ಕನ್ನಡಿಗರ ಬಗ್ಗೆ ಯಾಕೆ ಈ ರೀತಿಯ ಕಟು ಹೇಳಿಕೆ

ಕನ್ನಡಿಗರ ಬಗ್ಗೆ ಯಾಕೆ ಈ ರೀತಿಯ ಕಟು ಹೇಳಿಕೆ

ಕನ್ನಡಿಗರು ಮೂಳೆ ಮುರಿದರು ಹೊಗೇನಕಲ್‌ನ ಕಾಮಗಾರಿ ನಿಲ್ಲಿಸುವುದಿಲ್ಲ - ಕರುಣಾನಿಧಿ
ಹೀಗೆ ಮುಂದುವರಿದರೆ ಕೋಲಾರ ಮತ್ತು ಚಾಮರಾಜನಗರಗಳು ತಮಿಳುನಾಡಿಗೆ ಸೇರಬೇಕೆಂದು ಹೋರಾಟದ ಬೆದರಿಕೆ ರಾಮದಾಸ್
ಕನ್ನಡಿಗರು ಕ್ರೂರಿಗಳು: ಬೆಳಾಗವಿಯ ಮೇಯರ್
ಲಲ್ಲೂ ಪ್ರಸ್ಸಾದ್ ಯಾದವ್ ಇನ್ನೇನೋ ಹೇಳ್ದಂತೆ ನೆನಪು

ಕನ್ನಡಿಗರ ಮೇಲಿನ ಈ ಬಹಿರಂಗ ವಾಗ್ಧಾಳಿ ---ಯಾಕೆ ನಾವು ಸೌಮ್ಯ ಸ್ವಭಾವದವರೆಂದೇ ಅಥವ ನಮ್ಮನ್ನು ಪ್ರತಿನಿದಿಸಲು ಯೋಗ್ಯ ವ್ಯಕ್ತಿಯ ಕೊರತೆಯೇ?
ಇನ್ನೂ ಎಷ್ಟು ದಿನ ಈ ಹೇಳಿಕೆಗಳನ್ನು ಕೇಳುತ್ತಾ ಕೂರಬೇಕು?

ಹಾಗೆ ಮುಖಂಡರೆನಿಸಿಕೊಂಡವರು ಜನರನ್ನು ಕೆರಳಿಸುವ ಮಾತುಗಳನ್ನು ಆಡಬಾರದು.

ಇದರಿಂದ ಹಾನಿಯಾಗುವುದು ಸಾರ್ವಜನಿಕ ಸೊತ್ತುಗಳಿಗೆ
ಕಷ್ಟ ಪಡುವುದು ಸಾಮಾನ್ಯ ಜನರು
ಆ ಜನರಿಗೆ ಯಾವ ರಾಜ್ಯವಾದರೇನು ಹೊಟ್ಟೆ ಪಾಡಿಗೆ ಬಂದಿರುವ ನಾಡೇ ತಮ್ಮ ನಾಡೆಂದುಕೊಳ್ಳುವವರು. ಕೆಲವು ಕನ್ನಡದ ಸಂಘಟನೆಗಳು ಎಂದು ಹೇಳಿಕೂಳ್ಳುವ ಕೆಲವು ಪುಡಿ ಹುಡುಗರು ಧಾಳಿ ನಡೆಸುವುದು ಈ ಮುಗ್ಧ ಜನರ ಮೇಲೆ
ಕಾವೇರಿ ಗಲಾಟೆ ನಡೆದ ಸಂಧರ್ಭದಲ್ಲಿ ೬೦ ವರ್ಷದ ಕೂಲಿ ಮುದುಕಿಯೊಬ್ಬಳನ್ನು ನಡುಬೀದಿಯಲ್ಲಿ ತಂದು ಹೊಡೆದದ್ದು ನನ್ನ ಕಣ್ಣಿಗೆ ಕಟ್ಟಿದಂತಿದೆ.
ಇದೇ ಸಂಧರ್ಭವೆಂದು ಕಳ್ಳ ಕಾಕರು ನುಗ್ಗಿ ದಾಂಧಲೆ ನಡೆಸಿ ಕೈಗೆ ಸಿಕ್ಕಿದ್ದನ್ನು ದೋಚಿಕೊಂದು ಪರಾರಿಯಾಗುವುದೂ ಉಂಟು
ಈ ಜಲನೆಲಗಳಿಗೆ ಹೋರಾಟ ಇನ್ನೆಷ್ಟು ದಿನ?

Rating
No votes yet