ನನ್ನ ಐಟಿ ಸಹಬಾಂಧವರಿಗೊಂದು ಪತ್ರ...
ಸ್ನೇಹಿತರೆ,
ಕೆಲವು ನಿರ್ವಹಿಸಲೇಬೇಕಿದ್ದ ಕೌಟುಂಬಿಕ ಜವಾಬ್ದಾರಿ ಮತ್ತು ಅನಾರೋಗ್ಯಗಳಿಂದಾಗಿ ಮೂರು ವಾರದಿಂದ ಅಂಕಣ ಬರೆಯಲಿಲ್ಲ. ಆದರೆ ಇದೇ ಸಮಯದಲ್ಲಿ ಮನಸು ಮಾತ್ರ ತೀವ್ರವಾದ ಕ್ರಿಯಾಶೀಲತೆಗೆ ತುಡಿಯುತ್ತಿತ್ತು. ಹಿಂದೆಂದೂ ಕಾಣದ ರೀತಿಯಲ್ಲಿ ಭ್ರಷ್ಟ ಆಮಿಷಗಳನ್ನು ಒಡ್ಡಲಿರುವ ಬರಲಿರುವ ಕರ್ನಾಟಕದ ಚುನಾವಣೆ ಮತ್ತು ಈ ಬಾರಿ ಬಹುಸಂಖ್ಯೆಯಲ್ಲಿ ಆಯ್ಕೆಯಾಗಲಿರುವ ಜನಪ್ರತಿನಿಧಿಗಳ ಅರ್ಹತೆ ಮತ್ತು ಯೋಗ್ಯತೆಯ ಬಗ್ಗೆ ಆಲೋಚಿಸುತ್ತಿದ್ದೆ; ಚರ್ಚಿಸುತ್ತಿದ್ದೆ. ನಮ್ಮ ಕಾಲದ ಸವಾಲುಗಳ ಮತ್ತು ಸಮಸ್ಯೆಗಳ ಅರಿವೆಯೇ ಇಲ್ಲದ, ಸಾರ್ವಜನಿಕ ಜೀವನಕ್ಕೆ ಬೇಕಾದ ಕನಿಷ್ಠ ಅರ್ಹತೆಗಳೂ ಇಲ್ಲದ, ಕನಿಷ್ಠ ಶಿಕ್ಷಣವೂ ಇಲ್ಲದ, ಕೇವಲ ದುಡ್ಡು-ಜಾತಿ-ಮತವೆ ಗರಿಷ್ಠ ಯೋಗ್ಯತೆಯಾಗಿ ಹೊಂದಿರುವ ಜನರು ಈ ಬಾರಿ ಬಹುಸಂಖ್ಯೆಯಲ್ಲಿ ನಮ್ಮ ಪ್ರತಿನಿಧಿಗಳಾಗಲಿದ್ದಾರೆ. ಬೆಂಗಳೂರಿನಲ್ಲಂತೂ ಚುನಾವಣಾ ವೆಚ್ಚದ ಮಿತಿಯಾದ ಹದಿನೈದು ಲಕ್ಷದ ಮಿತಿಯ ನೂರಕ್ಕೂ ಹೆಚ್ಚಿನ ಪಟ್ಟು ಹಣವನ್ನು ಗಣಿಗಾರಿಕೆಯ ಮತ್ತು ರಿಯಲ್ ಎಸ್ಟೇಟಿನ ಕಪ್ಪುಹಣ ಹೊಂದಿರುವವರು ಹರಿಸಲಿದ್ದಾರೆ. ಇದು ಸೃಷ್ಟಿಸಲಿರುವ ಭವಿಷ್ಯ ಹೀನಾಯವಾದದ್ದಾಗಿರುತ್ತದೆ. ನ್ಯಾಯ-ನೀತಿ-ಮೌಲ್ಯ-ಅರ್ಹತೆಗಳ ಮೇಲೆ ನಡೆಯದ ಈ ಚುನಾವಣೆ ನಮಗೆ ಮಾತ್ರವಲ್ಲ ನಮ್ಮ ಮಕ್ಕಳಿಗೂ ನಿಕೃಷ್ಟರನ್ನು ನಾಯಕರನ್ನಾಗಿ ದಯಪಾಲಿಸಲಿದೆ.
ಇದಕ್ಕೆ ನಮ್ಮ ಉತ್ತರವೇನು?
- Read more about ನನ್ನ ಐಟಿ ಸಹಬಾಂಧವರಿಗೊಂದು ಪತ್ರ...
- 4 comments
- Log in or register to post comments