ಮುಂಬೈನ ಅತ್ಯಾಧುನಿಕ, ಹಾಗೂ ಅತ್ಯಾಕರ್ಷಕ ಲೋಕಲ್ ರೈಲು ಗಾಡಿಗಳು !

ಮುಂಬೈನ ಅತ್ಯಾಧುನಿಕ, ಹಾಗೂ ಅತ್ಯಾಕರ್ಷಕ ಲೋಕಲ್ ರೈಲು ಗಾಡಿಗಳು !

ಬರಹ

ಮುಂಬೈ ಮಹಾನಗರದ ಪಶ್ಚಿಮ ರೈಲ್ವೆ ಯ ಹೊಸ ೧೫೭ ಸುಧಾರಿತ ಸೌಲಭ್ಯವುಳ್ಳ ಲೋಕಲ್ ರೈಲುಗಳನ್ನು ಪ್ರಾರಂಭಿಸುವ ಯೋಜನೆಯ ಮೊದಲ ರೈಲು ನಿನ್ನೆ ಓಡಾಟ ಆರಂಭಿಸಿತು. ಇದನ್ನು ಪಶ್ಚಿಮ ರೈಲ್ವೆ ವಿಭಾಗೀಯ ಪ್ರಬಂಧಕ, ಶ್ರೀ. ಸತ್ಯಪ್ರಕಾಶ್ ಹೇಳಿದ್ದಾರೆ. ಅತ್ಯಾಧುನಿಕ ಮತ್ತು ಆಕರ್ಶಕಒಳನೋಟದ ವಿನ್ಯಾಸ ಅಧ್ಬುತವಾಗಿದೆ. ೧೨ ಬೋಗಿಗಳ ಈ ಲೋಕಲ್ ರೈಲ್ವೆಗಾಡಿ, ಪ್ರಯಾಣದ ಎಲ್ಲಾ ಸುವಿಧತೆಗಳನ್ನು ಹೊಂದಿದೆ. ದೊಡ್ಡ-ದೊಡ್ಡ ಕಿಟಕಿಗಳು, ಮಾಹಿತಿನೀಡುವ ಸೌಲಭ್ಯ, ಧಾರಾಳವಾಗಿ ಗಾಳಿಯಾಡುವ ವ್ಯವಸ್ಥೆ, ಸೂರಿನಲ್ಲಿ ವೆಂಟಿಲೇಷನ್ ವ್ಯವಸ್ಥೆ, ಕಿಟಕಿಗಳಿಗೆ ಪಾಲಿಕರ್ಬೊನೇಟ್ ಗಾಜುಗಳು, ಫ್ಯಾನ್ ಗಳು, ದೀಪದ ಅತ್ಯಾಧುನಿಕ ಸ್ವಿಚ್ ಗಳು, ತುರ್ತುಸಂದರ್ಭಕ್ಕೆ ಫ್ಲೂರೋಸೆಂಟ್ ದೀಪಗಳು, ಈ ರೈಲಿನ ಕೆಲವು ವಿಶೇಷತೆಗಳು.

ವಿಶ್ವಬ್ಯಾಂಕ್ ನ ಹಣಕಾಸು, ನೆರವಿನಿಂದ ಅನುಷ್ಠಾನಗೊಳ್ಳುತ್ತಿರುವ ೪,೫೦೦ ಕೋಟಿ ರೂಪಾಯಿ ವೆಚ್ಚದ ಮುಂಬೈ ಮಹಾನಗರ ಸಾರಿಗೆಯೋಜನೆಯ ಅಂಗವಾಗಿ,ಮುಂಬೈ ನ ಲೋಕಲ್ ರೈಲು ಜಾಲಕ್ಕೆ ಈ ಮಾದರಿಯ ೧೫೭ ರೈಲು ಗಾಡಿಗಳನ್ನು ಸೇರಿಸಿಲಾಗುತ್ತಿದೆ. ೩ ತಿಂಗಳ ವಿವಿಧ ರೀತಿಯ ಪರೀಕ್ಷೆಗಳನಂತರ, ಪ್ರಯಾಣಿಕರ ಸಾಗಾಟಕ್ಕೆ ಅನುಮತಿ ನೀಡಲಾಗಿದೆ. ಪಶ್ಚಿಮ ರೈಲ್ವೆಯ ಸುರಕ್ಷತಾ ವಿಭಾಗದ ಮುಖ್ಯಆಯುಕ್ತರು, ಸುರಕ್ಷಿತಾ ಪ್ರಮಾಣಪತ್ರವನ್ನು ನೀಡಿದ್ದಾರೆ.