ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೆ.ಆರ್.ಎಸ್. ಡ್ಯಾಮ್ ಪ್ರೈವೇಟ್ ಲಿಮಿಟೆಡ್.

ಬೊಲಿವಿಯ ಎನ್ನುವುದು ದಕ್ಷಿಣ ಅಮೆರಿಕ ಖಂಡದಲ್ಲಿನ ಐದನೆ ದೊಡ್ಡ ದೇಶ. ಭೂವಿಸ್ತೀರ್ಣದಲ್ಲಿ ಕರ್ನಾಟಕದ ಎಂಟರಷ್ಟು ದೊಡ್ಡದಾದ ಈ ದೇಶದ ಜನಸಂಖ್ಯೆ ಸುಮಾರು 90 ಲಕ್ಷ. ಕಳೆದ ಶತಮಾನದಲ್ಲಿ ಮಿಲಿಟರಿಯ ನಿರಂಕುಶ ಆಡಳಿತ, ಭ್ರಷ್ಟಾಚಾರ ಮತ್ತು ಸಾಮ್ರಾಜ್ಯಶಾಹಿ ಪರಕೀಯರು ಅವಕಾಶ ಸಿಕ್ಕಿದಾಗಲೆಲ್ಲ ದೋಚಿದ ಪರಿಣಾಮವಾಗಿ ಈ ದೇಶ ದಕ್ಷಿಣ ಅಮೆರಿಕದಲ್ಲಿನ ಅತಿ ಬಡರಾಷ್ಟ್ರಗಳಲ್ಲಿ ಒಂದು. ಕಳೆದೆರಡು ದಶಕಗಳಿಂದ ಪ್ರಜಾಪ್ರಭುತ್ವ ಇದ್ದರೂ ಈಗಲೂ ಭ್ರಷ್ಟಾಚಾರ, ಹಿಂಸೆ, ಅರಾಜಕತೆ ಮುಂದುವರೆದಿದೆ. ಚಿನ್ನ, ಕಬ್ಬಿಣ, ಮ್ಯಾಗ್ನೇಷಿಯಮ್, ನೈಸರ್ಗಿಕ ಅನಿಲಗಳನ್ನೊಳಗೊಂಡಂತೆ ಬೇಕಾದಷ್ಟು ನೈಸರ್ಗಿಕ ಸಂಪನ್ಮೂಲಗಳಿದ್ದರೂ ಬಡವಾಗಿಯೆ ಇರುವ ಈ ದೇಶವನ್ನು ಆ ಕಾರಣಕ್ಕಾಗಿಯೆ "ಚಿನ್ನದ ಗಣಿಯ ಮೇಲೆ ಕುಳಿತಿರುವ ಕತ್ತೆ" ಎಂದೂ ಅನ್ನುತ್ತಾರೆ.

1982 ರಲ್ಲಿ ಮತ್ತೆ ಪ್ರಜಾಪ್ರಭುತ್ವಕ್ಕೆ ಮರಳಿದ ಈ ದೇಶ ಅಲ್ಲಿಂದೀಚೆಗೆ ವಿಶ್ವಬ್ಯಾಂಕ್‌ನ ಸಲಹೆಗಳ ಪ್ರಕಾರ ಅನೇಕ ಆರ್ಥಿಕ ಸುಧಾರಣೆಗಳನ್ನು ತಂದಿತು. "ಬಡದೇಶಗಳಲ್ಲಿ ಭ್ರಷ್ಟಾಚಾರ ಜಾಸ್ತಿ;

ದೇವರ ಲೀಲೆ............

ದೇವರ ಲೀಲೆಯನ್ನು ನೋಡಿ ಈ ಜಗತ್ತಿನಲ್ಲಿ ಕೋಟಿ ಕೋಟಿ ಮಂದಿಯೂ ಕೋಟಿ ಕೋಟಿ ರೀತಿಯಲ್ಲಿ ಭಿನ್ನವಾಗಿರುವಂತೆ ಸ್ರಷ್ಟಿಸಿದ.ಒಬ್ಬರಂತೆ ಒಬ್ಬರಿಲ್ಲ...

ನಿನ್ನ ನೆನಪು..."

ನಿನ್ನ ನೆನಪು..."

ನಿನ್ನ ನೆನಪು...
ನನ್ನ ಕಣ್ಣುಗಳಲ್ಲಿ ನೀರನ್ನು ಬರಿಸುವ
ನನ್ನ ಕಣ್ಣುಗಳಲ್ಲಿ ಪ್ರತಿಫಲಿಸುತಿರುವ ಆ ನಿನ್ನ ಚಿತ್ರ
ನನ್ನ ಮನದಂಗಳದಿ ಮನೆ ಮಾಡಿರುವ
ನಿನ್ನ ನೆನಪು...

ನನಗೆ ಯಾವಾಗಲೂ ಒಳ್ಳೆಯದ್ದನ್ನೇ ಬಯಸುವ
ನೀ ನನ್ನಿಂದ ದೂರ ಇದ್ದರೂ
ನನಗೆ ಬದುಕಲು ಆಧಾರವಾಗಿರುವ
ನಿನ್ನ ನೆನಪು...

ಕಾಲ ಗರ್ಭದಲ್ಲಿ ಆವಿತುಕೊಂಡಿರುವ

ಕಂಚಿ ಪ್ರವಾಸ

ಕಂಚಿಯು ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದು. ಭಗವತಿ ಕಾಮಾಕ್ಷಿ ದೇವಿಯಲ್ಲದೆ, ಶಂಕರ ಭಗವತ್ಪಾದರು ಸ್ಥಾಪಿಸಿದರೆನ್ನಲಾದ ಶಂಕರಪೀಠಗಳಲ್ಲಿ ಒಂದು ಈ ಸ್ಥಳದಲ್ಲಿದೆ. ಕಂಚಿಯು ಪಲ್ಲವರ ರಾಜಧಾನಿಯಾಗಿತ್ತು.

ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?

ಇಂಡಿಯಾದ ಸಂವಿಧಾನವು ಹದಿನೈದು ಭಾಷೆಗಳನ್ನು ರಾಷ್ಟ್ರಭಾಷೆಗಳನ್ನಾಗಿ ಅಂಗೀಕರಿಸಿದೆಯಾದರೂ ಹಿಂದೀಯನ್ನು ಮಾತ್ರವೇ ರಾಷ್ಟ್ರಭಾಷೆಯೆಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಸಾವಿರ ವರ್ಷಗಳ ಹಿಂದೆಯೇ ಮಹಾಕಾವ್ಯಗಳನ್ನು ನೀಡಿದ ಕನ್ನಡವೆಲ್ಲಿ, ಕೇವಲ ನಾಲ್ಕುನೂರು ವರ್ಷಗಳ ಹಿಂದೆ ಮುಸ್ಲಿಮರ ಆಳ್ವಿಕೆಯಲ್ಲಿ ಕಲಬೆರೆಕೆಯಾಗಿ ಹುಟ್ಟಿದ ಹಿಂದೀ ಎಲ್ಲಿ?

ಐದು ಕೋಟಿ ಜನ ಕನ್ನಡ ಮಾತನಾಡುತ್ತಾರೆ ಹೌದು ಆದರೆ ಐದು ರಾಜ್ಯಗಳ ಜನ ಹಿಂದೀ ಭಾಷೆಯಾಡುತ್ತಾರೆ ಎಂದು ಅವರು ಹೇಳುತ್ತಾರೆ. ಆದರೆ ಕೇಳಿ ಬಿಹಾರದ ಹಿಂದೀ ಭಾಷೆ ಉತ್ತರಪ್ರದೇಶದಲ್ಲಿ ಅರ್ಥವಾಗದು. ಜಾನ್ಸಿಯಲ್ಲಿ ಬರೆದ ಹಿಂದೀಯನ್ನು ಜಾರ್ಖಂಡ್ ಜನ ಅರ್ಥ ಮಾಡಿಕೊಳ್ಳಲಾಗದು. ಹಿಂದೀಯನ್ನು ಒಂದು ಸಂಪರ್ಕ ಭಾಷೆಯಾಗಿ ತರುವ ಪ್ರಯತ್ನವೇನೋ ಸರಿಯೇ. ಆದರೆ ಅದು ಉತ್ತರ ಇಂಡಿಯಾಕ್ಕಷ್ಟೇ ಸರಿ. ಏಕೆಂದರೆ ಅಲ್ಲಿನ ಜನರಿಗೆ ತಮ್ಮ ಹಿಂದೀಯನ್ನು ಮತ್ತೊಬ್ಬ ಹಿಂದೀ ಮನುಷ್ಯನಿಗೆ ಸಂವಹಿಸಲು ಒಂದೇ ರೀತಿಯ ಹಿಂದೀಯ ಅವಶ್ಯಕತೆ ಇದೆ. ಆದರೆ ದಕ್ಷಿಣ ಇಂಡಿಯಾಕ್ಕೆ ಹಿಂದೀಯ ಅಗತ್ಯವಿಲ್ಲ. ಅಷ್ಟೇ ಅಲ್ಲ, ಉತ್ತರದ ಪಂಜಾಬ, ಕಾಶ್ಮೀರದಲ್ಲಿ ಹಾಗೂ ಒರಿಸ್ಸಾ, ಬಂಗಾಳ, ಅಸ್ಸಾಂ, ಅರುಣಾಚಲದಂಥ ಈಶಾನ್ಯ ರಾಜ್ಯಗಳಲ್ಲಿ ಹಿಂದೀ ನಡೆಯದು. ಈ ರಾಜ್ಯಗಳಲ್ಲಿ ಇಂಗ್ಲಿಷು ಸಂಪರ್ಕ ಭಾಷೆಯಾಗಿ ನಿಲ್ಲಬಲ್ಲದು. ನಮ್ಮ ದಕ್ಷಿಣ ಇಂಡಿಯಾದಲ್ಲೂ ಇಂಗ್ಲಿಷು ಪರಸ್ಪರ ಬೆಸೆಯುವ ಕೊಂಡಿಯಾಗಿದೆ. ಈ ಹಿಂದೀ ಜನಕ್ಕೆ ಇಂಗ್ಲಿಷು ಬಾರದ್ದರಿಂದ ತಮ್ಮ ಮಾತೃಭಾಷೆಯನ್ನೇ ಇಂಡಿಯಾದ ಇತರ ಜನರೆಲ್ಲ ಕಲಿಯಲಿ ಎಂದು ಆಶಿಸುತ್ತಾರೆ.

ಪದಬೆಳಗು: ಕಳ್ಳಕುಬಸ

ಪದ ಬೆಳಗು: ಕಳ್ಳ ಕುಬಸ

ಬಳಕೆ ತಪ್ಪಿ ಹೋದರೆ ಪದಗಳು ಕೂಡ ಮಸುಕಾಗುತ್ತವೆ. ಹಾಗಾಗದಿರಬೇಕಾದರೆ ಪಾತ್ರೆಗಳನ್ನು ದಿನವೂ ಬೆಳಗಿಕೊಳ್ಳುವಂತೆಯೇ ಪದಗಳನ್ನು ಪದಾ-ರ್ಥಗಳನ್ನು ಬಳಸಿ ಬೆಳಗಿಕೊಳ್ಳಬೇಕಾಗುತ್ತದೆ. ಆಗಾಗ ನನ್ನ ಗಮನಕ್ಕೆ ಬಂದ ನನಗಾಗಿ ಬೆಳಗಿಕೊಂಡ ಪದಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಇತ್ತೀಚೆಗೆ ಹಾಗೆ ಬೆಳಗಿಕೊಂಡ ಪದ ಕಳ್ಳಕುಬಸ.