ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲಾಲ್ ಬಾಗ್

ಇತ್ತೀಚೆಗೆ ದೆಹಲಿಯ ಸ್ನೇಹಿತನೊಬ್ಬ ಬೆಂಗಳೂರಿಗೆ ಬಂದಿದ್ದ. ಕ್ಯಾಮೆರಾ ಕ್ಲಿಕ್ಕಿಸಬೇಕಿತ್ತಂತೆ, ಲಾಲ್ ಬಾಗ್ ಗೆ ಹೋಗಬಹುದು ಎಂದೆ. ಅವನ ಜೊತೆ ನಾನೂ ಕ್ಯಾಮೆರಾ ಹಿಡಿದು ನಡೆದೆ. ಅಲ್ಲಿ ನಾನು ತೆಗೆದ ಕೆಲವು ಫೋಟೋಗಳು:

 

 

ಗಾಜಿನ ಮನೆ.

ಒಂದು ಕಾಂಪೌಂಡ್.
ಗಾಜಿನ ಮನೆ

ಕನ್ನಡ ಪ್ರಜ್ಞೆ ಮತ್ತು ಪರಿಸರ

ಡಾ.ಕೆ.ವಿ. ನಾರಾಯಣವರು ಆಧುನಿಕ ಕನ್ನಡ ಜಗತ್ತು ಕಂಡ ವಿಶಿಷ್ಟ ಮತ್ತು ಸೂಕ್ಷ್ಮ ಚಿಂತಕ ಹಾಗೂ ಭಾಷಾಶಾಸ್ತ್ರಜ್ಞ. ಇವರು ಇತ್ತೀಚಿಗೆ ಬರೆದ "ಕನ್ನಡ ಜಗತ್ತು: ಅರ್ಧ ಶತಮಾನ" ಕೃತಿ ಓದಿದ ಮೇಲೆ ನನ್ನಲ್ಲಿ ಹುಟ್ಟಿದ ಚರ್ಚೆ, ವಾಗ್ವಾದ ಮತ್ತು ಸಮರ್ಥನೆಗಳನ್ನು ಕ್ರೋಡಿಕರಿಸಿಕೊಂಡು ಈ ಪುಸ್ತಕವನ್ನು ಕುರಿತು ಕೆಲವು ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸುವೆ. ಕನ್ನಡ ಭಾಷೆಯನ್ನು ಕುರಿತು ಹಲವಾರು ವಾಗ್ವಾದಗಳು ನಿರಂತರವಾಗಿ ನಡೆದಿವೆ. ಈ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ ಪ್ರಾಚೀನತೆ, ಪರಂಪರೆಯನ್ನು ಕೆಲವು ಛಿದ್ರ ಛಿದ್ರ ದಾಖಲೆಗಳ ಮುಖಾಂತರ ಕನ್ನಡ ಪ್ರಜ್ಞೆಯನ್ನು ಕಟ್ಟುವ ಭಾವನಾತ್ಮಕ ಪ್ರಯತ್ನಗಳು ನಡೆದಿವೆ.

ಕನ್ನಡ ಪ್ರಜ್ಞೆ ಮತ್ತು ಪರಿಸರ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಕೆ.ವಿ. ನಾರಾಯಣ
ಪ್ರಕಾಶಕರು
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಡಾ.ಕೆ.ವಿ. ನಾರಾಯಣವರು ಆಧುನಿಕ ಕನ್ನಡ ಜಗತ್ತು ಕಂಡ ವಿಶಿಷ್ಟ ಮತ್ತು ಸೂಕ್ಷ್ಮ ಚಿಂತಕ ಹಾಗೂ ಭಾಷಾಶಾಸ್ತ್ರಜ್ಞ. ಇವರು ಇತ್ತೀಚಿಗೆ ಬರೆದ "ಕನ್ನಡ ಜಗತ್ತು: ಅರ್ಧ ಶತಮಾನ" ಕೃತಿ ಓದಿದ ಮೇಲೆ ನನ್ನಲ್ಲಿ ಹುಟ್ಟಿದ ಚರ್ಚೆ, ವಾಗ್ವಾದ ಮತ್ತು ಸಮರ್ಥನೆಗಳನ್ನು ಕ್ರೋಡಿಕರಿಸಿಕೊಂಡು ಈ ಪುಸ್ತಕವನ್ನು ಕುರಿತು ಕೆಲವು ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸುವೆ. ಕನ್ನಡ ಭಾಷೆಯನ್ನು ಕುರಿತು ಹಲವಾರು ವಾಗ್ವಾದಗಳು ನಿರಂತರವಾಗಿ ನಡೆದಿವೆ. ಈ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ ಪ್ರಾಚೀನತೆ, ಪರಂಪರೆಯನ್ನು ಕೆಲವು ಛಿದ್ರ ಛಿದ್ರ ದಾಖಲೆಗಳ ಮುಖಾಂತರ ಕನ್ನಡ ಪ್ರಜ್ಞೆಯನ್ನು ಕಟ್ಟುವ ಭಾವನಾತ್ಮಕ ಪ್ರಯತ್ನಗಳು ನಡೆದಿವೆ.

೮೪ರ ಹರಯದ ಉತ್ಸಾಹಿ ರಂಗ ನಟ - ಚನ್ನಬಸಯ್ಯ ಗುಬ್ಬಿ

ಅಮರೇಶ್ವರ ವಿಜಯ ನಾಟಕ ಮಂಡಳಿಯು ಒಂದು ಸಂಸ್ಥಾಪಿತವಾದ ನೋಂದಾಯಿತ ವೃತ್ತಿ ನಾಟಕ ಕಂಪನಿ. ಈ ಕಂಪನಿಯನ್ನು ತಮ್ಮ ಎಂಭತ್ತರ ದಶಕದಲ್ಲಿರುವ ನಾಟಕ ರಂಗದ ಉನ್ನತ ಕಲಾಕಾರ ಶ್ರೀ ಚನ್ನಬಸಯ್ಯ ಗುಬ್ಬಿಯವರು ಹುಟ್ಟುಹಾಕಿ, ಸ್ಥಾಪನೆ ಮಾಡಿದರು. ಅವರ ಹೆಸರೇ ಹೇಳುವಂತೆ ಶ್ರೀಯುತರು ತುಮಕೂರು ಜಿಲ್ಲೆಯ ಗುಬ್ಬಿ ಗ್ರಾಮ (ಈಗ ಪಟ್ಟಣ)ದವರು.

ಹಿ೦ದೀ ಸಿನಿಮಾ ಸ೦ಗೀತ ಸಾಹಿತ್ಯ - ಆಜಾ ನಾಚ್ ಲೇ ವಿವಾದ

ಹಿ೦ದೀ ಸಿನಿಮಾ ಸ೦ಗೀತ ಸಾಹಿತ್ಯ
ಮಾಧುರಿಯವರ ಹೊಸ ಚಿತ್ರ ಬಿಡುಗಡೆಯಾಗಿ ಎರಡೇ ದಿನಗಳಲ್ಲಿ ಗೊ೦ದಲಕ್ಕೆ ಸಿಕ್ಕಿದೆ.
ಆ ಚಿತ್ರದ ಒ೦ದು ಹಾಡಿನಲ್ಲಿ "ಕ್ಷೌರಿಕನೊಬ್ಬ ಬ೦ಗಾರದ ಒಡವೆಯನ್ನು ಮಾಡುವುದಕ್ಕೆ ಹೊರಟಿದ್ದಾನೆ" - ಎ೦ದು
ಆತನ ಜಾತಿಯ ಹೆಸರನ್ನೇ ಆಧಾರವಾಗಿಟ್ಟು ಕೊ೦ಡು್ , ಆ ಪ೦ಗಡವನ್ನು ನಿ೦ದಿಸಿದ್ದಾರೆ . ನ೦ತರ

ಫಾದರ್ ಸೆರ್ಗಿಯಸ್ ಅಧ್ಯಾಯ ಐದು

ಐದು
ಫಾದರ್ ಸೆರ್ಗಿಯಸ್‌ನ ಏಕಾಂತವಾಸದ ಆರನೆಯ ವರ್ಷ ನಡೆಯುತ್ತಿತ್ತು. ಅವನಿಗೆ ನಲವತ್ತೊಂಬತ್ತು ತುಂಬಿತ್ತು. ಏಕಾಂತವಾಸವು ಕಷ್ಟ ಅನ್ನಿಸತೊಡಗಿತ್ತು. ಉಪವಾಸ, ಪ್ರಾರ್ಥನೆಗಳ ಕಾರಣದಿಂದ ಅಲ್ಲ. ಅವು ಅವನಿಗೆ ಕಷ್ಟ ಅನಿಸುತ್ತಲೇ ಇರಲಿಲ್ಲ. ಅವನು ನಿರೀಕ್ಷಿಸಿಯೇ ಇರದಿದ್ದ ಸಂಘರ್ಷವೊಂದು ಮನಸ್ಸಿನಲ್ಲಿ ಆರಂಭವಾಗಿತ್ತು. ಅದನ್ನು ಎದುರಿಸುವುದು ಕಷ್ಟ ಅನ್ನಿಸುತ್ತಿತ್ತು. ಈ ಸಂಘರ್ಷಕ್ಕೆ ಎರಡು ಮೂಲಗಳಿದ್ದವು. ಒಂದು ಸಂಶಯ, ಇನ್ನೊಂದು ಕಾಮ. ಈ ಇಬ್ಬರೂ ಶತ್ರುಗಳು ಒಟ್ಟೊಟ್ಟಿಗೆ ಎದುರಾಗುತ್ತಿದ್ದರು. ಶತ್ರುಗಳು ಇಬ್ಬರು ಎಂದು ಅವನಿಗನ್ನಿಸಿದರೂ ನಿಜವಾಗಿ ಅವೆರಡೂ ಒಬ್ಬನೇ ಶತ್ರುವಿನ ಬೇರೆ ಬೇರೆ ಮುಖಗಳು. ಸಂಶಯವನ್ನು ಗೆದ್ದಕೂಡಲೇ ಕಾಮ ತಲೆದೋರುತ್ತಿತ್ತು. ಆದರೆ ಅವನು ಮಾತ್ರ ಅವರಿಬ್ಬರೂ ಬೇರೆ ಬೇರೆ ರಾಕ್ಷಸರೆಂದು ತಿಳಿದು ಬೇರೆ ಬೇರೆಯ ಹೋರಾಟ ನಡೆಸುತ್ತಿದ್ದ.

ಫಾದರ್ ಸೆರ್ಗಿಯಸ್ ಅಧ್ಯಾಯ ನಾಲ್ಕು

ನಾಲ್ಕು
ಫಾದರ್ ಸೆರ್ಗಿಯಸ್ ಸನ್ಯಾಸಿಯಾಗಿ ಆರು ವರ್ಷ ಕಳೆದಿತ್ತು. ಕಾರ್ನಿವಾಲ್* ಸಮಯ ಬಂದಿತ್ತು. ಪಕ್ಕದ ಊರಿನ ಶ್ರೀಮಂತರ ಗುಂಪು ಭರ್ಜರಿ ಊಟ ಮುಗಿಸಿ, ವೈನ್ ಕುಡಿದು ಟ್ರಾಯ್ಕಾಗಳನ್ನು* ಏರಿ ವಿಹಾರ ಹೊರಟಿದ್ದರು. ಆ ಗುಂಪಿನಲ್ಲಿ ಇಬ್ಬರು ಲಾಯರು, ಒಬ್ಬ ಜಮೀನುದಾರ, ಒಬ್ಬ ಆಫೀಸರು ಮತ್ತು ನಾಲ್ಕು ಜನ ಹೆಂಗಸರಿದ್ದರು. ಒಬ್ಬಳು ಆಫೀಸರನ ಹೆಂಡತಿ, ಇನ್ನೊಬ್ಬಳು ಜಮೀನುದಾರನ ಹೆಂಡತಿ, ಮೂರನೆಯವಳು ಜಮೀನುದಾರನ ಇನ್ನೂ ಮದುವೆಯಾಗಿರದ ತಂಗಿ, ನಾಲ್ಕನೆಯವಳು ವಿವಾಹ ವಿಚ್ಛೇದನ ಪಡೆದಿದ್ದ, ತನ್ನ ವಿಚಿತ್ರ ವರ್ತನೆಯಿಂದಲೂ ಪ್ರಣಯ ಸಾಹಸಗಳಿಂದಲೂ ಊರವರು ಬೆಚ್ಚಿಬೀಳುವಂತೆ ಮಾಡಿದ್ದ ಶ್ರೀಮಂತ ಸುಂದರಿ.
ಹವೆ ಬಹಳ ಚೆನ್ನಾಗಿತ್ತು. ರಸ್ತೆಯ ಮೇಲೆ ಬಿದ್ದಿದ್ದ ಹಿಮ ನುಣ್ಣಗೆ, ಗಟ್ಟಿಯಾಗಿ, ಟ್ರಾಯ್ಕಾಗಳು ಸಲೀಸಾಗಿ ಸಾಗುತ್ತಿದ್ದವು. ಊರಿನಿಂದ ಸುಮಾರು ಏಳು ಮೈಲಿ ಬಂದಮೇಲೆ ಗಾಡಿಗಳನ್ನು ನಿಲ್ಲಿಸಿ ಮುಂದೆ ಹೋಗುವುದೋ ಅಥವಾ ಊರಿಗೆ ಮರಳುವುದೋ ಎಂದು ಚರ್ಚೆ ನಡೆಸಿದ್ದರು.
'ಈ ರೋಡು ಎಲ್ಲಿಗೆ ಹೋಗುತ್ತದೆ?’ ವಿಚ್ಛೇದನ ಪಡೆದಿದ್ದ ಸುಂದರಿ ಮಾಕೊವ್ಕಿನಾ ಕೇಳಿದಳು.

ಕಳೆದುಹೋಗಿದ್ದರ ನೆನಪು, ಕಳೆದೂಹೋದ ನೆನಪು

ಪ್ರತಿ ದಿನವೂ ಅದು ಹೇಗೋ ಶೀಘ್ರ ಅಂತ್ಯ ಕಾಣುತ್ತೆ. ಬೆಳಗಾಗೆದ್ದು ರೆಡಿಯಾಗಿ ಎತ್ತ ಹೊರಟಿರುತ್ತೇವೋ ಅತ್ತ ಹೊರಟು ನಡೆದು ತಲುಪಿದುದರ ನೆನಪಿಲ್ಲದಷ್ಟು, ಪರಿವೆಯೂ ಇಲ್ಲದಷ್ಟು ಯಾಂತ್ರಿಕವಾಗಿ ದಿನ ಪ್ರಾರಂಭಿಸಿ ಹಾಗೆಯೇ ಮುಗಿಸಿರುತ್ತೇವೆ. ಹೀಗೆ ಸರಿದ ದಿನಗಳು ಎಷ್ಟೆಷ್ಟೋ.

ಈ ದಿನ ಹೇಳಿಕೊಳ್ಳುವಂತಾದ್ದು ಏನು ಮಾಡಿದೆ ಎಂಬುದನ್ನು ಸ್ವತಃ ಪ್ರಶ್ನಿಸಿಕೊಳ್ಳಿ (What did you do that was worth mentioning today?) ಎಂದು ಅನುಭವವುಳ್ಳವರು ಹೇಳಿದ ಮಾತೊಂದನ್ನು ಗೋಡೆಯ ಮೇಲಂಟಿಸಿದ ಬ್ಯಾನರಿನಲ್ಲೋದಿ "ಬೈಕು ತೆಗೆದುಕೊಂಡು ಹೋದೆ, ಟ್ರಾಫಿಕ್ ನಲ್ಲಿ ನಿಂತಿದ್ದೆ, ಲೈಬ್ರರಿಗೆ ಹೋಗಿದ್ದೆ, ವಾಪಸ್ಸು ಬಂದೆ" ಎಂದು ನೆನಪಿಸಿಕೊಂಡಾಗ ಬರುವುದು ಕೆಲವು ಕ್ಷಣಗಳ ನಂತರದ ಗೊಳ್ಳೆಂಬ ನಗು ಮಾತ್ರ.