ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಐ ಟಿ ನೌಕ್ರಿ

ಈ ಐ ಟಿ ಚಟುವಟಿಕೆ
ಬರಿ ಒಂದು ನಾಟಿಕೆ
ಕುತ್ತಲ್ಲೆ ಕುಡೋದು
ಕುತ್ತಲ್ಲೆ ತಿನ್ನೋದು
ಗಡಿಯಾರ ನೋಡೋದು
ಕುರಿಯಂತೆ ಓಡೋದು
ವಾರೆಲ್ಲ ದುಡಿಯೊದು
ಎರಡ್ ದಿವಸ ಮಲ್ಗೊದು
ಕೈ ತುಂಬ ದುಡ್ಡಿದ್ರು
ಸಂಸಾರ ಇದ್ದೋರು
ಈ ನೌಕ್ರಿ ಮಾಡ್ಬಾರ್ದು...

ಜಿಮೇಲ್ ಕನ್ನಡ

ಜೀಮೇಲ್ ಮೂಲಕ ಮಿನ್ನಂಚೆ ಕಳಿಸಿದ್ಮೇಲೆ your message has been sent ಅಂತ ಬರುತ್ತಲ್ಲವೇ? ಕನ್ನಡ ಜೀಮೇಲ್ ನಲ್ಲಿ ಅದೇ "ನಿಮ್ಮ ಸಂದೇಶವನ್ನು ಕಳುಹಿಸಲಾಗಿಲ್ಲ" ಎನ್ನುತ್ತೆ, ಆದರೆ ಸಂದೇಶ ತಲುಪಿರುತ್ತೆ. ಗಮನಿಸಿದ್ದೀರಾ?

ಪ್ರೀತಿಯಿಂದ
ಸಿ ಮರಿಜೋಸೆಫ್

ಯಾಕೆ ಹೀಗೆ ನನ್ನೊಳಗೆ?

ನಾನು ಜೀವನದಲ್ಲಿ ಮಿಂಚಬೇಕು. ಎಲ್ಲರೂ ಗುರುತಿಸುವಂತಹ ಕಾರ್ಯ ಮಾಡಬೇಕು. ನನ್ನದೇ ಆದಂತಹ ವೆಬ್ ಸೈಟ್ ಮಾಡಬೇಕು. ಅದು ಇದು... ಹೀಗೆ ಎಲ್ಲವನ್ನೂ ನನ್ನ ಒಳ ಮನಸ್ಸಿಗೆ ಸರಿ ಎನ್ನಿಸಿದ್ದೆಲ್ಲವನ್ನೂ ಮಾಡಬೇಕು. ಪ್ರತೀ ಕ್ಷಣವನ್ನೂ ಸದುಪಯೋಗಿಸಿಕೊಳ್ಳಬೇಕು. ಸದಾ ಲವಲವಿಕೆಯಿಂದರಬೇಕು. ಇತರರನ್ನು ನಗಿಸುತ್ತಿರಬೇಕು. ಅವರೇನೆ ಅಂದರೂ ನೊಂದು ಕೊಳ್ಳಬಾರದು.

ಮುಖವಾಡ

ಸಂಪದದ ಕೆಲ ಸದಸ್ಯರು ಕಪ್ಪೆ, ಕೋತಿ, ಹಾವು, ಏಣಿಗಳ ಮುಖವಾಡ ಹಾಕ್ಕೊಂಡೇ ಬರೀತಾರೆ. ಅವರಿಗೆ ತಮ್ಮ ಮಕ ತೋರ್ಸೋಕೆ ಏನೋ ಒಂಥರಾ ಕೀಳರಿಮೆ/ನಾಚಿಕೆ/ಅಥವಾ ಇನ್ನೇನಿರಬಹುದು?

ಪ್ರೀತಿಯಿಂದ
ಸಿ ಮರಿಜೋಸೆಫ್

Profileನಲ್ಲಿ ಭಾವಚಿತ್ರ ಹಾಕುವುದು ಹೇಗೆ?

ನಾನು ಸಮ್ಪದಕ್ಕೆ ಸೇರಿ ಸುಮಾರು ೧೯ ವಾರಗಳು ಆಗಿವೆ...

ಆದರೂ ನನಗೆ ನನ್ನ ಭಾವಚಿತ್ರ ಹಾಕಲು ಹೇಗೆ ಎನ್೦ದು ಗೊತ್ತಾಗುತ್ತಿಲ್ಲ...

ದಯವಿಟ್ಟು ಯಾರಾದರೂ ಸಹಾಯ ಮಾಡಿರಿ...

 

ಇ೦ತಿ ನಿಮ್ಮವ,

 ಅನಿಲ್ ರಮೇಶ್...

ಗಂಭೀರ ವಾಸ್ತವತೆಯಲ್ಲಿ ಸೃಜನಶೀಲತೆಯನ್ನು ಮೂಡಿಸಿದ `ಟಕ್ ಟಿಕ್ ಪೆನ್ನು'

ವಾಸ್ತವತೆಯನ್ನೇ ಗಂಭೀರವಾಗಿ ಬಿಂಬಿಸುವ ಸೃಜನಶೀಲ ಕಥೆಗಳ ಗುಚ್ಛ, `ಟಕ್ ಟಿಕ್ ಪೆನ್ನು' ಕಥೆಗಾರ, ವಿಮರ್ಶಕ ನರೇಂದ್ರ ಪೈ ಅವರ ಮೊದಲ ಕಥಾ ಸಂಕಲನವೆಂದರೆ ಆಶ್ಚರ್ಯವಾಗದಿರಲಾರದು. ಕಥೆಗಾರರಾಗಿ ಗಮನ ಸೆಳೆದಿರುವ ನರೇಂದ್ರ ಪೈಯವರ ಸುಮಾರು ಕಥೆಗಳು ಇಷ್ಟರವರೆಗೆ ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಕಥಾಲೋಕದಲ್ಲಿ ಯಾರನ್ನೂ ಅನುಕರಿಸದೆ ತಮ್ಮದೇ ಆದ ಶೈಲಿಯಲ್ಲಿ ಕಥೆಗಳನ್ನು ಬರೆಯುವ ಇವರ ಕಥೆಗಳ ಸನ್ನಿವೇಶಗಳು, ಪಾತ್ರ ಚಿತ್ರಣಗಳು ಓದುಗರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುವುದಲ್ಲದೆ, ಘಟನೆಗಳು, ಪಾತ್ರಗಳು ನಮ್ಮ ಮನೆಯ ಅಥವಾ ನಮ್ಮ ನೆರೆ ಕರೆಯಲ್ಲೆಲ್ಲೋ ನಡೆದಷ್ಟು ವಾಸ್ತವಕ್ಕೆ ಹತ್ತಿರವಾಗಿ ಮನಸ್ಸಿನಾಳಕ್ಕೆ ಇಳಿಯುತ್ತವೆ. ಕಥೆಗಳನ್ನು ಓದಿದ ನಂತರವೂ ಇವು ನಮ್ಮ ಮನಸ್ಸಿನಲ್ಲಿಯೇ ಗುಯ್ಂ ಗುಟ್ಟುತ್ತಿರುತ್ತವೆ.

ಏಣಿ

ಈ ಜಗತ್ತು ಏಣಿಯಿದ್ದ೦ತೆ... ಕೆಲವರು ಮೇಲೇರುತ್ತಾರೆ... ಕೆಲವರು ಕೆಳಗಿಳಿಯುತ್ತಾರೆ...