ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅವಳ ವಿದ್ಯಾಭ್ಯಾಸವೇನು . ಗೊಂದಲ ಬಿಡಿಸಿ

ಹೀಗೆ ಒಬ್ಬ ಪೆದ್ದು ಹುಡುಗ ಹೆಣ್ಣು ನೋಡಲೆಂದು ಬಂದ
ಅವಳನ್ನ ಕೆಲವು ಪ್ರಶ್ನೆ ಕೇಳಿದ
ಎಲ್ಲಕ್ಕೂ ಉತ್ತರಿಸುತ್ತಿದ್ದ ಆಕೆ

ಅವನು ನಿಮ್ಮ ಕ್ವಾಲಿಫಿಕೇಶನ್ ಏನು ಅಂತ ಕೇಳಿದಕ್ಕೆ
ತಾನು ಕುಡಿಯುತ್ತಿದ್ದ ಕಾಫಿ ಲೋಟವನ್ನು ತಿರುಗಿಸಿ ಇಟ್ಟು ಒಳಗೆ ಹೊರಟು ಹೋದಳು
ಪಾಪ ನಮ್ಮ ಪೆದ್ದು ಹುಡುಗ ಅರ್ಥವಾಗದೆ ಕಣ್ಣ್ ಕಣ್ ಬಿಡುತ್ತಿದ್ದಾನೆ
ನೀವಾದರೂ ಸಹಾಯ ಮಾಡ್ತೀರಾ?

ವಿಸ್ಮಯ

ಮಂದಗಮನೆ ಕಾವೇರಿಯಂದದಿ ಜೀವನದಿ
ದೃಶ್ಯಕ್ರಿಯೆಯ ನಿತ್ಯ ನಿಯಮ ಸೊಂಕಿಲ್ಲದ ಸ್ಥಿರ ಲಯ
ಸಹನ ಭಾವನದ ಪ್ರವಾಹ ಪ್ರಕೋಪ ವಿಕೋಪದ ಸುಳಿವಿಲ್ಲ
ಸುಳಿಯಿಲ್ಲ ಸೆಳವಿಲ್ಲ ಹಸನು ಮಾಡಿ ಹರಿಯುವ ಮಂದಸ್ಮಿತವಿದು

ಸ್ಮರಣ ಪ್ರಜ್ನೆ ಸುಪ್ತ ಮಥನ ಮನ್ಯುವ ಗೆಲುವ ಜಿಜ್ನಾಸೆ
ಜಾಗೃತಿಸುವ ಜನಪದ ಪ್ರಕೃತಿ ಮನದ ಮಾಯಾಲೋಕ
ಕೇಶವನ ನೆನೆದು ಗಂಧ ಧರಿಸಿ ಮುಗಿದೆ ಕೈಯ ಭಾವ ಮನೋಹರ

ಪ್ರಾರ್ಥನೆ

ಮಾಡು ನನ್ನ ಜಲಪಾತವ ಗಿರಿ ಶೃಂಗವ,
ಸ್ನಿಗ್ಧ ಮೋಡವ ಮಲೆನಾಡ ಆಷಾಡದ ಮಂದವ,
ನಿಗೂಢ ವನಶ್ರೇಣಿಯ ಶಾಶ್ವತ ರಮಣೀಯ ಮಂದಸ್ಮಿತದ
ನೀರ್ನದಿಯ, ದಯಪಾಲಿಸು ನನಗೆ ಜನ್ಮವ
ಜಾಡ್ಯ ಸೋಂಕಿಲ್ಲದ ಕೈಲಾಸ ಸ್ಥಾನವ

ತೂಗುದೀಪ

ಕಣ್ಣು ಅರಳಿ ಕಣ್ಣು ಅರಳಿ
ನನ್ನ ಪ್ರೀತಿಯ ಹೊವರಳಿ
ಪ್ರೇಮವೆಂಬ ಪರಿಮಳವ
ನೀ ಸದಾ ಚೆಲ್ಲುತಿರು
ನನ್ನ ಚಿನಕುರುಳಿ ಚೆಲುವೆ

ನಿನ್ನ ಮೌನ ಕಣ್ಣ ಸನ್ನೆಯ ಪಾಠ
ತಿಳಿಯಲಿಲ್ಲ ಗೆಳತಿ,
ಆದರೆ ನಾ ಕಲಿತೆ ಜೀವನದ ಒಲವ ಪಾಠ
ಈ ಒಲವೆಂಬ ಹಣತೆಗೆ
ಬತ್ತಿ ನೀನಾದರೆ,ಎಣ್ಣೆ ನಾನಾಗುವೆ
ಈ ಪ್ರೀತಿಯ ತೂಗುದೀಪ
ನಂದದ ನಂದಾದೀಪವಾಗಲು
ನೀ ಒಪ್ಪುವೆಯಾ ಗೆಳತಿ?????

ನಾನ್ಯಾರು ಗೊತ್ತಾ .......?

ಖ್ಯಾತ ಅಮೇರಿಕನ್ ಮಾಡೆಲ್ "ನವೋಮಿ ಕ್ಯಾಂಪ್ಬೆಲ್ (Naomi Campbell)"ಳನ್ನು ಲಂಡನ್ ಹೀಥ್ರೋ ವಿಮಾನ ನಿಲ್ದಾಣದ ಅತ್ಯಂತ ಬ್ಯುಸಿಯಾಗಿರುವ 5ನೇ ಟರ್ಮಿನಲ್ ನಲ್ಲಿ ಅರೆಸ್ಟ್ ಮಾಡಲಾಗಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಾಷ್ಟ್ರೀಯ ಪಕ್ಷದವರ ಕನ್ನಡ ನಿಷ್ಠೆ

ಬಿ.ಜೆ.ಪಿ ಯ ಯಡ್ಡಿಯವರು ಹೊಗೇನಕಲ್ ಯೋಜನೆಯನ್ನು ಪ್ರತಿಭಟಿಸಿ ತಾವು ಕನ್ನಡಿಗರ ಹಿತಕ್ಕೆ ಬದ್ಧ ಎಂದು ಸಾಬೀತು ಪಡಿಸಿದ್ದಾರೆ. ಅವರ ಒಂದು ಸಣ್ಣ ಪ್ರತಿಭಟನೆಯಿಂದಲೇ ಕಿಡಿಎದ್ದು ಯೋಜನೆಗೆ ತಾತ್ಕಾಲಿಕೆ ಅಡಚಣೆಯಾಗಿದೆಯೇ?

ಒಂದಿಷ್ಟು ನೀಲುಗಳು

"ಮುಂದಿನ ಜನ್ಮ ಅಂತ ಒಂದಿದ್ದರೆ

ಗಂಡಿನ ಚಪಲ ಇರುವ ಹೆಣ್ಣಾಗಿ ಹುಟ್ಟಿಸಯ್ಯಾ"

ಅಂತ ಗಂಡ ಬರೆದ ಪದ್ಯ ಸಿಕ್ಕು

ಮದುವೆ ರ್ರೇಷ್ಮಸೀರೆಗಳ ನಡುವೆ ಅಡಿಗಿಸಿಟ್ಟ

ನೂರಾರು ಗ್ರೀಟಿಂಗ್ ಕಾರ್ಡುಗಳನ್ನು ನೆನೆಸಿಕೊಂಡು

ಮುಸಿ ಮುಸಿ ನಕ್ಕಳು

-----------------------------------------------------------

ಪಾಂಡಿತ್ಯದ ಭಾರದಿಂದ ಹತ್ತು ಓದಿಗೂ ದಕ್ಕದ ಕವಿತೆ

'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ

ನಮ್ಮ ಕನ್ನಡದಲ್ಲಿ 'ಪು' ತುಂಬ ಮುಕ್ಯವಾದುದು. ಇದರಿಂದ ನಾವು ಕೆಲಸದೊರೆ/ಕ್ರಿಯಾಪದವನ್ನ ಹೆಸರೊರೆ/ನಾಮಪದವನ್ನಾಗಿಸುವಾಗ ತುಂಬ ಬಳಕೆಗೆ ಬರುತ್ತೆ.

ಶ್ವಾನ ಮಹಾಸಭೆಗೆ ಕರೆಯೋಲೆ

ನಮ್ಮದು ಬನಶಂಕರಿ ಮೂರನೆ ಹಂತದ ಶ್ವಾನ ಕ್ಷೇಮಾಭಿವೃದ್ಧಿ ಸಂಘ. ನಾವಿಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದು, ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಅದನ್ನು ವಿವರವಾಗಿ ಚರ್ಚಿಸಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಲು ಈ ಸಭೆಯನ್ನು ಕರೆದಿದ್ದೇವೆ.
ಸಮಯ: ಮಧ್ಯರಾತ್ರಿ, ಎಂದರೆ ಸುಮಾರು ಹನ್ನೆರಡು ಗಂಟೆ