ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈ ಬದುಕೇ ಹೀಗೆ-೧

ತಪ್ಪಲ್ಲ:
ಎಷ್ಟೇ ಎತ್ತರ ಬೆಳೆದರೂ
ಎಷ್ಟೇ ದೂರದ ದಾರಿ ಸವೆದರೂ...
ಸಂಕಟ ಬರಲು
ವೆಂಕಟರಮಣನ ಮೊರೆ ಹೋಗೋದು ತಪ್ಪಲ್ಲ ಶಿಷ್ಯ...

ಬದುಕ ಹರುಷ:
ಬದುಕ ಹರುಷ,ಸುಲಿದ ಬಾಳೆಹಣ್ಣಲ್ಲ
ಸುಲಿಯಲಾಗದ ಕಾಯಿಯೂ ಅಲ್ಲ...
ಕನ್ನಡಿಯೊಳ ಗಂಟಲ್ಲ, ಕೈಗೆಟುಕದ ಮುಗಿಲೂ ಅಲ್ಲ...
ರೆಪ್ಪೆಯೊಳು ಅವಿತಿರುವ ಕಂಗಳಂತೆ ಶಿಷ್ಯ...

ಭೌತ ವಿದಾಯ - ಆರ್ಚಿಬಾಲ್ಡ್ ವ್ಹೀಲರ್ ಇನ್ನಿಲ್ಲ

ಅರ್ಚಿಬಾಲ್ಡ್ ವ್ಹೀಲರ್ ಇನ್ನಿಲ್ಲ
ಡಾ.ಎ.ಪಿ.ರಾಧಾಕೃಷ್ಣ, ಪುತ್ತೂರು

ಭೌತಶಾಸ್ತ್ರ ಪ್ರಾಧ್ಯಾಪಕ
ವಿವೇಕಾನಂದ ಮಹಾವಿದ್ಯಾಲಯ
ಪುತ್ತೂರು - 574203

" ಸಬ್ಮೆರೀನ್ ವಾಯೇಜ್, " ಮತ್ತೊಂದು ಅತ್ಯಾಕರ್ಷಕ ಹಾಗೂ ಜ್ಞಾನವರ್ಧಕ ಪಯಣ ; ಇಂತಹ ಅದ್ಭುತ ಸನ್ನಿವೇಷಗಳ ಜನಕ, ವಾಲ್ಟ್ ಡಿಸ್ನಿಯವರಿಗೆ ನಮನಗಳು !

” ಫೈಂಡಿಂಗ್ ನೆಮೋ,’ ಎಂಬ ಶೀರ್ಷಿಕೆಯಲ್ಲಿ ರಚಿಸಿದ ಆನಿಮೇಶನ್ ಅನೇಕ ಪ್ರಶಸ್ತಿಗಳನ್ನು ತನ್ನಮಡಲಿಗೆ ಸುರಿದುಕೊಂಡಿದೆ. ಅದೇ ತತ್ವವನ್ನು ಆಧಾರವಾಗಿಟ್ಟುಕೊಂಡು ಅದರ ಹಿನ್ನೆಯಲ್ಲಿ ಸಬ್ಮೆರೀನ್ ಪಯಣವನ್ನು ಹೆಣೆದಿದ್ದಾರೆ.

ಮುಸ್ಸಂಜೆ ಮಾತು ಚಿತ್ರದ ಹಾಡುಗಳು

ಅಂತರ್ಜಾಲದಲ್ಲಿ "ಮುಸ್ಸಂಜೆ ಮಾತು" ಚಲನ ಚಿತ್ರದ ಹಾಡುಗಳು .mp3 format ನಲ್ಲಿ ಎಲ್ಲಿ ದೊರೆಯುತ್ತದೆ???

ತಿಳಿದವರು ದಯವಿಟ್ಟು ತಿಳಿಸಿ... 

ಅನಿಲ್.ರಮೇಶ್ 

ಕನ್ನಡಿಗರ ಸ್ಥಿತಿ

ಭಾರತ ಬಿಟ್ಟು, ಬೆಂಗಳೂರ್ ಬಿಟ್ಟು ಬಂದದ್ದಾಯ್ತು ಇಲ್ಲಿ
ದೊಡ್ ದೇಶದಾಗೆ ದುಡ್ ನಂಜ್ ಕೊಂಡು ಮನಸೋಗ್ತೈತೆ ಅಲ್ಲಿ!
ಕೆಲಸ ಸಿಗ್ದು, ದುಡ್ಡಿಲ್ಲಾಂತ ಏನೋ ಬಂದ್ವು ಇಲ್ಲಿ,
ಕೆಲಸ ದುಡ್ಡು ಎರಡೂ ಇದ್ರೂ ನಮ್ಮೋರಿಲ್ಲಾ ಇಲ್ಲಿ!
ಅಲ್ಲಿದ್ದವರ್ಗೆ ಇಲ್ಗ್ ಬರ್ ಬೇಕೂಂತ ಏನೋ ಭಾರಿ ಹುಚ್ಚು
ಇಲ್ಲಿದ್ರೂನೆ ಅಲ್ಲಿದ್ ನೆನಸೋದ್ ಏನಿದ್ ನನ್ಗೆ ಪೆಚ್ಚು!

ದಿನ(ಕರ)ಚರಿ

ಮಿಸುಗುತಿರುವಾಗ ಹಾಸಿಗೆಯಲಿ ಸೂರ್ಯ
ಎಚ್ಚರಗೊಂಡ ನಿಶೆ ಸೂರ್ಯನ ಮೈಯಾವರಿಸಿದ್ದ
ಸೆರಗನ್ನು ಮೆಲ್ಲನೆ ಬಿಡಿಸಿಕೊಂಡು ಅಲ್ಲಿಂದ
ಸರಿದು ಒಳ ನೆಡೆದಳು.
ಕಣ್ಣು ಹೊಸಕಿ, ಎರಡೂ ಕೈ ಮೇಲೆತ್ತಿ
ಕಾಲು ನಿಡಿದಾಗಿಸಿ ಲಟ ಲಟ ಎನಿಸಿ
ಎದ್ದು ಕುಳಿತು ಮೈ ಮುರಿದ ಸೂರ್ಯ
ಪಕ್ಕಕ್ಕೆ ತಿರುಗಿದ.
ನಿಶೆ ಇಲ್ಲ! "ಓ ನನಗಾಗಿ ತಿಂಡಿಯ
ಸಿದ್ಧತೆಯಲ್ಲಿದ್ದಾಳೆ.ಸಮಯ ಪ್ರಜ್ಞೆ

ಕಾದಲ್

ಕಾದಲ್, ಕಾದಲ, ಕಾದಲೆ ಮತ್ತು ಕಾದಲ್ಮೆ ಇವು ಪ್ರೀತಿಗೆ ಸಂಭಂಧಿಸಿದಂತೆ ಇರುವ ಹೞಗನ್ನಡದಲ್ಲಿ ಬೞಕೆಯಾಗುತ್ತಿದ್ದ ಪದಗಳೂ. ಈಗಲೂ ಬೞಸಬಾರದೆಂದೇನಿಲ್ಲ. ಬೞಸಬಹುದು.

ಸಂಬಂಧಗಳು

ಮನುಷ್ಯ ಸಂಬಂಧಗಳ ಹೊರತಾಗಿ ಬಾಳಲು ಸಾಧ್ಯನಾ, ಬದುಕು ನಿರ್ಮಾಣ ಆಗೋದೆ, ಸಂಬಂಧಗಳ ಪೋಣೆಸಿಟ್ಟ ಎಳೆಯಿಂದಲ್ಲವಾ, ಆ ಎಳೆ ನಿರ್ಮಾಣ ಆಗಿರೋದು ದೈವದತ್ತ ಆಗಿರ ಬಹುದು, ಪ್ರಕೃತಿ ಇರಬಹುದು, ಅಥವಾ ಯಾವುದೋ ಕಾಣದ ಕೈ ಇರಬಹುದು. ಮನುಷ್ಯ ಸಂಬಂದಗಳನ್ನು ತೊರೆದು ಬದುಕಲು ಸಾಧ್ಯಾನಾ,
ತೊರೆದು ಬದುಕ ಬಹುದು ಅನ್ನೋದಾದರೆ, ನೋವಿನ ಎಳೆಯೊಂದು ಅಲ್ಲಿ ಕಾಡೊಲ್ಲವಾ.

ಕನ್ನಡ ಉಚ್ಚಾರಣೆ..

ಕನ್ನಡ ಪದಗಳ ಉಚ್ಚಾರಣೆ ಬಂದರೆ ಡಾ| ರಾಜ್ ಕನ್ನಡಿಗರಿಗರಿಗೆ ಮಾದರಿ ಎನ್ನಬಹುದು. ರೇಡಿಯೋ ಜಾಕಿಗಳು ಕೆಲವೊಮ್ಮೆ ಅವರನ್ನನುಕರಿಸುವಾಗ ಅಥವಾ ಕಲಾವಿಧರು ಅವರನ್ನನುಕರಿಸುವಾಗ ಗಮನಿಸಬೇಕಾದ ಒಂದಂಶ ಎಂದರೆ ಪದಗಳ ಉಚ್ಚಾರಣೆ ಮತ್ತು ಪ್ರತಿ ಅಕ್ಷರವನ್ನು ಒತ್ತುಕೊಟ್ಟು ಸ್ಫುಟವಾಗಿ ಉಚ್ಚರಿಸುವುದು. ಉದಾ..’ಬಹಳ ಚೆನ್ನಾಗಿದೆ’.