ನಮ್ಮೂರಿನ ಚೋಮ, ಸಿದ್ರಾಮಜ್ಜ
ಊರಿನಲ್ಲಿ ಎಲ್ಲಿಯಾದರು ಹಲಗೆಯ (ಒಂದು ರೀತಿಯ ವಾದ್ಯ, ಸಾಹಿತ್ತಿಕ ಭಾಷೆಯಲ್ಲಿ "ದುಡಿ" ಅಂತ ಹೆಸರು, ಕಾರಂತರ ಚೋಮನ ದುಡಿ
ನೆನಪಿಗೆ ಬರಬಹುದೇ?) ಶಬ್ದ ಕಳಿದರೆ ಸಾಕು, ಸಿದ್ರಾಮಜ್ಜನು ಬಾರಿಸುತ್ತಿದ್ದ ಹಲಗೆಯ
ನೆನಪಾಗುತ್ತದೆ. ಸುತ್ತ ಮುತ್ತ ಇದ್ದ ಹಳ್ಳಿಗಳಲ್ಲೆಲ್ಲ ಅವನು ಬಾರಿಸುತ್ತಿದ್ದ ಹಲಗೆಯ
ನಾದ ಸಿಕ್ಕಾಪಟ್ಟೆ famous. ಮದುವೆಯಿರಲಿ, ಜಾತ್ರೆಯಿರಲ್ಲಿ, ಹಬ್ಬ-ಹರಿದಿನಗಳಿರಲಿ,
ಶವಸಂಸ್ಕಾರದ ಕಾರ್ಯವಾಗಿದ್ದರೂ ಸರಿಯೇ, ಸಿದ್ರಾಮಜ್ಜನ ಹಲಗೆಯ ನಾದ
ಅನಿವಾರ್ಯವಾಗಿತ್ತು. ಸಿದ್ರಾಮಜ್ಜ ತೀರಿಹೋಗಿ ಸುಮಾರು ಐದು ವರ್ಷಗಳೇ ಕಳೆದಿರಬೇಕು.
ಅವನು ಒಂದು ರೀತಿಯಲ್ಲಿ ನಮ್ಮೂರಿನ "ಚೋಮ!", ಕಾರಂತರ ಚೋಮ ಅತ್ಯಂತ ಮುಗ್ಧ ಮತ್ತು
ಸ್ವಾಮಿನಿಷ್ಟೆಯುಳ್ಳವನು, ಆದರೆ ನಮ್ಮೂರ ಚೋಮ, ಸಿದ್ರಾಮಜ್ಜ, ಒಂದು ರೀತಿಯಲ್ಲಿ
ಕ್ರಾಂತಿಕಾರಿ, ಕ್ರಾಂತಿಕಾರಿ ಅನ್ನುವುದಕ್ಕಿಂತ ತುಂಬಾ ಸ್ವಾಭಿಮಾನದ ವ್ಯಕ್ತಿ
ಅನ್ನಬಹುದು. ಯಾರು ತನಗೆ ಗೌರವದಿಂದ ಕಾಣುತ್ತಾರೋ, ಅವರನ್ನು ಮಾತ್ರ
ಗೌರವಿಸುತ್ತಿದ್ದನು. ಕೆಲವೊಮ್ಮೆ, "ದಲಿತನಾದರೇನು, ನಾನೂ ಮನುಷ್ಯನಲ್ಲವೇ?" ಎಂದು
ಪ್ರಶ್ನಿಸುವಂಹ ಸ್ವಭಾವದವನು. ಅವನ ಇನ್ನೊಂದು ವಿಶೇಷತೆಯೆಂದರೆ, ದಿನದ ಬಹುಪಾಲು ಭಾಗ
ಸಾರಾಯಿ ಕುಡಿದ ಅಮಲಿನಲ್ಲಿರುವುದು. ಪ್ರತಿ ಸಲ ಊರಿಗೆ ಹೋದಾಗ ಯಾವತ್ತಾದರು ಸಿಕ್ಕರೆ,
ಅವನ ಬಾಯಿಯಿಂದ ಬರುತ್ತಿದ್ದ ಹೆಂಡದ ವಾಸನೆ ನನ್ನನ್ನು ಒಂದು ಮಾರು ದೂರ
ನಿಲ್ಲಿಸುತ್ತಿತ್ತು; ಈಗ ಸ್ವಲ್ಪ adjust ಆಗಿದೆ ಅನ್ಕೋಬಹುದು :-).
- Read more about ನಮ್ಮೂರಿನ ಚೋಮ, ಸಿದ್ರಾಮಜ್ಜ
- Log in or register to post comments