ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಾರುವ ಅಂಬ್ಯುಲೆನ್ಸ್! (ಇ-ಲೋಕ-32) (24/7/2007)

 ambulanceನಗರದ ಜನಸಂದಣಿಯ ಪ್ರದೇಶದಲ್ಲಿ ಬಾಂಬು ಸ್ಫೋಟದಂತಹ ಅನಾಹುತ ಸಂಭವಿಸಿದೆ.ಕೆಲವರು ಗಾಯಗೊಂಡಿದ್ದಾರೆ. ಅವರನ್ನು ಸಾಗಿಸಲು ಸಾಮಾನ್ಯ ಅಂಬ್ಯುಲೆನ್ಸ್ ಕಳುಹಿಸುವ ಪರಿಸ್ಥಿತಿ ಇಲ್ಲ. ಹಾಗಾದರೆ ಎನು ಮಾಡಬಹುದು? ಹಾರುವ ಅಂಬ್ಯುಲೆನ್ಸ್ ಕಳುಹಿಸಿದರೆ ಹೇಗೆ?

"ಕುವೆಂಪು ಕವಿಯೇ ಅಲ್ಲ"

ಪೂರ್ಣಚಂದ್ರ ತೇಜಸ್ವಿಯವರ "ಅಣ್ಣನ ನೆನಪು" ಪುಸ್ತಕದಲ್ಲಿ ಕುವೆಂಪುರವರ "ರಾಮಾಯಣ ದರ್ಶನಂ" ಗೆ ಜ್ಞಾನಪೀಠ ಪ್ರಶಸ್ತಿ ಬಂದ ಹೊತ್ತಿನ ಬಗ್ಗೆ ಪ್ರಸ್ತಾಪವಿದೆ. "ರಾಮಾಯಣ ದರ್ಶನಂ ಗಾತ್ರದಲ್ಲಿ ಮಾತ್ರ ಮಹಾಕಾವ್ಯ.

ಹಕ್ಕಿಯ ಲೋಕದ ಮಕ್ಕಳೆ

ಹಕ್ಕಿಯ ಲೋಕದ ಮಕ್ಕಳೆ
ದು:ಖದಿ ಕೊರಗುತ್ತಾ ಕುಂತಿರುವಿರಿ ಏಕೆ?
ನಕ್ಕಾರೂ ಮರೆಯಾದ ನೋವನ್ನು ಕೆದಕುತ್ತ
ಬಿಕ್ಕಿ-ಬಿಕ್ಕಿ ಅಳುವುದು ಏಕೆ?

ಸಣ್ಣಾಗೆ ಇದ್ಧಾ ನಿಮ್ಮ ಪ್ರೀತಿಯಗೂಡ
ಕಣ್ಣಾ ಎದುರೀಗೆ ಕಡವಿದ್ದ ನೆನೆದೀರಾ
ಅಣ್ಣ-ಅಕ್ಕರನು ನಿಮ್ಮ ಕಣ್ಣೆದುರೀಗೆ
ಹರಣವಾ ಮಾಡಿದ್ದ ನೆನೆದೀರೇನು?

ಉಂಡು ಆಡಿದ್ದ ನಿಮ್ಮ ಪ್ರೀತಿಯ ಮರವ

ಹೂವಾಗಿ ಅರಳುವ ಮುನ್ನ

ಹೂವಾಗಿ ಅರಳುವ ಮುನ್ನ ಮೊಗ್ಗ ಕೊಯ್ದು
ಸಂಜೆ ಬಾಡುವ ಮುನ್ನ ಮನೆಗೆ ಹೊಯ್ದು
ದಾರದಲಿ ಪೋಣಿಸಿ, ಹಾರವನು ಮಾಡಿಸಿ
ಸಂತಸ ಪಡುವೆ ಮಡದಿಯ ಮುಡಿಗೆ ಏರಿಸಿ.

ಇವು ದುಂಡು ಮಲ್ಲಿಗೆ ಮೊಗ್ಗುಗಳು
ದುಂಡು ಮೊಗದ ಚಲುವೆ ಅವಳು
ಹುಣ್ಣಿಮೆಯಲಿ ಅರಳಿದ ಚೆಂದಿರನ
ಕಾಂತಿಯನು ಕಂಗಳಲಿ ತುಂಬಿಕೊಂಡವಳು.

ಗೆಳತಿ ಬಂದಿರುವಳು ಬಿಸಿಲ ದಿನಗಳಲಿ
ತಂಗಾಳಿ ಸುಳಿಯುತಿರಲಿಲ್ಲ ಆಗ ದಾರಿಯಲಿ

ಮುನಿಸು...

ಇದಾವ ಮೋಹ ಹೀಗೆ ಕಾಡುತಿದೆ ನನ್ನನು

ಕಪ್ಪು ಛಾಯೆಗಳ ಮಧ್ಯ ತೋರುತಿದೆ ಬೆಳಕನು.

 

ಸಾಕಿನ್ನು ಮುನಿಸು ದಣಿದಿಹೆನು ನಾನು,

ಬರಬಾರದೆ ಒಮ್ಮೆಯಾದರು ಮನ ತಣಿಸುವ

ತುಂತುರು ಮಳೆಯಾಗಿ ನೀನು.

 

ಮನಸು ಮನಸುಗಳ ನಡುವೆ ಬೇಲಿಗಳು ಬೆಳೆಯುತಿವೆ

ಸುರಿವ ಹನಿ ಹನಿ ಮಳೆಗೆ ಅಲ್ಲಲ್ಲಿ ಬೆಳೆವ ಕಾಟು ಗಿಡ-ಬಳ್ಳಿಗಳಂತೆ

ಮನುಷ್ಯರೇ ಹೀಗೆ ಭ್ರಮಾಲೋಕದಲ್ಲಿ...

ಮನುಷ್ಯರಲ್ಲಿ ಅಬಾಲ ವೃದ್ಧರಾಗಿ ಭ್ರಮಾಲೋಕದಲ್ಲಿ ಬದುಕುವವರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ;ಹೆಚ್ಚುತ್ತಲೇ ಇದ್ದಾರೆ!!

ನಿಮ್ಮೆಲ್ಲರ ಭಾಗವಹಿಸುವಿಕೆ ಅಗತ್ಯ

ಸ್ನೇಹಿತರೆ,

ಕಳೆದ ವಾರ ಸರ್ವರಿನ ಲೋಡ್ ಹಿಗ್ಗಾಮುಗ್ಗಿ ಹೆಚ್ಚಾದದ್ದರಿಂದ ಕಳೆದ ಕೆಲವು ಗಾಬರಿಯ ದಿನಗಳು ಸಂಪದದಲ್ಲಿ ನಾವು ಬದಲಾವಣೆಗಳನ್ನು ಮಾಡಬೇಕೆಂದುಕೊಂಡು ಹಮ್ಮಿಕೊಂಡಿದ್ದ ಕೆಲಸಕ್ಕೆ ಬ್ರೇಕ್ ಹಾಕಿದೆ. ಈ ತಿಂಗಳ ಕೊನೆಯಲ್ಲಿ ಸರ್ವರಿನ ಹಾರ್ಡ್ವೇರ್ ಕ್ಷಮತೆ ಹೆಚ್ಚಿಸುತ್ತಿದ್ದೇವೆ. ಆದರೆ ಎಲ್ಲೆಡೆಯಿಂದ ಇದನ್ನು ಉತ್ತಮಪಡಿಸಲು ನಿಮ್ಮೆಲ್ಲರ ಭಾಗವಹಿಸುವಿಕೆಯ ಅಗತ್ಯವುಂಟು.

ಮೊದಲಾಗಿ ಸಂಪದದ ಕಂಟೆಂಟ್ ಮೇಲೊಂದು ಕಣ್ಣಿಟ್ಟು ಮಾಡರೇಟ್ ಮಾಡುವಲ್ಲಿ ಆಸಕ್ತಿಯುಳ್ಳವರು ದಯವಿಟ್ಟು [:http://sampada.net/contact|ನನ್ನನ್ನು ಸಂಪರ್ಕಿಸಿ]. ಆಸಕ್ತಿಯುಳ್ಳವರು ಸಕ್ರಿಯ ಸದಸ್ಯರಾಗಿರಬೇಕು.

ಎರಡನೆಯದಾಗಿ ಸರ್ವರ್ optimize ಮಾಡಿ ಅಭ್ಯಾಸವಿರುವ ತಂತ್ರಾಂಶ ತಜ್ಞ ಓದುಗರಿದ್ದಲ್ಲಿ ದಯವಿಟ್ಟು [:http://sampada.net/user/12/contact|ಶಶಿಯವರನ್ನು ಸಂಪರ್ಕಿಸಿ].
(ನಾವು ಬಳಸುತ್ತಿರುವ ಸರ್ವರ್ Apache, ಡೇಟಬೇಸ್ MySQL - ಬಳಸುತ್ತಿರುವ ಪ್ರತಿಯೊಂದೂ ಮುಕ್ತ ತಂತ್ರಾಂಶ).

ಮೂರನೆಯದಾಗಿ ಸಂಪದವನ್ನು ಉತ್ತಮಪಡಿಸುವತ್ತ [:http://sampada.net/contact|ನಿಮ್ಮ ಸಲಹೆ, ಅಭಿಪ್ರಾಯಗಳನ್ನು ತಪ್ಪದೆ ಕಳುಹಿಸಿಕೊಡಿ]. ಈಗಾಗಲೇ ಕಳುಹಿಸಿಕೊಟ್ಟವರಿಗೆ ನಮ್ಮೆಲ್ಲರ ವಂದನೆಗಳು - ಬಂದಿರುವ ಸಲಹೆ ಅಭಿಪ್ರಾಯಗಳನ್ನು ಸೂಕ್ತ ರೀತಿಯಲ್ಲಿ ಸಂಪದದ ಹೊಸ ರೂಪದಲ್ಲಿ ಅಳವಡಿಸಲು ಪ್ರಯತ್ನಿಸುತ್ತಿದ್ದೇವೆ.

ಈ ಕನ್ನಡ ಸಮುದಾಯ ಅಂತರ್ಜಾಲದಲ್ಲಿರುವ ಇತರ ಭಾಷೆಗಳ ಸಮುದಾಯಗಳಿಗಿಂತ ಉತ್ತಮ ಸಮುದಾಯವಾಗಿಸುವತ್ತ ಹೆಜ್ಜೆಯಿಡಬೇಕಾದರೆ ನಿಮ್ಮೆಲ್ಲರ ಭಾಗವಹಿಸುವಿಕೆ ಅತ್ಯಗತ್ಯ.

(ಇವೆಲ್ಲ ಧಿಡೀರ್ ಈಗ್ಯಾಕೆ ಎಂಬ ಪ್ರಶ್ನೆಗೆ ಕ್ಯಾಲೆಂಡರ್ ಉತ್ತರ ನೀಡಬಹುದು - ಸಂಪದ ಪ್ರಾರಂಭವಾಗಿ ಸರಿಯಾಗಿ ಎರಡು ವರ್ಷವಾಗುತ್ತ ಬಂತು, ಈಗ ಒಮ್ಮೆ ಬ್ರೇಕ್ ಹಾಕಿ ಮುಂದಿರುವ ಹಾದಿಗೆ ರೆಡಿಯಾಗಿ ಮುಂದುವರೆಯೋಣ).