ಕನ್ನಡ ಉಚ್ಚಾರಣೆ..

ಕನ್ನಡ ಉಚ್ಚಾರಣೆ..

ಕನ್ನಡ ಪದಗಳ ಉಚ್ಚಾರಣೆ ಬಂದರೆ ಡಾ| ರಾಜ್ ಕನ್ನಡಿಗರಿಗರಿಗೆ ಮಾದರಿ ಎನ್ನಬಹುದು. ರೇಡಿಯೋ ಜಾಕಿಗಳು ಕೆಲವೊಮ್ಮೆ ಅವರನ್ನನುಕರಿಸುವಾಗ ಅಥವಾ ಕಲಾವಿಧರು ಅವರನ್ನನುಕರಿಸುವಾಗ ಗಮನಿಸಬೇಕಾದ ಒಂದಂಶ ಎಂದರೆ ಪದಗಳ ಉಚ್ಚಾರಣೆ ಮತ್ತು ಪ್ರತಿ ಅಕ್ಷರವನ್ನು ಒತ್ತುಕೊಟ್ಟು ಸ್ಫುಟವಾಗಿ ಉಚ್ಚರಿಸುವುದು. ಉದಾ..’ಬಹಳ ಚೆನ್ನಾಗಿದೆ’. ಇದು ಸಾಮಾನ್ಯವಾಗಿ ಎಲ್ಲರೂ ಅನುಕರಿಸುವಾಗ ಬಳಸುವ ಪದಗಳು.

’ನಾದಮಯಾ..ಈ ಲೋಕವೆಲ್ಲಾ...’ ಈ ಹಾಡುಗಳಲ್ಲಿ ಅವರು ಎಲ್ಲ ಪದಗಳನ್ನು ಹಾಡಿರುವರೀತಿ ಉತ್ತಮವಾಗಿದೆ. ಈ

ನಾವುಗಳು ಕೂಡ ಕೆಲವೊಮ್ಮೆ ’ಹ’ ಕಾರವನ್ನು ’ನುಂಗಿ’ ಮಾತನಾಡುತ್ತೇವೆ. ಉದಾ. ನೋಡ್ಕವೋಗು(ನೋಡಿಕೊಂಡು ಹೋಗು). ಇನ್ನು ನಮ್ಮ ಕೆಲವು ಮಿತ್ರರು ಎಷ್ಟು ವೇಗವಾಗಿ ಕನ್ನಡ ಮಾತನಾಡುತ್ತಾರೆ ಎಂದರೆ ಎರಡೆರಡು ಬಾರಿ ಕೇಳಿಸಿಕೊಂಡಮೇಲೆ ಅರ್ಥವಾಗುತ್ತದೆ. ನಮ್ಮ ಇಂಗ್ಲೀಷ್ ಪ್ರೊವೆಸ್ಸರರೊಬ್ಬರು ಹೇಳುತ್ತಿದ್ದರು..ದೇಶೀಯ ಭಾಷೆಗಳಲ್ಲಿ ಏನು ಮುಖ್ಯವೆಂದರೆ ಯಾವುದೇ ಪದದ ಮೊದಲ ಮತ್ತು ಕೊನೆಯ ಅಕ್ಷರಗಳನ್ನು ಸ್ಫುಟವಾಗಿ ಇನ್ನೊಬ್ಬರಿಗೆ ಕೇಳುವಂತೆ ಮಾತನಾಡಿದರೆ ಸ್ಪಷ್ಟವಾಗುತ್ತದೆ. ಹಾಗೆಯೇ ವಾಕ್ಯದ ಕೊನೆಯ ಪದವನ್ನೂ ಸಹ. ಅದನ್ನೇ ನುಡಿ ಶುದ್ಧತೆ ಎನ್ನಬಹುದು ಎಂದು ಹೇಳುತ್ತಿದ್ದರು. ಕೆಲವರಿಗೆ ಮಾತನಾಡುವಾಗ ವಾಕ್ಯದ ಕೊನೆಯ ಕೆಲವು ಪದಗಳನ್ನೇ ’ತಿಂದು’ ಹಾಕುವ ರೂಢಿ. ಉದಾಹರಣೆಗೆ ’ರಾಮನು ಕಾಡಿಗೆ ಹೋದನು’ ಎಂದು ಅವರು ಹೇಳಿದರೆ ’ರಾಮನು ಕಾಡಿಗೆ’ ಎನ್ನುವುದು ಮಾತ್ರ ಕೇಳಿರುತ್ತದೆ, ’ಹೋದನು’ ಎನ್ನುವುದನ್ನು ಮೆತ್ತಗೆ ಮನಸ್ಸಿನಲ್ಲಿ ಹೇಳಿಕೊಂಡಿರುತ್ತಾರೆ.

ಇಂಗ್ಲೀಷನಲ್ಲಿ ಹಾಗಲ್ಲ ’ಜ್ಯೂಪಿಟರ್’ ಎನ್ನುವುದಕ್ಕೆ ’ಜ್ಯೂಪಿಟ’ ಎಂದರೂ ಓಕೆ. ’ಕಾರ್’ ಎನ್ನುವುದು ’ಕಾ’ ಆಗಿರುತ್ತದೆ.

Rating
No votes yet

Comments