ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಾಸನ ಜಿಲ್ಲೆಯ ಕುಂತಿಗುಡ್ಡದ ಬಗ್ಗೆ ನಾನು ಬರೆದ ಲೇಖನದ ವಿಷಯವಾಗಿ

ಮೇಲ್ಕಂಡ ವಿಷಯದಲ್ಲಿ ಬಂದಿರುವ ಪ್ರತಿಕ್ರಿಯೆಯ ಬಗ್ಗೆ ಹೇಳುವುದೇನೆಂದರೆ, ನಾನು ಲೇಖನ ಬರೆದು, ಸಂಪದದಲ್ಲಿ ಪ್ರಕಟವಾದನಂತರ ೨೦೦೫ರಲ್ಲಿ ಮಾನ್ಯ ಸ್ವಾಮಿಯವರು ಬರೆದಿರುವ ಲೇಖನವನ್ನು ನೋಡಿದೆ. ಸ್ವಾಮಿಯವರು ಬರೆದಿರುವ ಸುಂದರ ಲೇಖನವು ಶ್ರೀರಂಗಪಟ್ಟಣದ ಹತ್ತಿರವಿರುವ ಕುಂತಿಬೆಟ್ಟದ ಬಗ್ಗೆ.

ಕನಸ ಕದಿಯುವರಿಹರು ಹುಶಾರ್

ಹದಿ ಹರೆಯ ಮನದಲ್ಲಿ
 ವಿಷ ಬೀಜ ವಿದಳನ ನಡೆಸಿ
 ಕನಸ ಮಾರುವರಿಹರು
ಎಚ್ಚರಿಕೆಯಿರಲೀಗ ಮನ
ಮನೆಯ ಬಳಿಯಿಹರು
ಕನಸ ಕದಿಯುವರಿವರು ಹುಶಾರ್

ನಮ್ಮೆಲ್ಲರ ನಡುವೆಯೇ ಜಗ್ಗನೆದ್ದು
ಉದ್ಭವಿಸೋ ಈ ಅಸುರರು
ಹದಿ ಮನಕೆ ಧಾಂಗುಡಿಯಿಟ್ಟು
ದ್ವೇಶ ದಳ್ಳುರಿ ಬಿತ್ತಿ ಬೆಳೆಸಿ
ಮಾರುವರು ದಳ್ಳಾಳಿಗಳಿಗೆ
ಮನುಕುಲ ಸಂಕುಲದ ವೈರಿಗಳಿಗೆ

ನೆಪಕೆ ಧರ್ಮದ ಹೆಸರ ಲೇಪಿಸಿ
ಹುಚ್ಚು ಆವೇಶದ ದಾಹಕ್ಕೆ ಬಲಿ
 ಕೋಟಿ ಕೋಟಿ ಅಮಾಯಕ ಕನಸ ಲೂಟಿ
ಕೊಳ್ಳುಮಾರುವರಿರುವ ಈ ವಿಶ್ವ ಸಂತೆಯಲಿ
ಕನಸ ಕೊಳ್ಳುವವರಿಗೇನು ಬರ

ದೇಶ ಭಾಷೆ ಜಾತಿ ಭೇಧ,
ನ್ಯಾಯ ನೀತಿಗಳಿಲ್ಲದ ಇವರು
ಅದನೆ ಬಿತ್ತಿ ಬೆಳೆಸುವರು ನಮ್ಮ ನಮ್ಮಲ್ಲಿ

ಹಿತನುಡಿ

ಕೋಪ - ಸಮಸ್ಯೆ

ಮನಸ್ಸಿನಲ್ಲಿ ಸಿಟ್ಟನ್ನು ಇಟ್ಟುಕೊಳ್ಳುವುದೆಂದರೆ ಇತರರ ಮೇಲೆ ಎಸೆಯಲು ಬೆಂಕಿ ಕೆಂಡ ಎತ್ತಿದಂತೆ, ಮೊದಲು ಸುಡುವುದು ನಿಮ್ಮ ಕೈಯ್ಯೇ. ಬೇಡ ಬಿಟ್ಟುಬಿಡಿ.

ನೋಡಿ ಬನ್ನಿರಿ ಕುಂತಿ ಗುಡ್ಡವ, ಅಲ್ಲಿಯ ಬೆಡಗಿನ ಚಿತ್ತಾರವ

ಕುಂತಿ ಗುಡ್ಡ ಎಂಬುದು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿದ್ದು, ಹಾಸನದಿಂದ ಕೇವಲ ೧೦ ಕಿ.ಮಿ. ದೂರದಲ್ಲಿ ಅರಕಲಗೂಡು ರಸ್ತೆಯಲ್ಲಿದೆ. ಇಲ್ಲಿ ಅತಿ ಸುಂದರವಾದ ಪ್ರಕೃತಿ ಸೌಂದರ್ಯ ಹಾಗು ಇತಿಹಾಸ/ಪೌರಾಣಿಕ ಹಿನ್ನೆಲೆಯನ್ನು ಹೊಂದಿದ ದೇವಾಲಯವೂ ಇದೆ.

ಊಟಕೆ ಬಾರೋ ತುಂಟಣ್ಣ...

ಊಟಕೆ ಬಾರೋ ತುಂಟಣ್ಣ...
('ಬಾರೋ ಕೃಷ್ಣಯ್ಯ' ಹಾಡಿಂದ ಪ್ರೇರಿತ...)

ಬಾರೋ ತುಂಟಣ್ಣ...ಊಟಕೆ ಬಾರಣ್ಣ...
ತುಂಟಣ್ಣ ನೀ...
ಬಾರೋ ತುಂಟಣ್ಣ...ಊಟವ ಮಾಡಣ್ಣ...

ಬಾರೋ ಮಡಿಲಿಗೆ ಬಾರೋ...ನಿನ್ನ ಬಾಯಿ ತೋರೋ...ತುತ್ತನು ನೀಡುವೇ...
ಬಾರೋ ಮಡಿಲಿಗೆ ಬಾರೋ...ನಿನ್ನ ಬಾಯಿ ತೋರೋ...ತುತ್ತನು ನೀಡುವೇ...

ಸಂಡಿಗೆ ಪಾಯಸ, ಸಿಹಿ ಮೊಸರನ್ನ...
ಎಲ್ಲವ ನಿನಗಾಗಿ ಮಾಡಿಹೆನೋ...

ಅಮ್ಮ

ಅಮ್ಮ
-----
ಮೊದಲ ಪ್ರೀತಿ ನೀಡಿದವಳಮ್ಮ
ಮೊದಲ ಮಾತು ಆಡಿದವಳಮ್ಮ
ತೊದಲು ನುಡಿಯ ಕಲಿಸಿದಳಮ್ಮ
ಮೊದಲಾ ಮುತ್ತು ಕೊಟ್ಟವಳಮ್ಮ

ಮೊದಲ ಊಟ ಉಣಿಸಿದಳಮ್ಮ
ಮೊದಲ ಆಟ ಆಡಿಸಿದಳಮ್ಮ
ಮೊದಲ ಪಾಠ ಕಲಿಸಿದಳಮ್ಮ
ಮೊದಲಾ ನೋಟಕೆ ಕಂಡವಳಮ್ಮ

ಮೊದಲ ನಡಿಗೆ ನಡೆಸಿದಳಮ್ಮ
ಮೆಚ್ಚುವ ಉಡಿಗೆ ತೊಡಿಸಿದಳಮ್ಮ
ಕಣ್ಣಿಗೆ ಕಾಡಿಗೆ ಹಚ್ಚಿದಳಮ್ಮ
ದೃಷ್ಠಿಗೆ ಬೊಟ್ಟು ಇಟ್ಟವಳಮ್ಮ

ನ೦ಬಿಕೆ...

ಈ ತಿಳಿ ಬೆಳದಿ೦ಗಳಲ್ಲು ಈ ಪ್ರೀತಿ ಕುರುಡು...

ಬಾಡಿದೆ ಹೂವಿದು ಪ್ರೀತಿ ತು೦ಬಿದ ಹೃದಯ ಬರಡು...

ಸಿಹಿ ನುಡಿಗಳು ಮಾತಾಗದೆ ಕರಗಿದೆ ಕನಸಿನಲ್ಲಿ...

ಹೂವಿ೦ದಲೆ ನೋವಾಗಿದೆ ಹಸಿ ಗಾಯ ಮನಸ್ಸಿನಲ್ಲಿ...

ಕ್ಷಣ ಗಳಿಗೆ ಇನ್ನೇಕೆ, ಯುಗ ಯುಗಗಳೆ ಸಾಗಲಿ...

ನನ್ನೊಲವು ನಿನಗಾಗೆ, ನಾ ಕಾದಿರುವೆ ನಿನ್ನ ದಾರಿಯಲ್ಲಿ...

ಭೂಪಾಲ್ ದುರಂತವಾಗಿ ಇಂದಿಗೆ ೨೩ ವರ್ಷಗಳಾದವು!

ದಿನಾಂಕ: ಡಿಸೆಂಬರ್ ೩, ೧೯೮೪. ಬೆಳಗಿನ ಜಾವ.

ಸ್ಠಳ: ಭೂಪಾಲಿನ ಯೂನಿಯನ್ ಕಾರ್ಬೈಡ್ ಕಾರ್ಖಾನೆ.

ಸೋರಿದ ರಾಸಾಯನಿಕ: ಮೀಥೈಲ್ ಐಸೋ ಸಯನೇಟ್

ಪ್ರಮಾಣ: ೪೩ ಟನ್!

ಅನಿಲ ದುರಂತಕ್ಕೆ ತುತ್ತಾದವರು: ಸುಮಾರು ೫,೦೦,೦೦೦ ಜನರು.

ಮರಣಿಸಿದವರು: ಸುಮಾರು ೨೦,೦೦೦ (ಇಂದಿಗೂ ಪ್ರತಿ ದಿನ ಒಬ್ಬರು ಸಾಯುತ್ತಿದ್ದಾರಂತೆ!)

ಮಳೆಬಿಲ್ಲು-ಮಕ್ಕಳ ನಾಟಕೋತ್ಸವ

ಪ್ರೇಮಾ ಕಾರಂತರ ಸ್ಮರಣೆ ಪ್ರಯುಕ್ತ ಐದು ದಿನಗಳ ಮಕ್ಕಳ ನಾಟಕೋತ್ಸವ ಎಂ.ಜಿ.ಎಂ ಕಾಲೇಜು(MGM), ಉಡುಪಿ ಇಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ ೬:೩೦ ಕ್ಕೆ ನಾಟಕ ಪಾ್ರರಂಭವಾಗಲಿದೆ.