ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶಬ್ದಗಳ ಹೆಣಿಕೆ

ಕೆಲವು ಆಂಗ್ಲ ಪದಗಳಿಗೆ ಕನ್ನಡದ ಪದಗಳನ್ನು ಈ ರೀತಿ ಹೆಣೆದಿದ್ದೇನೆ. ನಿಮ್ಮ ಸಲಹೆ/ಆಕ್ಷೇಪಕ್ಕೆ ಆಹ್ವಾನ.
ant eater=ಇಱುತಿನಿ (ಈಗಾಗಲೇ ಉಪಯೋಗದಲ್ಲಿದೆ.)
rodent=ಕುಱುಕ (ಇಲಿ, ಮೊಲ, ಅಳಿಲು ಮುಂತಾದ ಯಾವಾಗಲೂ ಕೊಱೆಯುವ ಪ್ರಾಣಿಗಳು)
Electricity=ಮಿಂಚುರಿ
Falsely used "Dravidian"=ತೆನ್ನುಡಿ (ಈಗಾಗಲೆ ಚರ್ಚಿತವಾಗಿದೆ).

ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ

ನಮ್ಮ ಅಮ್ಮನ ಮನೆಯಲ್ಲಿ ಇದ್ದಾಗ ನಂಗೆ ಅಡಿಗೆ ಮಾಡೋಕೆ ಬರ್ತಿರಲಿಲ ಅನ್ನೊ ವಿಷಯ ಈಗಾಗಲೆ ಹೇಳಿದೀನಿ ಅದರಿಂದಾದ ಪಜೀತಿನೊ ಒಳ್ಳೆ ಮೆಗಾ ಧಾರವಾಹಿ ತರಹ ಎಳೆದು ಬರೆದಿದ್ದೀನಿ
ಹ್ಯಾಗೊ ಅಲ್ಲಿ ಇಲ್ಲಿ ನೋಡಿ ಕಲಿತು ಒಂದದು ಹುಳಿ , ಸಾರು ಆಂಬೊಡೆ, ಜಾಮೂನು ಇವುಗಳನ್ನ ಚೆನ್ನಾಗಿ ಮಾಡೋದನ್ನ ಕಲ್ತಿದೀನಿ.
ಈಗ ಮೂರು ತಿಂಗಳಿಂದ ನಮ್ಮ ಪತಿರಾಯರು ನಮ್ಮ ಚಿಕ್ಕಮ್ಮ (ಅವರ ಮಗನಿಗೆ ಹೆಣ್ಣು ಹುಡುಕಬೇಕಾದ್ದು) ಮುದ್ದೆ ಎಷ್ಟು ಚೆನ್ನಾಗಿ ಮಾಡ್ತಾರೆ ಗೊತ್ತಾ ಅದೆಲ್ಲಾ ಮಾಡೋಕೆ ಪುಣ್ಯ ಮಾಡಿರಬೇಕು ಅಂತ ಹಂಗಿಸುತಿದ್ದರು.

ನನಗೂ ಸಾಕಾಯಿತು. ಒಮ್ಮೆ ಮಾಡೋಣ ಅಂತ ಕೈ ಹಾಕಿದೆ

ಗಂಟು ಗಂಟಾದ ಗಂಜಿಯ ರೀತಿಯ ರಾಗಿ ಹಿಟ್ಟು ಆಯಿತು
ಇನ್ನು ಮೇಲೆ ಮುದ್ದೆಯ ಹೆಸರೂ ಕೂಡ ಅಪ್ಪಿತಪ್ಪಿ ನಿನ್ನ ಮುಂದೆ ಹೇಳೊದಿಲ್ಲ ಅಂತಂದುಬಿಟ್ಟರು.

ಸರಿ ಮತ್ತೊಮ್ಮೆಸ್ವಲ್ಪ ನೀರು ಕಡಿಮೆ ಹಾಕಿ ಮಾಡಿದೆ
ಹಸಿ ಹಸಿ ಹಿಟ್ಟು ಬಾಯಿಗೆ ಸಿಕ್ಕಿತು
ಈ ಬಾರಿ ಅವರಿಗೆ ಕೊಡಲಿಲ್ಲ

ಕೋರಿಕೆ....

ಮುಸ್ಸಂಜೆಯ ಕೆಂಪು ಮುಗಿಲಲಿ, ಜಗವಾಳುವ ಸೂರ್ಯ ಕಣ್ಮರೆಯಾದಂತೆ...
ಹುಚ್ಚು ಮನಸಿನ ನಿನ್ನ ಭಾವನೆಗಳಲಿ ಜಗ ಗೆಲ್ಲುವ ಪ್ರೀತಿಯದು ಅಡಗಿ ಬೆಚ್ಚಿ ಕುಳಿತಿದೆ...
ನನಗೋ ಪ್ರೀತಿಯದು ಅಚ್ಚುಮೆಚ್ಚು, ನಿನಗೋ ಮನದೊಳಗಿನ ಉರಿವ ಕಿಚ್ಚು..
ನಿನಗಾಗಿ ಹೃದಯದ ಬಾಗಿಲಲಿ ಇಣುಕಿಣುಕಿ ನೋಡುತ್ತಾ , ಕಾದು ಕುಳಿತಿದ್ದ ಪ್ರೀತಿಗೀಗ ದಣಿವಾಗಿದೆ...

ಐತ್ತಲಕಡಿ !

’ಗಜ’ ಚಿತ್ರದ ’ಜಲ ಜಲ ಜಲಜಾಕ್ಷಿ’ ಹಾಡಿನ ಸಾಹಿತ್ಯ.

ಜಲ ಜಲ ಜಲ ಜಲಜಾಕ್ಷಿ
ಮಿಣ ಮಿಣ ಮಿಣ ಮೀನಾಕ್ಷಿ
ಕಮ ಕಮ ಕಮ ಕಮಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೆ.......
ಐತ್ತಲಕಡಿ, ಬಾರೆ........

ಲಗ್ನ ಹಾಕೂಮ
ವಾಲ್ಗ ಊದ್ಸೂಮ
ಊಟ ಹಾಕ್ಸೂಮ
ಕಟ್ಟಿಕೋ ಕಟ್ಟಿಕೋ

ಹಾರನ್ ಕಟ್ಸೂಮ
ಹಾಡ್ನಾ ಹಾಕ್ಸೂಮ
ಡೌಲು ತೋರ್ಸೂಮ
ಯಮ್ಮಾ ಯಮ್ಮಾ
ಉಳ್ಳಾಡೂಮ ನಳ್ಳಾಡೂಮ ಮುದ್ದಾಡೂಮ
ಐತ್ತಲಕಡಿ ||ಪ||

ಬೆಸ್ತರ ಹಾಡು

ಅನಿವಾಸಿಯವರ ಬೆಸ್ತರ ನೀಲುಗಳು ಓದಿದ ಮೇಲೆ
ನಾವು ಶಾಲೆಯಲ್ಲಿದ್ದಾಗ(ಆರನೆ ಕ್ಲಾಸ್ ಅನ್ನಿಸುತ್ತೆ) ಒಂದು ಹಾಡಿಗೆ ನೃತ್ಯ ಮಾಡಿದ್ದೆವು
ಆಗ ಈಗಿನಂತೆ ಟೇಪ್ ರೆಕಾರ್ಡ್ ಹಾಕಿಕೊಂಡು ಕುಣಿಯುವಂತೆ ಇರಲಿಲ್ಲ ಆಗೆಲ್ಲಾ ಅದು ಅಫೆನ್ಸ್ ಅಂತಾ ಇತ್ತು. ಈ ಟ್ರೆಂಡ ಶುರುವಾಗಿದ್ದೆ ನಾನು ಎಂಟನೇ ತರಗತಿಗೆ ಬಂದಮೇಲೆ ಅಂತನ್ನಿಸುತ್ತೆ.

ಧೈರ್ಯದಿಂದ OOXML ಫಾರ್ಮ್ಯಾಟನ್ನು ವಿರೋಧಿಸಿದ ಮೂರೇ ದೇಶಗಳಲ್ಲಿ ಭಾರತವೂ ಒಂದು!

Protest for Document Freedom
Photo: Kushal Das

ನಮ್ಮಲ್ಲಿ ನಿತ್ಯ ತಂತ್ರಜ್ಞಾನಗಳ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಓದಿಕೊಳ್ಳುತ್ತಿರುವವರಿಗೆ ಇದು ಆಗಲೇ ಹಳೆಯ ಸುದ್ದಿ. ಆದರೆ ನನಗೆ ಈ ಬಗ್ಗೆ ಬರೆಯಲಾಗಿರಲಿಲ್ಲ. ಈಗ ಬರೆಯುತ್ತಿರುವೆ.

ಡಾಕ್ಯುಮೆಂಟ್ ಸ್ವಾತಂತ್ರ್ಯಕ್ಕಾಗಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ [:blog/hpn/16/04/2008/8409|ಸಾಂಕೇತಿಕ ಪ್ರತಿಭಟನೆಯ ಬಗ್ಗೆ] ಈ ಹಿಂದೆ ಬರೆದಿದ್ದೆ. ನೂರಾರು ಜನ ಟೌನ್ ಹಾಲ್ ಎದುರು ಕ್ಯಾಂಡಲ್ ಹಚ್ಚಿ ನಿಂತು ಮೈಕ್ರೊಸಾಫ್ಟಿನ ಏಕಸ್ವಾಮ್ಯ ಹೆಚ್ಚಿಸಬಹುದಾದ OOXML ಫಾರ್ಮ್ಯಾಟ್ ಬಗ್ಗೆ ISO ತೆಗೆದುಕೊಂಡಿದ್ದ ನಿರ್ಣಯವನ್ನು ವಿರೋಧಿಸಿದ್ದರು. ಈ ಫಾರ್ಮ್ಯಾಟ್ ಮುಕ್ತವಾದದ್ದು ಎಂದು ಮೈಕ್ರೋಸಾಫ್ಟ್ ಹೇಳಿಕೊಳ್ಳುತ್ತಿದೆಯಾದರೂ ನಿಜ ಸ್ಥಿತಿ ಹಾಗಲ್ಲವೆಂಬುದು ತಿಳಿದುಬಂದಂತೆ ವಿಶ್ವದಾದ್ಯಂತೆ ಹಲವೆಡೆ ಇದರ ವಿರೋಧ ಪ್ರಾರಂಭವಾಗಿತ್ತು.

ಈಗ ಕೊನೆಗೂ ನೂರಾರು ತಂತ್ರಜ್ಞರ ಕರೆಗೆ ಭಾರತ ಸರ್ಕಾರ ಓಗೊಟ್ಟಿದೆ. ಡಾಕ್ಯುಮೆಂಟ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೈಕ್ರೋಸಾಫ್ಟ್ ನ [:http://arstechnica.com/news.ars/post/20080531-ooxml-revolt-brewing-three-countries-appeal-iso-approval.html|OOXML ಫಾರ್ಮ್ಯಾಟ್ ವಿರೋಧಿಸಿ ಭಾರತ ಸರ್ಕಾರ ISO (International Standards Organization)ಗೊಂದು ಅಪೀಲ್ ಹಾಕಿದೆ!]

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..

ಮನಸೆಳೆಯುವ ಶ್ರೀಯಳ ಒಂದು ಚಿಕ್ಕ ಫೋಟೋ ಹಾಕಿಕೊಂಡೊಡನೆ, ಯಪ್ಪಾ, ಯಪ್ಪಾ, ಹೆಂಗೆಂಗೋ ಆಡುವ ನಮ್ಮ ಸಂಪದದ ಹುಡುಗರು ಇದನ್ನು ನೋಡಿ ಯಾವ ಪ್ರತಿಕ್ರಿಯೆ ನೀಡುತ್ತಾರೋ ನೋಡುವ ಹಂಬಲ.

ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

ಇದೊಂದು ಹೊಸಾ ಆಟ
ಹೂವಿನ ಹೆಸರುಳ್ಳ ಅಥವ ಹೂವು, ಸುಮ ಇನ್ನಿತರ ನಾಮಗಳನ್ನು ಹೊಂದಿರುವ ಯಾವುದೇ ಹಾಡನ್ನು ಇಲ್ಲಿ ಹಾಕಬಹುದು. ಗೊತ್ತಿದ್ದರೆ ಲಿಂಕ್ ಸಹಾ ಹಾಕಬಹುದು.
ಒಂದು ನಿಬಂಧನೆ ಆ ಹಾಡು ಯಾವ ಚಿತ್ರದ್ದು ಎಂಬುದು ಬೇಕೆ ಬೇಕು.
ಉದಾಹರಣೆಗೆ
ಹೂವು ಚೆಲುವೆಲ್ಲಾ ನಂದೆಂದಿತು : ಚಿತ್ರ ಹಣ್ಣೆಲೆ ಚಿಗುರಿದಾಗ ಹಾಡಿದವರು ಪ್. ಸುಶೀಲಾ

ಅವಳು ಮಾತುಗಾರ್ತಿ....

ಆದ್ರೆ. ತುಂಬಾನೆ ಪ್ರಾಕ್ಟಿಕಲ್.
ಆದಾಗ್ಯೂ ಅವಳು ಎಂದೂ ಬರದ ಅದಾರನ್ನೋ
ನೆನೆಯುತ್ತಾಳೆ.

ಆದರೂ ಅವಳು ಮಾತುಗಾರ್ತಿ...

ಅವಳು ನಿಜಕ್ಕೂ ಬುದ್ದಿವಂತೆ. ಆದ್ರೆ, ಅದರಿಂದ ಎಲ್ಲರ
ಮೇಲೂ ಹರಿಹಾಯುತ್ತಾಳೆ. ಆದ್ರೆ, ತಕ್ಷಣವೇ ಅವಳ
ಮನದ ಮೂಲೆಯಲ್ಲಿ ಪಾಪದವರು ಅನ್ನೊ ಸಾಲುಗಳು
ಮೂಡಿ ಹೋಗುತ್ತವೆ.

ಆದರೂ ಅವಳು ಮಾತುಗಾರ್ತಿ...