ಚಿಕ್ಕಮಗಳೂರಿನ ತಿಪ್ಪನಹಳ್ಳಿ ಗೊತ್ತೇನು?

ಚಿಕ್ಕಮಗಳೂರಿನ ತಿಪ್ಪನಹಳ್ಳಿ ಗೊತ್ತೇನು?

ಬರಹ

ಸುಮಾರು ೨೩೦ ವರ್ಷಗಳ ಹಿಂದಿನಿಂದಲೂ ಚಿಕ್ಕಮಗಳೂರಿನಲ್ಲಿರುವ ಮನೆತನವೊಂದು ತನ್ನ ಕಾಫಿ ತೋಟಗಾರಿಕೆಯಿಂದಲೇ ಹೆಸರುವಾಸಿಯಾಗಿದೆ. ಅರಳುಗುಪ್ಪೆ ಚಂದ್ರೇಗೌಡ ಅವರು ೧೯೩೪ರಲ್ಲಿ ತಿಪ್ಪರಹಳ್ಳಿ ಎಂಬ ಎಸ್ಟೇಟ್ ಅನ್ನು ಪ್ರಾರಂಭಿಸಿದ್ದು, ಈಗ ಅದು ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ. ಚಾರಣಕ್ಕೆ ಹೋಗಲು ಆಸಕ್ತಿವುಳ್ಳವರಿಗಂತು ಈ ಪ್ರದೇಶ ಹೇಳಿ ಮಾಡಿಸಿದಂತಿದೆ. ನೀವು ಎಂದಾದರೂ ಚಿಕ್ಕಮಗಳೂರಿನಿಂದ ೧೦ ಕಿಲೋ ಮೀಟರ್ ದೂರವಿರುವ ಬಾಬಬುಡನಗಿರಿಯ ಈ ಪ್ರದೇಶಕ್ಕೆ ಭೇಟಿ ನೀಡಿದ್ದಲ್ಲಿ ನಿಮಗೆ ಅಲ್ಲಾದ ಅನುಭವವನ್ನು ತಿಳಿಸಿ.

ಸರ್ ಮಿರ್ಜಾ ಇಸ್ಮಾಯಿಲ್, ರಾಜೇಂದ್ರ ಒಡೆಯರ್ ಮುಂತಾದವರು ಈ ತಾಣಕ್ಕೆ ಭೇಟಿ ನೀಡಿದ್ದಾರೆ ಎಂಬ ಬಗ್ಗೆನೂ ಅಂತರ್ಜಾಲದಲ್ಲಿ ಮಾಹಿತಿ ಸಿಕ್ಕಿದೆ.

http://www.thippanahallihomestay.com/index.html ಈ ವೆಬ್ ಸೈಟ್ ನಲ್ಲಿ ಎಸ್ಟೇಟ್ ಬಗ್ಗೆ ಆಕರ್ಷಣೀಯ ಮಾಹಿತಿ ಜೊತೆಗೆ ಹಲವು ಛಾಯಾಚಿತ್ರಗಳೂ ನನ್ನನ್ನು ಸೆಳೆಯಿತು.

ನಿಮಗೆ ತಿಪ್ಪನಹಳ್ಳಿ ಬಗ್ಗೆ ಏನು ಅನ್ನಿಸುತ್ತಿದೆ?