ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪುಣ್ಯಕೋಟಿ ಎಂಬ ಹುಲಿಯು.....

   ಪುಣ್ಯಕೋಟಿ ಕತೆ ಬರೆದ ಪುಣ್ಯಾತ್ಮನಿಗೆ ಕೋಟಿ ಪ್ರಣಾಮಗಳು.ಮಕ್ಕಳಿಗೆ ಕತೆ ಹೇಳಿ ಮಲಗಿಸುವ ಅಭ್ಯಾಸವಿರುವ ಎಲ್ಲಾ ತಂದೆ/ತಾಯಂದಿರ ಇಷ್ಟವಾದ ಕತೆಯಿದು. ಪತ್ರಿಕೆಗಳಲ್ಲಿ,ಮಕ್ಕಳ ಪುಟಗಳಲ್ಲಿರುವ ಕತೆಗಳನ್ನು ಮಕ್ಕಳು ಓದುತ್ತಾರೋ ಇಲ್ಲವೋ,ಈ ತಂದೆ/ತಾಯಿ ಖಂಡಿತ ಓದುವರು.ರಾತ್ರಿ ಅದೇ ಕತೆಗೆ ಉಪ್ಪು,ಖಾರ ಸೇರಿಸಿ ಮಕ್ಕಳಿಗೆ ಹೇಳುವರು.

ಪಂಚತಂತ್ರ ಕತೆಗಳು,ರಾಜರ ಕತೆಗಳು,ರಾಮಾಯಣ,ಮಹಾಭಾರತದ ಪ್ರಸಂಗಗಳನ್ನು ಮಕ್ಕಳು ಬಹಳ ಆಸಕ್ತಿಯಿಂದ ಕೇಳುವರು. ಕ್ರೈಂಡೈರೀನೋ,ಸ್ಟೋರೀನೋ,ಸುಡುಗಾಡುಗಳನ್ನು ತಂದೆಯೊಂದಿಗೆ ನೋಡಿ ಮಲಗುವ ಮಕ್ಕಳೂ ಇದ್ದಾರೆ.

ತಿರುಗಿ ಬಾರದ ಜೀವನದ ದಾರಿಯ ತಿರುವಿನಲ್ಲೊಮ್ಮೆ ನಿಂತು ಹಿಂತಿರುಗಿ ನೋಡಿದಾಗ ..

ಬಟಾಬಯಲಿನ ನಡುವೆ ನಿಂತ ಒಂದು ಹೆಮ್ಮರ.. ಅದು ಪ್ರೀತಿಯೆಂಬ ಹೆಮ್ಮರ..ಜೀವನದಲ್ಲಿ ಒಂಟಿಯಾಗಿ ನಿಂತು ಪ್ರೀತಿಯ ಸೋನೆಗೆ ಹಂಬಲಿಸುತ್ತಿರೋ ಹುಡುಗನೊಬ್ಬನ ಹೃದಯದ ಪ್ರತೀಕ..
ಕಾರ್ಮೋಡ ಕವಿದಂತೆ ಮಳೆ ಸುರಿಯಲು ಪ್ರಾರಂಭ..ಮರ ನೆನೆದಂತೆ..ಹಚ್ಚ ಹಸಿರಿನಿಂದ ತುಂಬಿದಂತೆ..ಹೃದಯದಲ್ಲಿ ಪ್ರೇಮದ ಮೊರೆತ ಮೊಳೆಯುತ್ತಿದೆ..

ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !

ಮೈಸೂರು ಸಂಸ್ಥಾನದ ರಾಜ್ಯಗೀತೆಯಾಗಿದ್ದ, " ಕಾಯೌ ಜಯಗೌರಿ, ಕರುಣಾ ಲಹರಿ.....", ಗೀತೆಯನ್ನು, ನಮ್ಮ ಬಾಲ್ಯದ ಶಾಲೆಯದಿನಗಳಲ್ಲಿ, ಹೇಳುತ್ತಿದ್ದದ್ದು ಇಂದಿಗೂ, ನನ್ನ ನೆನಪಿನ ಹಲಿಗೆಯಲ್ಲಿ ಮಾಸದೆ, ಉಳಿದುಕೊಂಡಿದೆ !

" ಕಾಯೌ ಶ್ರೀ ಗೌರೀ ಕರುಣಾಲಹರೀ

ತೋಯಜಾಕ್ಷೀ ಶಂಕರೀಶ್ವರೀ [ಪ]

ವೈಮಾನಿಕ ಭಾಮಾರ್ಚಿತ ಕೋಮಲತರ ಪಾದೇ

ಸೀ ಮಾತಿಗ ಭೂಮಾಸ್ಪದೆ ಕಾಮಿತ ಫಲದೇ [೧]

ಶುದ್ಧ ಹರಟೆ - ನಿರಾಸಕ್ತಿ

ಅದೇಕೋ ಶುದ್ಧ ನಿರಾಸಕ್ತಿ.. ಹೊಸತೇನೂ ಇಲ್ಲವೆಂಬ ನಿರಾಸಕ್ತಿ.. ದಿವ್ಯ ವೈರಾಗ್ಯದ ನಿರ್ಲಿಪ್ತತೆ. ನಿಂತಲ್ಲೆ ನಿಂತು ಕರಗಿ ಹೋಗಲು ಹಪಹಪಿಸುವ ತಮಸ್ಸು..ಮುಂದಕ್ಕೆ ಸಾಗಲೊಲ್ಲುವ ಮನಸ್ಸಿನ ಕುದುರೆಗಳು..
ಅದ್ವೈತ, ಶೂನ್ಯ ಸಿದ್ಧಾಂತ, ಮಾಯಾವಾದಗಳ ಬಹು ಆಸಕ್ತಿಯಿಂದ ಉಂಟಾದ ನಿರಾಸಕ್ತಿಯೇ ಇದು ? ಮತ್ತೆ ಕಾರಣ ಹುಡುಕಲೂ ನಿರಾಸಕ್ತಿ. ಹುಡುಕಿ ಏನೂ ಮಾಡಲಾಗದೆಂಬ ಸಮಜಾಯಿಷಿ. ಸ್ಥಿತಿ ತಲುಪಿದ್ದಾಗಿದೆ. ಇನ್ನು ಅದನ್ನು ಹೊಂದಿದ ಕ್ರಮದ ಬಗೆಗಿನ ಚರ್ಚೆ ಅಪ್ರಸ್ತುತ.

ಆದರೂ ಇದನ್ನು ಬರೆಯುವ ಹಂಬಲ.

ಥೂ.. ಬರವಣಿಗೆಯಲ್ಲಿರುವ ಹಂಬಲವಲ್ಲ ಅದು.. ಬರೆದದ್ದನ್ನು ಇತರರು ಓದುವರೆಂಬ ಹಂಬಲ... ಓದಿ ಶ್ಲಾಘಿಸುವರೆಂಬ ಹಂಬಲವೇನಿಲ್ಲ. ಆದರೂ ನನ್ನ ಹುಚ್ಚು ಮನಸ್ಸಿನ ಹತ್ತು ವಿಚಾರಗಳು ಅವರಿಗೂ ತಿಳಿಯುತ್ತದೆಂಬ ವಿಲಕ್ಷಣ ತೃಪ್ತಿ...
ನಿಜ.. ಬಚ್ಚಿಟ್ಟು, ತಾನೆಂಬ ಭದ್ರ ಕೋಟೆಯ ದಾಟದ ಹಾಗೆ ಕಾಪಾಡಿದ ವಿಚಾರಗಳ ಬಗೆಗೇ ಮನಸ್ಸಿಗೆ ಹೆಮ್ಮೆ..! ಆದರೂ ಅದೊಮ್ಮೆ, ತನ್ನ ನಿಲುವುಗಳನ್ನು ಇತರರಿಗೆ ಬಹಿರಂಗ ಪಡಿಸಿ, ಅವರ ಪ್ರತಿಕ್ರಿಯೆ ತಿಳಿಯುವ ವಿಲಕ್ಷಣ ಕುತೂಹಲ ಆವರಿಸಿಬಿಡುತ್ತದೆ...

ನನ್ನ ಕವನ.

ನನ್ನ ಕವನಗಳಿಗೆ,
ಹಾಕಲು.. ಬಾರದು..
ಯಾವುದೇ ಛಂಧಸ್ಸು..

ಏಕೆಂದರೆ, ಅದರಲ್ಲಿದೆ..
ಲಘು-ಗುರುಗಳಿಗೆ..
ಮೀರಿದ, ಒಂದು.. ಮನಸ್ಸು..

ವಿಚಿತ್ರದವಳು..

ಕರೆಯಲ್ಲಿದ್ದಾಗಲೆಲ್ಲ..
ನೀ ಸಿಗಲೇ ಇಲ್ಲಾ..
ನಿನ್ನ ನೋಡಿ ಅದೆಷ್ಟು,
ದಿನಗಳಾದವು ಎಂದೆಲ್ಲಾ,..
ಕೊರೆವವಳು..
ಎದುರು ಬಂದು ನಿಂತಾಗ..
ಇದೇಕೆ, ಹೀಗೆ
ಮಾತು ಮರೆತವಳಂತೆ,
ಮೌನವಾದಳು ??

ಪತ್ರಗಳಲೆಲ್ಲ.. ತನ್ನ
ಪದ-ಪಾಂಡಿತ್ಯವ.. ಮೆರೆದವಳು,
ಇದೇಕೆ ಹೀಗೆ..
ನಾ ಎದುರು ಬಂದಾಗ..
ಪದಗಳಿಗೆ ಬರವಿದ್ದಂತೆ,
ಪರದಾಡುವಳು ??

ಇವಳೇನಾ ಅವಳು.??
ಎಂದೆಲ್ಲಾ ಅನಿಸುವವಳು.,

ಯಕ್ಷ ಪ್ರಶ್ನೆ ?

ಮನದ ಬಾಗಿಲ ಬಳಿ ಬಂದ
ಭಾವಗಳು, ಬಂದ ದಾರಿಗೆ
ಸುಂಕವಿಲ್ಲವೆಂಬಂತೆ ಮರಳಿದವೇಕೆ ?

ನಾಲಿಗೆಯ ತುದಿಗೆ.. ಬಂದ ಎಷ್ಟೋ
ಮಾತುಗಳು, ಮತ್ತೊಂದಿಷ್ಟು
ಧೈರ್ಯ ಮಾಡಲಿಲ್ಲವೇಕೆ ?

ಗರಿಗೆದರಿ, ಒಳಗೊಳಗೆ ಘರ್ಜಿಸಿದ
ಆಸೆಗಳು, ಕುಯ್ ಗುಡುತ್ತ, ಬಾಲ ಮುದುರಿ
ಮೂಲೆ ಸೇರಿದ್ದೇಕೆ ?

ನಾನೆಂಬ ಶತೃವೇ ?
ನನ್ನದೇ ಎಂಬ ಹುಚ್ಚು ಭರವಸೆಯೇ ?
ನನ್ನದಾಗುವುದಿಲ್ಲವೆಂಬ ವಿರಕ್ತಿಯೇ ?

ಕುಸುಮಾಕರ ದೇವರಗೆಣ್ಣೂರು

ನಾವೆಲ್ಲ ಹೆಗಲಿಗೆ ಚೀಲ ಸಿಕ್ಕಿಸಿಕೊಂಡು, ಪ್ರೀತಿಯ ಅಮ್ಮ, ತಮ್ಮನನ್ನು ಮನೆಯಲ್ಲೇ ಬಿಟ್ಟು, ಗೊತ್ತೇ ಇಲ್ಲದ ಹುಡುಗರು, ಭಯ ಹುಟ್ಟಿಸುವ ಮಾಸ್ಟ್ರು, ಟೀಚರ್ರು ಎಲ್ಲ ಇರುವ ನಿಗೂಢ ಶಾಲೆಗೆ ಹೋಗತೊಡಗಿದ್ದು, ಕ್ರಮೇಣ ಅದೆಲ್ಲ ನಮಗೆ ಅಭ್ಯಾಸವಾಗಿದ್ದು ಮತ್ತೆ ಅದೇ ಶಾಲೆ ಬಿಟ್ಟು ಹೈಸ್ಕೂಲಿಗೋ ಕಾಲೇಜಿಗೋ ಬೇರೆ ಕಡೆ ಹೋಗಬೇಕಾದಾಗ ಬಿಟ್ಟು ಹೋಗಬೇಕಲ್ಲ ಎಂದು ಅತ್ತಿದ್ದು.....ಎಲ್ಲ ಹಳೆಯ ನೆನಪುಗಳು.

ಅಲ್ಲೆಲ್ಲೋ ನಮಗೆ ಬದುಕಿನ ಸ್ಪರ್ಧಾತ್ಮಕ ಗುಣದ ಅಸ್ಪಷ್ಟ ಪರಿಚಯವಾಗಿರುತ್ತದೆ. ಅದು ಮಾರ್ಕುಗಳ ಲೆಕ್ಕದಲ್ಲಿ, ಆಟದ ತೀರ್ಪುಗಳಲ್ಲಿ, ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನಗಳಲ್ಲಿ ತನ್ನ ಕ್ರೂರ ಹಲ್ಲನ್ನು ಮಸೆದ ಶಬ್ದ ಕೇಳಿಸದಿದ್ದರೂ ಕೇಳಿಸಿದಂತಿರುತ್ತದೆ. ಮುಂದೆ ಉದ್ಯೋಗದ ಬೇಟೆಗೆ ತೊಡಗಿದಾಗ, ಅಲ್ಲಿ ಇಲ್ಲಿ ನಮ್ಮ ಜೊತೆಯವರು ನಮಗಿಂತ ಮುಂದೆ ಸಾಗಿ ಹೋದ ಸುದ್ದಿ ಕೇಳಿದಾಗ, ಕೊನೆಗೂ ಬದುಕಿನ ಹಾದಿ ಬದಲಿಸಲಾಗದ ಮಧ್ಯವಯಸ್ಸಿನಲ್ಲಿ ನಿಂತಿರುವಾಗ ನಮ್ಮದೇ ಓರಗೆಯ ಅವರಿವರ ಯಶಸ್ಸು, ಅಪಯಶಸ್ಸುಗಳನ್ನು ಕಾಣುವಾಗ....