ಮಳೆ
ಗವ್ವ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಜಿರ್..ಜಿರ್.. ಎನ್ನುವ ಹುಳಗಳ ಸದ್ದು.ಕಾಡುಗಳ ಮಧ್ಯೆ ಅಲ್ಲಲ್ಲಿ ಕಾಣುವ ಹೊಲಗದ್ದೆಗಳು.
- Read more about ಮಳೆ
- Log in or register to post comments
ಗವ್ವ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಜಿರ್..ಜಿರ್.. ಎನ್ನುವ ಹುಳಗಳ ಸದ್ದು.ಕಾಡುಗಳ ಮಧ್ಯೆ ಅಲ್ಲಲ್ಲಿ ಕಾಣುವ ಹೊಲಗದ್ದೆಗಳು.
ಚುನಾವಣಾ ಪಲಿತಾಂಶ
ನಾನು ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದ ನಂತರ ಬಂದ ಬಹುಪಾಲು ಅಭಿಪ್ರಾಯಗಳನ್ನು ಇತ್ತೀಚೆಗೆ ತಾನೆ ವೆಬ್‍ಸೈಟಿನಲ್ಲಿ ಹಾಕಿದ್ದೇನೆ. ಭಾರತದ ನನ್ನ ತಲೆಮಾರಿನ ತಲ್ಲಣ, ಆಶಾವಾದ, ಕನಸುಗಳು, ಆದರ್ಶಗಳು, ಸಿನಿಕತೆ, ಎಲ್ಲವೂ ಇಲ್ಲಿವೆ.
http://www.ravikrishnareddy.com/feedback.html
ಇದು ಪಯಣದ ಆರಂಭ. ಜೀವನ ಸಾರ್ಥಕ್ಯದ ಕ್ಷಣಗಳು ಈಗ ಆರಂಭವಾಗಿದೆ. ಒಂದಿಡೀ ತಿಂಗಳು ಮನಸ್ಸು ಎಲ್ಲಾ ತರಹದ ಗೊಂದಲ, ಗೊಜಲು, ಆಮಿಷ, ಒತ್ತಡ, ಮಮಕಾರ, ಆಸೆ, ಆಕಾಂಕ್ಷೆ, ಭಯಗಳಿಂದ ಮುಕ್ತವಾಗಿತ್ತು. ಬಹುಶಃ ಮೊದಲ ಬಾರಿಗೆ ಅನುಭವಿಸಿದ ಆತ್ಮತೃಪ್ತಿಯ ದಿನಗಳು ಅವು. ಸಂಪೂರ್ಣ ಆದರ್ಶದಲ್ಲಿ ನಡೆದುಕೊಂಡ ಕಾಲ. ಎಲ್ಲಿಯೂ ರಾಜಿಯಾಗಲಿಲ್ಲ. ಆತ್ಮಸಾಕ್ಷಿಗೊಪ್ಪದ್ದನ್ನು ಹೇಳಲಿಲ್ಲ, ಮಾಡಲಿಲ್ಲ.
ಸಣ್ಣ ಮನೆ, ಆಗ. ಬೆಳಗಾದರಾಯ್ತು, ಅಪ್ಪ ಸ್ವಿಚ್ ಆನ್ ಮಾಡಿದ ರೇಡಿಯೋ ನಮ್ಮೆಲ್ಲರನ್ನೂ ಎಚ್ಚರಿಸಿಬಿಡುತ್ತಿತ್ತು. ಪಿಟೀಲು ಚೌಡಯ್ಯನವರ ವಯೋಲ ಟ್ಯೂನು ನಮಗೆಲ್ಲ ಸುಪ್ರಭಾತ. ನಂತರ ರೇಡಿಯೋ ವಂದೇ ಮಾತರಂ ಗುನುಗುತ್ತಿದ್ದರೆ ನಮಗೆಲ್ಲ ಮುಖ ತೊಳೆಯದೆಯೇ ಫ್ರೆಶ್ ಆದಂತೆ! (ಆದರೂ ಮುಖ ತೊಳೆಯದಿದ್ದರೆ ಕಾಫಿ ಸಿಗೋದಿಲ್ಲ ಅನ್ನೋ ಕಾರಣಕ್ಕೆ ಕಣ್ಣು ಮುಚ್ಚಿಕೊಂಡೇ ಹಲ್ಲುಜ್ಜಿ ಬರುತ್ತಿದ್ದೆ).
ಅದಾಗಿ ಅಡುಗೆ ಮನೆಯಲ್ಲಿ ಗೋಡೆಗೊರಗಿ, ಕಾಲು ಚಾಚಿ ನೆಲದ ಮೇಲೆ ಕುಳಿತು ನಾನು ನಮ್ಮಣ್ಣ ಅಮ್ಮನ ಜೊತೆ ಮೆಲ್ಲನೆ ಮಾತನಾಡುತ್ತಿರುವಂತೆ ಸರಿಯಾಗಿ ರೇಡಿಯೋಲಿ ಸಿನಿಮಾ ಹಾಡುಗಳು ಪ್ರಾರಂಭವಾಗಿಬಿಟ್ಟಿರುತ್ತಿದ್ದವು. ನಾವು ಅಮ್ಮನ ಹತ್ತಿರ ಹಠ ಮಾಡಿ ಕಾಫಿಗೆ ಸಿಕ್ಕಾಪಟ್ಟೆ ಸಕ್ಕರೆ ಹಾಕಿಸಿಕೊಂಡು ಮೆಲ್ಲನೆ ಸಿನಿಮಾ ಹಾಡುಗಳನ್ನು ಕೇಳುತ್ತ ಚಮ್ಮಚದಲ್ಲಿ ಕಾಫಿ ಕುಡಿಯುತ್ತಿರುವಂತೆ (ಅಥವ ತಿನ್ನುತ್ತಿರುವಂತೆ) ಅತ್ತ ಕಡೆ ಅಕ್ಕ ಇನ್ನು ಮುಸುಕು ಹೊದ್ದಿಕೊಂಡು ಮಲಗಿರುತ್ತಿದ್ದಳು!
ಅದ್ಯಾಕೋ ವರ್ಷಗಳು ಕಳೆದಂತೆ, ಅಪ್ಪ ನಲವತ್ತರ ಬೌಂಡರಿ ದಾಟಿದಂತೆ ಚೌಡಯ್ಯನವರ ಟ್ಯೂನು ಹಾಗು ಸಿನಿಮಾ ಹಾಡುಗಳು ಹೋಗಿ ನಿಜವಾದ ಸುಪ್ರಭಾತ ಹಾಗೂ ಭಕ್ತಿ ಗೀತೆಗಳು ಶುರುವಾದವು (ಅಷ್ಟರಲ್ಲಿ ನಮ್ಮ ಮನೆಯಲ್ಲೊಂದು ಟೇಪ್ ರೆಕಾರ್ಡರ್ರು, ಜೊತೆಗೆ ನೂರಾರು ಕ್ಯಾಸೆಟ್ಟುಗಳು ಬಂದುಬಿಟ್ಟಿದ್ದವು. ರೇಡಿಯೋ ಕಡಿಮೆಯಾಗಿತ್ತು). ಆಗಲೂ ನಮಗೆ ಸಿನಿಮಾ ಹಾಡುಗಳು ಕೇಳಲು ಸಿಗುತ್ತಿದ್ದವು. ನಮ್ಮ ತಂದೆಯವರು ಇನ್ನೂ 'ತರುಣ'ರಿದ್ದಾಗ ಕೊಂಡಿದ್ದ ಕ್ಯಾಸೆಟ್ಟುಗಳು ಒಂದು ಡಬ್ಬದಲ್ಲಿ ಇನ್ನೂ ಇದ್ದವು. ಅವುಗಳಲ್ಲಿ ಸಿನಿಮಾ ಹಾಡುಗಳಿರುತ್ತಿದ್ದವು. ಉಳಿದಂತೆ ಭಕ್ತಿ ಗೀತೆಗಳೆ. ರೆಕಾರ್ಡರ್ರು ಕೈಗೆ ಸಿಕ್ಕಾಗಲೆಲ್ಲ ಆ ಕ್ಯಾಸೆಟ್ಟುಗಳನ್ನು ಹಾಕಿ ಕೇಳೋದೇ ಮಜ. ಕೆಲವು ಹಳೇ ಕ್ಯಾಸೆಟ್ಟುಗಳು ಸರಿಯಾಗಿ ಪ್ಲೇ ಆಗದೆ ಮೆಲ್ಲ ಮೆಲ್ಲನೆ ಅಪಸ್ವರ ಹಾಡುತ್ತಿದ್ದವು. ಅದನ್ನು ಕೇಳಿ ಹೋ ಅನ್ನೋದು. ಆಗೀಗ ಒಂದೊಂದು ಬಹಳ ಹಳೆಯ ಹಾಡುಗಳು ನಾವು ಹಾಕಿದ ಕ್ಯಾಸೆಟ್ಟಿನಿಂದ ಶುರುವಾದಾಗ ಅಮ್ಮ ಕೂಡ ಅಡುಗೆ ಮನೆಯಿಂದ ಆಚೆ ಬಂದು ಒಂದೆರಡು ಕ್ಷಣ ಕೇಳಿಸಿಕೊಂಡು "ಇದು ಕಲ್ಪನಾ ಮಾಡಿರೋ ಚಿತ್ರದ್ದು", "ಇದು ಘಂಟಸಾಲಾ ಹಾಡಿರೋದು", ಇದು ಆ ಚಿತ್ರದ್ದು, ಇದು ಈ ಚಿತ್ರದ್ದು ಅಂತೆಲ್ಲ ನೆನಪಿಸಿಕೊಂಡು ಮರುಕ್ಷಣ ಕೆಲಸವಿದೆಯೆಂದು ಹೇಳಿ ಒಳಗೆ ಹೋಗಿಬಿಡುತ್ತಿದ್ದರು ("ಈ ಹಾಡುಗಳು ಎಷ್ಟೊಂದು ಇಷ್ಟ ಅಮ್ಮನಿಗೆ - ಅಡುಗೆ ಆಮೇಲೆ ಮಾಡಿಕೊಳ್ಳಬಹುದು, ಅಡುಗೆ ಬಿಟ್ಟು ಬಂದು ಕೇಳಬಾರದ?" ಅಂತ ಆಗ ನನಗನ್ನಿಸುತ್ತಿತ್ತು. ಈಗ ಅದರ ಹಿಂದಿದ್ದ ತುಡಿತ ಚೆನ್ನಾಗಿ ಅರ್ಥವಾಗುತ್ತೆ)
ನಾನು ಕೇಳಿದ ಮಧುರ ಹಾಡುಗಳಲ್ಲೊಂದು ಇದು. ಮತ್ತೆ ಮತ್ತೆ ಕೇಳುವಾಗ ಪೂರ್ತಿ ಹಾಡು ಒಂದು ಸಾರಿ ಇವರದೇ ಕಂಠದಲ್ಲಿ ಕೇಳಬೇಕಲ್ಲ ಅನ್ನಿಸೋದಿದೆ.
ಘನು ವಾಝೇ ಗುಣ ಗುಣಾ... ಇದು ಮರಾಠಿ ಭಾಷೆಯ ಭಕ್ತಿ ಗೀತೆ. ಈ ಹಿಂದೆ ಲತಾ ಮಂಗೇಶ್ಕರ್ ಹಾಡಿದ ಇದೇ ಸಾಲುಗಳು ಬಹಳ ಜನಪ್ರಿಯವಾಗಿತ್ತು.
ಅದೃಷ್ಟ
ಹಗಲೆಲ್ಲ ದುಡಿದ ಅವನು
ಇರುಳೆಲ್ಲ ಹೆಣಗಾಡಿದ.
ಆಟವನು ತೊರೆದ,
ಮನರಂಜನೆಯ ಮರೆತ.
ಒಣಪುಸ್ತಕಗಳ ಅಧ್ಯಯನ,
ಹೊಸ ವಿಷಯಗಳ ಕಲಿಕೆ,
ಕಷ್ಟದ ಹಾದಿಯಲಿ
ಮುನ್ನಡೆದನವನು.
ಗೆಲುವ ಹೊಂದುವ ಸಲುವಾಗಿ
ಕತ್ತೆಚಾಕರಿ ಮಾಡಿ
ಫಲವ ಪಡೆದರೆ,
ಲೋಕ ಹೇಳಿತು
"ಅವನು ಅದೃಷ್ಟವಂತ"
MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ? ಸಿಕ್ಕರೆ ಹೇಳ್ತೀರ?
’ಓಟು ಮಾರಿಕೊಡರೇ ಶೀಲ ಕಳೆದುಕೊಂಡಂತೆ’
ಪ್ರೀತಿಯ ನನ್ನವಳೇ,
ಇಂಥಹ ಒಂದು ದಿನಾನು ಬರತ್ತೆ ಅಂತ ನನಗೆ ತಿಳಿದೇ ಇರಲಿಲ್ಲ.ಈಗಲೂ ಸಹ ನಿನ್ನನ್ನು ’ನನ್ನವಳೇ’ಎಂದು ಕರೆಯಲು ನನಗೆ ಅರ್ಹತೆ ಇದೆಯಾ?.ಅದನ್ನು ನೀನೇ ಹೇಳಬೇಕು.