ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜೀವನೀತಿ

ಚಿಗುರು ಮೀಸೆ, ಎಳೆ ಮೊಲೆಗಳ ಕೌಮಾರ್ಯ
ಮೋಹ ಹಾಗು ಕಾಮದ ಕುರುಡಿಂದ
ಹುಚ್ಚಾಗದೆ ಹೋದರೆ

ಯವ್ವನದ ಸೊಕ್ಕು
ದೇಶ ಹಾಗು ನೆಲದ, ಆದರ್ಶ ಮತ್ತು ನಿರಾಶೆಯ
ಕಾಟಕ್ಕೆ ಕಂಗೆಡದೇ ಹೋದರೆ

ನಡುವಯಸ್ಸಿನ ಬಿರುಸಲ್ಲೇ
ಜಪಮಣಿ-ಪಾರಮಾರ್ಥ ಸುತ್ತಿಕೊಳ್ಳುವುದನ್ನು
ತಪ್ಪಿಸಲಾದೀತೆ?

ಹತ್ತೊಂಬತ್ತು ನೂರಾ ಮೂವತ್ತೊಂದರಲ್ಲಿ ಬರೆದ ಒಂದು ಹಿಂದು-ಮುಸ್ಲಿಮ್ ಹೊತ್ತಗೆ

ಇದು ೧೯೩೧ರಲ್ಲಿ ಬರೆದದ್ದು, ಕತೆಯು ಮುಸ್ಲೀಮ್ ಅರಸರ ಆಳ್ವಿಕೆಯ ಹೊತ್ತಿನದು, ಇಲ್ಲಿಂದ ಇಳಿಸಿಕೊಂಡು ಓದಿ ನೋಡಿ.

 http://www.mykannada.net/gopalnarayan-allaahoo

ಈ ಹೊತ್ತಗೆ ಮುಸ್ಲೀಮ್ ಆಳ್ವಿಕೆಯ ಬಗ್ಗೆ ತುಸು ಬೆಳಕು ಚೆಲ್ಲೀತು.

ನಿಮ್ಮ ಸಲಹೆ/ಅಭಿಪ್ರಾಯಗಳನ್ನು ನಮಗೆ ಕಳುಹಿಸಿ

'ಸಂಪದ'ದ ಹೊಸ ಆವೃತ್ತಿಯನ್ನು ಹೊರತರುವತ್ತ ಈಗಿನಂತೆ ಹಿನ್ನೆಲೆಯಲ್ಲಿ ಕೆಲಸ ನಡೆದಿದೆ. ಈ ಸಮಯದಲ್ಲಿ ಸಂಪದವನ್ನು ಉತ್ತಮಪಡಿಸುವಲ್ಲಿ ನೀವೂ ಪಾಲ್ಗೊಳ್ಳಬಹುದು.

ಸಂಪದದಲ್ಲಿ ಏನೇನು ಬದಲಾವಣೆಗಳನ್ನು ಬಯಸುವಿರಿ? ಸಂಪದದಲ್ಲಿ ನೀವು ಮುಂದೆ ಏನು ನೋಡಬಯಸುತ್ತೀರಿ? ಈಗಿರುವುದರಲ್ಲಿ ಯಾವುದು ಇಷ್ಟವಾಗಿದೆ? ಯಾವುದು ರೇಜಿಗೆಯಾಗಿದೆ?
ನಿಮ್ಮ ಸಲಹೆ ಅಭಿಪ್ರಾಯಗಳನ್ನು [:http://sampada.net/contact|ಇ-ಮೇಯ್ಲ್ ಮೂಲಕ ಕಳುಹಿಸಿ].

ಸೂಕ್ತವಾದವುಗಳನ್ನು ಗಮನದಲ್ಲಿಟ್ಟುಕೊಂಡು 'ಸಂಪದ'ದ ಹೊಸ ಆವೃತ್ತಿಯಲ್ಲಿ ಸೇರಿಸಿ ಹೊರತರುವ ಪ್ರಯತ್ನವನ್ನು ಮಾಡಲಾಗುವುದು. ಹೊಸ ಯೋಜನೆಗಳಿಗಿಂತ ಇರುವುದನ್ನು ಉತ್ತಮಪಡಿಸುವತ್ತ ಹೆಚ್ಚಿನ ಗಮನವಿಡುತ್ತಿದ್ದೇವಾದರೂ ಹೊಸ ಯೋಜನೆ ಕುರಿತ ಸಲಹೆಗಳು ಹಾಗೂ ವಿಚಾರಗಳೂ ಸ್ವಾಗತ.

ತೀರ ಇತ್ತೀಚಿನ ಬರಹ/ಪ್ರತಿಕ್ರಿಯೆಗಳು ಲಾಗಿನ್ ಆದವರಿಗೆ ಮಾತ್ರ ಕಾಣಿಸಿಕೊಳ್ಳುವುದು

ಕಳೆದ ವಾರಗಳಲ್ಲಿ ಸಂಪದದ ಓದುಗರು ಹಲವರು ಈ ಬಗ್ಗೆ ಪತ್ರ ಬರೆದಿದ್ದರು. ಸಮಯಾಭಾವದಿಂದ ಎಲ್ಲರಿಗೂ ಉತ್ತರಿಸಲಾಗದೆ ಇಲ್ಲಿಯೇ ಬರೆಯುತ್ತಿರುವೆ.

ಇತ್ತೀಚೆಗೆ ಸಂಪದ ಓದುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ - ಕಳೆದ ತಿಂಗಳು ಸಂಪದದಲ್ಲಿ ರೆಕಾರ್ಡ್ ಆದ ಒಟ್ಟು ಭೇಟಿಗಳ ಸಂಖ್ಯೆ (hits) ೨.೨ ಮಿಲಿಯನ್. ಇದು ಒಳ್ಳೆಯ ಬೆಳವಣಿಗೆಯೇ, ಆದರೆ ಸರ್ವರ್ ಮೇಲೆ ಇದರಿಂದಾಗುವ ಲೋಡ್ ಕಡಿಮೆ ಮಾಡಲು 'ಸಂಪದ'ದಲ್ಲಿ ಲಾಗಿನ್ ಆಗಿರದ ಸದಸ್ಯರಿಗೆ "cache" ಆದ ಪ್ರತಿ ಓದಲು ಸಿಗುವಂತೆ ಮಾಡಲಾಗಿದೆ. ಅರ್ಧ ಘಂಟೆಗೊಮ್ಮೆ ಈ cache ಹೊಸತಾಗುತ್ತದಾದ್ದರಿಂದ ಕೆಲವು ಬರಹಗಳು/ಪ್ರತಿಕ್ರಿಯೆಗಳು ಲಾಗಿನ್ ಆಗದವರಿಗೆ ಕಾಣದೆ ಹೋಗಬಹುದು.

ಒಂದು ಅಪೂರ್ಣ ಕಥೆ, ಮುಂದ ಏನು :)

ಕಾಲೇಜು ಮುಗಿಸಿ ಮನೆಗೆ ಹೊರಟವನು ಶಾಸ್ತ್ರಿನಗರ ಬಸ್ ಸ್ಟಾಂಡ್ ನಲ್ಲಿ ಕುಳಿತಿದ್ದೆ. ಸಣ್ಣಗೆ ಮಳೆ ಜಿನುಗುತ್ತಿದುದರಿಂದ ಸಂಜೆ ೫ ಗಂಟೆಗೇ 
ಕತ್ತಲಾಗಿತ್ತು. ನನಗೆ ಮನೆಗೆ ಹೊಗಲು ಮನಸ್ಸಾಗದೆ ಮಳೆಯನ್ನು ನೋಡುತ್ತಾ ಅಲ್ಲೇ ಕುಳಿತೆ.

ವೈರಸ್ ತಿವಿತದಿಂದ ಸ್ಥಿಮಿತಗೊಂಡೀತೆ ಬ್ಯಾಕ್ಟೀರಿಯ?

ಮಕ್ಕಳನ್ನು ತೀವ್ರವಾಗಿ ಕಾಡುವ ‘ಕಿವಿ ನೋವಿನ’ ಉಗಮ ಸ್ಥಳ ನಡುಗಿವಿ. ಇಲ್ಲಿ ಉಂಟಾದ ಸೋಂಕನ್ನು ನಿವಾರಿಸುವ ಕೆಲಸ ಅಷ್ಟು ಸುಲಭವಲ್ಲ. ಗುಳಿಗೆಗಳ ಮೂಲಕ ಬಾಯಿಯಿಂದ ಅಥವಾ ದ್ರಾವಣದ ಮೂಲಕ ನೇರವಾಗಿ ಕಿವಿಯಿಂದ ಸ್ವೀಕರಿಸುವ ‘ಪ್ರತಿ ಜೈವಿಕ - ಆಂಟಿ ಬಯಾಟಿಕ್’ಕ್ಕೂ ಒಮ್ಮೊಮ್ಮೆ ಈ ಸೋಂಕುಕಾರಕ ಬ್ಯಾಕ್ಟೀರಿಯಗಳು ಬಗ್ಗುವುದಿಲ್ಲ.

ಪುಸ್ತಕ ನಿಧಿ - ಶ್ರೀ ಗಿರೀಶ್ ಕಾರ್ನಾಡರ ತುಘಲಕ್ ನಾಟಕ

ಜ್ಞಾನಪೀಠ ಪ್ರಶಸ್ತಿವಿಜೇತ ಕನ್ನಡ ನಾಟಕಕಾರ ಶ್ರೀ ಗಿರೀಶ್ ಕಾರ್ನಾಡರ ತುಘಲಕ್ ನಾಟಕ ಇಲ್ಲಿದೆ .
http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010036011
ಪುಸ್ತಕ ಚಿಕ್ಕದಿದೆ .
ಚೆನ್ನಾಗಿದೆ
ಓದಿ .

ಪುಸಕನಿಧಿ - ಅ.ರಾ.ಸೇ ಅವರ ಕಾದಂಬರಿ - ತದನಂತರ

ಅಂತೂ ಅ.ರಾ.ಸೇ ಅವರ ಒಂದು ಸರಸಮಯ ಹಾಸ್ಯ ಕಾದಂಬರಿ - ’ತದನಂತರ’
ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಸಿಕ್ಕಿತು .

ಒಮ್ಮೆ ಓದಬಹುದು . ಕೆಲ ಭಾಗಗಳು ನಿಮ್ಮ ತುಟಿಗಳನ್ನು ಅರಳಿಸುವದರಲ್ಲಿ ಸಂಶಯ ಇಲ್ಲ

http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010064875

ಚರಿತ್ರೆಯ ಕಾರ್ಮೋಡಗಳಲ್ಲಿ ಮರೆಯಾದ "ಚಂದ್ರ" - ಚಂದ್ರಶೇಖರ್

ಭಾನುವಾರ ನಿಧನರಾದ ಮಾಜಿ ಪ್ರಧಾನಿ ಚಂದ್ರಶೇಖರ್ ಸಂಕೀರ್ಣವಾದ
ನೆನಪುಗಳನ್ನು ಬಿಟ್ಟುಹೋಗಿದ್ದಾರೆ. ಅರವತ್ತರ ದಶಕದಲ್ಲಿ ಮತ್ತು ಎಪ್ಪತ್ತರ
ದಶಕದಲ್ಲಿ, ಚಂದ್ರಶೇಖರ್ ನಮ್ಮಂಥ ಯುವಜನರ ಹಾಟ್ ಫೇವರಿಟ್ ಆಗಿದ್ದರು. ರಾಮಮನೋಹರ
ಲೋಹಿಯಾ ಅವರ ನಂತರದ ಭಾರತೀಯ ಸಮಾಜವಾದಿ ರಾಜಕಾರಣದ ಪರ್ವದಲ್ಲಿ ತುಂಬ ಭರವಸೆಯ
ನಾಯಕರೆನಿಸಿದ್ದವರು ಅವರೇ. ಉತ್ತರಪ್ರದೇಶದಂತಹ ನಿರ್ಣಾಯಕ ಜನಬಲದ ರಾಜ್ಯದಿಂದ ಬಂದ,
ಬಲಿಯಾ ಕ್ಷೇತ್ರದಿಂದ ನಿರಂತರ ಚುನಾವಣಾ ಗೆಲುವು ಸಾಧಿಸಿದ ರಾಜಕಾರಣಿ ಎಂಬುದಕ್ಕಿಂತ
ಅಪ್ಪಟ ಸಮಾಜವಾದಿ ಎಂಬುದು ನಮಗೆ ಸಂಭ್ರಮದ ಸಂಗತಿಯಾಗಿತ್ತು. ಕಾಂಗ್ರೆಸ್ ನಲ್ಲಿದ್ದೇ
ಅವರು ನೆಹರೂ-ಇಂದಿರಾ ಶೈಲಿಯ ವಂಶಪಾರಂಪರ್ಯದ ರಾಜಕೀಯವನ್ನು ವಿರೋಧಿಸಿದವರು.
ಕಾಂಗ್ರೆಸ್ ನ ದೈತ್ಯ ರಾಜಕೀಯ ಶಕ್ತಿಯೆದುರು ವಿರೋಧಪಕ್ಷಗಳು ದುರ್ಬಲವಾಗಿದ್ದಂತಹ ಆ
ಕಾಲದಲ್ಲಿ, ಕಾಂಗ್ರೆಸ್ ನಲ್ಲೇ "ಯಂಗ್ ಟರ್ಕ್ಸ್" ಗುಂಪನ್ನು ಹುಟ್ಟು ಹಾಕಿದವರಲ್ಲಿ
ಒಬ್ಬರು. ಲೋಕನಾಯಕ ಜಯಪ್ರಕಾಶ ನಾರಾಯಣರ ೧೯೭೪ ರ ಇತಿಹಾಸ ಪ್ರಸಿದ್ಧ "ಸಂಪೂರ್ಣ
ಕ್ರಾಂತಿ" ಆಂದೋಲನದಲ್ಲಿ ತೊಡಗಿಸಿಕೊಂಡಿದ್ದ ಅವರು ಎಲ್ಲರ ಕಣ್ಮಣಿ ಆಗಿದ್ದರು. ಬರೀ
ನೆಹರು - ಇಂದಿರಾ - ಸಂಜಯ್ - ರಾಜೀವ್ ಗಾಂಧಿಯವರ ಕುಟುಂಬ ರಾಜಕೀಯದಿಂದ ಬೇಸತ್ತಿದ್ದ
ನಮಗೆ, "ಆದರೆ ಚಂದ್ರಶೇಖರ್ ಅಂತಹವರು ಈ ದೇಶದ ಪ್ರಧಾನಿ ಆಗಬೇಕು" ಎಂದು
ಅನ್ನಿಸುತ್ತಿದ್ದುದು ಸಹಜವೇ.