|| ವಂದೆ ಮಾತರಂ || - ಭಾಗ ೧
ಅಂದು ಸ್ವಾತಂತ್ಯ್ರದ ಮಂತ್ರಘೋಶ ಮಾಡಿ ಬ್ರಿಟೀಷ ಶಾಸನವನ್ನು ರೊಚ್ಚಿಗೆಬ್ಬಿಸಿದ ರಣ ಮಂತ್ರ ವಂದೆ ಮಾತರಂ. ಅದೊಂದು ದಿವ್ಯ ಆವಿಶ್ಕಾರ ಭಾರತದ ಅಂತ:ಕರಣವನ್ನು ಸ್ಪಂದನಗೊಳಿಸುತ್ತಿದ್ದ ತರಂಗ ರಂಗ ಅದು.ಹತಾಶ ಹೃದಯದಿಂದ ನೆಲಕಚ್ಚಿ ಮಲಗಿದ್ದ ದೇಶವನ್ನು ಮತ್ತೊಮ್ಮೆ ಸ್ವಾಭಿಮಾನದಿಂದ ಸಿಂಹಗರ್ಜನೆ ಮಾಡುತ್ತಾ ಮೆಲೆದ್ದು ನಿಲ್ಲುವಂತೆ ಮಾಡಿದ ರಣಮಂತ್ರ ಅದು.ಸಾಮಾಜಿಕ,ಆರ್ಥಿಕ,ರಾಜಕೀಯ ರಂಗದಲ್ಲಿ ಪ್ರಚಂಡ ಪರಿವರರ್ತನೆ ಪ್ರಚೋದಿಸಿ ಅದು ಭಾರತವನ್ನು ಪುನ: ಆತ್ಮಪ್ರಕಟನೆಗೆ ಸಿದ್ದಪಡಿಸಿತ್ತು.ನೂರಾರು ಆವೇಶ ಪೂರ್ಣ ದೇಶ ಭಕ್ತಿಯ ಪ್ರವಚನಗಳಿಗಿಂತಲು ಹೆಚ್ಚಾಗಿ ಮಾತ್ರುಭೂಮಿಯ ಭಕ್ತಿ ಭಾವವನ್ನು ಹೃದಯಗಳಲ್ಲಿ ನೆಲೆಗೊಳಿಸುವ ಕಾರ್ಯ್ಯವನ್ನು ಈ ಒಂದು ಗೀತೆ ಮಾಡಿತು.
- Read more about || ವಂದೆ ಮಾತರಂ || - ಭಾಗ ೧
- 1 comment
- Log in or register to post comments