಲಯನ್ಸಿನವರ ಕಸ್ಟಮರ್ ಕೇರ್ ನಂಬರುಗಳೂ ಪುನಃ ಲಭ್ಯವಾಗಿಬಿಟ್ಟಿದ್ದವು!

ತದನಂತರವಾದರೂ ಕೈಕೊಡದು ಎಂದೆಣಿಸಿದ್ದು ಸುಳ್ಳಾಯಿತು. ಒಂದು ವಾರವೂ ಕಳೆದಿರಲಿಲ್ಲ, ಆಗೀಗ ಕೈಕೊಡುತ್ತಿದ್ದ ನೆಟ್ವರ್ಕು ಮತ್ತೆ ದಿನಗಟ್ಟಲೆ ಮಾಯ. ವಿಚಾರಿಸಲಾಗಿ "ನಿಮ್ಮ ಅಕೌಂಟು ಕ್ರೆಡಿಟ್ ಲಿಮಿಟ್ ಮೀರಿದೆ, ದಯವಿಟ್ಟು ಕೂಡಲೆ ಮೂರೂವರೆ ಸಾವಿರ ಪಾವತಿ ಮಾಡಿ" ಎಂದು ರಿಲಯನ್ಸಿನಿಂದ ಉತ್ತರ ಬಂತು. ನನಗಾದ ಶಾಕ್ ಹೇಳತೀರದು. "ಸದ್ಯಕ್ಕೆ ನಿಮ್ಮ ಅಕೌಂಟು ಡಿಸೇಬಲ್ ಮಾಡಲಾಗಿದೆ" ಎಂದ ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್ ಗೆ "ತೆಗೆದುಕೊಂಡು ಎರಡು ವಾರ ಕಳೆದಿಲ್ಲ, ಅಲ್ಲದೇ ತಾರೀಫ್ (tariff) ಇರೋದು unlimited plan ಎಂದು - ಅದು ಹೇಗೆ ಈಗಲೇ ದುಡ್ಡು ಕಟ್ಟುವಂತಾಯಿತು" ಎಂದು ಕೇಳಿದರೆ ಬದಲಿಲ್ಲ!

ಕನಸು

ಮಗು ನಿದ್ದೆಯಲ್ಲಿ ಚೀರಿದಾಗ ಯಾವುದೊ ಕೆಟ್ಟ ಕನಸು ಇರಬೇಕು ಎನ್ನುವುದು ನಕ್ಕಾಗ ಯಾವುದೊ ಒಳ್ಳೆಯ ಕನಸು ಕಾಣುತ್ತಿದೆ ಎಂದು ಮನೆಯಲ್ಲಿ ಇರುವ ಹಳೇ ತಲೆಗಳು ಹೇಳುವುದು ವಾಡಿಕೆ.

“ಯಾದ್ ವಶೇಮ್” - ನೇಮಿಚಂದ್ರರ ನೂತನ ಕಾದಂಬರಿಯ ಪರಿಚಯ.

- ನವರತ್ನ ಸುಧೀರ್

ಇಪ್ಪತ್ತನೇ ಶತಮಾನದ ಚರಿತ್ರೆಯ ಒಂದುಘೋರ ಅಧ್ಯಾಯ ದ್ವಿತೀಯ ಮಹಾಯುಧ್ಧದ ಸಮಯದ ಜರ್ಮನಿಯಲ್ಲಿ ಹಿಟ್ಲರ್ ಮತ್ತು ಅವನ ನಾಜೀ ಬೆಂಬಲಿಗರಿಂದ ನಡೆದ ಅರವತ್ತು ಲಕ್ಷ ಯಹೂದಿಗಳ ನರಮೇಧ. ಈ “ಹಾಲೋಕಾಸ್ಟ್” ಮಹಾಪಾತಕದಲ್ಲಿ ಅಳಿದ ಲಕ್ಷಾಂತರ ಯಹೂದಿ ಹುತಾತ್ಮರ ಸ್ಮರಣೆ ಹಾಗೂ ಶ್ರಧ್ಧಾಂಜಲಿಯ ಸ್ಮಾರಕವಾಗಿ ಇಸ್ರೇಲ್ ಸರ್ಕಾರ ೧೯೫೩ ರಲ್ಲಿ “ಯಾದ್ ವಶೇಮ್” ಅನ್ನು ಸ್ಥಾಪಿಸಿತು.

“ಯಾದ್ ವಶೇಮ್” ಖ್ಯಾತ ಲೇಖಕಿ ನೇಮಿಚಂದ್ರರವರ ನವನೂತನ ಕಾದಂಬರಿಯ ಹೆಸರು ಕೂಡ. ಅವರ ಮೊದಲೆರಡು ಪುಸ್ತಕಗಳನ್ನು ಓದಿ ನಾನು ಕಳಿಸಿದ ಅಭಿನಂದನಾಪೂರ್ವಕ ಈ ಮೇಲ್ ಮೂಲಕ ಪರಿಚಿತರಾದ ಶ್ರೀಮತಿ ನೇಮಿಚಂದ್ರರವರು, ನಾನು ಕಳಿಸಿದ್ದ ದೀಪಾವಳಿ ಶುಭಾಶಯಕ್ಕೆ ಪ್ರತ್ಯುತ್ತರವಾಗಿ ತಮ್ಮ ಹೊಸ ಕಾದಂಬರಿಯ ಬಗ್ಗೆ ಬರೆದು ಅದನ್ನು ಓದಲು ಪ್ರೇರೇಪಿಸಿದರು. ಹೋದ ವಾರ ಗಾಂಧೀಬಜಾರ್ ನಲ್ಲಿನ ಅಂಕಿತ ಪುಸ್ತಕದಂಗಡಿಯಲ್ಲಿ ಕೊಂಡುತಂದು ಇದೀಗ ಓದಿ ಮುಗಿಸಿದೆ. ನನ್ನ ಇತಿ ಮಿತಿಗಳ ಅರಿವಿರುವ ನಾನು ಈ ಕಾದಂಬರಿಯನ್ನು ವಿಶ್ಲೇಷಿಸಿ ವಿಮರ್ಶೆಮಾಡುವ ಸಾಹಸಕ್ಕೆ ಕೈ ಹಾಕಿಲ್ಲ. ಓದಿ ಮುಗಿದ ನಂತರ ನನ್ನ ಪ್ರಾಮಾಣಿಕ ಅನಿಸಿಕೆಗಳನ್ನು ಸಂಪದ ಸಮುದಾಯದಲ್ಲಿ ಹಂಚಿಕೊಳ್ಳುವ ಪ್ರಯತ್ನ ಈ ಕಿರುಲೇಖನ.

ಚಿಕ್ಕಂದಿನಿಂದಲೂ ದ್ವಿತೀಯ ಮಹಾಯುಧ್ಧ ಹಾಗೂ ಜರ್ಮನಿಯಲ್ಲಾದ ಹಾಲೋಕಾಸ್ಟ್ ಮಹಾಪಾತಕದ ಬಗ್ಗೆ ಬರೆಯಲ್ಪಟ್ಟ ಅನೇಕ ಪುಸ್ತಕ, ಕಾದಂಬರಿಗಳನ್ನು ಓದಿದ್ದೆ. ಎರಡೂ ವಿಶ್ವ ಸಮರಗಳಲ್ಲಿ ಬ್ರಿಟನ್‍ನ ಯುಧ್ಧಮಂತ್ರಿಯಾಗಿದ್ದ ಚರ್ಚಿಲ್ರ ದ್ವಿತೀಯ ಸಮರದ ಆರು ಹೊತ್ತಿಗೆಗಳಲ್ಲಿ ಪ್ರಕಟಿತ ಬರಹಗಳು, ಅಮೇರಿಕದ ಯಹೂದಿ ಮೂಲದ ಖ್ಯಾತ ಲೇಖಕರಾಗಿದ್ದ ಮ್ಯಾಕ್ಸ್ ಡಿಮಾಂಟ್, ಲಿಯಾನ್ ಉರಿಸ್ ಇತ್ಯಾದಿಯವರು ಬರೆದ ಪುಸ್ತಕಗಳು, ಕಾದಂಬರಿಗಳನ್ನು ಓದಿದ್ದ, ಮತ್ತು ಈ ವಿಷಯ ಕುರಿತ ಅನೇಕ ಚಲನಚಿತ್ರಗಳನ್ನು ನೋಡಿದ್ದ ನನಗೆ ಆಗ ನಡೆದಿದ್ದ ಘಟನೆಗಳ ಬಗ್ಗೆ ಒಂದು ನಿರ್ದಿಷ್ಟ ನಿಲುವು ರೂಪುಗೊಂಡಿತ್ತು. ಯಹೂದಿಗಳ ನಾಲ್ಕು ಸಾವಿರ ವರ್ಷಗಳ ಇತಿಹಾಸ, ಬೇರೆಯವರ ದಬ್ಬಾಳಿಕೆಯಲ್ಲಿ ಅವರು ಪಟ್ಟ ಕಷ್ಟ ಕಾರ್ಪಣ್ಯಗಳು, ಇವೆಲ್ಲವನ್ನೂ ದಿಟ್ಟತನದಿಂದ ಎದೆಗುಂದದೆ ಎದುರಿಸಿ ಕಾಪಾಡಿಕೊಂಡ ತಮ್ಮ ಸಂಸ್ಕಾರ, ಮತ್ತು ಸಂಸ್ಕೃತಿ, ಶತೃರಾಷ್ಟ್ರಗಳಿಂದ ಸುತ್ತುವರಿದ್ದಿದ್ದರೂ ಇಸ್ರೇಲ್ ದೇಶದ ನಾಗರಿಕರ ಅಸಾಮಾನ್ಯ ಧೈರ್ಯ, ಸ್ಥೈರ್ಯಗಳ ಬಗ್ಗೆ ಬಹಳ ಓದಿದ್ದ ನನಗೆ ಯಹೂದಿ ಜನಾಂಗದ ಬಗ್ಗೆ ಗೌರವಭಾವ ಬೆಳೆದಿತ್ತು. ಆದರೂ ಆಗಾಗ ಭಾವನಾತ್ಮಕವಾಗಿ ನನ್ನ ಮೇಲೆ ಯಹೂದಿಪರ ಏಕಪಕ್ಷೀಯ ಪರಿಣಾಮವಾಗಿದೆಯೇನೋ ಅಂತ ಅನಿಸಿದ್ದುಂಟು. ನನಗೆ ತಿಳಿದಂತೆ ಇದಕ್ಕೆ ವಿರುಧ್ಧ ದೃಷ್ಟಿಕೋಣವನ್ನು ಪ್ರತಿಪಾದಿಸುವ ಸಾಹಿತ್ಯ ಅಥವಾ ಮಾಧ್ಯಮ ಸಾಕಷ್ಟು ಇರಲಿಲ್ಲ ಅಥವಾ ಇದ್ದರೂ ಅಷ್ಟೊಂದು ಜನಜನಿತವಾಗಿರಲಿಲ್ಲ.