" ಸಬ್ಮೆರೀನ್ ವಾಯೇಜ್, " ಮತ್ತೊಂದು ಅತ್ಯಾಕರ್ಷಕ ಹಾಗೂ ಜ್ಞಾನವರ್ಧಕ ಪಯಣ ; ಇಂತಹ ಅದ್ಭುತ ಸನ್ನಿವೇಷಗಳ ಜನಕ, ವಾಲ್ಟ್ ಡಿಸ್ನಿಯವರಿಗೆ ನಮನಗಳು !
” ಫೈಂಡಿಂಗ್ ನೆಮೋ,’ ಎಂಬ ಶೀರ್ಷಿಕೆಯಲ್ಲಿ ರಚಿಸಿದ ಆನಿಮೇಶನ್ ಅನೇಕ ಪ್ರಶಸ್ತಿಗಳನ್ನು ತನ್ನಮಡಲಿಗೆ ಸುರಿದುಕೊಂಡಿದೆ. ಅದೇ ತತ್ವವನ್ನು ಆಧಾರವಾಗಿಟ್ಟುಕೊಂಡು ಅದರ ಹಿನ್ನೆಯಲ್ಲಿ ಸಬ್ಮೆರೀನ್ ಪಯಣವನ್ನು ಹೆಣೆದಿದ್ದಾರೆ. ಜಲಾಂತರ್ಗಾಮಿ ನಾವೆಯಲ್ಲಿ ಕುಳಿತು ನೀರಿನಡಿಯಲ್ಲಿ ಪ್ರಾಯಾಣಿಸುವಾಗ, ಮಾನವನಿರ್ಮಿತ ಅನೇಕ ರೋಚಕ ಸನ್ನಿವೇಷಗಳನ್ನು, ಆಕರ್ಷಕ ದೃಷ್ಯಗಳನ್ನು ನಮ್ಮಮುಂದೆ ನಿಜಕ್ಕೆತಲೆಯಮೇಲೆಹೊಡೆದಂತೆ ನಿರ್ಮಿಸಿ, ಅದನ್ನು ಯಶಸ್ವಿಯಾಗಿ ಸಂಭಾಳಿಸಿಕೊಂಡುಹೋಗುವ ಜಾಣ್ಮೆ ಡಿಸ್ನಿತಂಡ ಪ್ರದರ್ಶಿಸುತ್ತದೆ ! ಎಲ್ಲಕ್ಕೂಮಿಗಿಲಾಗಿ ಗಡಿಯಾರದ ಚಲನೆಯಂತೆ, ಅತ್ಯಂತಕರಾರುವಾಕ್ಕಾಗಿ ನಡೆಸುವಕಾರ್ಯದಕ್ಷತೆಯನ್ನು ಎಷ್ಟುಕೊಂಡಾಡಿದರೂ ಕಡಿಮೆಯೆ !
ಈ ಎಂದೆಂದಿಗೂ ಮರಯಲಾರದ ನೀರಿನಡಿಯಲ್ಲಿ ನಡೆಸುವ ಪ್ರಯಾಣದಲ್ಲಿ ನಾವು ಸಂಧಿಸುವ ಅವಿಸ್ಮರಣೀಯ ಪ್ರದೇಶಗಳು, ಹಾಗೂ ವ್ಯಕ್ತಿಗಳು, ಕೆಳಗೆಕಂಡಂತಿವೆ.
* Ancient Ruins of Atlantis (Lagoon)
* Coral Reef
* Coral Reef (Mr. Ray's Class)
* EAC (East Australian Current)
* Graveyard of Ships (Shipwreck)
* Mine Field
* The Anglerfish
* The Abyss
* School of Jellyfish
* The Hot Tub
* The Erupting Volcano
* Coral Reef (Finale)
* The Whale's Mouth
* Blue Whale Encounter (Inside the Whale's Mouth)
* Hidden Sea Serpent and Mermaid
* Harbor Scene w/ Fighting Crabs (Rear Lagoon)
ನಿಜಕ್ಕು ಇಂತಹ ಹಲವಾರು ವಿಸ್ಮಯಲೋಕಗಳಿಗೆ ನಮ್ಮನ್ನೊಯ್ಯುವ ವಾಲ್ಟ್ ಡಿಸ್ನಿಯವರ ಪ್ರಚಂಡಕಲ್ಪನಾಶಕ್ತಿ, ಅಗಾಧವಾದದ್ದು ! ಜೀವನದಲ್ಲಿ ಸಾಧ್ಯವಾದಲ್ಲಿ ಈ ಮರೆಯಲಾರದ ಅನುಭವವನ್ನು ಅನುಭವಿಸದಿದ್ದರೆ, ಏನೋ ಕಳೆದುಕೊಂಡಮನೋಭಾವ ಬರದಿರದು. ಇದು ನನ್ನ ವೈಯಕ್ತಿಕ ಅನುಭವ !
-ಫೋಟೋ ನನ್ನಕ್ಯಾಮರದಲ್ಲಿ ಕ್ಲಿಕ್ಕಿಸಿದ್ದು.