ಧೈರ್ಯದಿಂದ OOXML ಫಾರ್ಮ್ಯಾಟನ್ನು ವಿರೋಧಿಸಿದ ಮೂರೇ ದೇಶಗಳಲ್ಲಿ ಭಾರತವೂ ಒಂದು!
Photo: Kushal Das
ನಮ್ಮಲ್ಲಿ ನಿತ್ಯ ತಂತ್ರಜ್ಞಾನಗಳ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಓದಿಕೊಳ್ಳುತ್ತಿರುವವರಿಗೆ ಇದು ಆಗಲೇ ಹಳೆಯ ಸುದ್ದಿ. ಆದರೆ ನನಗೆ ಈ ಬಗ್ಗೆ ಬರೆಯಲಾಗಿರಲಿಲ್ಲ. ಈಗ ಬರೆಯುತ್ತಿರುವೆ.
ಡಾಕ್ಯುಮೆಂಟ್ ಸ್ವಾತಂತ್ರ್ಯಕ್ಕಾಗಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ [:blog/hpn/16/04/2008/8409|ಸಾಂಕೇತಿಕ ಪ್ರತಿಭಟನೆಯ ಬಗ್ಗೆ] ಈ ಹಿಂದೆ ಬರೆದಿದ್ದೆ. ನೂರಾರು ಜನ ಟೌನ್ ಹಾಲ್ ಎದುರು ಕ್ಯಾಂಡಲ್ ಹಚ್ಚಿ ನಿಂತು ಮೈಕ್ರೊಸಾಫ್ಟಿನ ಏಕಸ್ವಾಮ್ಯ ಹೆಚ್ಚಿಸಬಹುದಾದ OOXML ಫಾರ್ಮ್ಯಾಟ್ ಬಗ್ಗೆ ISO ತೆಗೆದುಕೊಂಡಿದ್ದ ನಿರ್ಣಯವನ್ನು ವಿರೋಧಿಸಿದ್ದರು. ಈ ಫಾರ್ಮ್ಯಾಟ್ ಮುಕ್ತವಾದದ್ದು ಎಂದು ಮೈಕ್ರೋಸಾಫ್ಟ್ ಹೇಳಿಕೊಳ್ಳುತ್ತಿದೆಯಾದರೂ ನಿಜ ಸ್ಥಿತಿ ಹಾಗಲ್ಲವೆಂಬುದು ತಿಳಿದುಬಂದಂತೆ ವಿಶ್ವದಾದ್ಯಂತೆ ಹಲವೆಡೆ ಇದರ ವಿರೋಧ ಪ್ರಾರಂಭವಾಗಿತ್ತು.
ಈಗ ಕೊನೆಗೂ ನೂರಾರು ತಂತ್ರಜ್ಞರ ಕರೆಗೆ ಭಾರತ ಸರ್ಕಾರ ಓಗೊಟ್ಟಿದೆ. ಡಾಕ್ಯುಮೆಂಟ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೈಕ್ರೋಸಾಫ್ಟ್ ನ [:http://arstechnica.com/news.ars/post/20080531-ooxml-revolt-brewing-three-countries-appeal-iso-approval.html|OOXML ಫಾರ್ಮ್ಯಾಟ್ ವಿರೋಧಿಸಿ ಭಾರತ ಸರ್ಕಾರ ISO (International Standards Organization)ಗೊಂದು ಅಪೀಲ್ ಹಾಕಿದೆ!]
ಪ್ರಪಂಚದ ಯಾವುದೇ ದೇಶಕ್ಕೂ ಮೈಕ್ರೋಸಾಫ್ಟ್ ವಿರೋಧಿಸುವ ಧೈರ್ಯವಿಲ್ಲದಿರುವಂತಿರುವಾಗ ಭಾರತ ವಿರೋಧಿಸಿರುವುದು ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಮೈಕ್ರೋಸಾಫ್ಟಿನ ಈ ಫಾರ್ಮ್ಯಾಟ್ ವಿರೋಧಿಸಿದ ಮೂರೇ ದೇಶಗಳಲ್ಲಿ ಭಾರತವೂ ಒಂದು! (ವಿರೋಧಿಸಿದ ಇತರ ದೇಶಗಳು - ಬ್ರೆಸಿಲ್, ಸೌತ್ ಆಫ್ರಿಕ).
ಬ್ರೆಸಿಲ್ ದೇಶದಲ್ಲಿ ಸುಮಾರು ವರ್ಷಗಳಿಂದಲೇ ಸ್ವತಂತ್ರ ತಂತ್ರಾಂಶದೆಡೆ ಗಮನ ಹರಿದಿತ್ತು. ಇತ್ತೀಚೆಗೆ ಅಲ್ಲಿ ಎಲ್ಲೆಡೆ ಇದೇ ಬಳಕೆಯಾಗುತ್ತಿದೆಯಂತೆ (ಪಕ್ಕದ ಕೇರಳದಂತೆ).
ಭಾರತದಲ್ಲಿ ಇದೇ ಮೊದಲ ಬಾರಿಗೆ ಹೀಗೊಂದು ಪ್ರಬಲ ಹಾಗೂ ಹಣವುಳ್ಳ ಮಲ್ಟಿ ನ್ಯಾಶನಲ್ ಎದುರು ಎತ್ತಿದ ದನಿ ಅನ್ಸತ್ತೆ. ಒಟ್ಟಾರೆ ಒಳ್ಳೆಯ ಬೆಳವಣಿಗೆ.
ಇದೇ ವಿಷಯವಾಗಿ [:http://deepakphatak.blogspot.com/2008/05/this-is.html|ದೀಪಕ್ ಫಾಠಕ್ ರವರು ಬರೆದಿರುವ ಪತ್ರ ಓದಿ].