ಯಾಕೆ ಹೀಗೆ ನನ್ನೊಳಗೆ?

Submitted by veenadsouza on Thu, 06/26/2008 - 17:39

ನಾನು ಜೀವನದಲ್ಲಿ ಮಿಂಚಬೇಕು. ಎಲ್ಲರೂ ಗುರುತಿಸುವಂತಹ ಕಾರ್ಯ ಮಾಡಬೇಕು. ನನ್ನದೇ ಆದಂತಹ ವೆಬ್ ಸೈಟ್ ಮಾಡಬೇಕು. ಅದು ಇದು... ಹೀಗೆ ಎಲ್ಲವನ್ನೂ ನನ್ನ ಒಳ ಮನಸ್ಸಿಗೆ ಸರಿ ಎನ್ನಿಸಿದ್ದೆಲ್ಲವನ್ನೂ ಮಾಡಬೇಕು. ಪ್ರತೀ ಕ್ಷಣವನ್ನೂ ಸದುಪಯೋಗಿಸಿಕೊಳ್ಳಬೇಕು. ಸದಾ ಲವಲವಿಕೆಯಿಂದರಬೇಕು. ಇತರರನ್ನು ನಗಿಸುತ್ತಿರಬೇಕು. ಅವರೇನೆ ಅಂದರೂ ನೊಂದು ಕೊಳ್ಳಬಾರದು. ಹೀಗೆ ಏನೇನೊ ಮಾಡಬೇಕೆಂದು ಅಂದು ಕೊಳ್ಳುತ್ತೇನೆ. ಹಲವು ಬಾರಿ ಮಾಡಿದ್ದೇನೆ ಕೂಡ. ಸ್ನೇಹಿತರಿಂದ ನಿನ್ನಷ್ಟು ಲವಲವಿಕೆಯಿಂದ ಇರೋರು ಈ ಪ್ರಪಂಚದಲ್ಲಿ ಯಾರೂ ಇಲ್ಲ ಅನ್ನೊ ಅಷ್ಟರ ಮಟ್ಟಿಗೆ ಅವರನ್ನು ನಗಿಸುತ್ತಿದೆ.

ಅದ್ರೂ ಯಾಕೆ ಕೆಲವೊಮ್ಮೆ ತೀರಾ ನಿರಾಶಿತಳಾಗುತ್ತೇನೆ. ಜೀವನವೇ ಬೇಡ ಅನ್ನಿಸುವಷ್ಟು ಬೇಸರವಾಗಿ ಬಿಡುತ್ತದೆ. ಯಾಕೆ ಹೀಗಾಗುತ್ತದೆ.

ಹಾಗೇ ನೋಡಿದ್ರೆ ...

ನನ್ನಷ್ಟು ಅದ್ರಷ್ಟವಂತೆ ಯಾರೂ ಇಲ್ಲ. ನನ್ನನ್ನು ಯಾವತ್ತೂ ನಿರಾಶೆಗೊಳಿಸದ ಅಪ್ಪಾಮ್ಮ, ಸದಾಕಾಲ ಸ್ಪಂದನೆಯಲ್ಲಿರುವ ಸ್ನೇಹಿತರು, ಸಹುದ್ಯೋಗಿಗಳು, ಪದವಿ ಮುಗಿದಾಕ್ಷಣ ಉದ್ಯೋಗಕ್ಕಾಗಿ ಅಲೆಡಾಡುವ ಅವಕಾಶವನ್ನೇ ನೀಡದ ಭಗವಂತ... ಎಲ್ಲವೂ ಇದ್ದು
ಕೆಲವೊಮ್ಮೆ ಇಲ್ಲವೆನ್ನಿಸುತ್ತಿದೆ.

ಯಾಕೆ ಹೀಗೆ... ನನಗೆ ಮಾತ್ರನ ಅಥವಾ ನಿಮಗೂ ಹೀಗೆ ಅನ್ನಿಸಿತ್ತೆ...

Rating
No votes yet

Comments