ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಸಂತಗೀತ....ಯುಗಾದಿ ಶುಭಾಶಯಗಳು

**** ಎಲ್ಲರಿಗೂ ಸರ್ವಧಾರಿ ಸಂವತ್ಸರ ಯುಗಾದಿ ಶುಭಾಶಯಗಳು. ****

ವಸಂತ ಗೀತ
-----------

ವಸಂತ ಋತುರಾಜ
ಒಲಿದು ಬರುತಿಹನೆಂದು
ಚೆಲುವ ಚಪ್ಪರವಾಯ್ತು
ಭೂರಮೆಯ ಒಡಲು.

ಹೊಸ ಚಿಗುರ ಹಸೆಯಿಟ್ಟು
ಹೊಸ್ತಿಲಲಿ ಕಾದಿಹಳು.
ನಸುಗೆಂಪು ಹೂಬಳೆ ತೊಟ್ಟು
ಆರತಿಯ ಬೆಳಗುವಳು.

ಉಷೆಯ ಓಕುಳಿಯಲ್ಲಿ
ಎಳೆಬಿಸಿಲ ಹಣತೆ.
ಮಿಡಿಯರಳಿ ನಾಚಿದ
ಮಾವು ಹೂವಿನ ಅಕ್ಷತೆ.

ಹೊಸಯುಗದ ಹೊಸಗೀತ

ಕ.ರ.ವೇ. ನಾರಾಯಣ ಗೌಡರ ಕಣ್ಣಿನಲ್ಲಿ ಹೊಗೇನಕ್ಕಲ್

ಹೊಗೇನಕಲ್ನಲ್ಲಿ ತಮಿಳುನಾಡು ಸರ್ಕಾರ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ, ಕಾವೇರಿ ನದಿ ನೀರಿನ ಹಂಚಿಕೆ ಇತ್ಯರ್ಥವಾಗಿದೆಯೇ? ನಾವು ಯಾವುದೇ ಯೋಜನೆಯನ್ನು, ಕಾವೇರಿ ಜಲನಯನ ಪ್ರದೇಶದಲ್ಲಿ ಶುರು ಮಾಡಿದರೆ ವಿರೋಧಿಸುವ ತಮಿಳುನಾಡು, ಕನ್ನಡಿಗರು ಹೊಗೇನಕಲ್ ಯೋಜನೆ ವಿರೋಧಿಸಿದಾಗ ಮಾತ್ರ "ಅಮಾನವೀಯ ಕೃತ್ಯ" ಎಂದು ತೀರ್ಪು ನೀಡುವುದು ಎಷ್ಟು ಸರಿ?

ದ ರಾ ಬೇಂದ್ರೆಯವರ ಕವನ

ಯುಗಯುಗಾದಿ ಕಳೆದರೂ
ಮಾಸದ ಸವಿಗಂಪಿನೊಂದಿಗೆ ಹೊಸಹೊಸದಾಗಿರುವ ದ ರಾ ಬೇಂದ್ರೆಯವರ ಈ ಕವನವನ್ನು ಮರೆಯಲು ಸಾಧ್ಯವೇ ಇಲ್ಲ.
ಮರೆತವರಿಗಾಗಿ ಇಲ್ಲಿ ಮತ್ತೊಮ್ಮೆ ಹಾಕಲಾಗಿದೆ.

 

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

 

"ಮೌಲ್ಯ ವರ್ಧಿತ" ಸರಿಯೆ!?

Value-added ಅನ್ನೋದಿಕ್ಕೆ "ಮೌಲ್ಯ ವರ್ಧಿತ" ಎಂದು ಇಂದಿನ ಹೆಚ್ಚಿನ ಮೊಬೈಲ್ ಕಂಪನಿಗಳು ಬಳಸುತ್ತವೆ. ಇದು ಸರಿಯೆ!?

ಇಲ್ಲಿ ನನಗೆ "ವರ್ಧಿತ" ಎನ್ನುವುದು ವಿಶೇಷಣವಾಗಿ ಕೇಳಿಸದೆ, ಒಂದು ಕ್ರಿಯಾಪದವಾಗಿ ತೋರುತ್ತಿದೆ, ನೀವೇನಂತೀರಾ,ಸಂಪದಿಗರೆ!?

ಯುಗಾದಿ ...

ಯುಗಾದಿ ...

ಹೊಸ ವರುಷ...
...ತರಲಿ ಹೊಸ ಹರುಷ
ಬೇವು ಬೆಲ್ಲಗಳು...
...ಸಿಹಿ-ಕಹಿಗಳು ಸಮವಾಗಿ
ಅನುಭವಿಸುವ ಶಕ್ತಿ...
ನಿಮಗೆ ಬರಲಿ....."
......ಯುಗಾದಿ ಹಬ್ಬದ ಶುಭಾಶಯಗಳು

ಬಂತೋ ಯುಗಾದಿ

ಜೀವದ ಚೈತ್ರದ ಸ್ವಾಗತ ಕೋರುತ,
ಭಾವದ ಮೈತ್ರಿಯ ಮುನ್ನುಡಿ ಬರೆಯುತ,
ಬಂತೋ ಯುಗಾದಿ,
ತಂತೋ ಮನ ನೆಮ್ಮದಿ.

ಬಾಳ್ವೆಯ ಬೇವಿಗೆ ತುಂಬುತ ಒಲವು,
ನಲ್ಮೆಯ ಹೂವಿಗೆ ತೋರುತ ಗೆಲುವು,
ಬಂತೋ ಯುಗಾದಿ,
ತಂತೋ ಹೂ-ಹಾದಿ.

ಬಂಧದ ನೇಗಿಲ ಉಳುಮೆಯ ಮಾಡುತ,
ನೊಂದಿದ ಹೆಗಲ ಒಲುಮೆಯ ಬೇಡುತ,
ಬಂತೋ ಯುಗಾದಿ,
ತಂತೋ ಜೀವ ಬುನಾಧಿ.

ಪ್ರೀತಿಯ ಬೆಳಕಿಗೆ,ತೆರೆಯುತ ಕಂಗಳ,

ಇಗೋ ಬಂತು ಯುಗಾದಿ

ಇಗೋ ಬಂತು ಯುಗಾದಿ
ನವ ವರುಷದ ನಾಂದಿಗೆ
ಬೇವು ಬೆಲ್ಲ ಹಂಚಿ ತಿನ್ನಿರೆಲ್ಲ
ಮರಳಿ ಬರಲಿ ಚಿತ್ತ ಶಕ್ತಿ ಬಾಳಿಗೆ.
 
ಮರಗಳಲ್ಲಿ ಎಲೆಗಳುದುರಿ
ಕುಳಿರ್ಗಾಳಿ ತೊಲಗಿದೆ
ಎದೆಗಳಲ್ಲಿ ಹೂಗಳರಳಿ
ಮಧುರ ಭಾವ ಮೊಡಿದೆ.
 
ಮಾಂದಳಿರಿನ ತೋರಣದಲಿ
ಹಸಿರು ಹೊನ್ನು ಕರೆದಿದೆ
ಮನೆ ಮನಗಳ ಓರಣದಲಿ
ಪ್ರೀತಿ ಪ್ರೇಮ ಮೆರೆದಿದೆ.

ಮೈಸೂರು ರಮಾನಂದರ ’ನಾನಿನ್ನೂ ಸತ್ತಿಲ್ಲ’ ದ್ವಿತೀನ ನಾಟಕ ಪುಸ್ತಕದ ಬಿಡುಗಡೆ

ಇತ್ತೀಚೆಗೆ ಅಂದರೆ ೦೪-೦೪-೨೦೦೮ರಂದು ಮೈಸೂರಿನಲ್ಲಿ ಮೈಸೂರು ರಮಾನಂದ್ ಮತ್ತು ಮೈಸೂರಿನ ವಿ. ಉದಯಕುಮಾರ್ ಅವರ ಜಂಟಿ ಲೇಖನದಲ್ಲಿ ತಯಾರಾಗಿರುವ ’ನಾನಿನ್ನೂ ಸತ್ತಿಲ್ಲ’ ಎಂಬ ಸಾಮಾಜಿಕ ಕಳಕಳಿಯ ನಾಟಕದ ಪುಸ್ತಕದ ಬಿಡುಗಡೆಯಾಯಿತು.

ತಪ್ಪು ಯಾರದ್ದು?

ಹೊಗೇನಕಲ್ ನೀರಾವರಿ ಕಾಮಗಾರಿಯ ಕುರಿತಾಗಿ ನಟ ಶ್ರೀ ರಜನಿಕಾಂತ್ ಅವರು ಐದು ಕೋಟಿ ಜನ ಕನ್ನಡಿಗರಿಗೆ ಒದೆಯಬೇಕು ಎಂದು ಹೇಳಿದ್ದಾರೆ ಎಂದು ನಮ್ಮ ಸೋ ಕಾಲ್ಡ್ ರಾಜಕಾರಣಿಗಳು ಮತ್ತು ಹಿರಿಯರೆನಿಸಿಕೊಂಡ ಮೇಧಾವಿ ಚಲನಚಿತ್ರ ನಟರು ರಜನಿಕಾಂತ್ ಅವರನ್ನು ಕನ್ನಡಿಗರ ಕ್ಷಮೆ ಕೇಳಬೇಕೆಂದು ಕೇಳುತ್ತಿರುವುದು ಹೇಸಿಗೆಯ ಸಂಗತಿಯಾಗಿದೆ.