ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹನ್ನೊಂದನೆಯ ಕಂತು

ಎಷ್ಟೋ ದಿನಗಳವರೆಗೆ ಗುರು, ತನ್ನ ಧ್ಯೇಯದ ಪ್ರಾಮುಖ್ಯ, ಹೆನ್ರಿ ಅಲ್ಲಿಗೆ ಬಂದು ತನ್ನ ವೃತ್ತಪತ್ರಿಕೆಯಲ್ಲಿ ಆಶ್ರಮದ ಬಗ್ಗೆ ವರದಿ ಮಾಡಲೇಬೇಕಾದ ತುರ್ತು ಎಲ್ಲವನ್ನೂ ವಿವರಿಸುತ್ತ ನನ್ನಲ್ಲಿ ಸಹನೆಯಿಂದಿದ್ದ. ಕ್ರಮೇಣ ದಿನ ಕಳೆಯುತ್ತಿದ್ದಂತೆ ಹೆನ್ರಿಯು ಬರದಿದ್ದಾಗ ಅವನ ಧೋರಣೆ ಬದಲಾಯಿತು. "ಹೆನ್ರಿ ಏಕೆ ಬರಲಿಲ್ಲ? ನೀನು ಅವನಿಗೆ ಶಿಫಾರಸು ಮಾಡಿ ಬರೆಯಲಿಲ್ಲವೇ?

ಮುಂಬೈ - ಚರ್ಚ್ ಗೇಟ್ ಸುತ್ತಮುತ್ತ ಒಂದು ದಿನ

ಚರ್ಚ್ ಗೇಟ್ ಸುತ್ತಮುತ್ತಲಿನ ಪ್ರದೇಶ ಮುಂಬೈನಲ್ಲಿ ವ್ಯಾಪಾರ ವಹಿವಾಟುಗಳಿಗೆ ಹೆಸರಾದ ಸ್ಥಳ. ಒಮ್ಮೆ ನಾನು ನನ್ನಿಬ್ಬರು ಸ್ನೇಹಿತರೊಂದಿಗೆ ಕೆಲವು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಚರ್ಚ್ ಗೇಟ್ ಪ್ರದೇಶಕ್ಕೆ ಹೊರಟೆವು. ಮಧ್ಯಾಹ್ನದ ಊಟ ಮುಗಿಸಿ, ಮುಂಬೈ ಲೋಕಲ್ ರೈಲನ್ನು ಹಿಡಿದು ಚರ್ಚ್ ಗೇಟ್ ತಲುಪುವ ಹೊತ್ತಿಗೆ ಗಂಟೆ ಐದಾಗಿತ್ತು.

ಸದಾ ನನಗಿರಲಿ

ದಿನವು ಹೊಸತು ಹೊಸತು ಬರಲಿ
ಹಳೆಯ ನೆನಪುಗಳ ಸುಳಿವಿರದಿರಲಿ
ಉಲ್ಲಾಸ, ಉತ್ಸಾಹ ಕುಂದದಿರಲಿ
ಹುಡುಕಾಟ ಕೊನೆವರೆಗು ನಿಲ್ಲದಿರಲಿ

ಕಲ್ಪನಾ ಲಹರಿ ಕೊನೆಯಾಗದಿರಲಿ
ಸೃಜನಶೀಲ ಮನ ಮಟುಕಾಗದಿರಲಿ
ಕಂಡ ಕನಸುಗಳು ಕಾಣದಾಗದಿರಲಿ
ಅವತರಿಪ ಆಸೆಗಳಿಗೆ ಕಡಿವಾಣವಿರಲಿ

ಅರಿವಿನ ಹಸಿವು ಹುಚ್ಚೆದ್ದು ಕುಣಿಯಲಿ
ಒಲ್ಲದ ವಿಷಯಗಳು ತಲೆ ಕೆಡಸದಿರಲಿ

ದುರವಸ್ಥೆಯ ಪರಮಾವಧಿ

ಎಂದಿನಂತೆ ಕಛೇರಿಯಿಂದ ಸರಿಯಾಗಿ 6:೦೦ ಗಂಟೆಗೆ ಹೊರಟೆ ಮಾರನೆದಿನ ಗೌರಿ ಹಬ್ಬವಾದ ಕಾರಣದಿಂದ ಎಲ್ಲರು ಬೇಗ ಹೊರಡಲು ಅನುವುಮಾಡಿಕೊಳ್ಳುತ್ತಿದ್ದರು.

"ಗುಬ್ಬಚ್ಚಿಗಳು"

ಸಿಟೀಲಿ ಗುಬ್ಬಚ್ಚಿಗಳು ಮಾಯವಾದವು. ಗಮನಿಸಿದ್ದೀರಾ?

ಇದೇ subtle ವಿಷಯದ ಸುತ್ತ ಹೆಣೆದಿರುವ ಕಥೆಯೊಂದು ಅರ್ಥಪೂರ್ಣ ಹಾಗೂ ಕಲಾತ್ಮಕ ಚಿತ್ರವಾಗಿ ಹೊರಬರಲಿದೆ.

ಬಿ ಸುರೇಶ್ ರವರು ನಿರ್ಮಿಸುತ್ತಿರುವ "ಗುಬ್ಬಚ್ಚಿಗಳು" ಚಿತ್ರದ ನಿರ್ದೇಶಕ [:http://sampada.net/user/abhaya_simha|ಅಭಯ್ ಸಿಂಹ]. ಕಥೆ [:http://sampada.net/user/ismail|ಇಸ್ಮಾಯಿಲರದ್ದು].

ರೈಲ್ವೆ ಇಲಾಖೆಯ ವಿರುದ್ಧ ಹೋರಾಟ ನಿಲ್ಲೋದಿಲ್ಲ - ಕರವೇ ಸ್ಪಷ್ಟನೆ

ರೈಲ್ವೆ ಇಲಾಖೆಯ ವಿರುದ್ಧ ಹೋರಾಟ ನಿಲ್ಲೋದಿಲ್ಲ - ಕರವೇ ಸ್ಪಷ್ಟನೆ

ರಸ್ತೆಗಿಂತ platform ಚೆಂದ

ಅಕ್ಕಪಕ್ಕದ ಬಸ್ಸು ಕಾರು ಮೋಟರ್ ಸೈಕಲ್ಲುಗಳ ಹೊಗೆ ಕುಡಿಯುತ್ತ ಫ್ಲೈ ಓವರ್ ಹತ್ತಿದ ಮೋಟರ್ ಸೈಕಲ್ ಸವಾರನಿಗೆ ಕಂಡದ್ದು ಸ್ನೇಹಿತರೊಬ್ಬರು ನೆನಪಿಸಿದ್ದ 8th wonder. ಸರಿಯಾಗಿ ಫ್ಲೈ ಓವರ್ ಮಧ್ಯದಲ್ಲೊಂದು ಸಿಗ್ನಲ್ - ಎಲ್ಲುಂಟು ಎಲ್ಲಿಲ್ಲ?
ಆಗಲೇ ಸಿಗ್ನಲ್ಲಿಗೆ ಮತ್ತೊಂದು ಹೆಸರಿಡಬೇಕಾಗಿತ್ತು ಅನ್ನಿಸಿದ್ದು - ಹೊಗೆ ಕುಡಿಸುವ ಕೇಂದ್ರ ಎಂಬುದಾಗಿ. ಸಿಗ್ನಲ್ ಬಂದರೆ ಸಾಕು ನಿಂತ ಜಾಗದಿಂದ ಕದಲಲು ಆಗದೆ ಬಲವಂತವಾಗಿ ಹೊಗೆ ಕುಡಿಯಬೇಕು ಎಂದು ಗೊಣಗಿಕೊಂಡ.

ಚಾರಿತ್ರಿಕ ನಾಟಕಗಳ ಪುನರ್ಜನ್ಮದಾತ - ಆಂಜನೇಯ

ಚಾರಿತ್ರಿಕ ನಾಟಕಗಳೆಂದರೆ ಅದೇನೋ ನಮ್ಮ ಜನರಿಗೆ ಒಂದು ರೀತಿಯ ಅಲರ್ಜಿ. ಯಾರದೋ ಕಥೆ, ಎಂದೋ ಆಗಿಹೋದ ಘಟನೆ, ಯಾರಿಗೆ ಬೇಕು ಎಂದು ಮೂಗು ಮುರಿಯುವವರೇ ಇಂದು ಹೆಚ್ಚಾಗಿ ಕಾಣುವ ಜನ. ನಾಟಕವೆಂದರೆ ಅವರ ಮನಸ್ಸಿನಲ್ಲಿ ಮೂಡುವುದು ಅದೊಂದು ಕೇವಲ ಮನರಂಜನೆಯ (ಕೆಲವುಸಾರಿ ಕೀಳು ಮಟ್ಟದ) ತಾಣ ಎಂಬ ಚಿತ್ರಣವೇ.